ಮಾನ್ಯ ಆಯುಕ್ತರ ಆದೇಶದಂತೆ,
ದಿ:25/09/2019 ರಂದು ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತಿದ್ದು, ಮಕ್ಕಳಿಗೆ ಈ ರಾಷ್ಟ್ರೀಯ ಕಾರ್ಯಕ್ರಮದ ಸದುಪಯೋಗವಾಗುವಂತೆ ಕಾಳಜಿ ಕ್ರಮಗಳನ್ನು ವಹಿಸಲು ಸೂಚಿಸಿದೆ.
ಹಾಗೆಯೇ ಸಪ್ಟೆಂಬರ್ ಮಾಹೆಯನ್ನು ರಾಷ್ಟ್ರೀಯ ಪೋಷಣಾ ಮಾಸವನ್ನಾಗಿ ಆಚರಿಸಲಾಗುತ್ತಿದ್ದು ಅನುಷ್ಠಾನ ಗೊಳಿಸಲು ಸೂಚಿಸಿದೆ
ಗಮನಿಸಿರಿ
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಎಂದು?
ದಿ:25/09/2019
1.ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನದಂದು ಮಕ್ಕಳಿಗೆ ಯಾವ ಮಾತ್ರೆ ನೀಡಬೇಕು?
ಆಲ್ ಬೆಂಡ್ ಜೋಲ್....... ಜಂತು ಹುಳು ನಿವಾರಣಾ ಮಾತ್ರೆ - 400Mg
1 ರಿಂದ 19 ವರ್ಷದ ಮಕ್ಕಳಿಗೆ
2. ಮಕ್ಕಳಿಗೆ ಆಲ್ ಬೆಂಡ್ ಜೋಲ್ ಮಾತ್ರೆಯನ್ನು ನೀಡುವ ವಿಧಾನ ಹೇಗೆ?
1) ಈ ಮಾತ್ರೆ ನುಂಗುವ ಮಾತ್ರೆ ಅಲ್ಲ.
2) ನೆನಪಿರಲಿ ಇದು ನುಂಗುವ ಮಾತ್ರೆ ಅಲ್ಲ.
3)ಇದು ಸಿಹಿಯಾಗಿದ್ದು ಪೆಪ್ಪರಮೆಂಟ್ ಕ್ಯಾಂಡಿ ತರಹ ಚೀಪುಪ ಮಾತ್ರೆ.
4) ಮಕ್ಕಳಿಗೆ ಈ ಮಾತ್ರೆಯನ್ನು ಚೀಪಲು ತಿಳಿಸಬೇಕು.
3.ಮಕ್ಕಳಿಗೆ ಯಾವಾಗ ಈ ಮಾತ್ರೆಯನ್ನು ನೀಡಬೇಕು?
ಮಕ್ಕಳಿಗೆ ಈ ಮಾತ್ರೆಯನ್ನು ಊಟ ಮಾಡಿಸಿದ ನಂತರ, ಅರ್ಧ ಘಂಟೆ ಬಿಟ್ಟು ಕೊಡಬೇಕು.
4.ಮಕ್ಕಳಿಗೆ ಎಷ್ಟು ಮಾತ್ರೆಗಳನ್ನು ನೀಡಬೇಕು?
ಕೇವಲ ಒಂದೇ ಒಂದು ಚೀಪುವ ಮಾತ್ರೆ ನೀಡಬೇಕು.
5.ಈ ಮಾತ್ರೆಯನ್ನು ಯಾವಾಗ ನೀಡಬಾರದು?
ಖಾಲಿ ಹೊಟ್ಟೆಯಲ್ಲಿ ಊಟ ಮಾಡದೇ ಇರುವ ಮಕ್ಕಳಿಗೆ ಕೊಡಬೇಡಿರಿ. ಆರೋಗ್ಯದಲ್ಲಿ ವ್ಯತಯ ಉಂಟಾದ ಮಕ್ಕಳಿಗೆ ನೀಡಬೇಡಿ. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ನೀಡಬೇಡಿರಿ. ಇಂತಹ ಪ್ರಸಂಗಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯ ಸಂಪರ್ಕ ಮಾಡಿ ಮಾಹಿತಿ ಪಡೆಯುವುದು ಹಾಗೂ ಮಾತ್ರೆ ನೀಡುವುದು.
6. ಶಾಲಾ ಹಂತದಲ್ಲಿ ಇದರ ನಿರ್ವಹಣೆ ಹೇಗೆ? ಯಾರು ಯಾರು ಸಹಯೋಗ ನೀಡಿರುವರು?
ಮಕ್ಕಳಿಗೆ ಇದರ ಮಹತ್ವ ತಿಳಿಸಿ, ಮಾತನಾಡಿ, ಶಾಲಾ ಮುಖ್ಯಶಿಕ್ಷಕರು, ಸಹಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಇದರಲ್ಲಿ ಎಲ್ಲರೂ ಸಕ್ರೀಯವಾಗಿ ಪಾಲ್ಗೊಂಡು, ಮಕ್ಕಳಿಗೆ ಊಟ ಮಾಡಿದ ಅರ್ಧ ಗಂಟೆಯ ನಂತರ ಖುದ್ದಾಗಿ ಮುಂದೆ ನಿಂತು, ಮಾರ್ಗದರ್ಶನ ಮಾಡಿ ತಮ್ಮ ತಮ್ಮ ಶಾಲೆಯ ತರಗತಿಯ ಮಕ್ಕಳಿಗೆ ಮಾತ್ರೆ ಚೀಪಲು ನೀಡಬೇಕು. ಈ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಕಾರ ಮತ್ತು ಸಹಯೋಗ ನೀಡುತ್ತಿರುವರು.
7. ಮುಂಜಾಗ್ರತೆಗಾಗಿ ಹಾಗೂ ತುರ್ತು ಪರಿಸ್ಥಿತಿಗಾಗಿ ಯಾರನ್ನು ಸಂಪರ್ಕಿಸಬೇಕು?
ಸ್ಥಳೀಯ ಆರೋಗ್ಯ ಇಲಾಖೆಯ ವೈಧ್ಯಾಧಿಕಾರಿಗಳು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರನ್ನು
8.ಶಾಲೆಗಳಿಗೆ ಮಾತ್ರೆಗಳನ್ನು ಯಾರು ಪೋರೈಸುವರು?
ಒಂದು ದಿನ ಮುಂಚಿತವಾಗಿ ಸ್ಥಳೀಯ ಆರೋಗ್ಯ ಇಲಾಖೆಯ ವೈಧ್ಯಾಧಿಕಾರಿಗಳು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಪೋರೈಸುವರು.
9. ಈ ಯೋಜನೆಯ ಶೇ:100% ಸಾಧಿಸುವುದು ಹೇಗೆ?
ದಿ:25/09/2019 ರಂದು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಆಚರಣೆಯ ಕುರಿತಾಗಿ ಮುಂಚಿತವಾಗಿಯೇ ಸಲಹೆ ಸೂಚನೆ ಮಹತ್ವ ನೀಡಿರಿ. ಗರಿಷ್ಠ ಪ್ರಮಾಣದಲ್ಲಿ ಮಕ್ಕಳು ಅಂದು ಹಾಜರಿರುವಂತೆ ನೋಡಿಕೊಳ್ಳಿ.
10. ಗೈರು ಉಳಿದ ಮಕ್ಕಳಿಗೆ ಎಂದು ಮಾತ್ರೆ ನೀಡಬೇಕು?
ದಿ:25/09/2019 ರಂದು ಗೈರು ಉಳಿದ ಮಕ್ಕಳಿಗೆ ದಿ::30/09/2019 ರಂದು ನೀಡುವುದು. ಅದು ಮಾಪ್ ಅಪ್ ಡೇ.....
11. ಈ ಮಾತ್ರೆ ಏಕೆ ನೀಡಬೇಕು?
ಮಕ್ಕಳಲ್ಲಿಯ ಜಂತುಹುಳು ನಿವಾರಿಸಿ, ಆಶಕ್ತತೆ, ರಕ್ತಹೀನತೆ, ಅಜೀರ್ಣತೆ, ಉದರಬಾಧೆ ಹೋಗಲಾಡಿಸಲು, ಆರೋಗ್ಯ ಕಾಪಾಡಲು
12. ಜಂತು ಹುಳು ಹೇಗೆ ಬರುತ್ತವೆ? ಹೇಗೆ ಅಪಾಯಕಾರಿ?
1) ಬರಿಗಾಲಿನಿಂದ ಅಡ್ಡಾಡುವುದು,
2) ಮಣ್ಣಿನಲ್ಲಿ ಕೆಸರಿನಲ್ಲಿ ಆಟ,ಕೆಲಸ, ಮಾಡಿದಾಗ,
3) ಶೌಚಾಲಯದಲ್ಲಿ ಬರಿಗಾಲಿನಿಂದ ಹೋಗುವುದು,
4) ಕೈ ತೊಳೆಯದೇ ಊಟ ಮಾಡಿದಾಗ, 5) ಅಶುಚಿ ವಿಧಾನಗಳು,
ಈ ಮೂಲಕ ಜಂತುಹುಳುವಿನ ಲಾರ್ವಾಗಳು ಶರೀರ ಪ್ರವೇಶಿಸುವವು.
13. ವರದಿ: ನಿಗದಿತ ನಮೂನೆಯಲ್ಲಿ ತಾಲೂಕಾ ಪಂಚಾಯತಿಯ ಅಕ್ಷರ ದಾಸೋಹ ಕಚೇರಿಗೆ ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನ ಆಚರಿಸಿದ ಕುರಿತು ಅಂಕಿ ಸಂಖ್ಯೆ ಮತ್ತು ಪೋಟೋ ಸಹಿತ ವರದಿಯನ್ನು ದಿ: 26/09/2019 ರಂದು ಸಲ್ಲಿಸುವುದು.
14.ರಾಷ್ಟ್ರೀಯ ಪೋಷಣಾ ಮಾಸಾಚರಣೆ ಹೇಗೆ?
ಸಪ್ಟೆಂಬರ್ 2019 ಮಾಹೆಯನ್ನು ರಾಷ್ಟ್ರೀಯ ಪೋಷಣಾ ಮಾಸ ಎಂದು ಆಚರಿಸಲಾಗುತ್ತಿದ್ದು, ಶಾಲೆಗಳಲ್ಲಿ ಪೋಷಣೆ, ಪೌಷ್ಠಿಕಾಂಶಗಳು, ಜೀವಸತ್ವಗಳು, ವಿಟಮಿನ್ ಗಳು, ಆಹಾರ ಪದ್ದತಿ, ಶುದ್ದ ಕುಡಿಯುವ ನೀರು, ಶುಚಿ ರುಚಿ ಆಹಾರ ಕ್ರಮ, ಹಸಿರು ತರಕಾರಿಗಳ ಮಹತ್ವ, ಹಣ್ಣುಗಳ ಸೇವನೆ, ಆರೋಗ್ಯ ಕ್ರಮ, ಹದಿಹರೆಯದ ಮಕ್ಕಳ ಆರೋಗ್ಯ, ಶುಚಿ ಕಿಟ್ ಬಳಕೆ, ಇವುಗಳ ಕುರಿತಾಗಿ ಭಾಷಣ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಜಾಥಾ, ಚರ್ಚಾ ಸ್ಪರ್ಧೆ, ವಿಡಿಯೋ ಪ್ರದರ್ಶನ, ಪ್ರಾರ್ಥನಾ ಸಮಯದಲ್ಲಿ ಮಕ್ಕಳಿಗೆ ಈ ಕುರಿತು ಮಾಹಿತಿ ಏರ್ಪಡಿಸಿ ಯಶಸ್ವಿಗೊಳಿಸಿ, ಈ ಆಚರಣೆಯ ಕುರಿತಾಗಿ ತಾಲೂಕಾ ಅಕ್ಷರ ದಾಸೋಹ ಕಚೇರಿಗೆ ವರದಿ ಸಲ್ಲಿಸುವುದು.
......... END ............