ಕನ್ನಡ ಸಾಹಿತ್ಯ ಚರಿತ್ರೆ
- .ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ
- .ಕನ್ನಡ ಛಂದಸ್ಸಿನ ತಾಯಿಬೇರು-ತ್ರಿಪದಿ
- .ಛಂದೋನುಶಾಸನದ ಕರ್ತೃ -ಜಯಕಿರ್ತ
- .ಕವಿರಾಜಮಾರ್ಗದ ಆಕರ -ದಂಡಿಯ ಕಾವಾಯದರ್ಶಿ
- .ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್ ಎಂಬ ಸ್ತುತಿ ವಾಕ್ಯವು -ಕವಿರಾಜಮಾರ್ಗದಲ್ಲಿದೆ
- .ಬೃಹತ್ಕಥೆಯ ಕರ್ತೃ -ಗುಣಾಢ್ಯ
- .ಬೃಹತ್ಕಥೆಯ ಭಾಷೆ -ಪೈಶಾಚಿ
- . ಕವಿರಾಜಮಾರ್ಗವು-ಲಕ್ಷಣಗ್ರಂಥ /ಅಲಂಕಾರಗ್ರಂಥ
- .ಕನ್ನಡದ ಮೊದಲನೇ ಅಷ್ಟಕ -ಗಜಷ್ಟಾಕ
- . ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ ಎಂದವರು -ಪೊನ್ನ
- .ನಜುಂಡಕವಿಯ ಕೃತಿ -ಕುಮಾರರಾಮನ ಕಥೆ
- .ಚಿತ್ತಾಣ ಬೆದಂಡೆಗಳು -ಕಾವ್ಯರೂಪಕಗಳು
- .ವಡ್ಡರಾಧನೆಯ ಆಕರ-ಜಿನಸೇನಾಚಾರ್ಯನ ಪೂರ್ವಪುರಾಣ ಕರ್ತೃ-ಶಿವಕೋಟ್ಯಾಚಾರ್ಯ
- ಪಂಪನಿಗೆ ಆಶ್ರಯ ನೀಡಿದ್ದ ದೊರೆ-ಚಾಲುಕ್ಯದೊರೆ ಅರಿಕೇಸರಿ
- .ಪಂಪನ ಧಾರ್ಮಿಕ ಕಾವ್ಯ (ಆಗಮಿಕ ) -ಆದಿಪುರಾಣ (ಕನ್ನಡದ ಮೊದಲ ಕಾವ್ಯ)
- .ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ವೆಂಬ ಕೃತಿಗಳ ಸ್ವರೂಪ -ಚಂಪೂಕಾವ್ಯ (ಗದ್ಯ ಪದ್ಯ ಮಿಶ್ರಿತ )
- .ವಿಕ್ರಮಾರ್ಜುನ ವಿಜಯ ವೆಂಬ ಕೃತಿಯ ಮತ್ತೊಂದು ಹೆಸರು -ಪಂಪಭಾರತ
- .ಕವಿತಾಗುಣಾರ್ಣವ ಸಂಸಾರ ಸಾರೊದಯ ಎಂಬ ಬಿರುದುಳ್ಲ ಕವಿ -ಪಂಪ
- .ಪಂಪನು ಬರೆದ ಕಾವ್ಯಗಳ ಶೈಲಿ -ತಿರುಳ್ಗನ್ನಡ (ಪುಲಿಗೆರೆಯ
- .ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಎಂದವರು -ಪಂಪ
- .ಪಂಪನ ಆದಿಪುರಾಣಕ್ಕೆ ಆಕರ ಗ್ರಂಥ -ಜಿನಸೇನಾಚಾರ್ಯನಸಂಸ್ಕೃತದ ಪೂರ್ವಪುರಾಣ
- . ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನಯತನಯಂ ಗಂಡಿನೊಳ್ ಭೀಮಸೇನಂ ಎಂಬ ವರ್ಣನೆಯಿರುವ ಕೃತಿ
- -ಪಂಪಭಾರತ ( ವಿಕ್ರಮಾರ್ಜುನ ವಿಜಯ )
- .ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ ಎಂದು ಹೇಳಿದವರು -ನಾಗರಾಜ
- .ಪಂಪನನ್ನು ಕನ್ನಡ ಕಾಳಿದಾಸ ಎಂದು ಕರೆದವರು -ತೀನಂಶ್ರೀ
- .ಪೊನ್ನನ ಪ್ರಸಿದ್ಧ ಕೃತಿ -ಶಾಂತಿ ಪುರಾಣ
- . ಭುವನೈಕ ರಾಮಾಭ್ಯದಯ ಗ್ರಂಥದ ಮತ್ತೊಂದು ಹೆಸರು -ರಾಮಕಥೆ
- .ಶಾಂತಿಪುರಾಣವು ೧೯ನೇ ತೀರ್ಥಂಕರನಾದ ಶಾಂತಿನಾಥನ ಚರಿತ್ರೆಯನ್ನೊಳಗೊಂಡಿದೆ (ಚಂಪೂ )
- .ಪೊನ್ನನಿಗಿದ್ದ ಬಿರುದು -ಕವಿಚಕ್ರವರ್ತಿ
- .ರನ್ನನ ತಂದೆ ತಾಯಿ -ಜಿನವಲ್ಲಭ ಅಬ್ಬಲಬ್ಬೆ
- .ರನ್ನನಿಗೆ ಆಶ್ರಯ ನೀಡಿದ್ದ ದೊರೆ -ಸತ್ಯಾಶ್ರಯ (ಇರುವೆ ಬೆಡಂಗ ಚಾಲುಕ್ಯ ದೊರೆ
- .ರನ್ನನ ಕೃತಿಗಳು —-ರನ್ನಕಂದ (ನಿಘಂಟು) — ಪರುಶುರಾಮಚರಿತ
- ಚಕ್ರೆಶ್ವರ ಚರಿತ ಅಜಿತತೀರ್ಥೇಶ್ವರಚರಿತೆ (ಅಜಿತತಿರ್ಥಂಕರ ಪುರಾಣ ) ಆಗಮಿಕ ಕಾವ್ಯ ಸಾಹಸ ಭೀಮ ವಿಜಯ (ಲೌಕಿಕ ಕಾವ್ಯ )
- . ಸಿಂಹಾವಲೋಕನ ಕ್ರಮದಿಂದ ಕಾವ್ಯವನ್ನು ಅರುಪಿದವನು -ರನ್ನ
- .ಚಾವುಂಡರಾಯನ ಚಾವುಂಡರಾಯ ಪುರಾಣಕ್ಕಿರುವ ಮತ್ತೊಂದು ಹೆಸರು -ತ್ರಿಷಷ್ಟಿಲಕ್ಷಣಮಹಾಪುರಾಣ
- .ಕರ್ನಾಟಕ ಕಾದಂಬರಿಯ ಕರ್ತೃ -೧ನೇ ನಾಗವರ್ಮ
- .ಕನ್ನಡದಲ್ಲಿನ ಮೊದಲನೆಯ ಛಂದಶಾಸ್ತ್ರ ಗ್ರಂಥ -ಛಂದೋಬುದಿ (೧ನೇ ನಾಗವರ್ಮ)
- . ಕನ್ನಡದ ಮೊದಲನೆಯ ಜೋತಿಷ್ಯ ಗ್ರಂಥ -ಜಾತಕ ತಿಲಕ
- . ರಾಮಚಂದ್ರ ಚರಿತ ಪುರಾಣ (ಪಂಪರಾಮಾಯಣ) ಕೃತಿಯ ಕರ್ತೃ -ನಾಗಚಂದ್ರ
- .ಮಲ್ಲಿನಾಥ ಪುರಾಣ ಗ್ರಂಥ ಬರೆದವರು -ನಾಗಚಂದ್ರ
- . ಧರ್ಮಾಮೃತ ಗ್ರಂಥದ ಕರ್ತೃ-ನಯಸೇನ
- .ಕನ್ನಡದಲ್ಲಿ ಉಪಲಬ್ದವಾದ ಮೊದಲನೆಯ ಜೈನ ರಾಮಾಯಣ -ರಾಮಚಂದ್ರಚರಿತ ಪುರಾಣ (ನಾಗಚಂದ್ರ )
- .ಅಭಿನವ ಪಂಪ ಎಂದು ಕರೆದು ಕೊಂಡಿರುವವನು -ನಾಗಚಂದ್ರ
- .ಮೊದಲನೆಯ ಗೋವೈದ್ಯ ಗ್ರಂಥವನ್ನು ಬರೆದವರು -ಕೀರ್ತಿವರ್ಮ
- . ನೇಮಿನಾಥ ಪುರಾಣದ ಆಕಾರ ಗ್ರಂಥ -ಉತ್ತರ ಪುರಾಣ
- .ನೇಮಿನಾಥ ಪುರಾಣದ ಕರ್ತೃ -ಕರ್ಣಪಾರ್ಯ
- .ಯೋಗಾಂಗ ತ್ರಿವಿಧಿಯ ಕರ್ತೃ -ಅಕ್ಕಮಹಾದೇವಿ
- . ಹರಿಹರನ ಗಿರಿಜಾಕಲ್ಯಾಣವು -ಚಂಪೂಶೈಲಿಯಲ್ಲಿದೆ
- .ಹರಿಹರನ ಪಂಪಾಶತಕ ಕೃತಿಯು -ವೃತ್ತ ಛಂದಸ್ಸಿನಲ್ಲಿದೆ
- .ರಾಘವಾಂಕನ ಉದ್ದಂಡ ಷಟ್ಪದಿಯಲ್ಲಿರುವ ಕೃತಿ -ವೀರೆಷ ಚರಿತೆ
- . ಅನಂತನಾಥ ಪುರಾಣ ದ ಕರ್ತೃ -ಜನ್ನ (ಚಂಪೂ)
- .ಕೇಶಿರಾಜನ ಶಬ್ದಮಣಿದರ್ಪಣ ಕೃತಿಯು (ಕರ್ನಾಟಕ ಲಕ್ಷಣ ಶಬ್ದಶಾಸ್ತ್ರ ) -ಕಂದಪದ್ಯದಲ್ಲಿದೆ ೮ ಪ್ರಕರಣ
- .ಜನ್ನ ಕವಿಗೆ ಆಶ್ರಯ ನೀಡಿದ ದೊರೆ -ವೀರಬಲ್ಲಾಳ ನರಸಿಂಹ
- .ಕನ್ನಡದ ಮೊದಲನೆಯ ಸಂಕಲನ ಗ್ರಂಥ -ಸೂಕ್ತಿ ಸುಧಾರ್ಣವ
- .ಕನ್ನಡದ ಮೊದಲ ವ್ಯಾಕರಣ ಗ್ರಂಥ ಹಳಗನ್ನಡ: -ಶಬ್ದಮಣಿದರ್ಪಣ (ಕೇಶಿರಾಜ)
- ಕನ್ನಡದ ಕಾವ್ಯ ಪಿತಾಮಹ ಯಾರು.?☄ ಪಂಪ
- ರನ್ನನ ನಾಟಕೀಯ ಕಾವ್ಯ ಯಾವುದು,?☄ ಗದಾಯುದ್ಧ
- ನಾಡೋಜ ಪಂಪ ಕೃತಿಯ ಕರ್ತೃ ಯಾರು.?☄ ಮುಳಿಯ ತಿಮ್ಮಪ್ಪಯ್ಯ
- 4) ಪಂಪನ ಲೌಕಿಕ ಕಾವ್ಯ ಯಾವುದು.?☄ವಿಕ್ರಮಾರ್ಜುನ ವಿಜಯ
- 5) ಪಂಪ ಭಾರತದಲ್ಲಿ ವರ್ಣಿತವಾಗಿರುವ ಸರೋವರ ಯಾವುದು.?☄ವೈಶಂಪಾಯನ
- 6) ಪಂಪಭಾರತದಲ್ಲಿ " ನೆತ್ತಮನಾಡಿ ,ಭಾನುಮತಿ ಸೋಲ್ತೋಡೆ ...ಮುತ್ತಿನ ಕೇಡನೆ ನೋಡಿ ನೋಡಿ ಬಳುತ್ತಿವೆ.," ಈ ಮಾತು ಯಾರ ಸ್ನೇಹದ ಸಂಕೇತವಾಗಿದೆ..?☄ ಕರ್ಣ -ದುರ್ಯೋಧನ
- 7) ಹಿತಮಿತ ಮೃದು ವಚನ ,ಪ್ರಸನ್ನ ಗಂಭೀರವದನ ರಚನ ಚತುರ '' ಯಾರ ಶೈಲಿಯಾಗಿದೆ..? ☄ ಪಂಪ
- 8) ಪಂಪ ಭಾರತದಲ್ಲಿ ಕೊನೆಯಲ್ಲಿ ಅರ್ಜುನನೊಡನೆ ಪಟ್ಟಕ್ಕೇರುವಳು ಯಾರು,? ☄ ಸುಭದ್ರೆ
- 9) " ಬೆಳಗುವೆನಿಲ್ಲಿ ಲೌಕಿಕವನಲ್ಲಿ ಜಿನಾಗಮಂ " ಎಂಬ ಉಕ್ತಿ ಬರುವ ಕಾವ್ಯ,? ☄ ಪಂಪ ಭಾರತ
- 10) " ಕರ್ಣರಸಾಯನ ಮಲ್ತೆ ಭಾರತಂ " ಎಂಬ ಉಕ್ತಿ ಬರುವ ಕಾವ್ಯ ಯಾವುದು..? ☄ಪಂಪ ಭಾರತ
- 11) ಪಂಪ ಭಾರತದಲ್ಲಿ ಬರುವ "ಅತ್ಯುನ್ನತಿಯೊಳಮಂ ಸಿಂಧೂದ್ಭವಮಂ " ಎಂದರೆ ಯಾರನ್ನು ಕರೆಯುತ್ತಾರೆ .?
- ☄ ಭೀಷ್ಮ
- 12) " ಭೇದಿಸಲೆಂದು ದಲ್ ನುಡಿದರೆನ್ನದಿರೊಯ್ಯನೆ " ಎಂಬ ಕೃಷ್ಣ ಯಾರ ಕುರಿತು ಹೇಳಿದ್ದಾನೆ..? ☄ಕರ್ಣ
- 13) " ಪಿಡಿಯೆಂ ಚಕ್ರವನೆಂಬ ಚಕ್ರಯ ನಿಳಾಚಕ್ರಂ ಭಯಂಗೊಳ್ವಿನಂ " ಎಂದು ತನ್ನ ಕಾರ್ಯ ತಿಳಿಸಿದವರು ಯಾರು,?
- ☄ ಭೀಷ್ಮ
- 14) " ಪಗೆವರ ನಿಟ್ಟೆಲ್ವಂ ಮುರಿವೊಡೆಗೆ ಪಟ್ಟಂಗಟ್ಟಾ " ಎಂದು ಹೇಳಿದವರು..? ☄ ಕರ್ಣ
- 15) ಪಂಪನ ಯಾವ ಕೃತಿ ಮೂರು ತಿಂಗಳಲ್ಲಿ ರಚನೆಯಾಗಿದೆ,? ☄ ಪಂಪ ಭಾರತ
- 16) " ಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ " ರಚಿತವಾದ ಪಂಪನ ಕಾವ್ಯ ಯಾವುದು,? ☄ ಪಂಪ ಭಾರತ
- 17) ಪಂಪ ಭಾರತದಲ್ಲಿರುವ ಒಟ್ಟು ಆಶ್ವಾಸಗಳು .? ☄14 ಆಶ್ವಾಸಗಳು
- 18) " ಪಂಪ ಕನ್ನಡ ಕಾಳಿದಾಸ " ಎಂದು ಹೇಳಿದವರು,? ☄ ತಿ.ನಂ.ಶ್ರೀ
- 19) ಸೂಲ್ ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್ ಎಂಬ ವಾಕ್ಯ ಪಂಪನ ಯಾವ ಕಾವ್ಯದಲ್ಲಿದೆ ,?
- ☄ ಪಂಪ ಭಾರತ
- 20) " ಸಂಸ್ಕೃತ ಸಾಹಿತ್ಯಕ್ಕೆ ಆದಿಕವಿ ವಾಲ್ಮೀಕಿ ಆದಂತೆ ಕನ್ನಡ ಆದಿಕವಿ ಪಂಪ " ಈ ಮಾತನ್ನು ಹೇಳಿದವರು ಯಾರು.? ☄ ಟಿ.ಎಸ್.ವೆಂಕಣಯ್ಯ
- 21) " ಓಲೈಸಿ ಬಾಳುವುದೇ ಕಷ್ಟಂ ಇಳಾಧಿನಾಧರಂ " ಈ ಮಾತನ್ನು ಹೇಳಿದ ಕವಿ ಯಾರು.? ☄ಪಂಪ
- 22) ವಿಕ್ರಮಾರ್ಜುನ ವಿಜಯದ ಮೂಲ ಆಕರ ಗ್ರಂಥ ಯಾವುದು.? ☄ ವ್ಯಾಸ ಭಾರತ
- 23) ರನ್ನನನ್ನು ಶಕ್ತಿ ಕವಿ ಎಂದು ಕರೆದವರು ಯಾರು.? ☄ ಕುವೆಂಪು
- 24) " ನಿನ್ನಂ ಪೆತ್ತಳ್ ವೊಲೆವೊತ್ತಳೆ ವೀರ ಜನನಿವೆಸಂ ವೆತ್ತಳ್ " ಎಂಬ ಕಾವ್ಯವನ್ನು ದುರ್ಯೋಧನ ಯಾರನ್ನು ಕುರಿತು ಹೇಳಿದ್ದಾನೆ,? ☄ ಕರ್ಣ
- 25) ರನ್ನ ತನ್ನ ಗದಾಯುದ್ಧವನ್ನು ಯಾರನ್ನು ಸಮೀಕರಿಸಿ ಹೇಳಿದ್ದಾನೆ,? ☄ಸತ್ಯಾಶ್ರಯ ಇರಿವ ಬೆಡಂಗ
- 26) " ನೆಲಕಿರಿವೆನೆಂದು ಬಗೆದರೆ.? ಛಲಕಿರಿವೆಂ ಪಾಂಡು ಸುತರೋಳಿ ಕೋಲ್ಲಿಸಿದ ನೆಲನಿದು ಪಾಳ್ನೆಲನೆನಗೆ " ಎಂಬ ಸಾಲು ಬರುವ ಕಾವ್ಯ ಯಾವುದು.? ☄ಗದಾಯುದ್ಧ (ದುರ್ಯೋಧನ)
- 27) ಸಾಹಿತ್ಯ ಸಂಶೋಧನ ಕೃತಿಯಲ್ಲಿ " ಭೀಮನೇ ನಾಯಕ ರೌದ್ರವೇ " ಮುಖ್ಯ ರಸ ಎಂದವರು ..? ☄ದ.ರಾ.ಬೇಂದ್ರೆ
- 28) ರನ್ನನು ಸಿಂಹಾವಲೋಕನ ಕ್ರಮದಿಂದ ಬರೆದ ಕಾವ್ಯ ಯಾವುದು,? ☄ ಗದಾಯುದ್ಧ
- 29) " ಕೃತಿ ಪರೀಕ್ಷಿಪಂಗೆಂಟೆರ್ದೆಯೆ " ಎಂದು ಸವಾಲು ಹಾಕಿದ ರನ್ನನ ಕೃತಿ ಯಾವುದು..? ☄ಗದಾಯುದ್ಧ
- 30) 'ರನ್ನ ವರ ಕವಿ , ಚಿರಕವಿ ಮತ್ತು ಮಹಾಕವಿಯಾಗಿ ನಿಂತಿದ್ದಾನೆ ' ಈ ಹೇಳಿಕೆಯನ್ನು ನೀಡಿರುವವರು..?☄ ಬಿ.ಎಂ.ಶ್ರೀ
- 31) " ನಾಟಕೀಯತೆಯಲ್ಲಿ ರನ್ನನು ಪಂಪನಿಗಿಂತಲೂ ಒಂದು ಕೈ ಮೇಲು " ಎಂದು ಹೇಳಿದವರು .?☄ರಂ.ಶ್ರೀ.ಮುಗಳಿ
- 32) ಜೋಳದ ಪಾಳಿ ಎಂದರೆ..? ☄ ಅನ್ನದ ಹಂಗು(ಋಣ)
- 33) " ನೀರೊಳಗಿರ್ದುಂ ಬೆಮರ್ತನುರಗಪತಾಕಂ " ಎಂಬ ಉಕ್ತಿ ಬರುವ ಕೃತಿ..? ☄ ಗದಾಯುದ್ಧ
- 34) ಗದಾಯುದ್ಧ ಸಂಗ್ರಹ ಕೃತಿ ಬರೆದ ಕವಿ ಯಾರು.? ☄ ತಿ.ನಂ.ಶ್ರೀ
- 35) ರನ್ನನ ದುರ್ಯೋಧನ ಮಹಾನುಭಾವ ಎಂದವರು ಯಾರು,? ☄ಅನಂತ ರಂಗಚಾರ್
- 36) " ಬ್ರಹ್ಮ ಗಣ " ವನ್ನು ಜಯಕೀರ್ತಿ ಹೀಗೆ ಕರೆದಿದ್ದಾರೆ..? ☄ರತಿ
- 37) ವಡಿಯ ಪ್ರಸ್ತಾಪ ಕನ್ನಡದಲ್ಲಿ ಮೊದಲಿಗೆ ಮಾಡಿದ ಕೃತಿ ಯಾವುದು..? ☄ಕವಿ ಜಿಹ್ವಾಬಂಧನ
- 38) ಕಂದ ಪದ್ಯದ ಎಷ್ಟನೇ ಗಣದ ಮೇಲೆ ' ಯತಿ ' ಬರುತ್ತದೆ..? ☄6 ನೇ ಗಣ
- 39) ಸಂಸ್ಕೃತದ ಆರ್ಯಾಗೀತಿ ; ಪ್ರಾಕೃತದ ' ಸ್ಕಂಧಕ 'ಎಂದಕ್ಕೆ ಕನ್ನಡ ಸಂವಾದ ಪದ ಯಾವುದು,?
- ☄ಕಂದ ಪದ್ಯ
- 40) " ಖ್ಯಾತ ಕರ್ನಾಟಕ ವೃತ್ತಗಳು " ಎಂದು ಹೆಸರಿಸಿದವರು.? ☄1ನೇ ನಾಗವರ್ಮ
- 41) ಅಚ್ಚಗನ್ನಡ ಛಂದಸ್ಸಿನ ಹತ್ತು ಮಟ್ಟುಗಳಲ್ಲಿ ಮೊದಲನೆಯದು,? ☄ಮದನವತಿ
- 42) ಗೀತಿಕೆಯ ಮೊದಲ ಪ್ರಯೋಗ ಕಂಡು ಬರುವ ಕೃತಿ ಯಾವುದು.. ? ☄ಕವಿರಾಜಮಾರ್ಗ
- 43) ಪೊಸಗನ್ನಡದಿಂ ವ್ಯಾವರ್ಣಿಸುವೆಂ ಸತ್ಕೃತಿಯಂ ಎಂದು ಹೇಳಿದವನು ..? ☄ಚಂದ್ರರಾಜ
- 44) ಕನ್ನಡ ಮೊದಲನೆಯ ವ್ಯಾಕರಣ ' ಶಬ್ಧಸ್ಮೃತಿ ' ಮತ್ತು ಸಂಸ್ಕೃತದಲ್ಲಿ ಕನ್ನಡ ವ್ಯಾಕರಣ" ಕರ್ಣಾಟಕ ಭಾಷಾಭೂಷಣ " ಬರೆದ ಕವಿ ಯಾರು .? ☄2 ನೇ ನಾಗವರ್ಮ
- 45) ಆಗಮ ಲೌಕಿಕ ವಿರೋಧಮಂ ಕಳೆದು , ಸಾರಾಂಶಮಂ ಕೊಂಡಾ ಹಲವು ಮತಂಗಳನೊಂದು ಮಾಡಿ ಬರೆದ ಕಾವ್ಯ ಯಾವುದು..? ☄ಮದನ ತಿಲಕ
- 46) 24ನೇ ತೀರ್ಥಕರ ಮಹಾವೀರನ ಕುರಿತು ಚಂಪೂ ಕಾವ್ಯ ಬರೆದ ಕವಿ ಯಾರು,? ☄2ನೇ ನಾಗವರ್ಮ -ವರ್ಧಮಾನ ಪುರಾಣ
- 47) ಕವಿರಾಜ ಮಾರ್ಗದಲ್ಲಿ ಪ್ರಾಸಾಕ್ಷರವನ್ನು ಹೀಗೆ ಕರೆಯಲಾಗಿದೆ..? ☄ಶಬ್ದಾಲಂಕಾರ
- 48) ಸುಭಟರ್ಕಳ್, ಕವಿಗಳ್ ,ಸುಪ್ರಭುಗಳ್ ಎಂದು ವರ್ಣಿಸುವುದಕ್ಕೆ ಕವಿರಾಜಮಾರ್ಗದ ಪ್ರಕಾರ ಯಾವುದು,?
- ☄ಬಹುವಿಶೇಷಣ
- 49) ಅಕ್ಷರ ಗಣ ಕನ್ನಡಕ್ಕೆ ಯಾವ ಭಾಷೆಯ ಕೊಡುಗೆ ಯಾಗಿದೆ .? ☄ಸಂಸ್ಕೃತ
- 50) ಪ್ರಾಸಾಕ್ಷರವು ವಿಸರ್ಗದಿಂದ ಕೊಡಿದ್ದರೆ...? ☄ಅಜಪ್ರಾಸ
- 51) ಕನ್ನಡದ ಆದಿ ವ್ಯಾಕರಣಕಾರ ಯಾರು.? ☄2 ನೇ ನಾಗವರ್ಮ
- 52) " ಛಂದಸ್ಸು ಕವಿಯ ಕಣ್ಣಿನ ಬೆಳಕು "ಎಂದು ಹೇಳಿದವರು.? ☄1ನೇ ನಾಗವರ್ಮ
- 53) ಛಂದಸ್ಸು ಎಂದರೆ..? ☄ಪದ್ಯಾರಚನ ಶಾಸ್ತ್ರ
- 54) ಕನ್ನಡ ಛಂದಸ್ಸಿಗೆ ಮಾತ್ರಾಗಣ ಯಾವ ಭಾಷೆಯ ಕೊಡುಗೆ ಯಾಗಿ
......... END .......