ಈ ಪದಗಳ ಅರ್ಥ:


1). ಆರ್ತನಾದ - ಕಷ್ಟಕ್ಕೆ ಸಿಕ್ಕಿದವರ ಕೂಗು

2). ಕಿವಿಗಡಚಿಕ್ಕು - ಕಿವಿಗೆ ಕರ್ಕಶವಾಗು

3). ಕ್ರೌರ್ಯ - ನಿರ್ದಯತೆ, ಕರುಣೆಯಿಲ್ಲದ.

4). ಗ್ರೌಂಡ್ - ಭೂಪ್ರದೇಶ

5). ರೋದನ - ಅಳುವಿಕೆ

6). ಸಾಂತ್ವನ - ಸಮಾಧಾನಪಡಿಸು

7). ಸೂಲಗಿತ್ತಿ - ಹೆರಿಗೆಯ ಸಮಯದಲ್ಲಿ ಸಹಾಯ ಮಾಡುವವಳು

8). ಹಂಬಲ - ತೀವ್ರ ಆಸೆ

9). ಹತಾಶೆ - ನಿರಾಶೆ, ಆಶಾಭಂಗ.

10). ಅಣಿ - ಸಿದ್ಧತೆ

11). ಅಬ್ಬೆ - ತಾಯಿ

12). ಅರಿ - ತಿಳಿ

13). ಅರ್ತಿ - ಪ್ರೀತಿ

14). ಅಸುರ - ರಾಕ್ಷಸ

15). ಅಳಲು - ದುಃಖ

16). ಆದರ - ಪ್ರೀತಿ

17). ಆನನ - ಮುಖ

18). ಆನು - ತಾಳು

19). ಉಲ್ಕೆ - ಆಕಾಶ ದಿಂದ ಭೂಮಿಗೆ ಬೀಳುವ ತೇಜಃಪುಂಜವಾದ ಆಕಾಶಕಾಯ,

20). ಊಣೆಯ - ಕೊರತೆ

21). ಎಂಥರೋ - ಎಂತಹವರೋ

22). ಎಡೆ - ಸ್ಥಳ

23). ಎರೆ - ಬೇಡು, ಪ್ರಾರ್ಥಿಸು.

24). ಐದಿ - ಹೋಗಿ

25). ಕಂಪು - ಸುವಾಸನೆ

26). ಕಡು - ಅತಿ

27). ಕರುಕ - ಉರಿದ ಬತ್ತಿಯ ಕಪ್ಪು ಭಾಗ

28). ಚಿರ - ಶಾಶ್ವತ

29). ಚೀರ (ತ್ಸ) - ಸೀರೆ (ದ್ಭ) - ನಾರುಬಟ್ಟೆ

30). ತಣಿವು - ತೃಪ್ತಿ

31). ತವಸಿ(ದ್ಭ) - ತಪಸ್ವಿ(ತ್ಸ)

32). ತುಸ - ಸ್ವಲ್ಪವೂ

33). ತೃಷೆ - ಬಾಯಾರಿಕೆ

34). ತೇಜ - ಕಾಂತಿ

35). ದಿಟ್ಟಿ (ದ್ಭ) - ದೃಷ್ಟಿ (ತ್ಸ)

36). ಧೃತಿ - ಧೈರ್ಯ

37). ನಲ್ಮೆ - ಪ್ರೀತಿ

38). ನೆಚ್ಚು - ನಂಬು

39). ನೆರವು - ಸಹಾಯ

40). ಪದ - ಪಾದ

41). ಪೆರೆ - ಚಂದ್ರ

42). ಪೊಗಳು - ಹೊಗಳು

43). ಬೆಂಬಲ - ಗುಂಪು

44). ಬನ್ನ - ಕಷ್ಟ, ತೊಂದರೆ

45). ಬಯಕೆ - ಇಚ್ಛೆ

46). ಬಳಿ - ದಾರಿ

47). ಬೆರಗು - ಆಶ್ಚರ್ಯ

48). ಬೇಗೆ - ದು:ಖವೆಂಬ ಬೆಂಕಿ

49). ಭೂಮಿಜಾತೆ - ಸೀತೆ

50). ಮಧುಕರ - ದುಂಬಿ

51). ಮಧುಪರ್ಕ - ಅತಿಥಿಗಳಿಗೆ ನೀಡುವ ಮೊಸರು, ತುಪ್ಪ, ನೀರು, ಜೇನುತುಪ್ಪ, ಸಕ್ಕರೆ ಮಿಶ್ರಿತ ಪಾನೀಯ.

52). ರೇವು - ಬಂದರು

53). ಲೇಸು - ಉತ್ತಮ

54). ವೇದಿ - ಹೋಮ ನಡೆಯುವ ಸ್ಥಳ

55). ಶ್ರಮಣಿ - ತಪಸ್ವಿನಿ

56). ಸನಿಯ(ಹ) - ಸಮೀಪ

57). ಸವಿ - ಸಿಹಿ

58). ಸಿದ್ಧ - ತಪಸ್ವಿ

59). ಸುರಭಿ - ಕಾಮಧೇನು

60). ಹವಣು - ಸಿದ್ಧತೆ

61). ಹಳು – ಕಾಡು

62). ಅಣಿ - ಸಿದ್ಧತೆ

65). ಅರ್ತಿ - ಪ್ರೀತಿ

66). ಅಸುರ - ರಾಕ್ಷಸ

67). ಅಳಲು - ದುಃಖ

68). ಆದರ - ಪ್ರೀತಿ

69). ಆನನ - ಮುಖ

70). ಆನು - ತಾಳು

71). ಊಣೆಯ - ಕೊರತೆ

72). ಎಡೆ - ಸ್ಥಳ ಎರೆ - ಬೇಡು, ಪ್ರಾರ್ಥಿಸು.

73). ಐದಿ - ಹೋಗಿ

74). ಕಂಪು - ಸುವಾಸನೆ

75). ಕಡು - ಅತಿ

76). ಕರ - ಕೈ

77). ಕರುಕ - ಉರಿದ ಬತ್ತಿಯ ಕಪ್ಪು ಭಾಗ

78). ಚಿರ - ಶಾಶ್ವತ

79). ಚೀರ (ತ್ಸ) - ಸೀರೆ (ದ್ಭ) - ನಾರುಬಟ್ಟೆ

80). ತಣಿವು - ತೃಪ್ತಿ

81). ತವಸಿ(ದ್ಭ) - ತಪಸ್ವಿ(ತ್ಸ)

82). ತುಸ - ಸ್ವಲ್ಪವೂ

83). ತೃಷೆ - ಬಾಯಾರಿಕೆ

84). ತೇಜ - ಕಾಂತಿ

85). ದಿಟ್ಟಿ (ದ್ಭ) - ದೃಷ್ಟಿ (ತ್ಸ)

86). ಧೃತಿ - ಧೈರ್ಯ

87). ನಲ್ಮೆ - ಪ್ರೀತಿ

88). ನೆಚ್ಚು - ನಂಬು

89). ನೆರವು - ಸಹಾಯ

90). ಪದ - ಪಾದ

91). ಪೆರೆ - ಚಂದ್ರ

92). ಪೊಗಳು - ಹೊಗಳು

93). ಬೆಂಬಲ - ಗುಂಪು

94). ಬನ್ನ - ಕಷ್ಟ, ತೊಂದರೆ

95). ಬಯಕೆ - ಇಚ್ಛೆ

96). ಬಳಿ - ದಾರಿ

97). ಬೆರಗು - ಆಶ್ಚರ್ಯ

98). ಬೇಗೆ - ದು:ಖವೆಂಬ ಬೆಂಕಿ

99). ಭೂಮಿಜಾತೆ - ಸೀತೆ

100). ಮಧುಕರ - ದುಂಬಿ

102). ರೇವು - ಬಂದರು

103). ಲೇಸು - ಉತ್ತಮ

104). ವೇದಿ - ಹೋಮ ನಡೆಯುವ ಸ್ಥಳ

105). ಶ್ರಮಣಿ - ತಪಸ್ವಿನಿ

106). ಸನಿಯ(ಹ) - ಸಮೀಪ

107). ಸವಿ - ಸಿಹಿ

108). ಸಿದ್ಧ - ತಪಸ್ವಿ

109). ಸುರಭಿ - ಕಾಮಧೇನು

110). ಹವಣು - ಸಿದ್ಧತೆ

111). ಹಳು – ಕಾಡು

112). ಅಂಜು - ಹೆದರು, ಭಯಪಡು.

113). ಕಟೆ - ಕೆತ್ತು,

114). ಪೆನ್ನಿ - ಇಂಗ್ಲೆಂಡಿನ ನಾಣ್ಯ

115). ಕಬ್ಬಿಗ - ಕವಿ

116). ಕೂಟ - ಅನೇಕ ರಸ್ತೆಗಳು ಸೇರುವ ಜಾಗ

117). ಚಣ್ಣ - ಚಡ್ಡಿ

118). ಟೈಪಿಸ್ಟ್ - ಬೆರಳಚ್ಚುಗಾರ

119). ಟ್ರಾಮ್ - ವಿದ್ಯುತ್ತಿನಿಂದ ಓಡಾಡುವ ಸ್ಥಳೀಯ ರೈಲುಗಾಡಿ

120). ಕಾರಕೂನ - ಗುಮಾಸ್ತ

121). ಪಾಟಿ - ಹಲಗೆ

122). ಪುಚ್ಚ - ಗರಿ

123). ಪೋಕ್ತಾ - ಅಲಂಕಾರ, ಚೆನ್ನಾಗಿ. ಉಡುಪು ಧರಿಸುವುದು

124). ಫೂಟು - ಅಡಿ

125). ಮತ್ರ್ಯತ್ವವೇ - ಮನುಷ್ಯ ಸ್ವಭಾವವೇ

126). ಮೋರೆ - ಮುಖ

127). ವಶೀಲಿ - ಪ್ರಭಾವ,

128). ವರ್ಚಸ್ಸು ವಸಾಹತು - ಅನ್ಯ ದೇಶಿಯರ ಅಧಿಕಾರಕ್ಕೊಳಪಟ್ಟ ಪ್ರದೇಶ

129). ವಿಲಾಯತಿ - ವಿದೇಶ

130). ಶೀಲಿಂಗ್ - ಇಂಗ್ಲೆಂಡಿನ ಒಂದು ಬೆಳ್ಳಿಯ ನಾಣ್ಯ

131). ಸಿಂಪಿ - ದರ್ಜಿಯವನು

132). ಸ್ಟೇಷನರಿ - ಲೇಖನ ಸಾಮಗ್ರಿಗಳು ಇತ್ಯಾದಿ

133). ಅಸ್ತಿಭಾರ - ಬುನಾದಿ ಗೊಮ್ಮಟ

134). ಕಾಮಗಾರಿ - ಕೆಲಸ

135). ಗಿರಣಿ - ಹತ್ತಿಯನ್ನು ಬಿಡಿಸುವ, ನೂಲು ಮಾಡುವ, ಧಾನ್ಯ ಬೀಸುವ ಯಂತ್ರ ಮತ್ತು ಇಂತಹ ಯಂತ್ರಗಳಿಂದ ಮಿಲ್ಲು.

136). ವೈಜ್ಞಾನಿಕ - ವಿಜ್ಞಾನಕ್ಕೆ ಸಂಬಂಧಿಸಿದ

137). ವ್ಯಕ್ತಿತ್ವ - ಉನ್ನತ ವ್ಯಕ್ತಿತ್ವ

138). ದೂಷಣೆ - ನಿಂದನೆ

139). ಸಮುಚ್ಚಯ - ಸಮೂಹ ಕೂಡಿದ ಕಟ್ಟಡ,

140). ಸುಸಂಗತ - ಯೋಗ್ಯವಾದ

141). ತಾಂತ್ರಿಕ - ತಂತ್ರಜ್ಞಾನಕ್ಕೆ ಸಂಬಂಧಿಸಿದ

142). ಹಂಬಲ - ಬಯಕೆ

143). ಮುಕ್ತಕಂಠ - ತೆರೆದ ಮನಸ್ಸು

144). ಶತಮಾನೋತ್ಸವ - ನೂರು ವರ್ಷ ತುಂಬಿದ ಸಮಯದಲ್ಲಿ ಆಚರಿಸುವ ಉತ್ಸವ

145). ಸುಪರ್ದಿ - ವಶ

146). ಸ್ಥೈರ್ಯ - ದೃಢತೆ

147). ಹರಿಕಾರ - ಮುಂದಾಳು

148). ಅಂದಾಜಿಸು - ಊಹೆ ಮಾಡು

149). ಆವಾಹಿಸು - ಮೈಮೇಲೆ ಬರುವಂತೆ ಮಾಡಿಕೋ

150). ಗುಡಿಮನೆ - ಚಿಕ್ಕ ದೇವಸ್ಥಾನ

151). ಕ್ಷೋಭೆ - ತಳಮಳ

152). ಅಪ್ರತಿಮ - ಹೋಲಿಕೆ ಇಲ್ಲದ, ಅಮೂರ್ತ

153). ಖಿರ್ದಿ - ಕಂದಾಯ ವಿವರಗಳನ್ನೊಳಗೊಂಡ ಪುಸ್ತಕ

154). ದಿಗ್ಭ್ರಮೆಗೊಂಡ - ದಿಕ್ಕು ತೋಚದ

155). ಗಂಧ - ವಾಸನೆ

156). ಘ್ರಾಣೇಂದ್ರಿಯ - ಮೂಗು

157). ಜಡ - ಮಂದ, ಚಟುವಟಿಕೆಯಿಲ್ಲದ

158). ತೋಟಾ - ಬಂದೂಕಿನ ಗುಂಡು

159). ಪಂಚೇಂದ್ರಿಯ - ಕಣ್ಣು, ಕಿವಿ, ಮೂಗು,

160). ಪಂಜ - ಹುಲಿಯ ಅಂಗಾಲು ನಾಲಗೆ, ಚರ್ಮ.

161). ಲಾಂಛನ - ಗುರುತು, ಚಿಹ್ನೆ

162). ಅತಿಕುಟಿಲಮನ - ಅತಿಯಾದ ಮೋಸದ ಮನಸ್ಸು

163). ಅನೃತ - ಅಸತ್ಯ

164). ಅಪರಗಿರಿ - ಅಸ್ತಮಾನದ ಬೆಟ್ಟ, ಪಶ್ಚಿಮದ ಬೆಟ್ಟ

165). ಅಬ್ಜೋದರ - ವಿಷ್ಣು

166). ಕಾಯಕಾಂತಿ - ವಿಷ್ಟುವಿನ ದೇಹದ ಕಾಂತಿ

167). ಅಯ್ಯ - ತಂದೆ

168). ಅಷ್ಟವಿಧ - ಎಂಟುಬಗೆಯ

170). ಆಚ್ಛಾದಿತ - ಆವರಿಸಿದ

171). ಆದಿತ್ಯ - ಸೂರ್ಯ

172). ಇಂಬು - ಅವಕಾಶ

173). ಉಯ್ - ಒಯ್ಯು

174). ಉಯ್ದು - ಒಯ್ದು

175). ಉರಿಯಟ್ಟಲ್ - ಬೆಂಕಿ ಉರಿಯಲು

176). ಉಸಿರ್ - ಹೇಳು

177). ಎನ್ನೆಂದುದಂ - ನಾನು ಹೇಳಿದ್ದನ್ನು

178). ಒಡಂಬಡು - ಒಪ್ಪು

179). ಕಟ್ಟೇಕಾಂತ - ಯಾರೂ ಇಲ್ಲದಂತಹ

180). ಕರಮ್ - ತುಂಬಾ

181). ಕಳವನಿಡು - ಕಳ್ಳತನ ಆರೋಪಿಸು

182). ಕಳೆದುಕೊಂಡುದರ್ಕೆ - ಕದ್ದುದಕ್ಕೆ

183). ಕಾಪು - ರಕ್ಷಣೆ

184). ಕಿಡಿಸು - ಕೆಡಿಸು

185). ಕಿಡು - ನಾಶವಾಗು

186). ಕಿರಿದು - ಸ್ವಲ್ಪ

187). ಕುಳಿ - ಹೊಂಡ

188). ಕೂರ್ಮೆ - ಸ್ನೇಹ

189). ಕೃತ್ರಿಮ - ಮೋಸ

190). ಕೆಲವಾನುಂ - ಕೆಲವು

191). ಕೈಕೊಳ್ಳು - ಸಮ್ಮತಿಸು

192). ಕೋಟರಕುಟೀರ - ಮರದ ಪೊಟರೆ

193). ಕ್ರಮಕ್ರಮದೆ - ಮೆಲ್ಲಮೆಲ್ಲನೆ

195). ಚೋದ್ಯ - ಅದ್ಭುತ

196). ತತ್ಪ್ರಪಂಚಂ - ಈವರೆಗೆ ನಡೆದ ಘಟನೆ

197). ತತ್ಸನ್ನಿಧಾನಸ್ಥಿತ - ಆಲ್ಲಿರುವ

198). ತಮಾಲ - ಕತ್ತಲೆ

199). ತಸ್ಕರ - ಕಳ್ಳ

200). ದಿಙ್ಮುಖ - ದಿಕ್ಕುಗಳು

201). ದುಷ್ಪುತ್ರ - ದುಷ್ಟಪುತ್ರ

202). ನಿರ್ವಾಹ - ತಂತ್ರ

203). ನೀರದ - ಮೋಡ

204). ನೆರವಿ - ಜನಸಮೂಹ

205). ನೇಸರ್ - ಸೂರ್ಯ

206). ಪಚ್ಚು - ಹಂಚು

207). ಪನ್ನಗ - ಹಾವು

208). ಪರದು - ವ್ಯಾಪಾರ

209). ಪರಮ ಗಹನ - ನಿಗೂಢ

210). ಪರಿಗ್ರಹ - ಮನೆಯವರು

211). ಪರ್ವಿದ - ಹಬ್ಬಿದ

212). ಪಸಿಯದುಂಡು - ಆಹಾರಕ್ಕೆ ಕೊರತೆಯಿಲ್ಲದೆ

213). ಪಿರಿದಪ್ಪ - ಬಹಳಷ್ಟು

214). ಪುಗಿಸು - ಹೊಗಿಸು

215). ಪುಯ್ಲಿಟ್ಟು - ಬೊಬ್ಬೆ ಹಾಕಿ

216). ಪುಳ್ಳಿ - ಕಟ್ಟಿಗೆ

225). ಪ್ರಕರಾಂಜನ ಪುಂಜ - ಕಾಡಿಗೆಯ ರಾಶಿ

226). (ಕಾಡಿಗೆಯಷ್ಟು ಕಪ್ಪಾದ)

227). ಪ್ರತ್ಯರ್ಥಿ - ಪ್ರತಿವಾದಿ

229). ಬಂಚಿಸು - ವಂಚಿಸು

230). ಬರವಂ - ಬರುವಿಕೆಯನ್ನು

231). ಬಲವಂದು - ಪ್ರದಕ್ಷಿಣೆ ಬಂದು

232). ಬವರ - ಜಗಳ

233). ಬಸಿರ್ - ಹೊಟ್ಟೆ

234). ಬಹಿರುದ್ಯಾನವನ - ಹೊರವಲಯದ ಮರಗಿಡಗಳ ಹೂದೋಟ

235). ಬಳಾರಿ - ಮಾರಿ

236). ಬಾಯ್ - ಬಾಯಿ

237). ಬಾಯಾರ್ದು - ಕೂಗಾಡಿ

239). ಬೀಡಂಬಿಡು - ತಂಗು

240). ಬೀಯ(ದ್ಭ) - ವ್ಯಯ(ತ್ಸ), ಖರ್ಚು

241). ಬೇಹಾರಿ(ದ್ಭ) - ವ್ಯಾಪಾರಿ(ತ್ಸ)

242). ಭೃಂಗೋದರ - ಹೊಗೆತುಂಬಿ

243). ಮನದನ್ನ - ಸ್ನೇಹಿತ

244). ಮಹಾವಟವಿಟಪಿ - ದೊಡ್ಡದಾದ ಅಶ್ವತ್ಥ ಮರ

245). ಮೇದಿನಿ - ಭೂಮಿ

246). ಲುಬ್ಧತೆ - ದುರಾಸೆ

247). ವಂದು - ಬಂದು

248). ವಣಿಕ್ಪುತ್ರರ್ - ವ್ಯಾಪಾರಿಗಳ ಮಕ್ಕಳು

249). ವರ್ಪುದು - ಬರುವುದು

250). ವ್ಯವಹಿತ - ಮುಚ್ಚಿದ

251). ಸಂದೆಯ(ದ್ಭ) - ಸಂದೇಹ (ತ್ಸ)

252). ಸಮನಿಸು - ಸಂಭವಿಸು

253). ಹರಣ - ಕದಿಯು

254). ಹುಸಿ - ಸುಳ್ಳು

255). ಕೋಕಿಲಾ(ತ್ಸ) - ಕೋಗಿಲೆ(ದ್ಭ)

256). ಇರ್ವಗ್ರ್ಗಂ - ಇಬ್ಬರಿಗೂ ಕರಂ

257). ಸಾದು - ಬಹು ಸಾಧುವಾದವನು

258). ಕಸವರ - ಚಿನ್ನ

259). ಕೆರ್ಪುಗಳೊಳ್ - ಎಕ್ಕಡಗಳಲ್ಲಿ, ಚಪ್ಪಲಿಗಳಲ್ಲಿ

260). ಖಂಡಮಾಗೆ - ತುಂಡಾಗುವಂತೆ

261). ಚೋದ್ಯಂಬಟ್ಟು - ಆಶ್ಚರ್ಯಪಟ್ಟು

262). ತಗುಳ್ಚಿದರ್ - ಸೇರಿಸಿದರು

263). ದೊರೆಯಲ್ಲವು - ಸಮಾನವಲ್ಲ

264). ನೈಮಿತ್ತಿಕಂ - ಜೋಯಿಸನು

265). ಪಚ್ಚುಗೊಟ್ಟೊಡೆ - ವಿಭಾಗಿಸಿ ಕೊಟ್ಟರೆ

266). ಪರಿಯಣದ - ಊಟದ ತಟ್ಟೆಯ

267). ಪಾರುತ್ತಿರೆ - ಎದುರು ನೋಡುತ್ತಿರಲು

269). ಬಟ್ಟೆಯೊಳೆಲ್ಲಂ - ದಾರಿಯಲ್ಲೆಲ್ಲ

270). ಭಾರ್ಯೆ - ಸತಿ, ಹೆಂಡತಿ

272). ವಿಭೂತಿಯಂ - ಐಶ್ವರ್ಯವನ್ನು

273). ಸರುಸಪಂ - ಸಾಸಿವೆಗಳು

274). ಸಿದ್ಧಾರ್ಥಂಗಳಂ - ಬಿಳಿ ಸಾಸಿವೆಗಳನ್ನು

275). ಸೇಸೆಯನಿಕ್ಕಲ್ - ಮಂತ್ರಾಕ್ಷತೆ ಹಾಕಲು

276). ಕಂದಿದ - ಮಸುಕಾದ ವಸಂತ - ಸಮೃದ್ಧಿ

277). ಕಲುಷಿತ - ಮಲಿನ ಹಡಗು - ನಾವೆ

278). ಪಥ - ದಾರಿ ಹಣತೆ - ದೀಪ

279). ಬರಡು - ಪೆÇಳ್ಳು, ಹಾಳುಬಿದ್ದಿರುವ

280). ಎವೆ-ಕಣ್ಣರೆಪ್ಪೆ

281). ತಿಂಗಳೂರು - ಚಂದ್ರಲೋಕ

282). ಒಕ್ಕಿ-ತೆನೆಯಿಂದ ಕಸಕಡ್ಡಿ ಬೇರ್ಪಡಿಸಿ

283). ನರೆ-ಬಿಳಿಬಣ್ಣ

284). ಕೆನ್ನ-ಕೆಂಪು

285). ಬೆಳ್ಳಿ-ಶುಕ್ರ

286). ಗಾವುದ-ದೂರವನ್ನು ಅಳೆಯುವ ಒಂದು ಪ್ರಮಾಣ, 12 ಮೈಲುಗಳ ಅಂತರ

287). ಬ್ರಹ್ಮಾಂಡ - ಜಗತ್ತು

288). ನಾಲ್ಕು ಹರಿದಾರಿ,

289). ಮನ್ವಂತರ-ಪರಿವರ್ತನೆಯ ಕಾಲ

290). ಮುಕ್ಕಿ-ಗಬಗಬನೆ ತಿಂದು

291). ತಿಂಗಳ-ಚಂದ್ರ

292). ಹೊನ್ನ-ಹಳದಿ

293). ಅಗಸಿ - ಹೆಬ್ಬಾಗಿಲು

294). ಕಸರತ್ತು - ಚಮತ್ಕಾರ

295). ಕಾರಕೂನ - ಗುಮಾಸ್ತ

296). ಕುಮಕಿ - ಸಹಾಯ, ಒತ್ತಾಸೆ

297). ಕೊಳ್ಳಿ - ಬೆಂಕಿ

298). ಘಾತಕ - ದ್ರೋಹಿ

299). ಘೋರ - ಆಪತ್ತು,

300). ಚರಿಗೆ - ತಂಬಿಗೆ

301). ಜತ್ತ - ಜೊತೆ

302). ಜಲದ - ತೀವ್ರ

303). ಟಾರಾ - ನಾಶ

304). ದಂಡು - ಸೈನ್ಯ

305). ಭಂಟ - ವೀರ

306). ಭರಪೂರ - ಪ್ರವಾಹ

307). ಲೂಟಿ - ಸುಲಿಗೆ

308). ವಿಲಾತಿ - ವಿಲಾಯಿತಿ

309). ಹತಾರ - ಆಯುಧ

310). ಮಸಲತ್ತು - ಪಿತೂರಿ, ಒಳಸಂಚು

311). ಹುಕುಂ - ಆದೇಶ

312). ಅಡಿ-ಪಾದ

313). ಅನ್ವಯ-ವಂಶ

314). ಅರುಹು-ಹೇಳು

315). ಅವಸರ-ಅಗತ್ಯದ

316). ಇನ-ಸೂರ್ಯ

317). ಉರವಣಿಸು-ಹೆಚ್ಚಾಗು

318). ಋಣ-ಹಂಗು

319). ಎನಿಸಲೊಲ್ಲದ-ಇಷ್ಟಪಡದ

320). ಕಡು-ಅತಿ

321). ಕಡು-ಅತಿ

322). ಕಿಂಕರ-ಸೇವಕ

323). ಕೈಯಾನು-ಕೈಚಾಚು

324). ಕೈವಾರ-ಹೊಗಳಿಕೆ

325). ಗಡಣ-ಸಮೂಹ

326). ಗದ್ದುಗೆ-ಪೀಠ

327). ಗ್ಲಾನಿ-ತಲ್ಲಣ

328). ಚಿತ್ತ-ಮನಸ್ಸು

329). ತನೂಜ-ಮಗ

330). ದನುಜ-ರಾಕ್ಷಸ

331). ದೃಗುಜಲ-ಕಣ್ಣನೀರು

332). ಬಳಿ-ಅನಂತರ

333). ಬಾಯ್ದಂಬುಲಕೆ-ಎಂಜಲಿಗೆ

334). ಭೇದ-ವ್ಯತ್ಯಾಸ

335). ಮುರಾರಿ-ಕೃಷ್ಣ

336). (ಮುರ+ಅರಿ)

337). ಮೇದಿನಿ-ಭೂಮಿ

338). ರಣ-ಯುದ್ಧ

339). ಆಶ್ವೀಜ - ಚೈತ್ರದಿಂದ ಏಳನೆಯ ಮಾಸ (ಆಶ್ವಯುಜ)

340). ಇಳೆ - ಭೂಮಿ

341). ಎಲರ್ - ಗಾಳಿ

342). ಕೊನೆ - ಗೊನೆ

343). ತಿರೆ - ಭೂಮಿ

344). ನವಧಾತ್ರಿ - ಹೊಸದಾಗಿ ಕಾಣುವ ಭೂಮಿ

345). ಮಕಮಲ್ಲು - ನಯವಾದ ಬಟ್ಟೆ (ಹುಲ್ಲಿನ ಮಕಮಲ್ಲು-ಹುಲ್ಲುಹಾಸು)

346). ವನಧಿ - ಸಮುದ್ರ (ಹಸುರಿನ ಸಮುದ್ರ)

347). ಶ್ಯಾಮಲ - ಕಪ್ಪು, ನೀಲ

348). ಶಾಲೀವನ - ಬತ್ತದ ಗದ್ದೆ

349). ಹೊಸಪಚ್ಚೆ - ಹೊಸ ಹಸುರು, ಎಳೆಯ ಚಿಗುರು

350). ಅಂಜಿ-ಹೆದರಿ

351). ಅಗಡು-ಶೌರ್ಯ

352). ಅಬ್ಧಿಪ-ವರುಣ

353). ಆರ್ಪರ್-ಸಮರ್ಥರು

354). ಉಪವನ-ಉದ್ಯಾನವನ

355). ಉರ್ವಿ-ಭೂಮಿ

356). ಕದಳಿ-ಬಾಳೆ

357). ಚರಿಸು-ಸಂಚರಿಸು

358). ತುರಂಗ-ಕುದುರೆ

359). ನೃಪ-ದೊರೆ

360). ನೆತ್ತಿ-ಹಣೆ

361). ಪಸುರು-ಹಸುರು

362). ಬಂಜೆ(ದ್ಭ)-ವಂಧ್ಯಾ(ತ್ಸ) ಸಂತಾನವಿಲ್ಲದವಳು

363). ಸಾರ್ವುದು - ಬರುವುದು

364). ಬಡಿ-ಹೊಡೆ, ಚಚ್ಚು

365). ಮುಳಿ-ಕೋಪ

366). ಲಿಖಿತ-ಬರೆಹ

367). ವಾಜಿ-ಕುದುರೆ

368). ವಾಸಿ-ಪ್ರತಿಜ್ಞೆ

369). ಹಯ-ಕುದುರೆ

370). ಅಡಸು - ಉಂಟಾಗು

371). ಅನಾಕುಳಂ - ನಿರಾಯಾಸವಾಗಿ

372). ಅಘ್ರ್ಯ - ಪೂಜ್ಯರಿಗೆ ಕೈ ತೊಳೆಯಲು ನೀಡುವ ನೀರು

373). ಅರ್ಥಿ - ಬೇಡುವವನು

374). ಅವನೀತಳ - ಭೂಮಂಡಲ

375). ಅಳವು - ಪರಾಕ್ರಮ

376). ಆಂಬರಂ - ನನ್ನವರೆಗೂ

377). ಎರೆದಂ - ಬೇಡುವವನು

378). ಎ¿õÉದು ಕಳೆಯಿಂ - ಹೊರಕ್ಕೆ ತಳ್ಳಿರಿ

379). ಏಳಿಸಿದ - ತಿರಸ್ಕರಿಸಿದ

380). ಒಡಗೊಂಡು - ಜೊತೆಗೂಡಿ

381). ಒಡವೆ - ಐಶ್ವರ್ಯ,

382). ಆಸ್ತಿ ಒತ್ತಂಬದಿಂದ - ಒತ್ತಾಯದಿಂದ

383). ಕಡುಸಿಗ್ಗು - ತೀವ್ರ ನಾಚಿಕೆ

384). ಕನಕಪಾತ್ರ - ಚಿನ್ನದ ಪಾತ್ರೆ

385). ಕಳ್ಗುಡಿದವರಂದಮ್ - ಮದ್ಯಕುಡಿದವರರೀತಿ

386). ಕುಪ್ಪೆ - ಕಸದತಿಪ್ಪೆ

387). ಕೊಲಲ್ಕೆ - ಕೊಲ್ಲುವುದಕ್ಕೆ

388). ಖಳ - ದುಷ್ಟ

389). ಚಟ್ಟರಿಂ- ಶಿಷ್ಯರಿಂದ

390). ಜಟಾಕಲಾಪ - ಜಡೆಯ ಸಮೂಹ

391). ಜಲಕ್ಕನೆ - ವಿಶದವಾಗಿ

392). ತಡವಪ್ಪುದು - ತೊದಲುವುದು

393). ತಳವೆಳಗಾಗೆ - ಗಾಬರಿಯಾಗುವಂತೆ

395). ದಿವ್ಯಶರಾಳಿ - ಶ್ರೇಷ್ಠ ಬಾಣಗಳ ಸಮೂಹ

396). ದ್ವಿಜವಂಶಜಂ - ಬ್ರಾಹ್ಮಣ

397). ನಾಣಿಲಿ - ನಾಚಿಕೆಯಿಲ್ಲದವನು

398). ನೂಂಕು - ನೂಕು

399). ನೊಳವಿಂಗೆ - ನೊಣಕ್ಕೆ

400). ಪಡಿಯ¾ - ದ್ವಾರಪಾಲಕ, ಸೇವಕ

403). ಪೌರಂದರ - ಇಂದ್ರ

405). ಭಾರ್ಗವ - ಪರಶುರಾಮ

406). ಮದಿರಾ - ಸುರಾಪಾನ

407). ಮಹೀಪತಿ - ರಾಜ

409). ಮೃತ್ಪಾತ್ರ - ಮಣ್ಣಿನ ಪಾತ್ರೆ

410). ಮೇಗಿಲ್ಲದೆ - ಉತ್ತಮತನವಿಲ್ಲದೆ

413). ಶ್ರುತಪಾರಗ - ಶಾಸ್ತ್ರಪಾರಂಗತ

414). ಸಂದೆಯ (ದ್ಭ) - ಸಂದೇಹ (ತ್ಸ)

415). ಸಮಂತು - ಚೆನ್ನಾಗಿ

416). ಸಾರ್ತರೆ- ಒದಗಿ ಬರಲು

417). ಕರ - ಕೈ

418). ಮರುಳು - ಮೋಡಿ



ಸಂಧಿಗಳ ಹೆಸರಿಸಿ :
ಲೋಪಸಂಧಿ :

ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವ ದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದುಇದಕ್ಕೆ ಲೋಪಸಂಧಿ ಯೆಂದು ಹೆಸರು.

ಮಾತು + ಇಲ್ಲ = ಮಾತಿಲ್ಲ 

ಆಡು + ಇಸು = ಆಡಿಸು

ಬೇರೆ + ಒಬ್ಬ = ಬೇರೊಬ್ಬ
ನಿನಗೆ + ಅಲ್ಲದೆ = ನಿನಗಲ್ಲದೆ 

ನಾವು + ಎಲ್ಲಾ = ನಾವೆಲ್ಲಾ

ಊರು + ಅಲ್ಲಿ = ಊರಲ್ಲಿ 

ದೇವರು + ಇಂದ = ದೇವರಿಂದ 

ಬಲ್ಲೆನು + ಎಂದು = ಬಲ್ಲೆನೆಂದು

ಏನು + ಆದುದು = ಏನಾದುದು

ಇವನಿಗೆ + ಆನು = ಇವನಿಗಾನು

ಅವನ + ಊರು = ಅವನೂರು 

ಆಗಮ ಸಂಧಿ

ಯಕಾರಾಗಮ ಬರುವುದಕ್ಕೆ

ತೆನೆ  +  ಅನ್ನು  =   ತೆನೆಯನ್ನು

ಕೈ  +  ಅನ್ನು  =  ಕೈಯನ್ನು

ಚಳಿ  +  ಅಲ್ಲಿ  =  ಚಳಿಯಲ್ಲಿ

ಮಳೆ  +  ಇಂದ  =  ಮಳೆಯಿಂದ

ಗಾಳಿ  +  ಅನ್ನು  =  ಗಾಳಿಯನ್ನು

ಕೆರೆ  +  ಅಲ್ಲಿ = ಕೆರೆಯಲ್ಲಿ

ಮರೆ  +  ಇಂದ  =  ಮರೆಯಿಂದ

ಕಾ + ಯ್ + ಅದೆ = ಕಾಯದೆ

ಗಿರಿ + ಅನ್ನು = ಗಿರಿಯನ್ನು

ಮೀ + ಅಲು = ಮೀಯಲು

ಕೆರೆ + ಅನ್ನು = ಕೆರೆಯನ್ನು




ವಕಾರಾಗಮ ಬರುವುದಕ್ಕೆ

ಗುರು  +  ಅನ್ನು  = ಗುರುವನ್ನು

ಪಿತೃ  +  ಅನ್ನು =  ಪಿತೃವನ್ನು

ಮಗು +  ಇಗೆ  =  ಮಗುವಿಗೆ

ಆ  +  ಉಂಗುರ = ಆವುಂಗುರ

ಆ  +  ಊರು  = ಆವೂರು

ಆ +  ಒಲೆ  =  ಆವೊಲೆ

ಪೂ  + ಅನ್ನು  = ಪೂವನ್ನು