ಮುನ್ನುಡಿ

ಶಾಲಾ ಶಿಕ್ಷಣದ ಸಾರ್ವತ್ರೀಕರಣಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಎರಡು ಮಹತ್ವದ ಯೋಜನೆಗಳಾದ ‘ಸರ್ವ ಶಿಕ್ಷಣ ಅಭಿಯಾನ’ ಮತ್ತು ‘ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ’ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಸಮುದಾಯದ ಸಹಭಾಗಿತ್ವದಲ್ಲಿ ಗುಣಾತ್ಮಕ ಶಿಕ್ಷಣದ ಸಾರ್ವತ್ರೀಕರಣ ಎಂಬ ಘೋಷವಾಕ್ಯದೊಂದಿಗೆ ಈ ಎರಡೂ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಎಲ್ಲಾ ರೀತಿಯ ಕ್ರಮವಹಿಸಲಾಗುತ್ತಿದೆ.

ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 ಜಾರಿಯಾದ ನಂತರ ಸಮುದಾಯ ಭಾಗವಹಿಸುವಿಕೆಗೆ ಮತ್ತಷ್ಟು ಕಾನೂನಾತ್ಮಕ ಒತ್ತಾಸೆ ಬಂದಿದ್ದು, ಸಮುದಾಯದ ಭಾಗವಹಿಸುವಿಕೆಗೆ ಹೆಚ್ಚಿನ ಕಾನೂನಿನ ಬೆಂಬಲ ಸಿಕ್ಕಿದೆ.

ಸಮುದಾಯದ ಸಬಲೀಕರಣಕ್ಕೆ ಶಿಕ್ಷಣ ಹಕ್ಕು ಕಾಯ್ದೆಯಲ್ಲಿನ ಕಾನೂನಿನ ಅವಕಾಶ ಮತ್ತು ಕರ್ನಾಟಕ ರಾಜ್ಯ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳನ್ನು ಪರಿಣಾಮಕಾರಿ ಯಾಗಿ ಜಾರಿಗೊಳಿಸಬೇಕಾದರೆ ಎಸ್.ಡಿ.ಎಂ.ಸಿ ಸದಸ್ಯರಿಗೆ ಹೊಸ ಕಾನೂನಿನ ಮತ್ತು ನಿಯಮಗಳ ಪೂರ್ಣ ಮಾಹಿತಿಯ ಜೊತೆಗೆ ಸಾರ್ವತ್ರೀಕರಣಕ್ಕಾಗಿ ಕಾಲಕಾಲಕ್ಕೆ ಸರ್ಕಾರಗಳು ರೂಪಿಸುವ ಮಹತ್ವಾಕಾಂಕ್ಷೆ ಕಾರ್ಯಕ್ರಮಗಳ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸಮುದಾಯದ ಭಾಗವಹಿಸುವಿಕೆಯ ಬಗ್ಗೆ ಸಮಗ್ರ ಚಿತ್ರಣ ನೀಡಿ, ಎರಡೂ ಹಂತದಲ್ಲಿ ಸದಸ್ಯರು ಪರಸ್ಪರ ಸಮನ್ವಯ ಹಾಗೂ ಸಹಕಾರದಿಂದ ಕೆಲಸ ನಿರ್ವಹಿಸಲು ಅನುಕೂ­ವಾಗುವಂತೆ ಸಿದ್ಧಪಡಿಸಿರುವುದು ಈ ‘´ಸಮಗ್ರ’´ಸಾಹಿತ್ಯದ ವಿಶೇಷತೆಯಾಗಿದೆ. ಈ ´ಸಾಹಿತ್ಯವು, ಎಸ್.ಡಿ.ಎಂ.ಸಿಯ ಎಲ್ಲಾ ಚುನಾಯಿತ, ಪದನಿಮಿತ್ತ ಮತ್ತು ನಾಮ ನಿರ್ದೇಶಿತ ಸದಸ್ಯರಿಗೆ ಸಮಗ್ರ ಮಾಹಿತಿ ನೀಡುವುದಲ್ಲದೆ, ಪ್ರಾಥಮಿಕ ಮತ್ತು ಹಾಗೂ ಪ್ರೌಢಶಾಲೆಗಳಿಗೆ ಸಂಬAಧಿಸಿದ ಎಲ್ಲಾ ಶಿಕ್ಷಕರಿಗೂ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ಹಲವು ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಒಳಗೊಂಡಿದೆ.

ಈ ನಮ್ಮ ಪ್ರಯತ್ನವು ಕರ್ನಾಟಕ ರಾಜ್ಯದಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಹಾಗೂ ಉಪಯುಕ್ತ ಶಿಕ್ಷಣ ಒದಗಿಸಲು ಹೊಸ ಭೂಮಿಕೆಯನ್ನು ಕಟ್ಟಿ ಕೊಡುವಲ್ಲಿ ಹಾಗೂ ಪ್ರಮುಖ ಭಾಗೀದಾರರ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಈ ಸಾಹಿತ್ಯವು ಸಹಾಯಕವಾಗಲಿ ಎಂದು ಆಶಿಸುತ್ತೇನೆ.

ರಾಜ್ಯ ಯೋಜನಾ ನಿರ್ದೇಶಕರು
1 ಅಧ್ಯಾಯ 1- ಎಸ್.ಡಿ.ಎಂ.ಸಿ. ರಚನೆ, ಅಧಿಕಾರ ಮತ್ತು ಕರ್ತವ್ಯಗಳು (ಹಿ.ಪ್ರಾ.ಶಾಲೆ)
2 ಅಧ್ಯಾಯ 2- ಎಸ್.ಡಿ.ಎಂ.ಸಿ. ರಚನೆ, ಅಧಿಕಾರ ಮತ್ತು ಕರ್ತವ್ಯಗಳು (ಪ್ರೌಢಶಾಲೆ)
6 ಸದಸ್ಯರು ಮಕ್ಕಳ ತರಗತಿಯೊಳಗೆ ಪ್ರಗತಿ ಪರಿಶೀಲನೆ ಮಾಡಬಹುದೇ?
7 ಸದಸ್ಯರು ಶಿಕ್ಷಕರ ಪಾಠ ವೀಕ್ಷಣೆ ಮಾಡಬಹುದೇ?
8 ಸದಸ್ಯರು ತರಗತಿ ಪಾಠಬೋಧನೆ ಮಾಡಬಹುದೇ?
10 ಎಸ್ ಡಿ ಎಂ ಸಿ ಸದಸ್ಯರು ಅಕ್ಷರ ದಾಸೋಹ ಪರಿಶೀಲನೆ ಮಾಡಬಹುದೇ?
12 ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಮಯದಲ್ಲಿ ಎಲ್ಲಾ ಎಸ್ ಡಿ ಎಂ ಸಿ ಸದಸ್ಯರನ್ನೂ ಆಹ್ವಾನಿಸಬೇಕೇ?
13 ಎಸ್ ಡಿ ಎಂ ಸಿ ಸಭೆಗಳಿಗೆ ನಾಮನಿರ್ದೇಶಿತರನ್ನೂ ಕರೆಯಬೇಕೇ?
14 ರಾಷ್ಟ್ರೀಯ ಹಬ್ಬಗಳಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರೇ ಧ್ವಜಾರೋಹಣ ಮಾಡಬೇಕೇ?
15 ಸದಸ್ಯರಿಗೆ ಸಭಾ ಭತ್ಯೆ ಇರುತ್ತದೆಯೇ?
16 ಎಸ್ ಡಿ ಎಂ ಸಿ ಅಧ್ಯಕ್ಷರಿಗೆ ಮುಖ್ಯ ಶಿಕ್ಷಕರ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಅಧಿಕಾರವಿದೆಯೇ?
17 ಎಸ್ ಡಿ ಎಂ ಸಿ ಸಭೆಗಳಿಗೆ ಸದಸ್ಯರಲ್ಲದ ಚುನಾಯಿತ ಜನಪ್ರತಿನಿಧಿಗಳು ಹಾಜರಾಗಬಹುದೇ?
18 ಶಾಲಾ ಸ್ವತ್ತುಗಳನ್ನು ಎಸ್ ಡಿ ಎಂ ಸಿ ಅನುಮೋದನೆಯ ಮೇರೆಗೆ ಸಾರ್ವಜನಿಕರಿಗೆ ಬಳಕೆಗೆ ನೀಡಬಹುದೇ?
19 ಎಸ್ ಡಿ ಎಂ ಸಿ ಸದಸ್ಯರು ಶಾಲಾ ಹಣಕಾಸಿನ ವ್ಯವಹಾರಗಳನ್ನು ಪರಿಶೀಲಿಸಬಹುದೇ?
20 ಶಾಲೆಯಲ್ಲಿ ಖರ್ಚು ಮಾಡುವ ಹಣಕಾಸಿನ ವ್ಯವಹಾರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಫಲಕದಲ್ಲಿ ಪ್ರಕಟಿಸಬೇಕೇ?




ಸಮಗ್ರ ಶಿಕ್ಷಣ ಅಭಿಯಾನ
ಬೆಂಗಳೂರು

ಪರಿವಿಡಿ

ಕ್ರಮ ಸಂಖ್ಯೆ  / ವಿಷಯ ಸೂಚಿ



3 ಅಧ್ಯಾಯ 3- ಸರ್ಕಾರದ ಪ್ರೋತ್ಸಾಹದಾಯಕ ಕಾರ್ಯಕ್ರಮಗಳು

4 ಅಧ್ಯಾಯ 4- ಶಿಕ್ಷಣದ ಸಾರ್ವತ್ರೀಕರಣದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದ ಮಹತ್ವ,  ರೂಪುರೇಷೆಗಳು

5 ಅಧ್ಯಾಯ 5- ಶಿಕ್ಷಕರ ತರಬೇತಿಗಳು-ಅಗತ್ಯ-ಅನುಪಾಲನೆ

6 ಅಧ್ಯಾಯ 6- ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳು

7 ಅಧ್ಯಾಯ 7- ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ

8 ಅಧ್ಯಾಯ 8- ಶಾಲಾಭಿವೃದ್ಧಿ ಯೋಜನೆ

9 ಅಧ್ಯಾಯ 9- ಶಾಲೆಗಳಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ ಮತ್ತು ಶಾಲಾಸಿದ್ಧಿ


ಅಧ್ಯಾಯ-1

ಎಸ್ ಡಿ ಎಂ ಸಿ ರಚನೆ ಹಾಗೂ ಅಧಿಕಾರ ಕರ್ತವ್ಯಗಳು;

ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆ ಮತ್ತು ನಿರ್ವಹಿಸಬೇಕಾದ ಪ್ರಕಾರ್ಯಗಳು

ಸರ್ಕಾರಿ ಮತ್ತು ಅನುದಾನಿತ ಕಿರಿಯ ಹಾಗು ಹಿರಿಯ ಪ್ರಾಥಮಿಕ ಶಾಲೆಗಳು ರಚನೆಗೆ ಮೂಲ ತಳಹದಿ ದಸ್ತಾವೇಜುಗಳು

1. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009
2. ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು 2012
3. ಕಾಲ ಕಾಲಕ್ಕೆ ರಾಜ್ಯ ಸರ್ಕಾರ ಹೊರಡಿಸಿದ ಜ್ಞಾಪನ, ಆದೇಶ ಮತ್ತು ಸರ್ಕಾರಿ ಸುತ್ತೋಲೆಗಳು


ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆ -ಸಂಕ್ಷಿಪ್ತ ಹಿನ್ನಲೆ

ಈ ಅಧಿವೇಶನದ ನಂತರ ಸದಸ್ಯರು...

1. ಶಿಕ್ಷಣ ಸಾರ್ವತ್ರೀಕರಣದ ಸಂಕ್ಷಿಪ್ತ ಇತಿಹಾಸ ಮತ್ತು ಮಹತ್ವವನ್ನು ಅರಿಯುವರು.

2. ಉಚಿತ ಮತ್ತು ಕಡ್ಡಾಯ ಶಿಕ್ಷÀಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ-2009 (ಶಿಕ್ಷಣ ಹಕ್ಕು ಕಾಯ್ದೆ) ಅನ್ವಯ ಎಸ್‌ಡಿಎಂಸಿ ರಚನೆ ಕುರಿತು ತಿಳಿಯುವರು

3. ಶಿಕ್ಷಣ ಹಕ್ಕು ಕಾಯ್ದೆ ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು 2012ರ ಅನ್ವಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ನಿರ್ವಹಿಸ ಬೇಕಾದ ಪ್ರಕಾರ್ಯಗಳನ್ನು ಮನನ ಮಾಡಿಕೊಳ್ಳ್ಳುವರು

4. ಶಾಲಾ ಹಂತದಲ್ಲಿ ಎಸ್‌ಡಿಪಿಯ ತಯಾರಿಸಬೇಕಾದ ಮಹತ್ವವನ್ನು ತಿಳಿಯುವರು


ಸಂಕ್ಷಿಪ್ತ ಹಿನ್ನೆಲೆ;
ಸ್ವಾತಂತ್ರ್ಯ ಪೂರ್ವದಿಂದಲೂ ಶಾಲಾ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಾ ಬಂದಿವೆ. ಬ್ರಿಟೀಷರ ಆಳ್ವಿಕೆಯ ಸಂದರ್ಭದಲ್ಲಿ ಎಲ್ಲರಿಗೂ ಶಿಕ್ಷಣ ನೀಡಬೇಕೆಂಬ ಒತ್ತಾಯಕ್ಕೆ ಮಣಿದ ಅಂದಿನ ಬ್ರಿಟೀಷ್ ಆಡಳಿತವು 1813 ಸನ್ನದಿನಲ್ಲಿ ಶಿಕ್ಷಣಕ್ಕಾಗಿ ಪ್ರತೀವರ್ಷವೂ ಒಂದು ಲಕ್ಷ ರೂಗಳನ್ನು ವ್ಯಯಮಾಡುವಂತೆ ಈಸ್ಟ್ ಇಂಡಿಯಾ ಕಂಪನಿಗೆ ಸೂಚಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ.

ಇದೇ ರೀತಿ ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಪ್ರಾಂತ್ಯದಲ್ಲಿಯೂ ಶಿಕ್ಷಣವನ್ನು ಸಾರ್ವತ್ರೀಕರಣ ಗೊಳಿಸಲು ಹಲವು ರೀತಿಯ ಪ್ರಯತ್ನಗಳು ನಡೆದಿದ್ದವು. ಮೈಸೂರಿನ ಮಹಾರಾಜರು ಶಿಕ್ಷಣದ ಸಾರ್ವತ್ರೀಕರಣಕ್ಕೆ ಇಂತಹುದೇ ಪ್ರಯತ್ನಗಳನ್ನು ನಡೆಸಿದ್ದರೆಂಬುದು ಗಮನಾರ್ಹ. 1854 ರ ವುಡ್ಸ್ ಅಯೋಗದ ವರದಿಯನ್ನು ಆಧರಿಸಿ ಮೈಸೂರು ರಾಜ್ಯಕ್ಕೆ ಒಂದು ಶಿಕ್ಷಣ ಯೋಜನೆಯನ್ನು ಅಂದಿನ ನ್ಯಾಯಾಂಗ ಅಯುಕ್ತರು ಸಿದ್ಧಪಡಿಸಿ 1857ರಲ್ಲಿ ಭಾರತ ಸರ್ಕಾರದ ಅನುಮೋದನೆಯನ್ನು ಪಡೆದಿದ್ದರು. 1866 ರಲ್ಲಿ ಶಿಕ್ಷಣ ಇಲಾಖೆಯನ್ನು ಬೇರ್ಪಡಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ವ್ಯಾಪ್ತಿಗೆ ತರುವುದರ ಮೂಲಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಹೊಸ ಚಾಲನೆ ನೀಡಲಾಯಿತು. ನಾವು ಗಮನಿಸಬೇಕಾದ ವಿಶೇಷ ಅಂಶವೆಂದರೆ, 1911 ರಲ್ಲಿ ಪ್ರಾಥಮಿಕ ಶಿಕ್ಷಣ ಉಚಿತವೆಂದು ಸಾರುವ ಒಂದು ರಾಜಾಜ್ಞೆ (Royal ordinance) ಯನ್ನು ಹೊರಡಿಸಲಾಯಿತು. ಮುಂದುವರೆದು 1934ರಲ್ಲಿ ಶಿಕ್ಷಣವನ್ನು ಕಡ್ಡಾಯಗೊಳಿಸುವ ಕಾಯಿದೆಯನ್ನು ಜಾರಿ ಗೊಳಿಸಲಾಯಿತು.

ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯ ಬಲವರ್ಧನೆಗೆ ಶಾಲಾ ಶಿಕ್ಷಣದ ಅವಶ್ಯಕತೆ ಮತ್ತು ಮಹತ್ವವನ್ನು ಮನಗಂಡ ಸಂವಿಧಾನದ ರಚನಾಕಾರರು 14 ವರ್ಷ ಒಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡುವ ಆಶಯದೊಂದಿಗೆ ಸಂವಿಧಾನದ 4 ನೇ ಅಧ್ಯಾಯದ ರಾಜ್ಯ ನಿರ್ದೇಶಕ ತತ್ವಗಳ ಅಡಿಯಲ್ಲಿ 45ನೇ ವಿಧಿಯನ್ನು ಸೇರಿಸುವುದರ ಮೂಲಕ ಎಲ್ಲಾ ಮಕ್ಕಳಿಗೆ ಸಂವಿಧಾನ ಜಾರಿಯಾದ 10 ವರ್ಷದ ಒಳಗಾಗಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡುವ ವಾಗ್ದಾನವನ್ನು ಜನತೆಗೆ ನೀಡಿದರು. 1950ರಲ್ಲಿ ಸಂವಿಧಾನವನ್ನು ಜಾರಿಯಾದ ನಂತರ 14 ವರ್ಷದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ನಿಟ್ಟಿನಲ್ಲಿ ಅನೇಕ ಹೊಸ ಪ್ರಯತ್ನಗಳು ಪ್ರಾರಂಭವಾದವು. ನಮ್ಮ ಶಿಕ್ಷಣ ಪದ್ಧತಿ ಹೇಗಿರಬೇಕು ಮತ್ತು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷ ಗಳೇನೆಂಬುದನ್ನು ತಿಳಿಯಲು ಶಿಕ್ಷಣ ವ್ಯವಸ್ಥೆಯ ಸಮಗ್ರ ಅಧ್ಯಯನಕ್ಕಾಗಿ ಜುಲೈ 14, 1964ರಲ್ಲಿ ಭಾರತ ಸರ್ಕಾರವು ಶಿಕ್ಷಣ ಆಯೋಗವನ್ನು ರಚಿಸಿತು. ಡಾ|| ಕೊಥಾರಿಯವರ ಅಧ್ಯಕ್ಷತೆಯಲ್ಲಿ ನೇಮಕಗೊಂಡ ಈ ಅಯೋಗವು ಕಾನೂನು ಮತ್ತು ವೈದ್ಯಕೀಯ ಶಿಕ್ಷಣವನ್ನು ಹೊರತು ಪಡಿಸಿ ಉಳಿದೆಲ್ಲ ಹಂತಗಳ ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತು. ಈ ವರದಿಯನ್ನು ಆಧರಿಸಿ 1968 ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿ ಜಾರಿಗೊಳಿಸಲಾಯಿತು. ನಂತರ 1986 ರಲ್ಲಿ 1968 ರ ಶಿಕ್ಷಣ ನೀತಿಯನ್ನು ಪರಿಷ್ಕರಿಸಿದ ಸರ್ಕಾರ ಕೆಲವು ಹೊಸ ಆಯಾಮ ಗಳೊಂದಿಗೆ 1986ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿತು. 1992 ರಲ್ಲಿ ಆಚಾರ್ಯ ರಾಮಮೂರ್ತಿಯವರ ನೇತೃತ್ವದಲ್ಲಿ ಪರಿಷ್ಕೃತಗೊಂಡ ಈ ರಾಷ್ಟ್ರೀಯ ಶಿಕ್ಷಣ ನೀತಿಯು ಸಂಸತ್ತಿನ ಅಂಗೀಕಾರವನ್ನು ಪಡೆಯಿತು.

ಈ ಎಲ್ಲಾ ಪ್ರಯತ್ನಗಳ ನಡುವೆಯೂ ಸಂವಿಧಾನದ ಆಶಯದಂತೆ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ 1960ರ ಒಳಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವ ಸಂವಿಧಾನಬದ್ಧ ಕಾರ್ಯವು ಪೂರ್ಣಗೊಳ್ಳಲಿಲ್ಲ. ನಂತರ ಈ ಕಾಲ ಮಿತಿಯ ಈ ಕೆಲಸವು ಅನೇಕ ಬಾರಿ ಮುಂದೂಡಲ್ಪಟ್ಟಿತು. ಮೊದಲಿಗೆ 1970 ನಂತರ 1976, 1986, 1990 ಮತ್ತು 2000 ಹೀಗೆ ಮುಂದುವರಿಯುತ್ತಲೇ ಸಾಗಿತು. ಇದನ್ನು ಸವಾಲಾಗಿ ಸ್ವೀಕರಿಸಿದ ಕೇಂದ್ರ ಸರ್ಕಾರವು ಶಿಕ್ಷಣದ ಸಾರ್ವತ್ರೀಕರಣಕ್ಕೆ ಮಹತ್ವಾಕಾಂಕ್ಷೆಯ ಸರ್ವಶಿಕ್ಷಣ ಅಭಿಯಾನವನ್ನು ಜಾರಿಗೊಳಿಸಿ ಸಮುದಾಯದ ಸಹಭಾಗಿತ್ವದೊಂದಿಗೆ 2010 ರ ವೇಳೆಗೆ ಎಲ್ಲಾ ಮಕ್ಕಳಿಗೆ 8 ವರ್ಷಗಳ ಗುಣಾತ್ಮಕ ಶಾಲಾ ಶಿಕ್ಷಣವನ್ನು ನೀಡುವ ಬದ್ಧತೆಯನ್ನು ಪುನರುಚ್ಛರಿಸಿತು. ಒಟ್ಟಾರೆ, ಮಾನವ ಹಕ್ಕುಗಳ ಇಂದಿನ ಯುಗದಲ್ಲಿ ಎಲ್ಲಾ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂಬ ಬೇಡಿಕೆ ಕೇವಲ ಕೆಲವು ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗದೆ ಒಂದು ಜಾಗತಿಕ ವಿಷಯವಾಗಿದೆ. ಗುಣಾತ್ಮಕ ಶಿಕ್ಷಣದ ಹಕ್ಕು ಪ್ರತಿಯೊಂದು ಮಗುವಿಗೂ ಸಿಗಲೇಬೇಕೆಂಬ ಕೂಗು ಜಾಗತಿಕ ಮಟ್ಟದಲ್ಲಿ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಭಾರತದ ಸಂದರ್ಭದಲ್ಲಿ, ನ್ಯಾಯಾಂಗದ ಕ್ರಿಯಾಶೀಲತೆಯಿಂದಾಗಿ ಸಂವಿಧಾನದ
ನಿರ್ದೇಶಕ ತತ್ವದ ಅಡಿಯಲ್ಲಿದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒಂದು ಮೂಲಭೂತ ಹಕ್ಕನ್ನಾಗಿ ಘೋಷಿಸಿ ಸರ್ವೋಚ್ಛ ನ್ಯಾಯಾಲಯವು 1993ರಲ್ಲಿ ಐತಿಹಾಸಿಕ ತೀರ್ಪನ್ನು ನೀಡಿತು. ಮುಂದುವರಿದು, ಭಾರತದ ಸಂಸತ್ತು 2002ರಲ್ಲಿ 86ನೇ ಸಂವಿಧಾನದ ತಿದ್ದುಪಡಿ ಕಾಯಿದೆಯನ್ನು ಅಂಗೀಕರಿಸಿ ಪರಿಚ್ಛೇಧ 21; ಜೀವಿಸುವ ಹಕ್ಕಿನ ನಂತರ, ಪರಿಚ್ಛೇಧ 21ಎ ಯನ್ನು ಸೇರಿಸಿ 6 ರಿಂದ 14 ವರ್ಷ ವಯಸ್ಸಿನ ಭಾರತದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸುವ ಮಹತ್ವದ ನಿರ್ಧಾರಕ್ಕೆ ಸಾಕ್ಷಿಯಾಯಿತು. ಸಂವಿಧಾನದ 86ನೇ ತಿದ್ದುಪಡಿ ಕಾಯಿದೆಯ 21ಎ ಅನ್ವಯ ಸರ್ಕಾರವು ಈ ಮೂಲಭೂತ ಹಕ್ಕನ್ನು ತಾನು ತೀರ್ಮಾನಿಸುವ ಕಾನೂನಿನ (IN SUCH MANNER AS THE STATE MAY, BY LAW, DETERMINE) ರೀತಿಯಲ್ಲಿ ಜಾರಿಗೊಳಿಸುವುದಾಗಿ ಸ್ಪಷ್ಟಪಡಿಸಿತು. ಅದರಂತೆ, ಸಂವಿಧಾನದ 86ನೇ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತರಲು ಭಾರತದ ಸಾರ್ವಭೌಮ ಸಂಸ್ಥೆಯಾದ ಸಂಸತ್ತಿನಲ್ಲಿ ಆಗಸ್ಟ್ 2009ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಮಸೂದೆಯನ್ನು ಮಂಡಿಸಿದ ಸಂದರ್ಭದಲ್ಲಿ, ಮಸೂದೆಯ ಉದ್ದೇಶ ಮತ್ತು ಕಾರಣಗಳನ್ನು (Objects and Reasons) ವಿವರಿಸುವ ಮಸೂದೆಯ 4ನೇ ಪ್ಯಾರಾವು ಸಮಾನತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮತ್ತು ಮಾನವೀಯ ನೆಲೆಯಲ್ಲಿ ಸಮಸಮಾಜವನ್ನು ಕಟ್ಟಿಕೊಳ್ಳುವ ಕೆಲಸ ಎಲ್ಲರನ್ನೂ ಒಳಗೊಳ್ಳುವ ಪ್ರಾಥಮಿಕ ಶಿಕ್ಷಣವನ್ನು ಕಲ್ಪಿಸುವ ಅವಕಾಶದಿಂದ ಮಾತ್ರ ಸಾಧ್ಯವೆಂಬ ಬಲವಾದ ನಂಬಿಕೆಯಿಂದ ಈ ಉದ್ದೇಶಿತ ಕಾನೂನನ್ನು ತರುತ್ತಿದ್ದೇವೆ. ಅವಕಾಶ ವಂಚಿತ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ತೃಪ್ತಿದಾಯಕ ಗುಣಮಟ್ಟದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವ ಜವಾಬ್ದಾರಿ ಕೇವಲ ಸರ್ಕಾರ ನಡೆಸುತ್ತಿರುವ ಅಥವಾ ಸರ್ಕಾರ ಬೆಂಬಲಿಸುವ ಶಾಲೆಗಳ ಕೆಲಸ ಮಾತ್ರವಲ್ಲ. ಸರ್ಕಾರದ ಅನುದಾನ ಅಥವಾ ಹಣಕಾಸಿನ ನೆರವನ್ನು ಅವಲಂಬಿಸದ ಶಾಲೆಗಳ ಕರ್ತವ್ಯವೂ ಆಗಿದೆ ಎಂಬ ಅಂಶವನ್ನು ನೇರ ಹಾಗು ಸ್ಪಷ್ಟ ಮಾತುಗಳಲ್ಲಿ ಹೇಳಿತ್ತು.

ಸಂಸತ್ತಿನಲ್ಲಿ ಮಂಡನೆಯಾದ ಈ ಮಸೂದೆಯು, ಎರಡೂ ಸದನಗಳಲ್ಲಿ ಅಂಗೀಕಾರಗೊಂಡ ನಂತರ ಆಗಸ್ಟ್ 26, 2009ರಲ್ಲಿ ರಾಷ್ಟ್ರಪತಿಯವರ ಒಪ್ಪಿಗೆ ಪಡೆಯುವುದರ ಮೂಲಕ ಕಾಯಿದೆಯಾಯಿತು. ಈ ಕಾಯಿದೆಯು ಏಪ್ರಿಲ್ 1, 2010ರಿಂದ ದೇಶಾದ್ಯಂತ ಜಾರಿಗೊಂಡಿತು. ಜಾರಿಗೊಂಡ ಪ್ರಾರಂಭದಲ್ಲಿಯೇ, ಈ ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿ ಹಲವು ಖಾಸಗಿ ಅನುದಾನರಹಿತ ಶಾಲೆಗಳು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದವು. ಕಾಯಿದೆಯ ಸಾಂವಿಧಾನಿಕ ಚೌಕಟ್ಟನ್ನು ಸಮಗ್ರವಾಗಿ ಪರಿಶೀಲಿಸಿದ ಸರ್ವೋಚ್ಚ ನ್ಯಾಯಾಲಯವು ಏಪ್ರಿಲ್ 2012ರಲ್ಲಿ ನೀಡಿದ ತೀರ್ಪಿನಲ್ಲಿ ಕಾಯಿದೆಯ ಸಿಂಧುತ್ವವನ್ನು ಎತ್ತಿ ಹಿಡಿಯುವ ಮಹತ್ವದ ತೀರ್ಪನ್ನು ನೀಡಿತು.

ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರಗಳು ಶಿಕ್ಷಣ ಹಕ್ಕು ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿವೆ. ಕರ್ನಾಟಕ ರಾಜ್ಯದಲ್ಲಿ ಶಿಕ್ಷಣದ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲು ಅಗತ್ಯವಾದ ನಿಯಮಗಳನ್ನು ರೂಪಿಸಿ ದಿನಾಂಕ 28.04.2012 ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಮಕ್ಕಳ ಈ ಮೂಲಭೂತ ಹಕ್ಕನ್ನು ಜಾರಿಗೊಳಿಸುವ ವಿಧಿ-ವಿಧಾನ ಮತ್ತು ಪೂರ್ಣ ಜವಾಬ್ದಾರಿ ಸರ್ಕಾರಕ್ಕೆ ಸೇರಿದ ವಿಷಯವಾಗಿದ್ದು, ಸಾಕಷ್ಟು ಚರ್ಚೆಗಳ ನಂತರ ಸಾಧಕ-ಬಾಧಕಗಳನ್ನು ಅವಲೋಕಿಸಿ ಕಾನೂನನ್ನು ರೂಪಿಸಲಾಗಿದೆ. ಅಲ್ಪಸಂಖ್ಯಾತ ಶಾಲೆಗಳಿಗೆ ಸಂಬಂಧಿಸಿದಂತೆ ಇರುವ ಕೆಲವು ಗೊಂದಲಗಳನ್ನು ಹೊರತುಪಡಿಸಿದರೆ ಕಾಯಿದೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರಸರ್ಕಾರ, ರಾಜ್ಯಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರದ ಕರ್ತವ್ಯಗಳು ಸ್ಪಷ್ಟವಾಗಿವೆ.

ಪ್ರಸ್ತುತ ಜಾರಿಯಲ್ಲಿರುವ ಶಿಕ್ಷಣ ಹಕ್ಕು ಕಾಯಿದೆಯು ಮಾರ್ಚ್ 31, 2016ಕ್ಕೆ 6 ವರ್ಷಗಳನ್ನು ಮುಗಿಸಿ 7ನೇ ವರ್ಷಕ್ಕೆ ಕಾಲಿಡುತ್ತಿದೆ. ತಾತ್ವಿಕವಾಗಿ ನಾವೆಲ್ಲರೂ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಾಲಾ ಶಿಕ್ಷಣವನ್ನು ´ಸಮಾನತೆ ಮತ್ತು ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ‚ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಮೂಲಕ ಕಂಡುಕೊಳ್ಳುವ ಆಶಯವನ್ನು ಹೊಂದಿದ್ದೇವೆ. ಈ ಆಶಯದ ಮೊದಲ ಹೆಜ್ಜೆಯಾಗಿ ಸರ್ಕಾರಿ ಶಾಲೆಗಳನ್ನು ಗುಣಾತ್ಮಕ ಕೇಂದ್ರಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯ ಜಾರಿಯಲ್ಲಿ ರಚನಾತ್ಮಕವಾಗಿ ಮತ್ತು ವಿಮರ್ಶಾತ್ಮಕವಾಗಿ ತೊಡಗಿಸಿಕೊಳ್ಳುವುದು ಮಹತ್ವದ ಕೆಲಸವಾಗಿದೆ.

ಈ ನಿಟ್ಟಿನಲ್ಲಿ ಪೋಷಕರಾಗಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಾಗಿ ಹಾಗೂ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರು ಈ ಕಾಯಿದೆಯನ್ನು ಅನುಷ್ಠಾನಗೊಳಿಸುವ ನೇರ ಹೊಣೆಗಾರಿಕೆ ಹೊಂದಿರುತ್ತಾರೆ. ಈ ದಿಶೆಯಲ್ಲಿ ಕಾಯಿದೆಯ ಅಡಿಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆ ಮತ್ತು ಪ್ರಕಾರ್ಯಗಳ ಬಗ್ಗೆ ಸದಸ್ಯರಿಗೆ ಸ್ಪಷ್ಟ ಅರಿವಿರುವುದು ಅತ್ಯಂತ ಮುಖ್ಯವಾಗಿದೆ. ಕಾಯಿದೆಯ ಅನ್ವಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆ ಮತ್ತು ಪ್ರಕಾರ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಅವಕಾಶಗಳನ್ನು ಕಲ್ಪಿಸಲಾಗಿದೆ. ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಅನುದಾನ ರಹಿತ ಶಾಲೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಶಾಲೆಗಳು, ಸ್ಥಳೀಯ ಪ್ರಾಧಿಕಾರದ ಚುನಾಯಿತ ಪ್ರತಿನಿಧಿಗಳು, ಶಾಲೆಯಲ್ಲಿ ಪ್ರವೇಶ ಪಡೆದ ಮಕ್ಕಳ ತಂದೆ-ತಾಯಿ ಅಥವಾ ಪೋಷಕರು ಮತ್ತು ಶಿಕ್ಷಕರನ್ನು ಒಳಗೊಂಡಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯೊಂದನ್ನು ರಚಿಸಿಕೊಳ್ಳುವುದು.  ಈ ಸಮಿತಿಯ
ಸದಸ್ಯರಲ್ಲಿ

1. ಕನಿಷ್ಠ ಮುಕ್ಕಾಲು (ಶೇಕಡ 75) ಮಂದಿ ಸದಸ್ಯರು ತಂದೆ-ತಾಯಿ ಅಥವಾ ಪೋಷಕರಾಗಿರಬೇಕು.
2. ಅವಕಾಶವಂಚಿತ ಗುಂಪು ಹಾಗೂ ದುರ್ಬಲವರ್ಗಕ್ಕೆ ಸೇರಿದ ಮಕ್ಕಳ ಪೋಷಕರು ಅಥವಾ ಪಾಲಕರಿಗೆ ಪ್ರಮಾಣಾನುಸಾರ ಪ್ರಾತಿನಿಧ್ಯ ನೀಡಬೇಕು
3. ಈ ಸಮಿತಿಯ ಸದಸ್ಯರ ಶೇಕಡಾ ಐವತ್ತರಷ್ಟು ಸದಸ್ಯರು ಮಹಿಳೆಯರಾಗಿರಬೇಕು.



ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಯ ವಿಧಿ-ವಿಧಾನ


ಶಿಕ್ಷಣ ಹಕ್ಕು ಕಾಯ್ದೆ ಸೆಕ್ಷನ್ 21(1):ಶಿಕ್ಷಣ ಹಕ್ಕು ಕಾಯ್ದೆಯ 2ನೇ ಪ್ರಕರಣದ (ಎನ್) ಖಂಡದ (iv)ನೇ ಉಪ ಖಂಡದಲ್ಲಿ ನಿರ್ದಿಷ್ಟಪಡಿಸಿದ ಶಾಲೆಯಲ್ಲದ ಒಂದು ಶಾಲೆಯು, ಸ್ಥಳೀಯ ಪ್ರಾಧಿಕಾರದ ಚುನಾಯಿತ ಪ್ರತಿನಿಧಿಗಳು, ಅಂಥ ಶಾಲೆಯಲ್ಲಿ ಪ್ರವೇಶ ಪಡೆದ ಮಕ್ಕಳ ತಂದೆ-ತಾಯಿ ಅಥವಾ ಪೋಷಕರು ಮತ್ತು ಶಿಕ್ಷಕರನ್ನು ಒಳಗೊಂಡಿರುವ ಶಾಲಾ

ಹಂತ-1
ಪ್ರತಿಯೊಂದು ಕಿರಿಯ ಅಥವಾ ಹಿರಿಯ ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ / ವಿದ್ಯಾರ್ಥಿನಿಯ ಪೋಷಕರ (ತಂದೆ ಮತ್ತು ತಾಯಿ ಇಬ್ಬರೂ, ತಂದೆ ತಾಯಿ ಇಲ್ಲದಿದ್ದಲ್ಲಿ ಕಾನೂನಿನನ್ವಯ ಪೋಷಕರು / ವಾರಸುದಾರರು) ಪಟ್ಟಿಯನ್ನು ಸಿದ್ಧಪಡಿಸಬೇಕು.

ಹಂತ-2
ಈ ರೀತಿ ಸಿದ್ಧಪಡಿಸಿದ ಪಟ್ಟಿಯನ್ನು ಸಾರ್ವಜನಿಕರ ಗಮನಕ್ಕಾಗಿ ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಇದರ ಒಂದು ಪ್ರತಿಯನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಯಲ್ಲಿ ಪ್ರಕಟಿಸಬೇಕು. ಈ ಬಗ್ಗೆ ಸಂಬಂಧಿಸಿದವರಿಗೆ ಸೂಕ್ತ ಮಾಹಿತಿ ನೀಡಲು ಸೂಕ್ತ  ಕ್ರಮವಹಿಸುವುದು.

ಹಂತ-3
ಈ ರೀತಿ ಪ್ರಕಟಿಸಿದ 15 ದಿನಗಳ ನಂತರ ಪಟ್ಟಿಯಲ್ಲಿರುವ ಎಲ್ಲಾ ಪಾಲಕರು / ಪೋಷಕರನ್ನು ಒಳಗೊಂಡ ಸಾಮಾನ್ಯ ಸಭೆಯನ್ನು ನಿಗದಿತ ದಿನಾಂಕದಂದು ಶಾಲೆಯ ಆವರಣದಲ್ಲಿ ಮುಖ್ಯ ಶಿಕ್ಷಕರು ಕರೆಯುವುದು. ಈ ರೀತಿ ಕರೆಯಲ್ಪಟ್ಟ ಸಭೆಯ ಬಗ್ಗೆ ಜನರ ಮಾಹಿತಿಗಾಗಿ ವ್ಯಾಪಕ ಪ್ರಚಾರ ಮಾಡುವುದು. (ಉದಾ: ಸಾರ್ವಜನಿಕ ಸ್ಥಳಗಳಲ್ಲಿ ನೋಟೀಸ್ ಪ್ರತಿಯನ್ನು ಅಂಟಿಸುವುದು / ಡಂಗೂರ ಸಾರಿಸುವುದು / ಕರಪತ್ರವನ್ನು ಮುದ್ರಿಸಿ ಹಂಚುವುದು ಇತ್ಯಾದಿ).

ಹಂತ-4
ಈ ರೀತಿ ಔಪಚಾರಿಕವಾಗಿ ಸಮಾವೇಶಗೊಂಡ ಪಾಲಕರ ಸಭೆಯಲ್ಲಿ ವಿಧಿವತ್ತಾಗಿ ಆ ಶೈಕ್ಷಣಿಕ ವರ್ಷಕ್ಕೆ ಪೋಷಕರ ಸಭೆಯು (ಪಾಲಕರ ಪರಿಷತ್ತು) ರಚಿತವಾಯಿತೆಂಬ ಬಗ್ಗೆ ಗೊತ್ತುವಳಿಯನ್ನು ಅಂಗೀಕರಿಸಬೇಕು. (ಪಾಲಕರ ಪರಿಷತ್ತಿನ ಸಭೆಗೆ ಪೋಷಕರ  ಪ್ರತಿನಿಧಿಗಳಲ್ಲಿ ಮೂರನೇ ಎರಡಷ್ಟು ಹಾಜರಾತಿ ಇರಬೇಕು). ಮೊದಲನೇ ಸಬೆ s ನಡೆಸಲು ಅಗತ್ಯ ಕೋರಂ ಇರದಿದ್ದಲ್ಲಿ ಅಂದೇ ಮುಂದಿನ 07 ದಿನಗಳ ನಂತರದ ದಿನಾಂಕವನ್ನು ನಿಗದಿಪಡಿಸಿ ಸಭೆಯನ್ನು ಮುಂದೂಡಬೇಕು. ಎರಡನೇ ಸಭಾ ಸೂಚನಾ ಪತ್ರವನ್ನು ಕಳುಹಿಸುವಾಗ ಹಾಜರಾಗುವ ಪೋಷಕರನ್ನೇ ಕೋರಂ ಎಂದು ಪರಿಗಣಿಸಿ ಸಭೆ ನಡೆಸಿ ಎಸ್ ಡಿ ಎಂ ಸಿ ರಚಿಸಲಾಗುವುದೆಂದು ಸ್ಪಷ್ಟವಾಗಿ ತಿಳಿಸುವುದು. ಈ ಬಗ್ಗೆ ವ್ಯಾಪಕ ಪ್ರಚಾರ ನೀಡುವುದು.

ಹಂತ-5
ವಿಧಿವತ್ತಾಗಿ ರಚಿಸಲ್ಪಟ್ಟ ಪಾಲಕರ ಪರಿಷತ್ತಿನಿಂದ  18 ಜನ ಪೋಷಕ  ಪ್ರತಿನಿಧಿಗಳನ್ನು  ಆಯ್ಕೆ ಮಾಡುವುದು.

ಹಂತ-6
ಈ ರೀತಿ 18 ಜನರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಕೆಳಗಿನ ಮಾನದಂಡವನ್ನು ಅನುಸರಿಸುವುದು.
ಉದಾಹರಣೆಗೆ : ಈ ಕೆಳಗಿನ ಸೂತ್ರವನ್ನು ಉಪಯೋಗಿಸಿ ಲೆಕ್ಕಾಚಾರ ಮಾಡತಕ್ಕದ್ದು

ಪಾಲಕರ ಪ್ರತಿನಿಧಿಗಳ ಸಂಖ್ಯೆ
ಸದಸ್ಯರು= ---------------------X ಎಸ್‌ಡಿಎಂಸಿಗೆ ಆಯ್ಕೆ ಆಗಬೇಕಾದ ಪಾಲಕರ ಪ್ರತಿನಿಧಿಗಳ ಸಂಖ್ಯೆ
ಶಾಲೆಯಲ್ಲಿನ ಒಟ್ಟು ಮಕ್ಕಳ ಸಂಖ್ಯೆ

ಉದಾಹರಣೆ:
ತಂದೆ ತಾಯಿ ಪರಿಷತ್ತಿನಿಂದ ಸದಸ್ಯರ ಆಯ್ಕೆ ವಿಧಾನ:
ಶಾಲೆಯಲ್ಲಿ ಒಟ್ಟು 64 ಮಕ್ಕಳಿದ್ದಾರೆ ಎಂದು ಭಾವಿಸೋಣ. ಇವರಲ್ಲಿ
28 ಪರಿಶಿಷ್ಟ ಜಾತಿ,
16 ಪರಿಶಿಷ್ಟ ಪಂಗಡ,
6 ಅಲ್ಪಸಂಖ್ಯಾತರು,
04 ಹಿಂದುಳಿದ ವರ್ಗ ಹಾಗೂ
10 ಸಾಮಾನ್ಯ ವರ್ಗದ ಮಕ್ಕಳಿದ್ದಾರೆ.
ನಾವು ಆಯ್ಕೆ ಮಾಡಬೇಕಾಗಿರುವುದು 18 ಸದಸ್ಯರು.

ಪರಿಶಿಷ್ಟ ಜಾತಿಗೆ ಪ್ರಾತಿನಿದ್ಯ = 28/64 X 18=7.87 ಅಂದರೆ 8 ಜನರು.
ಪರಿಶಿಷ್ಟ ಪಂಗಡದ ಪ್ರಾತಿನಿಧ್ಯ= 16/64 X 18=4.5 ಅಂದರೆ 4 ಜನರು.
ಅಲ್ಪಸಂಖ್ಯಾತ ವರ್ಗದ ಪ್ರಾತಿನಿಧ್ಯ= 6/64 X 18= 1.69 ಅಂದರೆ 2 ಜನರು.
ಹಿಂದುಳಿದ ವರ್ಗದ ಪ್ರಾತಿನಿಧ್ಯ = 4/64 X 18 = 1.12 ಅಂದರೆ ಒಬ್ಬರು
ಸಾಮಾನ್ಯ ವರ್ಗದ ಪ್ರಾತಿನಿಧ್ಯ= 10/64 X 18= 2.81 ಅಂದರೆ 3 ಜನರು.
-----------------------------------------------
ಒಟ್ಟು ಸದಸ್ಯರು = 18 ಜನರು.



ಹಂತ-7
ಎಸ್.ಡಿ.ಎA.ಸಿ. ಅಧ್ಯಕ್ಷರ ಆಯ್ಕೆ:
ಪೋಷಕರ ಸಭೆಯಿಂದ  ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾದ 18 ಜನ ಚುನಾಯಿತ ಪೋಷಕ ಪ್ರತಿನಿಧಿಗಳಲ್ಲಿ ಬಹುಮತವಿರುವ ಒಬ್ಬರನ್ನು ಎಸ್.ಡಿ.ಎಂ.ಸಿ. ಯ ಅಧ್ಯಕ್ಷರನ್ನಾಗಿ ಹಾಗು ಉಪಾಧ್ಯಕ್ಷರನ್ನು ಆಯ್ಕೆ ಮಾಡುವುದು

ಹಂತ-8
ಸದಸ್ಯ ಕಾರ್ಯದರ್ಶಿಯ ನೇಮಕ
ಎಸ್.ಡಿ.ಎಂ.ಸಿ.ಯ ಪದನಿಮಿತ್ತ ಸದಸ್ಯರಾದ ಶಾಲೆಯ ಮುಖ್ಯ ಶಿಕ್ಷಕರು ಎಸ್.ಡಿ.ಎಂ.ಸಿ.ಯ ಸದಸ್ಯ
ಕಾರ್ಯದರ್ಶಿಯಾಗಿರುತ್ತಾರೆ.



ಮುಂದುವರಿದು, ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮ 13ರ ಅನ್ವಯ ಪ್ರತಿಯೊಂದು ಶಾಲೆಯು ಸರ್ಕಾರಿ ಮತ್ತು ಅನುದಾನಿತ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ)ಯನ್ನು ಹೊಂದಿರತಕ್ಕದ್ದು. ಅಂತಹ ಸಮಿತಿಯನ್ನು ಈ ನಿಯಮಗಳು ಜಾರಿಗೆ ಬಂದ ಆರು ತಿಂಗಳೊಳಗೆ ರಚಿಸಬೇಕು ಮತ್ತು 3 ವರ್ಷಗಳಿಗೊಂದು ಬಾರಿ ಮರು ರಚಿಸಬೇಕು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ 18 ಚುನಾಯಿತ ಸದಸ್ಯರನ್ನು ಮಕ್ಕಳ ಪಾಲಕರು ಅಥವಾ ಪೋಷಕರಿಂದ ಆಯ್ಕೆಯಾಗಬೇಕು

• ಮುಖ್ಯೋಪಾಧ್ಯಾಯ ಅಥವಾ ಪ್ರಭಾರಿ ಮುಖ್ಯೋಪಾಧ್ಯಾಯರು ಪದನಿಮಿತ್ತ ಸದಸ್ಯ ಕಾರ್ಯದರ್ಶಿ ಯಾಗಿರಬೇಕು

• ಶಾಲೆಯು ಇರುವ ಪ್ರದೇಶ ವ್ಯಾಪ್ತಿಯ ಆರೋಗ್ಯ ಕಾರ್ಯಕರ್ತೆತೆ ಮತ್ತು ಅಂಗನವಾಡಿ ಕಾರ್ಯಕರ್ತೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪದನಿಮಿತ್ತ ಸದಸ್ಯರಾಗಿರಬೇಕು.

• ಉಳಿದ 3 ಜನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಈ ಕೆಳಕಂಡಂತೆ ತಿಳಿಸಿರುವ ವ್ಯಕ್ತಿಗಳ ಪೈಕಿ ನಾಮನಿರ್ದೇಶಿತ ಸದಸ್ಯರಾಗಿರಬೇಕು.

1. ಸ್ಥಳೀಯ ಪ್ರಾಧಿಕಾರದ ಚುನಾಯಿತ ಸದಸ್ಯರಲ್ಲಿ, ಒಬ್ಬರನ್ನು ಸ್ಥಳೀಯ ಪ್ರಾಧಿಕಾರ ನಾಮ ನಿರ್ದೇಶನ ಮಾಡಬೇಕು

2. ಮತ್ತೊಬ್ಬ ಸದಸ್ಯನನ್ನು ಶಾಲಾ ಉಪಾಧ್ಯಾಯರ ಪೈಕಿ ಬಿ.ಇ.ಓ. ನಾಮ ನಿರ್ದೇಶನ ಮಾಡಬೇಕು

3. ಉಳಿಕೆ ಒಬ್ಬ ಸದಸ್ಯ ಸ್ಥಳೀಯ ಪ್ರದೇಶದ ಶಿಕ್ಷಣ ತಜ್ಞ ಅಥವಾ ಶಾಲೆಯ ಮಕ್ಕಳಲ್ಲಿ ಒಬ್ಬರನ್ನು ಬಿ.ಇ.ಓ. ನಾಮ ನಿರ್ದೇಶನ ಮಾಡಬೇಕು

• ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಒಟ್ಟು ಸದಸ್ಯರಲ್ಲಿ ಶೇಕಡಾ 50ರಷ್ಟು ಸದಸ್ಯರು
ಮಹಿಳೆಯರಾಗಿರಬೇಕು.

• ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪೋಷಕ ಅಥವಾ ಪಾಲಕರ ಚುನಾಯಿತ ಸದಸ್ಯರಲ್ಲೇ ಚುನಾಯಿತರಾಗಬೇಕು.

• ಬಿ.ಇ.ಓ. ತನ್ನ ಕಾರ್ಯ ವ್ಯಾಪ್ತಿಯ ಎಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯ ನಿರ್ವಹಿಸುವುದನ್ನು ಖಾತ್ರಿಗೊಳಿಸಲು ಸಮರ್ಥ ಪ್ರಾಧಿಕಾರವಾಗಿರುತ್ತಾರೆ.ಜೊತೆಗೆ ಏನಾದರು ಕುಂದು ಕೊರತೆಗಳಿದ್ದಲ್ಲಿ ಬಗೆಹರಿಸಲು ಕ್ರ‍್ರಮಕೈಗೊಳ್ಳುತ್ತಾರೆ. ಅಂಥಹ ಸಂದರ್ಭದಲ್ಲಿ ಸ್ಥಳೀಯ ಪ್ರಾಧಿಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

• ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯು ತಿಂಗಳಲ್ಲಿ ಕೊನೆ ಪಕ್ಷ ಒಂದು ಬಾರಿ ಸಭೆ ಸೇರತಕ್ಕದ್ದು ಮತ್ತು ಸಭೆಯ ನಡಾವಳಿಗಳನ್ನು ವರದಿ ಮಾಡಿಕೊಳ್ಳಬೇಕು ಮತ್ತು ಸಾರ್ವಜನಿಕರಿಗೆ ದೊರಕುವಂತೆ ಮಾಡತಕ್ಕದ್ದು.

• ಪ್ರತೀ ಸಭೆಗೂ ಎಲ್ಲಾ ಸದಸ್ಯರೂ ಹಾಜರಿರುವಂತೆ ನಿರಂತರವಾಗಿ ಕಾರ್ಯದರ್ಶಿಗಳು ಮನವರಿಕೆ
ಮಾಡಿಕೊಡುವುದು. ಎಸ್ ಡಿ ಎಂ ಸಿ ಚುನಾಯಿತ ಸದಸ್ಯರಲ್ಲಿ ಯಾರಾದರೂ ಸತತವಾಗಿ ಮೂರು ಬಾರಿ ಸಭೆಗೆ ಗೈರು ಹಾಜರಾದಲ್ಲಿ ಅವರಿಗೆ ಕಾರ್ಯದರ್ಶಿಗಳು ಕಾರಣ ಕೇಳಿ ನೋಟೀಸ್ ಜಾರಿ ಮಾಡುವುದು. ಜಾರಿ ಮಾಡಿದ ನೋಟೀಸಿಗೆ ಸಮಂಜಸ ಉತ್ತರ ಬಾರದಿದ್ದಲ್ಲಿ ಅವರ ಸದಸ್ಯತ್ವವನ್ನು ರದ್ದುಗೊಳಿಸುವುದು.


ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪ್ರಕಾರ್ಯಗಳು
ಈ ರೀತಿ ರಚನೆಯಾದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಈ ಕೆಳಗಿನ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು,
ಎ. ಶಾಲೆಯ ಕೆಲಸ ಕಾರ್ಯಗಳ ಮೇಲ್ವಿಚಾರಣೆ ಮಾಡುವುದು;
ಬಿ. ಶಾಲಾ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವುದು ಮತ್ತು ಶಿಫಾರಸ್ಸು ಮಾಡುವುದು;
ಸಿ. ಸಮುಚಿತ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ಯಾವುದೇ ಇತರ ಮೂಲದಿಂದ ಸ್ವೀಕರಿಸಿದ ಅನುದಾನಗಳ ಬಳಕೆಯ ಮೇಲ್ವಿಚಾರಣೆ ಮಾಡುವುದು; ಮತ್ತು,
ಡಿ. ನಿಯಮಿಸಬಹುದಾದಂಥ ಇತರ ಪ್ರಕಾರ್ಯಗಳನ್ನು ನೆರವೇರಿಸುವುದು. ಮುಂದುವರಿದು,


ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮ 13(5)ರ ಅನ್ವಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಮೇಲೆ ನಿರ್ದಿಷ್ಟ ಪಡಿಸಿದ ಪ್ರಕಾರ್ಯಗಳ ಜೊತೆಗೆ ಈ ಕೆಳಕಂಡ ಪ್ರಕಾರ್ಯಗಳನ್ನು ನಿರ್ವಹಿಸಬೇಕು.

1. ಶಾಲೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ಕಾಯಿದೆಯಲ್ಲಿ ಹೇಳಿರುವ ಮಕ್ಕಳ ಹಕ್ಕುಗಳನ್ನು ತಿಳಿಯುವಂತೆ ಹೇಳಬೇಕು.

2. ಕಾಯಿದೆಯ ಕಲಂ 28 ಯಾವುದೇ ಶಿಕ್ಷಕರು ಖಾಸಗಿ ಪಾಠಗಳನ್ನು ಮಾಡುವುದು ಖಾಸಗಿಯಾಗಿ ಕಲಿಸುವುದರಲ್ಲಿ ನಿರತರಾಗಬಾರದು ಮತ್ತು ಕಲಂ 24 ಖಂಡ (ಎ) ಶಾಲೆಗೆ ತಪ್ಪದೆ ಹಾಜರಾಗುವುದು ಮತ್ತು ಸಮಯಪಾಲನೆ ಮಾಡುವುದು. ಮತ್ತು (ಇ) ಪೋಷಕರು ಮತ್ತು ತಂದೆ ತಾಯಿಯರೊಡನೆ ಕ್ರಮಬದ್ಧವಾಗಿ ಸಭೆ ನಡೆಸಿ, ಅವರ ಮಕ್ಕಳು ನಿಯಮಿತವಾಗಿ ಶಾಲೆಗೆ ಹಾಜರಾಗುವ, ಕಲಿಯುವ ಸಾಮರ್ಥ್ಯ, ಕಲಿಯುವುದರಲ್ಲಿ ಮಾಡಿರುವ ಪ್ರಗತಿ ಮತ್ತು ಇನ್ನಿತರ ಸೂಕ್ತವಾದ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಹಾಗೂ ಜಾರಿ ಮಾಡುವುದನ್ನು ಖಾತರಿಗೊಳಿಸಿಕೊಳ್ಳಬೇಕು.

3. ಕಲಂ 27ರಲ್ಲಿ ಯಾವುದೇ ಶಿಕ್ಷಕರನ್ನು ಶೈಕ್ಷಣಿಕವಲ್ಲದ ಕೆಲಸಗಳಿಗೆ, ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ, ವಿಪತ್ತು ನಿರ್ವಹಣೆ, ಸ್ಥಳೀಯ ಸರ್ಕಾರಗಳು, ರಾಜ್ಯ ವಿಧಾನ ಸಭೆ ಮತ್ತು ಸಂಸತ್ ಚುನಾವಣೆ ಹೊರತು ಪಡಿಸಿ, ಇತರೆ ಕೆಲಸಗಳಿಗೆ ನೇಮಿಸಬಾರದು. ನಿರ್ದಿಷ್ಟ ಪಡಿಸಿರುವುದನ್ನು ಹೊರತು ಪಡಿಸಿ ಉಪಾಧ್ಯಾಯರುಗಳಿಗೆ ಶೈಕ್ಷಣಿಕವಲ್ಲದ ಕರ್ತವ್ಯಗಳಿಂದ ಹೊರೆಯಾಗದಂತೆ ಮೇಲ್ವಿಚಾರಣೆ ಮಾಡಬೇಕು. ಎಸ್.ಡಿ.ಎಂ.ಸಿ. ಉಪಾಧ್ಯಾಯರುಗಳ ದೂರುಗಳನ್ನು ಸ್ಥಳೀಯ ಪ್ರಾಧಿಕಾರದ ಮೊದಲ ಹಂತವಾಗಿ ಆಲಿಸಬೇಕು.

4. ಧರ್ಮ, ಜನಾಂಗ, ಜಾತಿ, ಲಿಂಗ, ಭಾಷೆ ಮತ್ತು ಜನನ ಸ್ಥಳಗಳನ್ನು ಗಮನಿಸದೇ ನೆರೆಹೊರೆ ಶಾಲೆಗೆ
ಹೋಗದಿರುವ ಮಕ್ಕಳ ಮತ್ತು ಅಕ್ಕ-ಪಕ್ಕದ ಶಾಲೆಯ ಮಕ್ಕಳ ನಿರಂತರ ಹಾಜರಾತಿಯ ಪಟ್ಟಿಯನ್ನು
ಖಾತರಿಪಡಿಸಬೇಕು. ಈ ಸಂಬಂಧವಾಗಿ ಎಸ್.ಡಿ.ಎಂ.ಸಿ. ಯು ಹೆಣ್ಣುಮಕ್ಕಳಿಗಾಗಿ ವಿಶೇಷ ಶಿಬಿರಗಳನ್ನು ಮಾಡಬಹುದು. ಬಾಲಕಾರ್ಮಿಕ ಮಕ್ಕಳಿಗೆ ಸೌಲಭ್ಯಗಳ ಮೇಲ್ವಿಚಾರಣೆ ಮತ್ತು ವಿಶೇಷ ಅಗತ್ಯಗಳೊಂದಿಗೆ ಶಿಕ್ಷಣವನ್ನು ಕೊಡಬಹುದಾಗಿದೆ.

5. ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯಲ್ಲಿ ನೀಡಲಾಗಿರುವ ಶಾಲೆಗಳಿಗೆ ನಿಗದಿಪಡಿಸಿದ ಗುಣಮಟ್ಟದ ವಿಧಿಗಳು ಮತ್ತು ಮಾನಕಗಳ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುವುದು. (ಅನುಬಂಧ ಗಮನಿಸುವುದು)

6. ಶಾಲೆಯ ಅವಶ್ಯಕತೆಗಳನ್ನು ಗುರುತಿಸುವುದು ಮತ್ತು ಶಾಲಾಭಿವೃದ್ಧಿ ಯೋಜನೆಯನ್ನು ತಯಾರಿಸುವುದು ಮತ್ತು ಕಲಂ 4ರ ಉಪಬಂಧಗಳ ಅನ್ವಯ ಶಾಲೆಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಪ್ರಕ್ರಿಯೆಯನ್ನು ಕಾರ್ಯಗತ ಗೊಳಿಸುವುದನ್ನು ಮೇಲ್ವಿಚಾರಣೆ ಮಾಡುವುದು.

7. ವಿಶೇಷ ಅಗತ್ಯವುಳ್ಳ ಮಕ್ಕಳು ಶಾಲೆಗೆ ಹೋಗಲು ಶಕ್ತವಾಗಲು ವಿಶೇಷ ಸೌಲಭ್ಯಗಳು ಅಂದರೆ ಶ್ರವಣ ಸಾಧನ ಬ್ರೆ ಲ್ ಇತ್ಯಾದಿಗಳನ್ನು ಕೊಡುವಾಗ ತಾರತಮ್ಯವಾಗದಿರುವುದನ್ನು ಖಾತರಿಗೊಳಿಸಬೇಕು. ಅಂಥಹ ಮಕ್ಕಳನ್ನು ಗುರುತಿಸಿ, ಪಟ್ಟಿ ಮಾಡಿ ಮತ್ತು ಕಲಿಕಾ ಸೌಲಭ್ಯಗಳನ್ನು ನೀಡುವಲ್ಲಿ ಮೇಲ್ವಿಚಾರಣೆ ಮಾಡಬೇಕು. ಹಾಗೂ ಪ್ರಾಥಮಿಕ ಶಿಕ್ಷಣದಲ್ಲಿ ಭಾಗಿಯಾಗುವುದನ್ನು ಮತ್ತು ಪೂರ್ತಿಗೊಳಿಸುವುದನ್ನು ಖಾತ್ರಿಗೊಳಿಸಬೇಕು.

8. ನಿಯತಕಾಲಿಕವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ (ಡ್ರಾಪ್-ಔಟ್ ದರವನ್ನು) ಮೇಲ್ವಿಚಾರಣೆ ಮಾಡುವುದು ಮತ್ತು ಹಾಜರಾತಿಯನ್ನು ಖಾತ್ರಿಗೊಳಿಸುವುದು ಮತ್ತು ಮಕ್ಕಳನ್ನು ಶಾಲೆಯಲ್ಲಿ ಉಳಿಸಿಕೊಳ್ಳುವುದು, ಉಚಿತ ಪಠ್ಯಪುಸ್ತಕಗಳ ಹಂಚಿಕೆ, ಮಧ್ಯಾಹ್ನದ ಅಕ್ಷರ ದಾಸೋಹ ಊಟದ ಕಾರ್ಯಕ್ರಮ ಸಮವಸ್ತ್ರಗಳು, ವಿದ್ಯಾರ್ಥಿ ವೇತನಗಳು ಮತ್ತು ಸರ್ಕಾರವು ಕಾಲಕಾಲಕ್ಕೆ ಕೊಡಬಹುದಾದ ಇತರ ಯಾವುದೇ ಉತ್ತೇಜಕ ಕಾರ್ಯಕ್ರಮಗಳ ಕಾರ್ಯಗತಗೊಳಿಸುವಿಕೆಯನ್ನು ಮೇಲ್ವಿಚಾರಣೆ ಮಾಡುವುದು.

9. ಪ್ರತಿಯೊಂದು ಶಾಲೆಯ ಮಾರ್ಚ್ ತಿಂಗಳ 31ನೇ ತಾರೀಖಿಗೆ ಕೊನೆಗೊಂಡ ಕಾಲಾವಧಿಯ ವರ್ಷದ ಜೂನ್ ತಿಂಗಳ ಮೊದಲು ವಾರ್ಷಿಕ ಸ್ವೀಕೃತಿ ಮತ್ತು ವೆಚ್ಚಗಳ (ಖeಛಿeiಠಿಣs & ಇxಠಿeಟಿಜiಣuಡಿe) ಲೆಕ್ಕವನ್ನು ಸಿದ್ದಪಡಿಸುವುದು ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯಿಂದ ಅನುಮೋದನೆ ಮಾಡತಕ್ಕದ್ದು ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಮುಖ್ಯಸ್ಥ, ಕಾರ್ಯದರ್ಶಿಯಿಂದ ಸಹಿ ಮಾಡಲ್ಪಡಬೇಕು, ಅದನ್ನು ಸ್ಥಳೀಯ ಪ್ರಾಧಿಕಾರದ ಮುಂದೆ ಇಡಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಬೇಕು.

10. ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯು ಶಾಲೆಯ ಅಗತ್ಯಗಳನ್ನು ಗುರುತಿಸಿದ ನಂತರ ಆರ್ಥಿಕ ವರ್ಷಕ್ಕಾಗಿ ಶಾಲಾ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಬೇಕು. ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯು ಶಾಲೆಯ ಮೂಲಭೂತ ಸೌಕರ್ಯಗಳಾದ ಆಟದ ಮೈದಾನ, ಕಾಂಪೌಂಡ್ ಗೋಡೆಗಳು, ತರಗತಿಗಳು, ಶೌಚಾಲಯ, ಪೀಠೋಪಕರಣ, ಕುಡಿಯುವ ನೀರಿನ ಇತ್ಯಾದಿಗಳನ್ನು ಮೇಲ್ವಿಚಾರಣೆ ಮಾಡುವ್ಯದು ಇಲ್ಲದಿದ್ದಲ್ಲಿ ಹೊಂದಲು ಪ್ರಯತ್ನಿಸುವುದು ಅದರ ಕರ್ತವ್ಯವಾಗಿದೆ. ಅದು ಶಾಲಾ ಅಭಿವೃದ್ಧಿ ಯೋಜನೆಯಂತೆ ಯಾವುದೇ ಕೆಲಸದ ನಿರ್ಮಾಣ ವ್ಯವಸ್ಥೆ ಮತ್ತು ನಿರ್ವಹಣೆಯನ್ನು ಸಹ ಮಾಡಬೇಕು. ಶಾಲೆಯನ್ನು ನಡೆಸುವ ಸಲುವಾಗಿ ಅಗತ್ಯವಾದಂತಹ ಸ್ಥಿರ ಅಥವಾ ಚರ ಆಸ್ತಿಯನ್ನು ಸ್ವಾಧೀನ, ಕ್ರಯ ಅಥವಾ ಬಾಡಿಗೆಗೆ ತೆಗೆದುಕೊಳ್ಳಬಹುದಾಗಿದೆ. ಶಾಲಾ ಆವರಣವನ್ನು ಅತಿಕ್ರಮ ಮತ್ತು ಉಪದ್ರವಗಳಿಂದ ರಕ್ಷಿಸಬೇಕು. ಶಾಲೆಯ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು 1098 ನ್ನು ಪ್ರಕಟಿಸಲಾಗಿದೆ ಎಂಬುದನ್ನು ಖಾತ್ರಿಗೊಳಿಸಬೇಕು. ಶಾಲಾಸ್ವಚ್ಚತೆಯನ್ನು ನೋಡಿಕೊಳ್ಳಬೇಕು ಮತ್ತು ಶಾಲೆಯನ್ನು ನಿರ್ವಹಣೆ ಮಾಡಬೇಕು, ಅದರ ಜೊತೆಗೆ ಶಾಲೆಯ ಮಕ್ಕಳಿಗೆ ಆರೋಗ್ಯ ಕಾರ್ಯಕ್ರಮಗಳು ಮತ್ತು ನಿರಂತರ ಆರೋಗ್ಯ ಶಿಬಿರಗಳ ಸೌಲಭ್ಯಗಳನ್ನು ಮೇಲ್ವಿಚಾರಣೆ ಮಾಡುವುದು.

11. ತಿಂಗಳಿಗೊಂದು ಬಾರಿ ಪೋಷಕರ ಸಭೆಗಳನ್ನು ನಡೆಸಬೇಕು ಮತ್ತು ಯಾರು ನಿರಂತರವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಅಂತಹ ಪೋಷಕರೊಂದಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಚರ್ಚೆ ಮಾಡುವುದು. ಶಾಲೆಯ ಮಕ್ಕಳ ದಾಖಲಾತಿ ಆಂದೋಲನ, ಸೇತುಬಂಧ ತರಗತಿಗಳು ಹೆಣ್ಣು ಮಕ್ಕಳಿಗಾಗಿ ವಿಶೇಷ ಶಿಬಿರಗಳ ವ್ಯವಸ್ಥೆಯನ್ನು ಸಹ ಮಾಡಬೇಕು. ಎಲ್ಲಾ ಪೋಷಕರು ಶಾಲೆಯ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಲು ಪೋಷಕರ ದಿನಾಚರಣೆಯನ್ನು ನಡೆಸಬೇಕು.

12. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಎಲ್ಲಾ ಪೋಷಕರು ಶಾಲೆಯ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮತ್ತು ಶಾಲೆಯು ಅಭಿವೃದ್ಧಿ ಹೊಂದಲು ಸ್ಥಳೀಯ ಪ್ರಾಧಿಕಾರಕ್ಕೆ ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ರಚನಾತ್ಮಕ ಸಲಹೆಗಳನ್ನು ಕೊಡುವಂತೆ ಉತ್ತೇಜಿಸುವುದೆಂದು, ಅದು ವಿದ್ಯಾರ್ಥಿಗಳು, ಪೋಷಕರು, ಉಪಾಧ್ಯಾಯರು ಮತ್ತು ಶಾಲೆಯ ಬೋಧಕೇತರ ಸಿಬ್ಬಂದಿಯ ದೂರು ಅಥವಾ ಫಿರ್ಯಾದುಗಳನ್ನು ಸಂಬೋಧಿಸಬೇಕು.

13. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಉಪಾಧ್ಯಾಯರ ದೂರುಗಳನ್ನು ಪ್ರಥಮ ಮಟ್ಟದ ದೂರುಗಳ ಪರಿಹಾರ ಸಮೂಹವಾಗಿ ಆಲಿಸಬೇಕು ಮತ್ತು ನಿರ್ವಹಿಸಬೇಕು. ಸಾಮಾನ್ಯವಾಗಿ ಉಪಾಧ್ಯಾಯರಿಗೆ ತೊಂದರೆ ಇರುವಂತಹ ಸಂಧರ್ಭದಲ್ಲಿ ಮತ್ತು ವಿಶೇಷವಾಗಿ ಮಹಿಳಾ ಉಪಾಧ್ಯಾಯರುಗಳ ದೂರುಗಳ ಸಂದರ್ಭದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.

14. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ವರ್ಷದಲ್ಲಿ ಕನಿಷ್ಠ 220 ಕಾರ್ಯನಿರತ ಕೆಲಸದ ದಿವಸಗಳನ್ನು ಖಾತ್ರಿಗೊಳಿಸುವುದು. ಸ್ಥಳೀಯ ರಜಾದಿನಗಳನ್ನು ವರ್ಷದಲ್ಲಿ 4 ದಿವಸಕ್ಕೆ ಮೀರದಂತೆ ತೀರ್ಮಾನಿಸಬೇಕು.

15. ಅಗತ್ಯವಿದ್ದಾಗ ಸ್ವ-ಇಚ್ಛೆ ಆಧಾರದ ಮೇಲೆ ಅಥವಾ ನಿಗದಿತ ಗೌರವಧನ ನೀಡುವುದರ ಮೇಲೆ ಅದರ ವೆಚ್ಚವನ್ನು ನಿಧಿಯಿಂದ ಭರಿಸಿ ಪ್ರಕರಣಾನುಸಾರ ಸ್ಥಳೀಯ ವ್ಯಕ್ತಿಗಳ ಅಥವಾ ಶಿಕ್ಷಕರ ಸೇವೆಯನ್ನು ಎರವಲು ತೆಗೆದುಕೊಳ್ಳಬಹುದಾಗಿದೆ. ಉಪಬಂಧದಂತೆ ಈ ರೀತಿಯಲ್ಲಿ ಖಾಯಂ ಸ್ಥಾನಗಳನ್ನು ತುಂಬಬಾರದು.

1. ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯು ನಿಯತಕಾಲಿಕವಾಗಿ ಉಪಾಧ್ಯಾಯರ ಕಾರ್ಯಚಟುವಟಿಕೆಯನ್ನು ವಿಮರ್ಶೆ ಮಾಡಬಹುದಾಗಿದೆ ಮತ್ತು ಸಮಿತಿಯ ಷೆಡ್ಯುಲ್‌ನಲ್ಲಿ ನಿಗದಿಪಡಿಸಿರುವ ಕನಿಷ್ಠ ಪ್ರಮಾಣದ ಪರಿಮಾಣಗಳನ್ನು ಮತ್ತು ಕಾಲಕಾಲಕ್ಕೆ ಕೇಂದ್ರಸರ್ಕಾರ ಅಥವಾ ರಾಜ್ಯಸರ್ಕಾರದ ಯಾವುದೇ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅನುಕೂಲ ಮಾಡಿಕೊಡಬೇಕು. ಮುಖ್ಯೋಪಾಧ್ಯಾಯರ ಮತ್ತು ಮುಖ್ಯೋಪಾಧ್ಯಾಯರ ಬೇಡಿಕೆಗೆ ಅನುಸಾರವಾಗಿ ಉಪಾಧ್ಯಾಯರುಗಳಿಗೆ ಅಗತ್ಯ ಆಧಾರಿತ ತರಬೇತಿಗಳನ್ನು ಆಯೋಜಿಸಲು ಸಹಕರಿಸುವುದು.

16. ಮೇಲಿನ ಪ್ರಕಾರ್ಯಗಳ ಜೊತೆಗೆ ಪ್ರತಿಯೊಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಮೂರು ವರ್ಷಗಳ ದೂರದೃಷ್ಠಿಯುಳ್ಳ ಶಾಲಾ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಬೇಕು. ಈ ಶಾಲಾ ಅಭಿವೃದ್ಧಿ ಯೋಜನೆಯು, ಸಂದರ್ಭಾನುಸಾರ ಸಮುಚಿತ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರವು ರಚಿಸಿದ ಯೋಜನೆಗಳು ಮತ್ತು ನೀಡಿದ ಅನುದಾನಗಳಿಗೆ ಅನುಗುಣ ವಾಗಿರಬೇಕು. ಶಾಲೆಯ ಅಗತ್ಯಕ್ಕನುಗುಣವಾಗಿ ಶಿಕ್ಷಣ ಹಕ್ಕು ಕಾಯಿದೆಯ ಅನುಸೂಚಿಯಲ್ಲಿ ನಮೂದಿಸಿರುವ ಮಾನಕಗಳು ಹಾಗೂ ‘ಸಂಗಮ’ ಪುಸ್ತಕದಲ್ಲಿ ಶಾಲಾ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ಸೂಚಕಗಳಿಗೆ ಅನುಗುಣವಾಗಿ ಎಸ್‌ಡಿಎಂಸಿ ಶಾಲಾ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವುದು. 

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಗುಣಾತ್ಮಕ ಶಿಕ್ಷಣ
ಶಾಲಾ ಭೌತಿಕ ಸೌಕರ್ಯಗಳ ಅಭಿವೃದ್ಧಿಯ ಜೊತೆ ಜೊತೆಗೆ ಎಲ್ಲಾ ಮಕ್ಕಳಿಗೆ ಶಿಶು ಸ್ನೇಹಿ ಶಿಶುಕೇಂದ್ರಿತ ವಾತಾವರಣದಲ್ಲಿ ಗುಣಾತ್ಮಕ ಶಿಕ್ಷಣ ಸಿಗುವಂತೆ ನೋಡಿಕೊಳ್ಳುವುದೂ ಸಹ ಎಸ್‌ಡಿಎಮ್‌ಸಿಯ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಪಠ್ಯಕ್ರಮ, ಪಠ್ಯವಸ್ತು, ಕಲಿಕಾ ಪ್ರಕ್ರಿಯೆ ಮತ್ತು ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಶಿಕ್ಷಣ ಹಕ್ಕು ಕಾಯಿದೆ ಸೆಕ್ಷನ್ 29ರ ಅನ್ವಯ ಈ ಕೆಳಗಿನ ಅಂಶಗಳಿಗೆ ಮಹತ್ವ ನೀಡಬೇಕು

 ಸಂವಿಧಾನದಲ್ಲಿನ ಮೌಲ್ಯಗಳು;
 ಮಕ್ಕಳ ಸರ್ವಾಂಗೀಣ ಅಭಿವೃದ್ಧಿ;
 ಮಕ್ಕಳ ಜ್ಞಾನ, ಸಾಮರ್ಥ್ಯ ಮತ್ತು ಪ್ರತಿಭೆಯ ವರ್ಧನೆ;
 ಪೂರ್ಣ ಪ್ರಮಾಣದಲ್ಲಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳ ವಿಕಸನ;
 ಶಿಶು ಸ್ನೇಹಿ ಮತ್ತು ಶಿಶು ಕೇಂದ್ರಿತ ವಾತಾವರಣದಲ್ಲಿ ಚಟುವಟಿಕೆಗಳು, ಅನ್ವೇಷಣೆ ಮತ್ತು ಸಾಹಸ
ಶೋಧನೆ ಮೂಲಕ ಮಕ್ಕಳ ಕಲಿಕೆ;
 ಶಿಕ್ಷಣ ಮಾಧ್ಯಮ ಸಾಧ್ಯವಾಗಬಹುದಾದಷ್ಟು ಮಟ್ಟಿಗೆ ಮಕ್ಕಳ ಮಾತೃಭಾಷೆ;
 ಮಗುವಿನ ಭಯ, ಆಘಾತ ಹಾಗೂ ಆತಂಕ ಹೋಗಲಾಡಿಸುವುದು ಮತ್ತು ಮಗು ಮುಕ್ತವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ನೆರವಾಗುವುದು;
 ಜ್ಞಾನದ ಗ್ರಹಿಕೆ ಮತ್ತು ಅದನ್ನು ಅನ್ವಯಿಸುವ ಆತನ ಅಥವಾ ಆಕೆಯ ಸಾಮರ್ಥ್ಯದ ಬಗ್ಗೆ ಮಕ್ಕಳ ಸಮಗ್ರ ಹಾಗೂ ನಿರಂತರ ಮೌಲ್ಯ ನಿರ್ಧರಣೆ.


ಅಧ್ಯಾಯ -2
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆ ಮತ್ತು ನಿರ್ವಹಿಸಬೇಕಾದ ಪ್ರಕಾರ್ಯಗಳು (ಪ್ರೌಢಶಾಲೆಗಳು)

1. ರಚನೆಗೆ ಮೂಲ ತಳಹದಿ ದಸ್ತಾವೇಜುಗಳು
2. ಸರ್ಕಾರಿ ಆದೇಶ ಸಂಖ್ಯೆ ಇಡಿ1 ಪಿಬಿಎಸ್ 2001 ಬೆಂಗಳೂರು:28.04.2001
3. ಮಾನ್ಯ ಉಚ್ಛ ನ್ಯಾಯಾಲಯದ W.P. ಓo. 80352/2009 ದಿನಾಂಕ : 06/02/2009
4. ಸರ್ಕಾರಿ ಆದೇಶ ಸಂಖ್ಯೆ: 105/ಎಸ್ ಒ ಹೆಚ್ 2008, ಬೆಂಗಳೂರು ದಿನಾಂಕ: 28/07/2009.


ಪ್ರೌಢಶಾಲಾ ಹಂತದಲ್ಲಿ ಸಮುದಾಯದ ಭಾಗವಹಿಸುವಿಕೆ: ಅರ್ಥ, ಸ್ವರೂಪ ಮತ್ತು ಅವಕಾಶ

ಈ ಅಧಿವೇಶನದ ನಂತರ ಸದಸ್ಯರು ...
1. ಶಿಕ್ಷಣ ಸಾರ್ವತ್ರೀಕರಣದ ಸಂಕ್ಷಿಪ್ತ ಇತಿಹಾಸ ಮತ್ತು ಮಹತ್ವವನ್ನು ಅರಿಯುವರು.

2. ಉಚಿತ ಮತ್ತು ಕಡ್ಡಾಯ ಶಿಕ್ಷಕಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ-2009 (ಶಿಕ್ಷಣ ಹಕ್ಕು ಕಾಯ್ದೆ) ಅನ್ವಯ ಎಸ್‌ಡಿಎಂಸಿ ರಚನೆ ಕುರಿತು ತಿಳಿಯುವರು

3. ಶಿಕ್ಷಣ ಹಕ್ಕು ಕಾಯ್ದೆ ಮತ್ತು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು 2012ರ ಅನ್ವಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ನಿರ್ವಹಿಸಬೇಕಾದ ಪ್ರಕಾರ್ಯಗಳನ್ನು ಮನನ ಮಾಡಿಕೊಳ್ಳ್ಳುವರು

4. ಶಾಲಾ ಹಂತದಲ್ಲಿ ಎಸ್‌ಡಿಪಿಯ ತಯಾರಿಸಬೇಕಾದ ಮಹತ್ವವನ್ನು ತಿಳಿಯುವರು


ಸಂಕ್ಷಿಪ್ತ ಇತಿಹಾಸ: 
ಸಮುದಾಯ ಅದರಲ್ಲೂ ವಿಶೇಷವಾಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ತಂದೆ-ತಾಯಿಯರ ಸಕ್ರಿಯ ಭಾಗವಹಿಸುವಿಕೆ ವಿಕೇಂದ್ರೀಕೃತ ಶಾಲಾ ಆಡಳಿತದಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಈ ಮಹತ್ವದ ಅಂಶವನ್ನು ಪ್ರಾರಂಭದಿಂದಲೂ ಗುರುತಿಸಿರುವ ನಮ್ಮ ಶೈಕ್ಷಣಿಕ ನೀತಿ-ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ಕೈಗೊಳ್ಳುತ್ತಿವೆ. ಈ ಪ್ರಯತ್ನಕ್ಕೆ ಶಾಲಾ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಸಮುದಾಯವನ್ನು ತೊಡಗಿಸಿಕೊಳ್ಳುವ ಪ್ರಕ್ರಿಯೆಗೆ ಮಾತ್ರ ಸೀಮಿತವಾಗದೆ ಗುಣಾತ್ಮಕ ಶಿಕ್ಷಣದ ಸಾರ್ವತ್ರೀಕರಣದಲ್ಲಿ ಪರಿಣಾಮಕಾರಿ ಯಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿಯೂ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಕಾರ್ಯತಂತ್ರಗಳ ಮೂಲಕ ಸಮುದಾಯವನ್ನು ಒಳಮಾಡಿಕೊಳ್ಳುವ ಪ್ರಯತ್ನವಾಗಿದೆ. ಹೇಳಬೇಕೆಂದರೆ ಶಾಲಾ ಶಿಕ್ಷಣದ ಸಾರ್ವತ್ರೀಕರಣವು ಶಿಕ್ಷಣದಲ್ಲಿ ಗುಣಾತ್ಮಕತೆ, ಸಮತೆ, ಮಕ್ಕಳ ಭಾಗವಹಿಸುವಿಕೆ, ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಈ ಎಲ್ಲ ಅಂಶಗಳ ಅನುಷ್ಟಾನಕ್ಕೆ ಅಗತ್ಯವಾದ ಪ್ರಜಾಸತ್ತಾತ್ಮಕ ಸಾಂಸ್ಥಿಕ ಚೌಕಟ್ಟು. ವಿಕೇಂದ್ರೀಕರಣ ಆಡಳಿತ ವ್ಯವಸ್ಥೆಯ ಮೂಲಕ ಶಿಕ್ಷಣದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವ ಒಂದು ಪತ್ರ ಮತ್ತು ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ಸ್ವಾತಂತ್ರ್ಯ ಪೂರ್ವದಿಂದಲೂ ನಡೆಯುತ್ತಾ ಬಂದಿವೆ. 1854ರಲ್ಲಿ ವುಡ್ಸ್ ಆಯೋಗವು ಸ್ಥಳೀಯ ಕರಗಳ ಮೂಲಕ ಶಾಲೆಗಳ ನಿರ್ವಹಣೆಗೆ ಸಂಪನ್ಮೂಲಗಳನ್ನು ಕ್ರೋಢಿಕರಿಸುವ ಪ್ರಸ್ತಾಪ ಮಾಡಿತ್ತು. ನಂತರ ಲಾರ್ಡ ರಿಪ್ಪನ್ ರವರ ನಿರ್ಣಯ (1882) ಸ್ಥಳೀಯ ಸರ್ಕಾರ ಕಾಯಿದೆ (1883) ಮತ್ತು ಭಾರತ ಸರ್ಕಾರದ ಕಾಯಿದೆ (1919) ಈ ಎಲ್ಲಾ ಪ್ರಯತ್ನ ಮತ್ತು ಸ್ಥಳೀಯ ಹಂತದ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವ ಹಲವು ಪ್ರಯತ್ನಗಳನ್ನು ನಡೆಸಿದವು. ಮುಂದುವರಿದು, (1992 ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಕ 73 ಮತ್ತು 74ನೇ ತಿದ್ದುಪಡಿ ಕಾಯಿದೆಗಳು ವಿಕೇಂದ್ರಿಕರಣ ಪ್ರಕ್ರಿಯೆಗೆ ಐತಿಹಾಸಿಕ ಚಾಲನೆ ನೀಡಿದವು).

ಮತ್ತೊಂದೆಡೆ ಈ ಎಲ್ಲಾ ಬೆಳವಣಿಗೆಗಳಿಗೆ ಪೂರಕವಾಗಿ 1986ರ ರಾಷ್ಟ್ರೀಯ ಶಿಕ್ಷಣ ನೀತಿಯು ಸ್ಥಳೀಯ ಸಂಸ್ಥೆಗಳ ಮೂಲಕ ಸೂಕ್ತವಾದ ಸಾಂಸ್ಥಿಕ ಚೌಕಟ್ಟನ್ನು ಒದಗಿಸಿ ಸಮುದಾಯದ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸುವ ಮೂಲಕ ಸಮುದಾಯದ ಪಾಲ್ಗೊಳ್ಳುವಿಕೆಗೆ) ನೀತಿ ನಿರೂಪಣೆಯಲ್ಲಿ ಅವಕಾಶ ಕಲ್ಪಿಸಿತು. ನಂತರ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಲೋಕ್ ಜುಂಬಿಕ್ಷ (1988), ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ(1994), ಸರ್ವ ಶಿಕ್ಷಣ ಅಭಿಯಾನ (2000) ಇತ್ಯಾದಿ ಯೋಜನೆಗಳು ಶಿಕ್ಷಣದ ಸಾರ್ವತ್ರೀಕರಣದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ಹೊಸ ಆಯಾಮಗಳನ್ನು ನೀಡಿದವು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸರ್ವ ಶಿಕ್ಷಣ ಅಭಿಯಾನವು ಸಮುದಾಯದ ಸಹಭಾಗಿತ್ವದಲ್ಲಿ ಶಿಕ್ಷಣದ ಸಾರ್ವತ್ರೀಕರಣ ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭವಾಯಿತು.

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲಿಯೇ ಕರ್ನಾಟಕದಲ್ಲಿಯೂ ಶಿಕ್ಷಣ ಸಾರ್ವತ್ರೀಕರಣಕ್ಕೆ ರಾಷ್ಟ್ರೀಯ ಮಟ್ಟದ ಬೆಳವಣಿಗೆಗಳ ಮಾದರಿಯಲ್ಲಿಯೇ ಅನೇಕ ಕ್ರಮಗಳನ್ನು ಕೈಗೊಳ್ಳಲಾಯಿತು. ಉದಾಹರಣೆಗೆ 1854ರಲ್ಲಿ ವುಡ್ಸ್ ಆಯೋಗದ ವರದಿಯನ್ನು ಆಧರಿಸಿ ಮೈಸೂರು ರಾಜ್ಯಕ್ಕೆ ಅಂದಿನ ಶಿಕ್ಷಣ ಆಯುಕ್ತರು ಸಮಗ್ರಯೋಜನೆಯೊಂದನ್ನು ಸಿದ್ಧಪಡಿಸಿ 1857 ರಲ್ಲಿ ಭಾರತ ಸರ್ಕಾರದ ಅನುಮೋದನೆ ಪಡೆದಿದ್ದರು. ಮುಂದುವರಿದು, ಕರ್ನಾಟಕ ರಾಜ್ಯದಲ್ಲಿ ಸಮುದಾಯವನ್ನು ಶಿಕ್ಷಣ ಪ್ರಕ್ರಿಯೆಯಲ್ಲಿ ಒಳಮಾಡಿಕೊಳ್ಳುವ ಅನೇಕ ಪ್ರಯತ್ನಗಳು ರಾಷ್ಟಿçÃಯ ಶಿಕ್ಷಣ ನೀತಿಯ ಜಾರಿನಂತರ ಚಾಲನೆ ಪಡೆದವು. 1988ರಲ್ಲಿ ಶೈಕ್ಷಣಿಕ ಸಮಿತಿಗಳನ್ನು ರಚಿಸಲು ಸರ್ಕಾರವು ಆದೇಶವೊಂದನ್ನು
ಹೊರಡಿಸಿ ಅವಕಾಶ ಕಲ್ಪಿಸಿತು. ನಂತರ 1995 ಗ್ರಾಮ ಶಿಕ್ಷಣ ಸಮಿತಿಗಳನ್ನು ರಚಿಸುವ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು. ಈ ಎಲ್ಲ ಪ್ರಯತ್ನಗಳಿಗೆ ಅಂತಿಮ ಸ್ವರೂಪ ನೀಡುವ ಭಾಗವಾಗಿ 1999 ರಲ್ಲಿ ರಚನೆಯಾದ ಶಿಕ್ಷಣ ಕಾರ್ಯಪಡೆಯ ವರದಿಯ ಶಿಫಾರಸ್ಸಿನಂತೆ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ರಚಿಸುವ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡಿತು.

ದಿನಾಂಕ: 28.04.2001 ರಲ್ಲಿ ಹೊರಡಿಸಿದ ಕಾರ್ಯಕಾರಿ ಅದೇಶದ ಅನ್ವಯ ರಾಜ್ಯದ ಎಲ್ಲಾ ಸರ್ಕಾರಿ
ಪ್ರೌಢಶಾಲೆಗಳಲ್ಲಿ ಎಸ್.ಡಿ.ಎಂ.ಸಿ.ಗಳು ರಚನೆಯಾಗಿ ಕಾರ್ಯನಿರ್ವಹಿಸುತ್ತಿವೆ.

ಈ ಮಧ್ಯೆ ಮಾಧ್ಯಮಿಕ ಶಿಕ್ಷಣ ಅಂದರೆ ಪ್ರೌಢಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ರೂಪಿಸಿರು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನವು ಹಿಂದಿನ ಎಲ್ಲ ಪ್ರಯತ್ನಗಳನ್ನು ಕ್ರೂಢಿಕರಿಸಿ ಮುಂದುವರಿಸುವ ಪ್ರಯತ್ನದ ಭಾಗವಾಗಿ ಪ್ರೌಢಶಾಲಾ ಹಂತದಲ್ಲಿ ಎಸ್.ಡಿ.ಎಂ.ಸಿ.ಗಳನ್ನು ಬಲವರ್ಧನೆಗೊಳಿಸಲು ತೀರ್ಮಾನಿಸಿದೆ. ತನ್ನ ಮಾರ್ಗಸೂಚಿಯಲ್ಲಿ ಮಾಧ್ಯಮಿಕ ಶಿಕ್ಷಣ ಅಭಿಯಾನವು ಶಾಲಾ ಶಿಕ್ಷಣದ ವಿಕೇಂದ್ರಿಕರಣಕ್ಕಾಗಿ ಅಗತ್ಯ ಅಧಿಕಾರಗಳನ್ನು ಸ್ಥಳೀಯ ಸರ್ಕಾರ ಮತ್ತು ಶಾಲಾ ಮೇಲುಸ್ತುವಾರಿ ಸಮಿತಿಗಳಿಗೆ ನೀಡುವ ನಿಟ್ಟಿನಲ್ಲಿ ಆದ್ಯತೆಯ ಮೇಲೆ ಕ್ರಮಕೈಗೊಳ್ಳಬೇಕೆಂದು ಸೂಚಿಸಿದೆ. 

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನವು ಪ್ರೌಢಶಾಲಾ ಹಂತದಲ್ಲಿ ಎಸ್.ಡಿ.ಎಂ.ಸಿ.ಗಳ ಬಲವರ್ಧನೆಗಾಗಿ ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅದರ  ಭಾಗವಾಗಿ ಈ ಮಾಹಿತಿ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ. ಈ ಕೈಪಿಡಿಯು ರಾಜ್ಯದ ಪ್ರೌಢಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಸ್.ಡಿ.ಎಮ್.ಸಿ.ಸದಸ್ಯರು ಎಸ್.ಡಿ.ಎಂ.ಸಿ.ರಚನೆ, ಅಧಿಕಾರ, ಕರ್ತವ್ಯ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿಯಲ್ಲಿ ಯೋಜನೆ, ಅನುಷ್ಟಾನ ಇತ್ಯಾದಿಗಳ ಬಗ್ಗೆ ಎಲ್ಲ ಮಾಹಿತಿಗಳನ್ನು ಒದಗಿಸುತ್ತದೆ.

ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಯ ಉದ್ದೇಶ
1. ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪ್ರೌಢ ಶಿಕ್ಷಣದ ಸಾರ್ವತ್ರೀಕರಣವನ್ನು ಸಾಧಿಸಲು.

2. ಶಾಲೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಲು.

3. ತಮ್ಮ ಮಕ್ಕಳ ಏಳಿಗೆಯ ಬಗ್ಗೆ ಸದಾ ಕಾಳಜಿಯುಳ್ಳ ಪೋಷಕರು / ಪಾಲಕರು ಶಿಕ್ಷಣ ಪ್ರಕ್ರಿಯೆಯಲ್ಲಿ
ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು

4. ಶಿಕ್ಷಣ ವ್ಯವಸ್ಥೆಯನ್ನು ವಿಕೇಂದ್ರೀಕರಿಸಿ ಶಾಲಾ ಆಡಳಿತವನ್ನು ಸುಧಾರಿಸಲು.

5. ಶಿಕ್ಷಕರನ್ನು ಪ್ರೇರೇಪಿಸಿ ಅವರ ಜವಾಬ್ದಾರಿಯನ್ನು ಹೆಚ್ಚಿಸಲು

6. ಗ್ರಾಮ ಶಿಕ್ಷಣ ಸಮಿತಿಗಳ ರಚನೆಯಲ್ಲಿ ಉಳಿದುಕೊಂಡ ನ್ಯೂನತೆಗಳನ್ನು ಹೋಗಲಾಡಿಸಲು.

7. ಶಾಲಾ ಯೋಜನೆ ಹಾಗೂ ಅಭಿವೃದ್ಧಿಗಾಗಿ ಶಾಲೆಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಯೋಜನೆ ತಯಾರಿಸಲು.

8. ದಾಖಲಾತಿ, ಹಾಜರಾತಿ ಮತ್ತು ಶಿಕ್ಷಣದ ಗುಣಮಟ್ಟ ಸುಧಾರಣೆ ಕುರಿತಂತೆ ಇರುವ ಸಮಸ್ಯೆಗಳನ್ನು
ಪರಿಹರಿಸಲು.

9. ತರಗತಿಯ ಚಟುವಟಿಕೆಗಳನ್ನು ಶಿಸ್ತುಬದ್ಧವಾಗಿ ಸಂಘಟಿಸಲು.

10. ಶಾಲಾಭಿವೃದ್ಧಿಗೆ ಅಗತ್ಯ ಸಂಪನ್ಮೂಲಗಳನ್ನು ಕ್ರೂಢಿಕರಿಸಲು.


ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಯ ವಿಧಿ-ವಿಧಾನ :

ಹಂತ-1
ಪ್ರತಿಯೊಂದು ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ / ವಿದ್ಯಾರ್ಥಿನಿಯರ ಪೋಷಕರ (ತಂದೆ ಮತ್ತು ತಾಯಿ ಇಬ್ಬರೂ, ತಂದೆ ತಾಯಿ ಇಲ್ಲದಿದ್ದಲ್ಲಿ ಕಾನೂನಿನನ್ವಯ ಪೋಷಕರು / ವಾರಸುದಾರರು) ಪಟ್ಟಿಯನ್ನು ಸಿದ್ಧಪಡಿಸಬೇಕು.

ಹಂತ-2
ಈ ರೀತಿ ಸಿದ್ಧಪಡಿಸಿದ ಪಟ್ಟಿಯನ್ನು ಸಾರ್ವಜನಿಕರ ಗಮನಕ್ಕಾಗಿ ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಇದರ ಒಂದು ಪ್ರತಿಯನ್ನು ಸಂಬಂಧಿಸಿದ ಗ್ರಾಮಪಂಚಾಯಿತಿಯಲ್ಲಿ ಪ್ರಕಟಿಸಬೇಕು . ಈ ಬಗ್ಗೆ ಸಂಬಂಧಿಸಿದವರಿಗೆ ಸೂಕ್ತ ಮಾಹಿತಿ ನೀಡಲು ಸೂಕ್ತ ಕ್ರಮವಹಿಸುವುದು.

ಹಂತ-3
ಈ ರೀತಿ ಪ್ರಕಟಿಸಿದ 15 ದಿನಗಳ ನಂತರ ಪಟ್ಟಿಯಲ್ಲಿರುವ ಎಲ್ಲಾ ಪಾಲಕರು / ಪೋಷಕರನ್ನು ಒಳಗೊಂಡ ಸಾಮಾನ್ಯ ಸಭೆಯನ್ನು ನಿಗದಿತ ದಿನಾಂಕದಂದು ಶಾಲೆಯ ಆವರಣದಲ್ಲಿ ಮುಖ್ಯ ಶಿಕ್ಷಕರು ಕರೆಯುವುದು. ಈ ರೀತಿ ಕರೆಯಲ್ಪಟ್ಟ ಸಭೆಯ ಬಗ್ಗೆ ಜನರ ಮಾಹಿತಿಗಾಗಿ ವ್ಯಾಪಕ ಪ್ರಚಾರ ಮಾಡುವುದು. (ಉದಾ: ಸಾರ್ವಜನಿಕ ಸ್ಥಳಗಳಲ್ಲಿ ನೋಟೀಸ್ ಪ್ರತಿಯನ್ನು ಅಂಟಿಸುವುದು / ಡಂಗೂರ ಸಾರಿಸುವುದು / ಕರಪತ್ರವನ್ನು ಮುದ್ರಿಸಿ ಹಂಚುವುದು ಇತ್ಯಾದಿ).

ಹಂತ-4
ಈ ರೀತಿ ಔಪಚಾರಿಕವಾಗಿ ಸಮಾವೇಶಗೊಂಡ ಪಾಲಕರ ಸಭೆಯಲ್ಲಿ ವಿಧಿವತ್ತಾಗಿ ಆ ಶೈಕ್ಷಣಿಕ ವರ್ಷಕ್ಕೆ ಪೋಷಕರ ಸಭೆಯು (ಪಾಲಕರ ಪರಿಷತ್ತು) ರಚಿತವಾಯಿತೆಂಬ ಬಗ್ಗೆ ಗೊತ್ತುವಳಿಯನ್ನು ಅಂಗೀಕರಿಸಬೇಕು. (ಪಾಲಕರ ಪರಿಷತ್ತಿನ ಸಭೆಗೆ ಪೋಷಕರ ಪ್ರತಿನಿಧಿಗಳಲ್ಲಿ ಮೂರನೇ ಎರಡಷ್ಟು ಹಾಜರಾತಿ ಇರಬೇಕು). ಮೊದಲನೇ ಸಭೆ ನಡೆಸಲು ಅಗತ್ಯ ಕೋರಂ ಇರದಿದ್ದಲ್ಲಿ ಅಂದೇ ಮುಂದಿನ 07 ದಿನಗಳ ನಂತರದ ದಿನಾಂಕವನ್ನು ನಿಗದಿಪಡಿಸಿ ಸಭೆಯನ್ನು ಮುಂದೂಡಬೇಕು. ಎರಡನೇ ಸಭಾ ಸೂಚನಾ ಪತ್ರವನ್ನು ಕಳುಹಿಸುವಾಗ ಹಾಜರಾಗುವ ಪೋಷಕರನ್ನೇ ಕೋರಂ ಎಂದು ಪರಿಗಣಿಸಿ ಸಭೆ ನಡೆಸಿ ಎಸ್ ಡಿ ಎಂ ಸಿ ರಚಿಸಲಾಗುವುದೆಂದು ಸ್ಪಷ್ಟವಾಗಿ ತಿಳಿಸುವುದು. ಈ ಬಗ್ಗೆ ವ್ಯಾಪಕ ಪ್ರಚಾರ ನೀಡುವುದು.

ಹಂತ-5
ವಿಧಿವತ್ತಾಗಿ ರಚಿಸಲ್ಪಟ್ಟ ಪಾಲಕರ ಪರಿಷತ್ತಿನಿಂದ 9 ಜನ ಪೋಷಕ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು (ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಆಯ್ಕೆ ಮಾಡಬಹುದು)

ಹಂತ-6
ಈ ರೀತಿ 9 ಜನರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಕೆಳಗಿನ ಮಾನದಂಡವನ್ನು ಅನುಸರಿಸುವುದು.
 ಕನಿಷ್ಟ ಮೂವರು ಮಹಿಳಾ ಪ್ರತಿನಿಧಿಗಳು.
 ಕನಿಷ್ಟ ಇಬ್ಬರು ಪರಿಶಿಷ್ಟ ಜಾತಿ / ಪಂಗಡಗಳಿಗೆ ಸೇರಿದವರು.
 ಒಬ್ಬರು ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದವರು.

ವಿ.ಸೂ: ಯಾವುದೇ ಪೋಷಕರು ಏಕಕಾಲಕ್ಕೆ ಒಂದಕ್ಕಿAತ ಹೆಚ್ಚು ಎಸ್.ಡಿ.ಎಂ.ಸಿ. ಗಳ ಸದಸ್ಯರಾಗಿರಕೂಡದು. ಒಂದು ವೇಳೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಲ್ಪಸಂಖ್ಯಾತ ಪ್ರತಿನಿಧಿಗಳು ಲಭ್ಯವಿಲ್ಲದಿದ್ದರೇ, ಇತರರಿಂದ ಭರ್ತಿ ಮಾಡುವುದು. ಮುಂದಿನ ಮೂರು ವರ್ಷಗಳ ಒಳಗೆ ಈ ವರ್ಗದ ಮಕ್ಕಳು ಶಾಲೆಗೆ ದಾಖಲಾದರೆ ಅಂತಹ ಪೋಷಕರನ್ನು ಗುರುತಿಸಿ ಮುಂದೆ ಉದ್ಭವಿಸುವ ಸ್ಥಾನಗಳಿಗೆ ಆದ್ಯತೆಯ ಮೇರೆಗೆ ಭರ್ತಿ ಮಾಡುವುದು. ಈ ರೀತಿ ಮಾಡುವಾಗ ಆ ವರ್ಗಕ್ಕೆ ಸೇರಿದ ಮಗು ದಾಖಲಾದಲ್ಲಿ ನಿಮ್ಮ ಸದಸ್ಯತ್ವವು ರದ್ದಾಗುವುದು ಎಂದು ಸಭೆಯಲ್ಲಿಯೇ ತಿಳಿಸಿ ಷರತ್ತು ಬದ್ಧವಾಗಿ ಆಯ್ಕೆ ಮಾಡುವುದು.

ಹಂತ-7
ಎಸ್.ಡಿ.ಎಂ.ಸಿ. ಅಧ್ಯಕ್ಷರ ಆಯ್ಕೆ:
ಪೋಷಕರ ಸಭೆಯಿಂದ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾದ ಒಂಬತ್ತು ಜನ ಚುನಾಯಿತ ಪೋಷಕ ಪ್ರತಿನಿಧಿಗಳಲ್ಲಿ ಬಹುಮತವಿರುವ ಒಬ್ಬರನ್ನು ಎಸ್.ಡಿ.ಎಂ.ಸಿ. ಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು.

ಹಂತ-8
ಸದಸ್ಯ ಕಾರ್ಯದರ್ಶಿಯ ನೇಮಕ
ಎಸ್.ಡಿ.ಎಂ.ಸಿ.ಯ ಪದನಿಮಿತ್ತ ಸದಸ್ಯರಾದ ಶಾಲೆಯ ಮುಖ್ಯ ಶಿಕ್ಷಕರು ಎಸ್.ಡಿ.ಎಂ.ಸಿ.ಯ ಸದಸ್ಯ ಕಾರ್ಯದರ್ಶಿ ಹಾಗೂ ಖಜಾಂಚಿಗಳಾಗಿರುತ್ತಾರೆ.

ಹಂತ-9
ಅಧ್ಯಕ್ಷರ ಆಯ್ಕೆ ನಂತರ 9 ಜನ ಪೋಷಕರ ಚುನಾಯಿತ ಪ್ರತಿನಿಧಿಗಳು ಸೇರಿ ಪದನಿಮಿತ್ತ ಹಾಗೂ ನಾಮನಿರ್ದೇಶಿತ ಸದಸ್ಯರನ್ನೊಳಗೊಂಡAತೆ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಯನ್ನು ರಚಿಸಿದ ಬಗ್ಗೆ ನಿರ್ಣಯ ಕೈಗೊಳ್ಳುವುದು.

ಪದನಿಮಿತ್ತ ಸದಸ್ಯರೆಂದರೇ ಶಾಲೆಯಿರುವ ಕ್ಷೇತ್ರವನ್ನು ಪ್ರತಿನಿಧಿಸುವ ಗ್ರಾಮ ಪಂಚಾಯತ್, ತಾಲ್ಲೂಕ್ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು, ಗರಿಷ್ಠ ಸದಸ್ಯರ ಸಂಖ್ಯೆ (06) ಅಂಗನವಾಡಿ ಕಾರ್ಯಕರ್ತೆ ಶಾಲೆಯಿರುವ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕಾರ್ಯಕರ್ತರು ಮತ್ತು ಆ ಶಾಲೆಯ ಮುಖ್ಯ ಶಿಕ್ಷಕರು. 

ನಾಮನಿರ್ದೇಶಿತ ಸದಸ್ಯರೆಂದರೇ ಶಾಲೆಯನ್ನು ದತ್ತು ತೆಗೆದುಕೊಂಡ ಮಹನೀಯರು, ಶಾಲೆ ಕಟ್ಟಲು ಭೂಮಿ ದಾನ ಮಾಡಿದ ದಾನಿಗಳು, ಶಾಲಾ ಕಟ್ಟಡವನ್ನು ಕಟ್ಟಿಸಿಕೊಟ್ಟ ಅಥವಾ ಹತ್ತು ಸಾವಿರ ರೂಪಾಯಿಗಳು ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಶೈಕ್ಷಣಿಕ ಉಪಕರಣಗಳನ್ನು ಕೊಡಿಸಿದ ಮಹನೀಯರು ಅಥವಾ ಹತ್ತು ಸಾವಿರ ರೂಪಾಯಿಗಳು ಅಥವಾ ಅದಕ್ಕಿಂತ ಹೆಚ್ಚಿನ ಮೊ ತ್ತವನ್ನು ದಾನ ಮಾಡಿದ ದಾನಿಗಳು, ಆ ಕ್ಷೇತ್ರದಲ್ಲಿ ವಾಸಿಸುವ ಒಬ್ಬ ಶಿಕ್ಷಣ ತಜ್ಞರು ಅಥವಾ ಒಬ್ಬ ನಿವೃತ್ತ ಶಿಕ್ಷಕರು,

ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಇಬ್ಬರು ಸದಸ್ಯರು, ಯುವಕ ಸಂಘ ಅಥವಾ ಯುವತಿ ಸಂಘದ ಒಬ್ಬ ಪದಾಧಿಕಾರಿಗಳು ಹಾಗೂ ಹತ್ತನೇ ವರ್ಗದ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿ.
ಶಾಲೆಯು ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದ್ದಲ್ಲಿ ಶಾಲೆಯಿರುವಕ್ಷೇತ್ರವನ್ನು  ಪ್ರತಿನಿಧಿಸುವ ಆಯಾ ಸ್ಥಳಿಯ ಸಂಸ್ಥೆಗಳ ಚುನಾಯಿತ  ಪ್ರತಿನಿಧಿಯು ಪದ ನಿಮಿತ್ತ ಸದಸ್ಸ್ರಾಯರಾಗಿರುವರು.

ಸೂಚನೆ: ನಾಮ ನಿರ್ದೇಶನಗೊಂಡ ಸದಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ.




ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕರ್ತವ್ಯಗಳು:

1. ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಎಲ್ಲಾ ಮಕ್ಕಳು ಪ್ರೌಢ ಶಿಕ್ಷಣಕ್ಕೆ ದಾಖಲಾಗುವಂತೆ ಕ್ರಮ
ವಹಿಸುವುದು

2. ಈ ರೀತಿ ದಾಖಲಾದ ಎಲ್ಲಾ ಮಕ್ಕಳು ನಿಯಮಿತವಾಗಿ ಶಾಲೆಗೆ ಹಾಜರಾಗುವಂತೆ ಮಾಡುವುದು.

3. ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ, ಪ್ರೌಢ ಶಿಕ್ಷಣಕ್ಕೆ ದಾಖಲಾಗುವ ಸಂದರ್ಭದಲ್ಲಿ ಬುನಾದಿ ಸಾಮರ್ಥ್ಯಗಳನ್ನು ಗಳಿಸಲು ಸೇತುಬಂಧ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡುವುದು.

4. ಶಾಲೆಯಲ್ಲಿ ಓದುವ ಎಲ್ಲಾ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು.

5. ಶಾಲೆಯ ಆವರಣವನ್ನು ಹಾಗೂ ಕಟ್ಟಡವನ್ನು ಅತಿಕ್ರಮಣ ಹಾಗೂ ವಿನಾಶಗಳಿಂದ ಕಾಪಾಡುವುದು.

6. ಶೈಕ್ಷಣಿಕ ವರ್ಷದಲ್ಲಿ ಕನಿಷ್ಟ 220 ಕಲಿಕಾ ದಿನಗಳು ಮತ್ತು ಪ್ರತಿ ದಿನ ಐದೂವರೆ ಗಂಟೆಗಳು ಕಾಲ ಕಲಿಕಾ ಸಮಯಹೊರತುಪಡಿಸಿ ಶಾಲೆ ನಡೆಯುವುದನ್ನು ಖಾತರಿಪಡಿಸಿಕೊಳ್ಳುವುದು.

7. ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಿಗೆ ಸರ್ಕಾರದಿಂದ ನಿಯಮಾನುಸಾರ ಸಿಗಬೇಕಾದ ಉತ್ತೇಜಕಗಳನ್ನು ಸಕಾಲಕ್ಕೆ ಒದಗಿಸಲು ಅಗತ್ಯ ಕ್ರಮವನ್ನು ವಹಿಸುವುದು (ಉದಾ: ಬೈಸಿಕಲ್/ಬಿಸಿಯೂಟ/ ಸಮವಸ್ತç/ಪಠ್ಯಪುಸ್ತಕ/ನೋಟ್ ಬುಕ್/ವಿದ್ಯಾರ್ಥಿವೇತನ ಇತ್ಯಾದಿ).

8. ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಇಲಾಖೆಯಿಂದ ಏರ್ಪಡಿಸುವ ಕಾರ್ಯಕ್ರಮಗಳನ್ನು
ಪರಿಣಾಮಕಾರಿಯಾಗಿ ಜಾರಿಗೊಳಿಸುವುದು (ವಿಜ್ಞಾನ ಮೇಳ, ಶೈಕ್ಷಣಿಕ ಪ್ರವಾಸ, ಪ್ರತಿಭಾ ಕಾರಂಜಿ, ಸಹಪಠ್ಯ ಚಟುವಟಿಕೆಗಳು, ಕ್ರೀಡಾ ಕೂಟಗಳು, ಶಾಲಾ ಸಂಸತ್ತು, ವಿಜ್ಞಾನ ಕ್ಲಬ್, ಇಕೋಕ್ಲಬ್, ಕಲಾಉತ್ಸವ ಹದಿಹರೆಯದ ಶಿಕ್ಷಣ ಇತ್ಯಾದಿ).

9. ಶಾಲಾಭಿವೃದ್ಧಿ ಯೋಜನೆ ತಯಾರಿಸಿ ಅನುಷ್ಟಾನಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು.

10. ವರ್ಷದಲ್ಲಿ ಮೂರು ಬಾರಿ ಅಂದರೆ ಜುಲೈ, ನವೆಂಬರ್ ಹಾಗೂ ಫೆಬ್ರವರಿ ತಿಂಗಳುಗಳಲ್ಲಿ ಪೋಷಕರ ಸಭೆಗಳನ್ನು ಆಯೋಜಿಸುವುದು.

11. ಶಾಲೆಗೆ ಮಂಜೂರಾದ ಅನುದಾನಗಳನ್ನು ನಿಯಮಾನುಸಾರ ಬಳಸಲು ಕಾಲಕಾಲಕ್ಕೆ ಅನುಮೋದನೆ ನೀಡಿ ಸಮರ್ಪಕವಾಗಿ ಬಳಕೆಯಾಗಿದೆಯೋ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದು.

12. ಶಾಲಾ ಶಿಕ್ಷಣ ನಿಧಿ ಸ್ಥಾಪಿಸುವುದು. ಶಾಲಾ ಅಭಿವೃದ್ಧಿಗಾಗಿ ಎಸ್.ಡಿ.ಎಂ.ಸಿ. ಯು ಸಾರ್ವಜನಿಕರಿಂದ ವAತಿಗೆಗಳನ್ನು ಸ್ವೀಕರಿಸಬಹುದು. ಸ್ವೀಕರಿಸಿದ ವಂತಿಗೊಳಿಗೆ ಸೂಕ್ತ ದಾಖಲೆಗಳನ್ನು ನಿರ್ವಹಿಸುವುದು.

13. ಶಾಲೆಗೆ ಸಂಬAಧಿಸಿದ ಎಲ್ಲಾ ಕಾಮಗಾರಿ ಕಾರ್ಯಗಳ ಮೇಲುಸ್ತುವಾರಿಯನ್ನು ನಿರ್ವಹಿಸುವುದು.

14. ದಾನಿಗಳನ್ನು ಗುರುತಿಸಿ ಅವರನ್ನು ಸಂಪರ್ಕಿಸಿ, ಶಾಲೆಯನ್ನು ದತ್ತು ತೆಗೆದುಕೊಳ್ಳಲು ಪ್ರೇರೇಪಿಸುವುದು.

15. ಎಸ್.ಡಿ.ಎಂ.ಸಿ.ಯು ಶಾಲೆಯಲ್ಲಿ ಸಾಮೂಹಿಕವಾಗಿ ಮತ್ತು ವಿಕೇಂದ್ರೀಕರಣ ತತ್ತ ್ವದ ಅಡಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಅಗತ್ಯವಿರುವ ಕಡೆ ವಿವಿಧ ಉಪ ಸಮಿತಿಗಳನ್ನು ರಚಿಸಿಕೊಳ್ಳಬಹುದು. ಉದಾ: ಅಭಿವೃದ್ಧಿ ಸಮಿತಿ, ಮೇಲುಸ್ತುವಾರಿ ಸಮಿತಿ, ಇತ್ಯಾದಿ.


ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧಿಕಾರಗಳು:

1. ಶಾಲೆಯು ಸರಿಯಾಗಿ ಕೆಲಸ ಮಾಡುವುದನ್ನು ಖಾತರಿಪಡಿಸಿಕೊಳ್ಳುವುದು.

2. ಶಾಲಾ ಸಿಬ್ಬಂದಿಯ ಸಕಾಲಿಕ ಹಾಗೂ ನಿಯಮಿತ ಹಾಜರಾತಿಯ ಮೇಲೆ ಗಮನವಿಡುವುದು.

3. ಸದಸ್ಯರು ಶಿಕ್ಷಕರ ಹಾಜರಾತಿ ವಹಿಯನ್ನು ಶಾಲೆಯಲ್ಲಿಯೇ ಪರಿವೀಕ್ಷಿಸಬಹುದು.

4. ಶಾಲಾ ಸಿಬ್ಬಂದಿಯ ಸಕಾಲಿಕ ಹಾಗೂ ನಿಯಮಿತ ಹಾಜರಾತಿಯಲ್ಲಿ ಏನಾದರೂ ದೋಷ ಕಂಡುಬಂದರೆ, ಆ ಬಗ್ಗೆ ಮಾಸಿಕ ಸಭೆಯಲ್ಲಿ ಚರ್ಚಿಸಿ, ಗೊತ್ತುವಳಿ ಅಂಗೀಕರಿಸಿ ಸೂಕ್ತ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದು. (ಗೊತ್ತುವಳಿ ಸ್ವೀಕರಿಸಿದ 30 ದಿನಗಳೊಳಗೆ ಮೇಲಾಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಸದಸ್ಯ ಕಾರ್ಯದರ್ಶಿ ಎಸ್.ಡಿ.ಎಂ.ಸಿ.ಗೆ ತಿಳಿಸಬೇಕು).

5. ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳಿಗೆ ಸಾಂದರ್ಭಿಕ ಹಾಗೂ ನಿರ್ಬಂಧಿತ ರಜೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷರು ಮಂಜೂರು ಮಾಡುವುದು.

6. ಒಂದು ವರ್ಷದಲ್ಲಿ ನಾಲ್ಕಕ್ಕೆ ಮೀರದಂತೆ ಸ್ಥಳೀಯ ರಜೆಗಳನ್ನು ನಿರ್ಧರಿಸುವುದು.

7. ನಿರುಪಯುಕ್ತ ವಿಜ್ಞಾನೋಪಕರಣಗಳು, ಕಲಿಕೆಯ ಸಾಧನಗಳು, ಪೀಠೋಪಕರಣಗಳು, ಆಟದ ಸಾಮಗ್ರಿಗಳು, ನಕಾಶೆಗಳು, ಚಾರ್ಟ್ಗಳು, ವಾಚನಾಲಯದ ಪುಸ್ತಕಗಳು, ಇತ್ಯಾದಿ ಸಾಮಗ್ರಿಗಳು ಸೇರಿ ಗರಿಷ್ಟ ಹತ್ತು ಸಾವಿರ ರೂಪಾಯಿಗಳ ಮಿತಿಯೊಳಗೆ ನಿರುಪಯುಕ್ತವೆಂದು ಘೋಷಿಸಬಹುದು. ಈ ರೀತಿ ಘೋಷಿಸಿದ ವಸ್ತುಗಳನ್ನು ಹರಾಜು ಮಾಡಿ ಬಂದ ಹಣವನ್ನು ಶಾಲೆಯ ಎಸ್.ಡಿ.ಎಂ.ಸಿ. ಖಾತೆಗೆ ಜಮಾ ಮಾಡುವುದು.

8. ಸಾಂಸ್ಕೃತಿಕ ಚಟುವಟಿಕೆಗಳು, ಆಟೋಟಗಳು, ರಾಜ್ಯದೊಳಗಿನ ಶೈಕ್ಷಣಿಕ ಪ್ರವಾಸಗಳು, ಸಂದರ್ಶನಗಳು ಇತ್ಯಾದಿಗಳನ್ನು ಸಂಘಟಿಸಲು ಅನುಮತಿ ನೀಡುವುದು.

9. ಶಾಲೆಯು ದಾನವಾಗಿ ಸ್ವೀಕರಿಸಿದ ಹಾಗೂ ಖರ್ಚು ಮಾಡಿದ ಹಣದ ಲೆಕ್ಕಪತ್ರಗಳನ್ನು ಹಾಗೂ ತತ್ಸಬಂಧಿಯಾದ ದಾಖಲೆಗಳನ್ನು ಪರಿಶೀಲಿಸುವುದು.

10. ವಾಚನಾಲಯ ನಿಧಿ, ಕ್ರೀಡಾ ನಿಧಿ, ಪ್ರಯೋಗಾಲಯ ನಿಧಿ ಇತ್ಯಾದಿ ಸರ್ಕಾರೇತರ ನಿಧಿಗಳ ಬಳಕೆಗೆ ಅನುಮೋದನೆಯನ್ನು ನಿಯಮಾನುಸಾರ ನೀಡುವುದು.

11. ಶಾಲೆಯ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಅಗತ್ಯವಿದ್ದಷ್ಟು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಿ ಹೆಚ್ಚುವರಿ ಇದ್ದಲ್ಲಿ ಹರಾಜು ಮಾಡಿ ಶಾಲೆಯ ಎಸ್.ಡಿ.ಎಂ.ಸಿ. ಖಾತೆಗೆ ಜಮಾ ಮಾಡುವುದು.

12. ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ರಾಜ್ಯ ಮತ್ತು ಕೇಂದ್ರ ವಲಯದಿಂದ ಬಿಡುಗಡೆ ಯಾಗುವ ಹಣದಲ್ಲಿ ಶಾಲೆಗೆ ಬೇಕಾಗುವ ಸಾಧನ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಸಂಬAಧಿಸಿದ ಮುಖ್ಯ ಶಿಕ್ಷಕರುಗಳಿಗೆ ಅನುಮೋದನೆ ನೀಡುವುದು.


ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆಗಳು / ವಿಧಿ-ವಿಧಾನಗಳು:

1. ಕನಿಷ್ಟ ತಿಂಗಳಿಗೊಮ್ಮೆ ಎಸ್.ಡಿ.ಎಂ.ಸಿ. ಸಭೆಯನ್ನು ನಡೆಸಬೇಕು.

2. ಈ ಸಭೆಯನ್ನು ಕರೆಯಲು ಅಧ್ಯಕ್ಷರನ್ನು ಸಂಪರ್ಕಿಸಿ ಅವರ ಸೂಚನೆಯಂತೆ ಸಭೆಯನ್ನು ಕರೆಯುವುದು.

3. ಸಭೆಯ ಸೂಚನಾ ಪತ್ರವನ್ನು ಅಜೆಂಡಾದೊAದಿಗೆ ಕನಿಷ್ಟ ಮೂರು ದಿನಗಳು ಮುಂಚಿತವಾಗಿ ಎಲ್ಲಾ ಸದಸ್ಯರಿಗೂ ಕಳುಹಿಸತಕ್ಕದ್ದು. (ತುರ್ತು ವಿಷಯವಿದ್ದಲ್ಲಿ ಒಂದು ದಿನ ಮುಂಚಿತವಾಗಿ ಸಭಾ ಸೂಚನೆ ನೀಡಿ ಎಸ್.ಡಿ.ಎಂ.ಸಿ. ತುರ್ತು ಸಭೆಯನ್ನು ಕರೆಯಬಹುದು).

4. ಸಭೆ ನಡೆಸಲು ಸದಸ್ಯರ ಕನಿಷ್ಟ ಹಾಜರಾತಿ ಇರಬೇಕು. (ತಂದೆ ತಾಯಿಯವರ ಪರಿಷತ್ತಿನಿಂದ ಆರಿಸಲ್ಪಟ್ಟ ಒಂಬತ್ತು ಜನರಲ್ಲಿ ಕನಿಷ್ಟ ಐದು ಜನ ಮತ್ತು ಪದನಿಮಿತ್ತ ಮತ್ತು ನಾಮನಿರ್ದೇಶಿತ ಸದಸ್ಯರ ಪೈಕಿ ತಲಾ ಒಬ್ಬ ಸದಸ್ಯರಾದರೂ ಹಾಜರಾಗಿರಬೇಕು).



ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ನಡೆಸುವ ವಿಧಾನ:

1. ಸಭೆಗೆ ಎಸ್.ಡಿ.ಎಂ.ಸಿ.ಯ ಅಧ್ಯಕ್ಷರು ಗೈರು ಹಾಜರಾಗಿದ್ದಲ್ಲಿ ಸಭೆಯು ತೀರ್ಮಾನಿಸುವ ಎಸ್.ಡಿ.ಎಂ.ಸಿ.ಯ ಸದಸ್ಯರೊಬ್ಬರು ಆ ಸಭೆಯ ಅಧ್ಯಕ್ಷರಾಗುವರು.

2. ಹಿಂದಿನ ಸಭೆಯ ನಡಾವಳಿಗಳನ್ನು ಓದಿ ದಾಖಲಿಸುವುದು.

3. ಸಭೆಯ ಕಾರ್ಯಸೂಚಿಯಲ್ಲಿರುವ ವಿಷಯಗಳನ್ನು ಪ್ರಸ್ತಾಪಿಸಿ, ಚರ್ಚಿಸಿ ಸೂಕ್ತವಾದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು.

4. ತೀರ್ಮಾನಗಳನ್ನು ಅನುಷ್ಟಾನಗೊಳಿಸುವ ಜವಾಬ್ದಾರಿ ಮತ್ತು ಕಾಲಮಿತಿಯನ್ನು ನಿಗಧಿಗೊಳಿಸಬೇಕು.

5. ಸಭೆಯ ನಡಾವಳಿಯನ್ನು ಎಸ್.ಡಿ.ಎಂ.ಸಿ. ಸಭಾ ನಡಾವಳಿಯ ಪುಸ್ತಕದಲ್ಲಿ ದಾಖಲಿಸಿ ಎಲ್ಲರ ಸಹಿಯನ್ನು ಪಡೆಯುವುದು.

6. ಸಭಾ ನಡವಳಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಶಾಲಾ ನಾಮಫಲಕದಲ್ಲಿ ಪ್ರಕಟಿಸುವುದು

7. ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಜಾರಿಗೊಳಿಸಲು ಕ್ರಮವಹಿಸಿ ಮುಂದಿನ ಸಭೆಯಲ್ಲಿ ಅನುಪಾಲನಾ ವರದಿಯನ್ನು ಮಂಡಿಸಬೇಕು.






ಉಪಸಂಹಾರ

ಶಾಲಾ ಶಿಕ್ಷಣದ ಸಾರ್ವತ್ರೀಕರಣ ಪ್ರಕ್ರಿಯೆಯು‚ ಗುರಿಯ ದೃಷ್ಟಿಯಿಂದಾಗಲಿ ಅಥವಾ ‚ತಲುಪಬೇಕಾದ ಜನ ಸಮುದಾಯದ ದೃಷ್ಟಿಯಿಂದಾಗಲಿ, ಸ್ಪಷ್ಟತೆಯಿಂದ ಕೂಡಿದ್ದು, ಅನುಷ್ಟಾನ ಪ್ರಕ್ರಿಯೆ ಅದೇ ಮಾರ್ಗದಲ್ಲಿ ಸಾಗಿದಾಗ ಮಾತ್ರ, ಶಾಲಾ ಶಿಕ್ಷಣದ ಸಾರ್ವತ್ರೀಕರಣ ಪ್ರಕ್ರಿಯೆ ಅರ್ಥಪೂರ್ಣವಾಗಬಲ್ಲದು. ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಅಭಿಯಾನ ಮೊದಲ ಬಾರಿಗೆ ರಾಜಕೀಯ ಇಚ್ಚಾಶಕ್ತಿಯನ್ನು ನೀತಿ ನಿರೂಪಣೆಯಲ್ಲಿ ಪ್ರಕಟಿಸಿದ್ದು, ಈ ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ನಿರಂತರವಾಗಿ ಶಿಕ್ಷಣದಿಂದ ವಂಚಿತರಾಗಿರುವ ಜನ ಸಮುದಾಯದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಒಂದು ವಿಶಿಷ್ಟ ಯೋಜನೆಯಾಗಬೇಕು.
ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟಿçÃಯ ಮಾಧ್ಯಮಿಕ ಅಭಿಯಾನ ಯೋಜನೆಯ ಜಾರಿಯ ಫಲವಾಗಿ ನಮ್ಮ ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಅದರ್ಶ ಶಾಲೆಗಳಾಗಬೇಕು. ಗುಣಮಟ್ಟದ ಶಿಕ್ಷಣ ಈ ಮಕ್ಕಳಿಗೂ ಎಟುಕುವಂತಾಗಬೇಕು. ಇದೆಲ್ಲವೂ ಸಾಧ್ಯವಾಗಬೇಕಾದರೆ ಸರ್ಕಾರಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನಮ್ಮ ಶಿಕ್ಷಕ ಸಮುದಾಯ ಸಮರ್ಪಣ ಮನೋಭಾವವನ್ನು ಬೆಳಸಿಕೊಳ್ಳಬೇಕು. ಎಲ್ಲಕ್ಕಿಂತ ಮಿಗಿಲಾಗಿ ಬದ್ದತೆ, ಹೊಣೆಗಾರಿಕೆ ಮತ್ತು ಶಾಲಾ ಶಿಕ್ಷಣ ಸಾರ್ವತ್ರೀಕರಣ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮೊದಲಾಗಬೇಕು. ಶಿಕ್ಷಣ ವಂಚಿತ ಮತ್ತು ತುಳಿತಕ್ಕೊಳಗಾದ ಮಕ್ಕಳ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಬೇಕು. ಇದು ಸರಳವಾದ ಕೆಲಸವಲ್ಲ. ಆದರೆ ಸಾಧ್ಯವಾಗಬಹುದಾದ ಕೆಲಸ. ಜನಪ್ರತಿನಿಧಿಗಳ ಸಮುದಾಯದ ಸಹಭಾಗಿತ್ವದಿಂದ ಮಾತ್ರ ಶಾಲಾ ಶಿಕ್ಷಣದ ಸಾರ್ವತ್ರೀಕರಣದ ಯಶಸ್ವಿಯಾಗಲು ಸಾಧ್ಯ. ಈ ಕಾರಣದಿಂದಲೇ ಸಮುದಾಯದ ಭಾಗವಹಿಸುವಿಕೆಯು ಸರ್ವಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಅಭಿಯಾನ ಕೇಂದ್ರ ಬಿಂದುವಾಗಿದೆ. ಎಲ್ಲಿ ಇಂತಹ ಪ್ರಯತ್ನಗಳು ಬಲಿಷ್ಟವಾಗಿಬೆಯೋ ಅಲ್ಲಿ ನಮ್ಮ ಕಣ್ಣಿಗೆ ಕಾಣಬಹುದಾದ ಯಶಸ್ವಿ ಫಲಿತಾಂಶವನ್ನು ಕಂಡಿದ್ದೇವೆ. ಇದು ನಮ್ಮಲ್ಲಿಯೂ ಸಾಧ್ಯವಾಗಬಹುದಾದರೆ ನಾವೆಲ್ಲರೂ ಮಕ್ಕಳ ಹಿತದೃಷ್ಟಿಯಿಂದ ಒಂದಾಗಲೇಬೇಕು. ಇದು ಇಂದಿನ ಅನಿವಾರ್ಯ ಮತ್ತು ಅತ್ಯಂತ ಅಗತ್ಯವಾದ ಕೆಲಸವಾಗಿದೆ. ಶಾಲಾ ಶಿಕ್ಷಣದ ಸಾರ್ವತ್ರೀಕರಣ ಯಶಸ್ವಿಯಾಗಿ ಈಡೇರಿಸಬೆಕಾದರೆ, ರಾಷ್ಟ್ರೀಯ ಮಟ್ಟದಲ್ಲಿ ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಅಭಿಯಾನ ಯೋಜನೆಯ ಮೂಲಕ ಅಭಿವ್ಯಕ್ತ ಗೊಂಡಿರುವ ರಾಜಕೀಯ ಇಚ್ಚಾಶಕ್ತಿ ಕೆಳಸ್ಥರಗಳ ವರೆಗೆ ಹರಿದು ನಿಜವಾದ ಅರ್ಥದಲ್ಲಿ ಸಾಕಾರಗೊಳ್ಳಬೇಕಾಗಿದೆ. ಇದಕ್ಕಾಗಿ ರಾಜ್ಯದ ಮುಖ್ಯಮಂತ್ರಿಯವರನ್ನೊಳಗೊಂಡಂತೆ ಉಳಿದೆಲ್ಲಾ ಮಂತ್ರಿಮಹೋದಯರು, ಸಂಸದರು, ಶಾಸಕರು ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಚುನಾಯಿತ ಪ್ರತಿನಿಧಿಗಳು ಶಾಲಾ ಶಿಕ್ಷಣದ ಸಾರ್ವತ್ರೀಕರಣ ಪ್ರಕ್ರಿಯೆಗೆ ಅಗತ್ಯವಾದ ರಾಜಕೀಯ ಇಚ್ಚಾಶಕ್ತಿಯನ್ನು ಪ್ರಕಟಿಸುವುದರ ಮೂಲಕ ಪೂರಕವಾಗಿ ಕೆಲಸ ನಿರ್ವಹಿಸಿದಾಗ ಎಲ್ಲಾ ಅಡ್ಡಿ ಆತಂಕಗಳನ್ನು ಮೀರಿ ನಿಲ್ಲಬಹುದು. ಶಾಲಾ ಶಿಕ್ಷಣದ ಸಾರ್ವತ್ರೀಕರಣ ಬೇಡಿಕೆ ಸಾಕಾರ ಗೊಳ್ಳಬೇಕಾದರೆ ಸಮುದಾಯ ಅದರಲ್ಲೂ ವಿಶೇಷವಾಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ತಂದೆ ತಾಯಿ ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾಗಬೇಕು. ಶಾಲಾ ಅಭಿವೃದ್ಧಿಯ ವಿವಿಧ ಹಂತಗಳಾದ ಯೋಜನೆ, ಸಂಪನ್ಮೂಲ ಕ್ರೋಢಿಕರಣ, ಅನುಷ್ಠನಾ, ಅನುಪಾಲನೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳಲ್ಲಿ ಸಮುದಾಯ ಸಕ್ರಿಯವಾಗಿ ಭಾಗವಹಿಸುವಂತಾಗಬೇಕು. ಸಮುದಾಯದ ಭಾಗವಹಿಸುವಿಕೆ ಸಾಧ್ಯವಾಗಬೇಕಾದರೆ ಶಾಲಾ ಹಂತದಲ್ಲಿ ಪ್ರಜಾತಾಂತ್ರಿಕ ಸಾಂಸ್ಥಿಕ ಚೌಕಟ್ಟು ಅಸ್ತಿತ್ವದಲ್ಲಿರಬೇಕು. ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಕೇವಲ ಹೆಸರಿಗೆ ಮಾತ್ರ ಸೀಮಿತಗೊಳಿಸದೇ ಪ್ರಾಮಾಣಿಕವಾಗಿ ಪಾಲ್ಗೊಳ್ಳುವ ವಾತವರಣವನ್ನು ಸೃಷ್ಟಿಸಬೇಕು. ಅಧ್ಯಯನಗಳ ಪ್ರಕಾರ ಮಾಹಿತಿಯು ಸಮರ್ಪಕವಾಗಿ ಸಮುದಾಯಕ್ಕೆ ತಲಪದಿರುವುದು ಸಮುದಾಯದ ಪಾಲ್ಗೊಳ್ಳುವಿಕೆಗೆ ಒಂದು ಹಿನ್ನಡೆಯಾಗಿದೆ. ಜನರ ಸಬಲೀಕರಣದ ಪ್ರಮುಖ ಅಸ್ತ್ರವಾಗಿರುವ ಮಾಹಿತಿ ಜನಸಮುದಾಯವನ್ನು ತಲುಪದ ಹೊರತು ಜನರು ಸಾರ್ವತ್ರೀಕರಣ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ನಿರೀಕ್ಷಿಸುವುದು ತಪ್ಪಾಗುತ್ತದೆ. ಇದೇ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ ಶಾಲಾ ಶಿಕ್ಷಣದ ಸಾರ್ವತ್ರೀಕರಣ ಭಾಗವಾಗಿರುವ ಒಂದು ವರ್ಗವು ಸಮುದಾಯಕ್ಕೆ ಅಗತ್ಯ ಮಾಹಿತಿಯನ್ನು ನೀಡಲು ಹಿಂಜರಿಯುತ್ತಿದ್ದು, ಕೇವಲ ಮೇಲಿನ ಒತ್ತಾಯಗಳಿಗೆ ಮಣಿದು ಮಾಹಿತಿ ನೀಡಲು ಮುಂದಾದರು ಅಪೂರ್ಣ ಮಾಹಿತಿಯನ್ನು ನೀಡುತ್ತಿರುವುದು ಹಲವಾರು ಮೂಲಗಳಿಂದ ದೃಡಪಟ್ಟಿದೆ. ಇದಕ್ಕೆ ರಾಜಕೀಯ ಕಾರಣವೂ ಊಂಟು. ಆದ್ದರಿಂದ ಮಾಹಿತಿ ಅದರಲ್ಲೂ ಸರಿಯಾದ ಮಾಹಿತಿ ಒದಗಿಸುವುದು ನಮ್ಮ ಆದ್ಯಕರ್ತವ್ಯ ವಾಗಬೇಕು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯಲ್ಲಿರುವ ಎಲ್ಲಾ ಸದಸ್ಯರಿಗೆ ಪರಿಣಾಮಾಕಾರಿಯಾದ ತರಬೇತಿ ಸಿಗುವಂತಾಗಬೇಕು.ಸಾಮರ್ಥ್ಯಾಭಿವೃದ್ಧಿಯಿಂದ ಮಾತ್ರ ಸಬಲೀಕರಣ ಸಾಧ್ಯವೆಂಬುದು ನಾವು ನಮ್ಮ ಅನುಭವದಿಂದ ಕಂಡುಕೊAಡ ಸತ್ಯ. ಆದರೆ ನಮ್ಮ ಈಗಿನ ತರಬೇತಿಗಳು ತೋರಿಕೆಗಾಗಿ ತರಬೇತಿಗಳಾಗಿದ್ದು ನಿಜವಾದ ಅರ್ಥದಲ್ಲಿ ಅವು ನಿಷ್ಪಯೋಜಕವಾಗಿವೆ. ಜೊತೆಗೆ ಬಹುತೇಕ ತರಬೇತಿಗಳು ಶೈಕ್ಷಣಿಕ ವರ್ಷದ ಆರಂಭದಲ್ಲಿ ಸಿಗದೆ ವರ್ಷದ ಕೊನೆಯಲ್ಲಿ ಹಣವನ್ನು ಖರ್ಚು ಮಾಡಿದಕ್ಕಾಗಿ ರಶೀದಿಗಳನ್ನು ನೀಡುವ ತರಾತುರಿಯ ತರಬೇತಿಯಾಗಿವೆ. ಈ ವಿಚಾರದಲ್ಲಿ ಮೇಲಿನ ಮಾತುಗಳು ಕಹಿ ಎನಿಸಿದರೂ ಪ್ರಾಮಾಣಿಕವಾಗಿ ಚಿಂತಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ತರಬೇತಿಗಳು ತರಬೇತಿದಾರರು ಮತ್ತು ಶಿಬಿರಾರ್ಥಿಗಳನ್ನು ಸಬಲೀಕರಿಸುವುದರ ಮೂಲಕ ಕೆಳಹಂತದಲ್ಲಿ ಶಿಕ್ಷಣದ ಕಾರ್ಯಕ್ರಮಗಳನ್ನು ಪರಿಣಾಮಾಕಾರಿಯಾಗಿ ಜಾರಿಗೊಳಿಸಲು ಅಣಿಗೊಳಿಸಬೇಕಾಗಿದೆ. ಸಮುದಾಯ ಅದರಲ್ಲು ವಿಶೇಷವಾಗಿ ಬಡಮಕ್ಕಳ ತಂದೆ ತಾಯಂದಿರ ಬಗ್ಗೆ ನಮಗಿರುವ ಮನೋಧೋರಣೆ ಬದಲಾಗಬೇಕಾಗಿದೆ. ನೀತಿಯ ಭಾಗವಾಗಿ ಮತ್ತು ಕಾನೂನು ಬದ್ಧವಾಗಿ ಸಮುದಾಯದ ಭಾಗವಹಿಸುವಿಕೆಗೆ ರಾಜ್ಯದಲ್ಲಿ ನಿರ್ಧಿಷ್ಟ ನೀತಿ ಜಾರಿಯಲ್ಲಿದ್ದರು ಅದನ್ನು ಜಾರಿಗೊಳಿಸಬೇಕಾದ ಅಧಿಕಾರಿವರ್ಗ, ಕೆಳ ಹಂತದ ಸಿಬ್ಬಂದಿ ಸಮುದಾಯದ ಬಗ್ಗೆ ತಾತ್ಸಾರ ಮತ್ತು ‘ಇವರೇನು ಮಾಡಬಲ್ಲ್ಲರೆಂಬ’ ಧೋರಣೆಯನ್ನು ಹೊಂದಿದ್ದಾರೆ.ಈ ಧೋರಣೆ ಬದಲಾಗಲೇ ಬೇಕು. ಸಮುದಾಯದಲ್ಲಿ ನಮ್ಮ ನಂಬಿಕೆ ಬಲಗೊಳ್ಳಬೇಕು. ಅವರನ್ನು ಗಣನೆಗೆ ತೆಗೆದುಕೊಂಡು ನಮ್ಮೊಂದಿಗೆ ಕರದೊಯ್ಯುವ ‘´ಸಂಕಲ್ಪ ನಮ್ಮದಾಗಬೇಕು. ನಮ್ಮ ಅನುಭವದಲ್ಲಿ ಒಂದು ಮಾತಂತು ಸತ್ಯ. ಒಮ್ಮೆ ಸಮುದಾಯ ಮತ್ತು ಶಿಕ್ಷಕರಿಗೆ ಪರಿಸ್ಪರ ನಂಬಿಕೆ ಮತ್ತು ಗೌರವ ಬೆಳೆದಲ್ಲಿ ಸಮುದಾಯ ಶಾಲಾ ಶಿಕ್ಷಕರ ಬೆನ್ನುಲುಬಾಗಿ ನಿಂತರೆ ಶಿಕ್ಷಕರು ಸಮುದಾಯದ ಹಿತಚಿಂತಕರಾಗಿ ಮಾರ್ಗದರ್ಶಿಗಳಾಗಿ ಮತ್ತುಅಭಿವೃದ್ಧಿಯ ರೂವಾರಿಗಳಾಗಿ ನಿಲ್ಲುವರೆಂದರೆ ಅತಿಶಯೋಕ್ತಿಯಲ್ಲ ಈ ವಿಚಾರದಲ್ಲಿ ನಮಗೆ ಹಲವಾರು ನಿದರ್ಶನಗಳಿವೆ. ಆದ್ದರಿಂದ ಇರುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಸುಧಾರಿಸುವ ಕೆಲಸವಾಗಬೇಕೆ ಹೊರತು ಎಲ್ಲರೂ ವಿದ್ಯಾವಂತರಾಗಿರುವ, ಹಣವಂತರಾಗಿರುವ ಮತ್ತು ನಯ-ನಾಜೂಕಿನ ಸಮುದಾಯಕ್ಕಾಗಿ ಪರಿತಪಿಸುತ್ತಾ ಕೂರುವುದು ಸರಿಯಲ್ಲ. ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ದೃಷ್ಟಿಯಿಂದ ನಮ್ಮ ಸಮುದಾಯವೆಂದರೆ ಅವಿದ್ಯಾವಂತ, ಅರೆವಿದ್ಯಾವಂತ, ಕಡುಬಡವ, ಕೂಲಿಕಾರರ ಸಮುದಾಯ. ಅವರ ಜೊತೆ ನಾವು ಹೊಂದಿಕೊಳ್ಳಲೇಬೇಕು ಅವರನ್ನು ನಮ್ಮೊಂದಿಗೆ ಕೊಂಡೊಯ್ಯಲೇ ಬೇಕು. ಇಲ್ಲಿ ಯಾವುದೇ ಪರ‍್ಯಾಯವಿಲ್ಲ.ಪರ‍್ಯಾಯದ ಬಗ್ಗೆ ಚಿಂತಿಸಲು ಬಾರದು.
ಕೊನೆಯದಾಗಿ, ಪ್ರತಿಯೊಂದು ಚಟುವಟಿಕೆಯಲ್ಲಿ ಬದ್ಧತೆ ಪರಾದರ್ಶಕತೆ ಮತ್ತು ಜವಾಬ್ದಾರಿ ಶಿಕ್ಷಕ ವೃತ್ತಿಯ ಸಂಸ್ಕೃತಿಯಾಗಬೇಕು. ಶಿಕ್ಷಣ ಕ್ಷೇತ್ರ ಇದಕ್ಕೆ ಹೊರತಲ್ಲ ನಮ್ಮ ಶಿಕ್ಷಕರು ಪರಿಣಾಮಾಕಾರಿಯಾಗಿ ಮತ್ತು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದರ ಮೂಲಕ ನಿರ್ಧಿಷ್ಟ ಫಲಿತಾಂಶಗಳನ್ನು ಕಂಡುಕೊಳ್ಳಬೇಕು. ಇದಕ್ಕಾಗಿ ಬಾಹ್ಯ ಒತ್ತಡ ಅನಿವಾರ‍್ಯವಾಗಬಾರದು. ನಮ್ಮ ಸಮುದಾಯ ನಮಗೆ ಬೆಂಬಲವಾಗಿ ನಿಲ್ಲುವಂತಾಗಬೇಕು.

ಸ್ವ-ಯೋಜನೆ, ಸ್ವ ಅನುಷ್ಞಾನ, ಸ್ವ ಅನುಪಾಲನೆ, ಸ್ವ - ಮೌಲ್ಯಂಕನ, ಮತ್ತು ಸ್ವ ಕಲಿಕೆ ನಮ್ಮ ಕಾಯಕದ ಮೂಲ ಮಂತ್ರವಾಗಬೇಕು ಈ ಎಲ್ಲಾ ಹಂತಗಳಲ್ಲಿ ಸಮುದಾಯದ ಸಕ್ರಿಯ ಭಾಗವಹಿಸುವಿಕ ಮತ್ತು ಬೆಂಬಲ ಪ್ರತಿ ನಿತ್ಯದ ಆಧಾರದ ಮೇಲೆ ಸಿಗುವಂತಾಗಬೇಕು. ಈ ಎಲ್ಲಾ ವಿಚಾರಗಳಲ್ಲಿ ಶಿಕ್ಷಕರು ಮಾದರಿಯಾದಾಗ ಸಮುದಾಯದ ಭಾಗವಹಿಸುವಿಕೆ ರಚನಾತ್ಮಕವಾಗಿರುತ್ತದೆ. ತನ್ಮೂಲಕ ಸಮುದಾಯದ ಪಾಲ್ಗೊಳ್ಳುವಿಕೆ ಶಾಲಾ ಶಿಕ್ಷಣ
ಸಾರ್ವತ್ರೀಕರಣವೆಂಬ ಒಂಟಿ ಚಕ್ರದ ಗಾಡಿಗೆ ಮತ್ತೊಂದು ಚಕ್ರವಾಗುತ್ತದೆ. ಗಾಡಿಯು ಮುಂದೆ ಸಾಗುತ್ತದೆ. ಮಕ್ಕಳ ಹಿತದೃಷ್ಟಿಯಿಂದ ಗಾಡಿ ಮುಂದೆ ಸಾಗಲೇ ಬೇಕು. 

ಮುಗಿಸುವ ಮುನ್ನ ಅಂಬೇಡ್ಕರ್ ರವರ ಒಂದು ಮಾತು ಪ್ರಸ್ತುತವೆನಿಸುತ್ತದೆ. 'ದೇಶಕಟ್ಟುವ ಕೆಲಸ ನಡೆಯುವುದು ಸಣ್ಣ ಮನಸ್ಸಿನ ದೊಡ್ಡ ಜನರಿಂದಲ್ಲ ದೊಡ್ಡ ಮನಸ್ಸಿನ ಸಣ್ಣ ಜನರಿಂದ‛.ನಾವು ದೊಡ್ಡ ಮನಸ್ಸಿನ ಸಣ್ಣ ಜನರಾಗಿ ಸುಭದ್ರ ಶಿಕ್ಷಣ ವ್ಯವಸ್ಥೆ ಕಟ್ಟೋಣ ಮುಗ್ಧ ಮಕ್ಕಳಿಗೆ ನ್ಯಾಯ ಒದಗಿಸೋಣ.


ಪ್ರಶ್ನೆಗಳು ಹಾಗೂ ಉತ್ತರಗಳು.

1 ಎಸ್ ಡಿ ಎಂ ಸಿ ಸದಸ್ಯರ ಗರಿಷ್ಠ ಅಧಿಕಾರಾವಧಿ ಎಷ್ಟು?
ಉ; 03 ವರ್ಷಗಳು


2 ಸದಸ್ಯನು ತನ್ನ ಸದಸ್ಯತ್ವವನ್ನು ಕಳೆಕುಕೊಳ್ಳುವ ಸಂದರ್ಭಗಳಾವುವು?
ಉ:ಹಣಕಾಸಿನ ದುರುಪಯೋಗ ಮಾಡಿಕೊಂಡಾಗ ಸತತ ಮೂರು ಸಭೆಗಳಿಗೆ ಗೈರುಹಾಜರಾದಾಗ ಮತ್ತು ಅವನ ಮಗು ದಾಖಲಾತಿಯನ್ನು ಮುಂದುವರೆಸದಿದ್ದಲ್ಲಿ.


3 ಅಧ್ಯಕ್ಷರನ್ನು ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬಹುದೇ?
ಉ: ಮಂಡಿಸಬಹುದು


4 ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಎಸ್ ಡಿ ಎಂ ಸಿ ಸಭೆ ಕರೆಯಬಹುದೇ?
ಉ: ಕನಿಷ್ಠ ಒಂದು ಬಾರಿ ಸಭೆ ಕರೆಯಬೇಕು ಮತ್ತು ಅಗತ್ಯ ಬಿದ್ದಾಗಲೆಲ್ಲಾ ಸಭೆ ಕರೆಯಬಹುದು


5 ಶಾಲಾಭಿವೃದ್ಧಿ ಯೋಜನೆ ತಯಾರಿಯಲ್ಲಿ ಎಸ್ ಡಿ ಎಂ ಸಿ ಸದಸ್ಯರಯ ಪಾಲ್ಗೊಳ್ಳಬಹುದೇ?
ಉ: ಹೌದು

ಉ: ಹೌದು

ಉ: ಹೌದು

ಉ: ಅಗತ್ಯವಿದ್ದರೆ ಮುಖ್ಯ ಶಿಕ್ಷಕರ ಗಮನಕ್ಕೆ ತಂದು ಪಾಠಬೋಧನೆ ಮಾಡಬಹುದು.


9 ಎಸ್ ಡಿ ಎಂ ಸಿ ಸಂವಿಧಾನಾತ್ಮಕ ಸಂಸ್ಥೆಯೇ?
ಉ: ಹೌದು

ಉ: ಹೌದು.


11 ಶಾಲೆಯಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗಳು, ಆರ್ಥಿಕ ಚಟುವಟಿಕೆಗಳಿಗೆ ಎಸ್ ಡಿ ಎಂ ಸಿ ಅನುಮೋದನೆ ಕಡ್ಡಾಯವೇ?
ಉ: ಹೌದು.

ಉ: ಹೌದು

ಉ: ಹೌದು. ಆದರೆ ಬಹುಮತವನ್ನು ಪರಿಗಣಿಸುವಾಗ ಚುನಾಯಿತ ಮತ್ತು ಪದನಿಮಿತ್ತ ಸದಸ್ಯರನ್ನು ಮಾತ್ರ ಪರಿಗಣಿಸಬೇಕು.

ಉ: ಇಲ್ಲ. ಶಾಲಾ ಮುಖ್ಯಸ್ಥರು ಮಾಡುವರು.

ಉ: ಇಲ್ಲ

ಉ: ಹೌದು.

ಉ: ಹಾಜರಾಗಬಹುದು.

ಉ: ಇಲ್ಲ

ಉ: ಹೌದು

ಉ: ಹೌದು


ಸಂಗ್ರಹ ; ಸಮಗ್ರ ಸಾಹಿತ್ಯ (2018-19)


................... END .................