ಪ್ರೇರಣಾ ಕಾರ್ಯಕ್ರಮ :
2005 ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಪ್ರಕಾರ ಜ್ಞಾನವನ್ನು ಪಡೆದುಕೊಳ್ಳಲು ಮತ್ತು ವಿದ್ಯಾರ್ಥಿಗಳ ಸವಾಂಗೀಣ ಅಭಿವೃದ್ಧಿ ಯಾಗುವಲ್ಲಿ ಅವರು ಸೃಜನಶೀಲತೆಯೊಂದಿಗೆ ತೊಡಗುವಿಕೆ ಮುಖ್ಯವಾಗಿದೆ. ಪಠ್ಯಕ್ರಮದ ಆಚರಣೆಗಳಲ್ಲಿ ಮಕ್ಕಳ ಆಲೋಚನೆಗಳಿಗೆ, ಅವರ ಕುತೂಹಲ ಮತ್ತು ಪ್ರಶ್ನೆಗಳಿಗೆ ಧ್ವನಿಯೆತ್ತಲು ಸಮರ್ಪಕ ಅವಕಾಶ ಒದಗಿಸುವಂತೆ ಪ್ರಸ್ತಾಪಿಸಿದೆ. ಶಾಲೆಗಳಲ್ಲಿ ಭಾಷೆ ಮತ್ತು ಗಣಿತದ ಕಲಿಕೆಯ ಕುರಿತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ರಲ್ಲಿ ಭಾಷಾ ಕೌಶಲಗಳ ಬೆಳವಣಿಗೆ, ಶಾಲಾ ವಿಷಯಗಳ ಕಲಿಕೆ, ಶಿಸ್ತು, ಚೌಕಟ್ಟಿನ ಆಚೆಗೆ ಮಾತನಾಡುವುದು ಹಾಗೂ ಆಲಿಸುವುದು, ಓದುವುದು ಮತ್ತು ಬರೆಯುವುದು, ಮೂಲ ಶಿಕ್ಷಣದ ತರಗತಿಗಳಿಂದ ಪ್ರೌಢಶಿಕ್ಷಣದ ತರಗತಿಗಳ ವರೆಗೆ ಮಕ್ಕಳ ಜ್ಞಾನವನ್ನು ಕಟ್ಟಿಕೊಳ್ಳುವಿಕೆಯಲ್ಲಿ ಭಾಷೆಯ ಅಡಿಪಾಯದ ಪಾತ್ರವನ್ನು ಗುರುತಿಸಿದೆ. ಈ ನಿಟ್ಟಿನಲ್ಲಿ ಪ್ರೇರಣಾ ಕಾರ್ಯಕ್ರಮವು ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸಲು ಮತ್ತು ಇನ್ನಷ್ಟು ದೃಢಪಡಿಸಲು‚ ಪುರಸ್ಕಾರ ಮತ್ತು ಪ್ರೇರಕಗಳ‛ ಪ್ರಶಂಸೆಯ ಬುನಾದಿಯೊಂದಿಗೆ ನಿರಂತರವಾಗಿ ಶಾಲೆಗೆ ಹಾಜರಾಗಲು, ತರಗತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು, ಅವಶ್ಯವಿರುವ ನಿರ್ಭಯ ವಾತಾವರಣವನ್ನು ಸಹಕಾರಿಯಾಗಿದೆ.
ಉದಾಹರಣೆಗೆ: ಮೂರು ಬಣ್ಣದ ಸ್ಟಾರ್ ಗಳನ್ನು ನೀಡುವುದು.
1) ಹಸಿರು ಸ್ಟಾರ್ – ವೈಯಕ್ತಿಕ ಸ್ವಚ್ಛತೆ, ತರಗತಿ ಸ್ವಚ್ಛತೆ, ಶಾಲಾ ಆವರಣದ ಸ್ವಚ್ಛತೆ, ಶಿಸ್ತು ಮತ್ತು ಪರಿಸರದ ಬಗೆಗಿನ ಕಾಳಜಿಗಾಗಿ.
2) ಬೆಳ್ಳಿ ಬಣ್ಣದ ಸ್ಟಾರ್ – ಕಲಿಕಾ ಚಟುವಟಿಕೆಗಳು, ಭಾಗವಹಿಸುವಿಕೆ ಮತ್ತು ಮನೆ ಪಾಠಗಳನ್ನು ನಿರ್ವಹಣೆಗಾಗಿ.
3) ಗುಲಾಬಿ ಬಣ್ಣದ ಸ್ಟಾರ್ - ಸಹಪಠ್ಯದ ಚಟುವಟಿಕೆಗಳಲ್ಲಿ ಉತ್ತಮ ಸಾಧನೆಗಾಗಿ.
1) ಹಸಿರು ಸ್ಟಾರ್ – ವೈಯಕ್ತಿಕ ಸ್ವಚ್ಛತೆ, ತರಗತಿ ಸ್ವಚ್ಛತೆ, ಶಾಲಾ ಆವರಣದ ಸ್ವಚ್ಛತೆ, ಶಿಸ್ತು ಮತ್ತು ಪರಿಸರದ ಬಗೆಗಿನ ಕಾಳಜಿಗಾಗಿ.
2) ಬೆಳ್ಳಿ ಬಣ್ಣದ ಸ್ಟಾರ್ – ಕಲಿಕಾ ಚಟುವಟಿಕೆಗಳು, ಭಾಗವಹಿಸುವಿಕೆ ಮತ್ತು ಮನೆ ಪಾಠಗಳನ್ನು ನಿರ್ವಹಣೆಗಾಗಿ.
3) ಗುಲಾಬಿ ಬಣ್ಣದ ಸ್ಟಾರ್ - ಸಹಪಠ್ಯದ ಚಟುವಟಿಕೆಗಳಲ್ಲಿ ಉತ್ತಮ ಸಾಧನೆಗಾಗಿ.
• ಸಹಪಾಠಿ ಕಲಿಕೆಯ ಸಿದ್ಧಾಂತದೊಂದಿಗೆ ಸುವೇಗ, ಸುಮೇರು ಮತ್ತು ರೈನ್‌ಬೋ ಅಭ್ಯಾಸ ಪುಸ್ತಕಗಳ ಸಹಾಯದಿಂದ ವಿದ್ಯಾರ್ಥಿಗಳಿಗೆ ಬರೆಯುವ ಕೌಶಲ್ಯವನ್ನು ಹೆಚ್ಚಿಸುವುದು, ದಿನನಿತ್ಯದ ಸನ್ನಿವೇಶಗಳಿಗೆ ಸಂಬಂಧಿಸಿದ ಲೆಕ್ಕಾಚಾರಗಳನ್ನು ಬಿಡಿಸುವ ಸಾಮರ್ಥ್ಯ ಮತ್ತು ಶಬ್ದಕೋಶ, ವ್ಯಾಕರಣ, ಭಾಷೆಯ ಬಳಕೆಯನ್ನು ಉತ್ತಮಪಡಿಸಿಕೊಳ್ಳಲು ಸಹಕಾರಿಯಾಗಿದೆ.
• ಕಲಿಕಾ ಪ್ರಯಾಣ - ಚಿತ್ರ ಪ್ರಗತಿ ನೋಟದ‛ ಹಾದಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಗುರುತಿಸಿ, ಪೋಷಕರಿಗೆ ನಿರ್ದಿಷ್ಟ ಹಿಮ್ಮಾಹಿತಿಯನ್ನು ನೀಡುವಲ್ಲಿ ಸಹಕಾರಿಯಾಗಿದೆ.
• ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ವೃದ್ಧಿಸಲು ಶಿಕ್ಷಕರ ಮಾರ್ಗದರ್ಶನದೊಂದಿಗೆ ಜವಾಬ್ದಾರಿ ಮನೋಭಾವವನ್ನು ಬೆಸೆಯುವ ನಿಟ್ಟಿನಲ್ಲಿ‚ ಪ್ರೇರಣಾ ಕ್ಲಬ್‛ ಅನ್ನು ರಚಿಸಿರುವುದು ಈ ಕಾರ್ಯಕ್ರಮದ ಒಂದು ಅಂಗವಾಗಿದೆ
.................. END ..................