ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು:
(ಕೆ.ಎಸ್.ಕ್ಯು.ಎ.ಎ.ಸಿ) ನ ಉಗಮದ ಹಿನ್ನೆಲೆ:-
ಕೆ.ಎಸ್.ಕ್ಯು.ಎ.ಎ.ಸಿ ಯ ಉದ್ದೇಶಗಳು:-
• ರಾಜ್ಯಾದ್ಯಂತ ಇರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಮೌಲ್ಯಾಂಕನಕ್ಕೆ ಒಳಪಡಿಸಿ ಅಂಗೀಕರಿಸುವುದು.
• ಶಾಲಾ ಗುಣಮಟ್ಟ ಮತ್ತು ಕಲಿಕಾ ಪ್ರಕ್ರಿಯೆಯ ಗುಣಮಟ್ಟವನ್ನು ಉತ್ತಮಪಡಿಸಲು ಪ್ರಚೋದಿಸುವುದು.
• ಶಾಲಾ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಭಾಗೀದಾರರ ಭಾಗವಹಿಸುವಿಕೆಯನ್ನು ದೃಢೀಕರಿಸುವುದು.
• ಶಾಲೆಯಲ್ಲಿನ ಎಲ್ಲಾ ವಿದ್ಯಾರ್ಥಿಗಳ ಕಲಿಕಾ ಸಾಧನೆಯನ್ನು ಮಾಪನ ಮಾಡಿ, ಅವುಗಳನ್ನು ಮತ್ತಷ್ಟು ಉತ್ತಮ ಪಡಿಸಲು ಮಾರ್ಗದರ್ಶನವನ್ನು ನೀಡುವುದು.
ಕೆ.ಎಸ್.ಕ್ಯು.ಎ.ಎ.ಸಿ ಯ ಕಾರ್ಯಗಳು:-
1. ಭೌತಿಕ ಪರಿಸರ-20%
ಕಲಿಕಾ ಪರಿಸರವನ್ನು ಮಹತ್ವದ ಮೂರು ಘಟಕಗಳಾಗಿ ವರ್ಗೀಕರಿಸಲಾಗಿದ್ದು, ಅವು ಈ ಕೆಳಗಿನಂತಿದೆ.
ಈ ಎಲ್ಲಾ ಕಾರಣಗಳಿಂದ ಶಾಲೆಯ ಶ್ರೇಯೋಭಿವೃದ್ಧಿಯಲ್ಲಿ ನಾವಿನ್ಯಯುತ ಚಟುವಟಕೆಗಳ ಅವಶ್ಯಕತೆ ಇದೆ. ಪರಿಷತ್ತು ತನ್ನ ಮೌಲ್ಯಾಂಕನದಲ್ಲಿ ನಾವಿನ್ಯಯುತ ಚಟುವಟಿಕೆ ಕ್ಷೇತ್ರವನ್ನು ಅಳವಡಿಸಿಕೊಂಡಿದ್ದು ಶೇ. 5 WAIGHTAGE ನೀಡಿದೆ.
(ಕೆ.ಎಸ್.ಕ್ಯು.ಎ.ಎ.ಸಿ) ನ ಉಗಮದ ಹಿನ್ನೆಲೆ:-
2005-06 ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಗುಣಮಟ್ಟವನ್ನು ನಿರ್ಧರಿಸಲು ಕರ್ನಾಟಕ ಸರ್ಕಾರವು ‘’ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಸಂಸ್ಥೆ’’ (ಕೆ.ಎಸ್.ಕ್ಯು.ಎ.ಒ) ಯನ್ನು ಹುಟ್ಟುಹಾಕಿತು. ಈ ಸಂಸ್ಥೆಯು 2008-09 ನೇ ಸಾಲಿನವರೆಗೂ ಪ್ರತಿ ವರ್ಷವೂ ವಿವಿಧ ತರಗತಿಗಳ ಎಲ್ಲಾ ವಿದ್ಯಾರ್ಥಿಗಳ ಮೌಲ್ಯಾಂಕನ ಮಾಡುವುದರ ಮೂಲಕ ಶಾಲೆಯ ಕಲಿಕಾ ಗುಣಮಟ್ಟವನ್ನು ನಿರ್ಧರಿಸುತಿತ್ತು. ಶಾಲೆ, ಬ್ಲಾಕ್, ಜಿಲ್ಲೆ ಹಾಗೂ ರಾಜ್ಯ ಹಂತಗಳ ಟೆಂಪ್ಲೇಟ್ಸ್ ಗಳನ್ನು ರಚಿಸಿ ಎಲ್ಲಾ ಹಂತಕ್ಕೂ ನೀಡಲಾಗುತ್ತಿತ್ತು. ಆಯಾ ಹಂತಗಳಲ್ಲಿ ವಿಶ್ಲೇಷಣಾತ್ಮಕ ವರದಿಗಳನ್ನು ರಚಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿತ್ತು. ಕೆ.ಎಸ್.ಕ್ಯು.ಎ.ಒ ನ ಈ ಕಾರ್ಯದಿಂದ ಶಿಕ್ಷಣ ವ್ಯವಸ್ಥೆಯಲ್ಲಿ, ಕಲಿಕಾ ಪ್ರಕ್ರಿಯೆಯಲ್ಲಿ, ಪಠ್ಯವಸ್ತುವಿನಲ್ಲಿ ಇರುವ ಸಬಲತೆ (ಒಳ್ಳೆಯ ಅಂಶಗಳು) ಹಾಗೂ ದುರ್ಬಲತೆಗಳ ಅರಿವುಂಟಾದ ಪರಿಣಾಮವಾಗಿ ಪರಿಹಾರ ಬೋಧನೆ, SAP, CAP ನಂತಹ ಕಾರ್ಯಕ್ರಮಗಳು ಜಾರಿಯಲ್ಲಿ ಬಂದವು.
ಕೆ.ಎಸ್.ಕ್ಯು.ಎ.ಒ ಸಂಸ್ಥೆಯು ಕಲಿಕಾ ಸಾಧನೆಯೊಂದರಿಂದಲೇ ಶಾಲೆಯ ಗುಣಮಟ್ಟವನ್ನು ನಿರ್ಧರಿಸುತ್ತಿರುವ ಕ್ರಮವನ್ನು ಅನೇಕ ಶಿಕ್ಷಣ ತಜ್ಞರು, ಎನ್.ಜಿ.ಒ ಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಪ್ರಶ್ನಿಸುತ್ತಾ ಕಲಿಕಾ ಸಾಧನೆಯೊಂದರಿಂದಲೇ ಶಾಲೆಯ ಸಮಗ್ರ ಸಾಧನೆಯನ್ನು ನಿರ್ಧರಿಸಲು ಸಾಧ್ಯವಿಲ್ಲ. ಅದೊಂದನ್ನೇ ಮಾನದಂಡವಾಗಿ ಒಪ್ಪಿಕೊಳ್ಳಲು ಆಗದು. ಕಲಿಕೆಯ ಸಾಧನೆಯು ಶಾಲಾ ಸನ್ನಿವೇಶದಲ್ಲಿನ ವಿವಿಧ ಅಂಶಗಳಿಂದ ಪ್ರಭಾವಿಸಲ್ಪಟ್ಟಿದ್ದು ಮತ್ತು ಬದಲಾವಣೆ ಹೊಂದುತ್ತಲೇ ಇರುತ್ತದೆ. ಶಾಲೆಯೊಂದು ಸಮುದಾಯ ಕೇಂದ್ರಿತ ಪ್ರಜಾಸತ್ತಾತ್ಮಕ ವ್ಯವಸ್ಥೆಯಾಗಿದ್ದು, ಕಲಿಕೆಯ ಸಾಧನೆಯಲ್ಲಿ ವಿವಿಧ ಭಾಗೀದಾರರ ಒಲವು ಮತ್ತು ಸಹಭಾಗಿತ್ವ ಅಗತ್ಯವಾಗಿದೆ. ಶಾಲೆಯೊಂದು ಸಂಸ್ಥೆಯಾಗಿರುವುದರಿಂದ ಅಲ್ಲಿನ ಆಡಳಿತಾತ್ಮಕ, ಶೈಕ್ಷಣಿಕ, ನಾಯಕತ್ವ ಹಾಗೂ ಸಮುದಾಯ ಆಧಾರಿತ ಆಯಾಮಗಳು ಪ್ರಗತಿಯ ಹೆಜ್ಜೆಯಲ್ಲಿ ಮುಖ್ಯವೆನಿಸಿಕೊಳ್ಳುತ್ತದೆ. ಸಂಪನ್ಮೂಲಗಳ ಕ್ರೋಢಿಕರಣ ಮತ್ತು ಅದರ ಸದ್ಭಳಕೆ, ಕಲಿಕೆಯ ಸಾಧನೆಯೊಂದಿಗೆ ನಿಕಟ ಸಂಬಂಧವನ್ನು ಹೊಂದಿರುತ್ತದೆ. ಈ ದೃಷ್ಟಿಕೋನದಿಂದ ವಿಚಾರಿಸಿದಾಗ ಇಡೀ ಶಾಲೆಯನ್ನು ಒಂದು INTEGRATED ಘಟಕ ಎಂದು ಪರಿಗಣಿಸಿ ಬೇರೆ ಬೇರೆ ಆಯಾಮಗಳಿಂದ ಶಾಲೆಯನ್ನು ಮೌಲ್ಯಾಂಕನಕ್ಕೊಳಪಡಿಸಿ ಶಾಲೆಯ ಗುಣಮಟ್ಟವನ್ನು ಅಳೆಯಬೇಕು ಎಂಬ ವಿಚಾರಧಾರೆಯ ಫಲಶೃತಿಯೇ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಸಂಸ್ಥೆ (KSQAO).
KSQAO ತನ್ನ ರೂಪುರೇಷೆಗಳನ್ನು ಬದಲಾಯಿಸಿಕೊಂಡು 2011-12 ರಲ್ಲಿ ನೋಂದಣಿ ಸಂಖ್ಯೆ: ಡಿ.ಆರ್.ಬಿ- ಎನ್.ಎಸ್.ಓ.ಆರ್:318, ದಿನಾಂಕ: 16/11/2011 ರಲ್ಲಿ ಕರ್ನಾಟಕ ಶಾಲಾ ಗುಣಮಟ್ಟ ಮತ್ತು ಅಂಗೀಕರಣ ಷರಿಷತ್ತಾಗಿ (ಕೆ.ಎಸ್.ಕ್ಯು.ಎ.ಎ.ಸಿ) ಒಂದು ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಂಡಿದೆ. NAAC (National Assessment and Accreditation council) ನ ಕಾರ್ಯ ಚಟುವಟಿಕೆಗಳನ್ನು ಅಭ್ಯಸಿಸಿ, ಅದೇ ಮಾದರಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅನುಗುಣವಾಗಿ ಪರಿಷತ್ತು ತನ್ನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡಿದೆ.
ಕೆ.ಎಸ್.ಕ್ಯು.ಎ.ಎ.ಸಿ ಯ ಉದ್ದೇಶಗಳು:-
• ರಾಜ್ಯಾದ್ಯಂತ ಇರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಮೌಲ್ಯಾಂಕನಕ್ಕೆ ಒಳಪಡಿಸಿ ಅಂಗೀಕರಿಸುವುದು.
• ಶಾಲಾ ಗುಣಮಟ್ಟ ಮತ್ತು ಕಲಿಕಾ ಪ್ರಕ್ರಿಯೆಯ ಗುಣಮಟ್ಟವನ್ನು ಉತ್ತಮಪಡಿಸಲು ಪ್ರಚೋದಿಸುವುದು.
• ಶಾಲಾ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಭಾಗೀದಾರರ ಭಾಗವಹಿಸುವಿಕೆಯನ್ನು ದೃಢೀಕರಿಸುವುದು.
• ಶಾಲೆಯಲ್ಲಿನ ಎಲ್ಲಾ ವಿದ್ಯಾರ್ಥಿಗಳ ಕಲಿಕಾ ಸಾಧನೆಯನ್ನು ಮಾಪನ ಮಾಡಿ, ಅವುಗಳನ್ನು ಮತ್ತಷ್ಟು ಉತ್ತಮ ಪಡಿಸಲು ಮಾರ್ಗದರ್ಶನವನ್ನು ನೀಡುವುದು.
ಕೆ.ಎಸ್.ಕ್ಯು.ಎ.ಎ.ಸಿ ಯ ಕಾರ್ಯಗಳು:-
ಪರಿಷತ್ತು ಮೌಲ್ಯಾಂಕನದ ಮೂಲಕ ಶಾಲೆಯ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಒರೆಹಚ್ಚುವುದರ ಜೊತೆಯಲ್ಲಿ, ಭೌತಿಕ ಪರಿಸರ, ಕಲಿಕಾ ಪರಿಸರ, ನಾಯಕತ್ವ, ಸಮುದಾಯದಲ್ಲಿ ಭಾಗವಹಿಸುವಿಕೆ, ನಾವಿನ್ಯಯುತ ಚಟುವಟಿಕೆಗಳು ಈ ಐದು ಕ್ಷೇತ್ರಗಳಡಿಯಲ್ಲಿ ಸೂಚಕಗಳು ಹಾಗೂ ಉಪಸೂಚಕಗಳನ್ನು ಅಳವಡಿಸಿ ಶಾಲೆಗಳ ಮೌಲ್ಯಾಂಕನ ಮಾಡಿ ಗ್ರೇಡ್‌ಗಳನ್ನು ನೀಡುತ್ತಿದೆ. ಶಾಲೆಗಳ ಸಮಗ್ರ ಮೌಲ್ಯಾಂಕನ ಹಾಗೂ ಅಂಗೀಕರಣ ಕಾರ್ಯಕ್ಕಾಗಿ ಪರಿಷತ್ತು ತನ್ನದೇ ಆದ ಬಾಹ್ಯ ಮೌಲ್ಯಾಂಕನಕಾರರ ತಂಡವನ್ನು ಹೊಂದಿತ್ತು.
ಪರಿಷತ್ತು ಸಮಗ್ರ ಮೌಲ್ಯಾಂಕನದಲ್ಲಿ 5 ಕ್ಷೇತ್ರಗಳನ್ನು ಅಳವಡಿಸಿಕೊಂಡಿದ್ದು, ತರ್ಕಬದ್ಧವಾಗಿ ಯೋಚಿಸಿ ಪ್ರತಿ ಕ್ಷೇತ್ರಕ್ಕೂ ನಿರ್ದಿಷ್ಟವಾದ WAIGHTAGE ನೀಡಿದೆ.
ಶಾಲೆಯು ಔಪಚಾರಿಕ ಶಿಕ್ಷಣಕ್ಕೆ ಕೇಂದ್ರವಾಗಿದೆ. ಕಾರಣ ವಿದ್ಯಾರ್ಥಿ ಗಳನ್ನು ಆಕರ್ಷಿಸುವ, ಮನ ಪರಿವರ್ತಿಸುವ, ಕಲಿಕೆಯನ್ನು ಹುಟ್ಟು ಹಾಕುವ, ಜ್ಞಾನ ಕಟ್ಟಿಕೊಳ್ಳಲು ಸಹಕರಿಸುವ ಪರಿಸರ ಶಾಲೆಯಲ್ಲಿ ಇರಬೇಕಾದದ್ದು ಅತ್ಯವಶ್ಯಕ. ಶಾಲೆಯು ವಿದ್ಯಾರ್ಥಿಗಳಿಗೆ ಸಂತೋಷದಾಯಕ ಕಲಿಕೆಯನ್ನು ಒದಗಿಸಬೇಕು ಹಾಗೂ ವಿದ್ಯಾರ್ಥಿಗಳ ಸಂಪೂರ್ಣ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕು. ಶಾಲೆಯ ಭೌತಿಕ ಪರಿಸರವು ಪರಿಣಾಮಕಾರಿಯಾದ ಕಲಿಕೆಯಾಗುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಶಾಲೆಯ ಆಂತರಿಕ ಹಾಗೂ ಬಾಹ್ಯ ಗುಣಮಟ್ಟವು ಶಾಲೆಯ ಭೌತಿಕ ಪರಿಸರವನ್ನು ಅವಲಂಬಿಸಿರುತ್ತದೆ. ಕಲಿಕಾ ಸ್ನೇಹಿ ಪರಿಸರ, ಬೋಧನಾ ಕಲಿಕಾ ಸಾಮಗ್ರಿಗಳು, ಅತ್ಯುತ್ತಮ ಪಾಠೋಪಕರಣ ಹಾಗೂ ಪೀಠೋಪಕರಣಗಳನ್ನು ಹೊಂದಿರುವಂತಹ ಸುಸಜ್ಜಿತ ತರಗತಿ ಕೋಣೆ, ಶಾಲೆಯ ಹೊರ ಆವರಣ, ಆಟದ ಮೈದಾನ, ಗ್ರಂಥಾಲಯ, ಪ್ರಯೋಗಾಲಯ ಮೊದಲಾದವುಗಳು
ಗುಣಮಟ್ಟದ ಕಲಿಕೆಗೆ ಕಾರಣೀಭೂತ ವಾಗಿವೆ. ಕೆಲವು ಪ್ರತ್ಯಕ್ಷವಾಗಿ ಇನ್ನೂ ಕೆಲವು ಪರೋಕ್ಷವಾಗಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಪಠ್ಯವಸ್ತು ಮಾತ್ರ ಕಲಿಕೆಗೆ ಉತ್ತಮ ಕೊಡುಗೆ ನೀಡುತ್ತದೆ ಎಂದು ಭಾವಿಸಿದರೆ ಅದು ತಪ್ಪು ಕಲ್ಪನೆಯಾಗಿದೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಸ್ಥಿರತೆ ಹಾಗೂ ಸಾಮಾಜಿಕ ಅಭಿವೃದ್ಧಿಯನ್ನು ಭೌತಿಕ ಸೌಲಭ್ಯಗಳು ಒದಗಿಸುತ್ತವೆ. ಈ ಎಲ್ಲಾ ಕಾರಣದಿಂದ ಪರಿಷತ್ತು ತನ್ನ ಮೌಲ್ಯಾಂಕನದಲ್ಲಿ ಭೌತಿಕ ಪರಿಸರ ಹಾಗೂ ಸೌಲಭ್ಯಗಳು ಎಂಬ ಕ್ಷೇತ್ರವನ್ನು
ಅಳವಡಿಸಿಕೊಂಡಿದೆ ಹಾಗೂ 20% WAIGHTAGE ನೀಡಿದೆ.
2. ಕಲಿಕಾ ಪರಿಸರ-60%
ಗುಣಾತ್ಮಕ ಕಲಿಕೆ ಪರಿಣಾಮಕಾರಿಯಾದ ತರಗತಿ ಪರಿಸರವನ್ನು ನಿರೀಕ್ಷಿಸುತ್ತದೆ. ವಿದ್ಯಾರ್ಥಿಗಳ ಕಲಿಕಾ ಸಾಧನೆಯು ಶಾಲೆಯ ಒಟ್ಟಾರೆ ಗುಣಮಟ್ಟದ ಮೇಲೆ ಪ್ರತಿಬಿಂಬಿಸುತ್ತದೆ. ಕಲಿಕಾ ಪರಿಸರವು ಈ ಕೆಳಗಿನ ಕಾರಣಗಳಿಂದಾಗಿ ಮಹತ್ವದ್ದು ಎಂದು ನಿರ್ಧರಿಸಲ್ಪಟ್ಟಿದೆ.
• ಒಳ್ಳೆಯ ಕಲಿಕಾ ಪರಿಸರವು ವಿದ್ಯಾರ್ಥಿಗಳ ಕಲಿಕೆಯಲ್ಲಿ ಮನಸ್ಸನ್ನು ಕೇಂದ್ರೀಕರಿಸುವ ಶಕ್ತಿಯನ್ನು ಮತ್ತು ವಿದ್ಯಾರ್ಥಿಗಳ ಗ್ರಹಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
• ಕಲಿಕಾ ಪರಿಸರವು ವಿದ್ಯಾರ್ಥಿಯ ಶೈಕ್ಷಣಿಕ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದು.
• ಕಲಿಕಾ ಪರಿಸರದಲ್ಲಿ ಕಲಿಕಾ ಪ್ರಕ್ರಿಯೆ ಹಾಗೂ ಮೌಲ್ಯಾಂಕನ ಪ್ರಕ್ರಿಯೆಯೂ ಸಹ ಮಹತ್ವದ್ದಾಗಿದೆ.
• ಕಲಿಕಾ ಪರಿಸರವು ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿರುತ್ತದೆ.
ಕಲಿಕಾ ಪರಿಸರವನ್ನು ಮಹತ್ವದ ಮೂರು ಘಟಕಗಳಾಗಿ ವರ್ಗೀಕರಿಸಲಾಗಿದ್ದು, ಅವು ಈ ಕೆಳಗಿನಂತಿದೆ.
a) ಬೋಧನಾ ಪ್ರಕ್ರಿಯೆ,
b) ಕಲಿಕಾ ಪ್ರಕ್ರಿಯೆ,
c) ಮೌಲ್ಯಮಾಪನ ಪ್ರಕ್ರಿಯೆ.
a) ಬೋಧನಾ ಪ್ರಕ್ರಿಯೆ-20%
ಬೋಧನಾ ಪ್ರಕ್ರಿಯೆಯು ತರಗತಿ ಕೋಣೆಯಲ್ಲಿ ವಿಷಯವನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸುವ ಶಿಕ್ಷಕರ ಸಾಮರ್ಥ್ಯದ ಮೇಲೆ ನಿಂತಿದೆ. ಇದು ಶಿಕ್ಷಕರ ಸಾಮಾನ್ಯ ಜ್ಞಾನ, ವಿಷಯ ಜ್ಞಾನ, ಸಂವಹನ ಕೌಶಲ್ಯ, ಕಲಿಕಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಿಕೆ, ಪ್ರಯೋಗ ಮಾಡುವ ತಂತ್ರ, ತರಗತಿಯಲ್ಲಿ ವಿದ್ಯಾರ್ಥಿಗಳ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವ ನೈಪುಣ್ಯತೆ ಈ ಮೊದಲಾದವುಗಳು ಬೋಧನೆಯಲ್ಲಿ ಅತಿ ಅವಶ್ಯಕ. ಆದ್ದರಿಂದ ಪರಿಷತ್ತು ನಡೆಸುವ ಮೌಲ್ಯಾಂಕನದಲ್ಲಿ ಬೋಧನಾ ಪ್ರಕ್ರಿಯೆಯನ್ನು ಎರಡನೇ ಕ್ಷೇತ್ರ ಕಲಿಕಾ ಪರಿಸರದಲ್ಲಿ ಮೊದಲನೇ ಸೂಚಕವಾಗಿ ಅಳವಡಿಸಿದ್ದು ಶೇಕಡಾ 20 WAIGHTAGE ನೀಡಲಾಗಿದೆ.
b) ಕಲಿಕಾ ಪ್ರಕ್ರಿಯೆ-20%
ಪರಿಣಾಮಕಾರಿಯಾದ ಕಲಿಕಾ ಪ್ರಕ್ರಿಯೆಯು ತರಗತಿಯಲ್ಲಿ ವಿದ್ಯಾರ್ಥಿಗಳು ಬೋಧನಾ-ಕಲಿಕಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೇಲೆ ಅವಲಂಬಿಸಿದೆ. ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಯಿಂದ ಕಲಿಕೆಯಲ್ಲಿ ಭಾಗವಹಿಸುವಂತೆ ಮಾಡುವುದು ಅತಿ ಅವಶ್ಯಕ. ಪ್ರಯೋಗ ಮಾಡಲು ಅವಕಾಶ ನೀಡುವುದು, ಕಲಿಕೋಪಕರಣಗಳನ್ನು ಸ್ಪರ್ಶಿಸಲು ಅವಕಾಶ ನೀಡುವುದು, ಕಲಿಕಾ ಸಾಮಗ್ರಿಗಳನ್ನು ತಯಾರಿಸಲು ಹಾಗೂ ಅವುಗಳ ಬಗ್ಗೆ ಹೇಳಲು ಅವಕಾಶ ನೀಡುವುದು, ಕ್ಷೇತ್ರ ಅಧ್ಯಯನ, ಶೈಕ್ಷಣಿಕ ಯೋಜನೆ ತಯಾರಿಕೆ ಈ ಮೊದಲಾದವುಗಳಿಂದ ಪರಿಣಾಮಕಾರಿ ಕಲಿಕಾ ಪ್ರಕ್ರಿಯೆ ಉಂಟಾಗುತ್ತದೆ. ಒಳ್ಳೆಯ ಕಲಿಕಾ ಪರಿಸರ ಉಂಟುಮಾಡುವಲ್ಲಿ ಕಲಿಕಾ ಪ್ರಕ್ರಿಯೆ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಮೌಲ್ಯಾಂಕನದಲ್ಲಿ ಶೇ.20 WAIGHTAGE ನೀಡುವ ಮೂಲಕ ಕಲಿಕಾ ಪರಿಸರದಲ್ಲಿ ಎರಡನೇ ಸೂಚಕವಾಗಿ ಅಳವಡಿಸಲಾಗಿದೆ.
c) ಮೌಲ್ಯಮಾಪನ ಪ್ರಕ್ರಿಯೆ-20%
ವಿದ್ಯಾರ್ಥಿಗಳು ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಪಡೆದುಕೊಂಡ ಜ್ಞಾನದ ವಸ್ತುಸ್ಥಿತಿಯನ್ನು ಮೌಲ್ಯಮಾಪನ ಮಾಡುವುದರಿಂದ ಬೋಧನಾ ಪ್ರಕ್ರಿಯೆ ಮತ್ತು ಕಲಿಕಾ ಪ್ರಕ್ರಿಯೆಯ ಪರಿಣಾಮವನ್ನು ಅಳೆದಂತಾಗುತ್ತದೆ. ಮೌಲ್ಯಾಂಕನದ ವಸ್ತುವು ಮೌಲ್ಯಮಾಪನದ ಸಾಮಗ್ರಿಗಳು ಹಾಗೂ ತಂತ್ರಗಳನ್ನು ಅವಲಂಬಿಸಿರುತ್ತದೆ. ಮೌಖಿಕ ಹಾಗೂ ಲಿಖಿತ ಪರೀಕ್ಷೆಗಳು ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಯನ್ನು ಅಳೆಯಲು ಉತ್ತಮ ಸಾಧನವಾಗಿದೆ. ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಮಾಪನವು ವಿದ್ಯಾರ್ಥಿಗಳ ಕಲಿಕಾ ಸ್ಥಿತಿಯನ್ನು ಸೂಚಿಸುತ್ತವೆ. ಗುಣಾತ್ಮಕ ಶಿಕ್ಷಣ ಒದಗಿಸುವಲ್ಲಿ ಹಾಗೂ ಪರಿಣಾಮಕಾರಿ ಯಾದ ಗುಣಮಟ್ಟದ ಕಲಿಕೆ ನೀಡುವಲ್ಲಿ ಮೌಲ್ಯಮಾಪನ ಮಹತ್ವವಾದದ್ದು. ಆದ್ದರಿಂದ ಪರಿಷತ್ತು ನಡೆಸುವ ಮೌಲ್ಯಾಂಕನದಲ್ಲಿ ಮೌಲ್ಯಮಾಪನ ಪ್ರಕ್ರಿಯೆಯನ್ನು ಸೇರಿಸಲಾಗಿದ್ದು ಶೇಕಡಾ.20 WAIGHTAGE ನೀಡಲಾಗಿದೆ.
3. ನಾಯಕತ್ವ - 10%
ಶಾಲೆಯ ಸರ್ವತೋಮುಖ ಅಭಿವೃದ್ಧಿ ಯಲ್ಲಿ ನಾಯಕತ್ವ ಮಹತ್ವದ ಪಾತ್ರ ವಹಿಸುತ್ತದೆ. ಒಳ್ಳೆಯ ನಾಯಕನು ಶಾಲೆಯ ಶ್ರೇಯೋಭಿವೃದ್ಧಿಗೆ ದಾರಿದೀಪ ವಾಗಿರುತ್ತಾನೆ. ಮೂರು ಆಯಾಮ ಗಳಿಂದ ಶಾಲಾ ನಾಯಕತ್ವವನ್ನು ನೋಡಬಹುದಾಗಿದೆ.
1) ಶೈಕ್ಷಣಿಕ ನಾಯಕತ್ವ
2) ಆಡಳಿತಾತ್ಮಕ ನಾಯಕತ್ವ
3) ಸಮುದಾಯದ ನಾಯಕತ್ವ.
ನಾಯಕನು ಪ್ರಜಾಸತ್ತಾತ್ಮಕ ಗುಣವನ್ನು ಬೆಳೆಸಿಕೊಂಡಿದ್ದಲ್ಲಿ ಶಾಲೆಯು ಗುರಿಯನ್ನು ತಲುಪುವಂತೆ ಮಾಡುವನು. ಶಾಲೆಯ ಶ್ರೇಯೋಭಿವೃದ್ಧಿಗಾಗಿ ಶಾಲೆಯ ಮುಖ್ಯಶಿಕ್ಷಕರು ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ತನ್ನ ತಂಡದೊಂದಿಗೆ ಶಾಲೆಯ ದೂರದರ್ಶಿತ್ವ, ಧ್ಯೇಯ, ಉದ್ದೇಶಗಳನ್ನು ಈಡೇರಿಸಲು ಶ್ರಮಿಸುವಲ್ಲಿ ಮುಂಚೂಣಿಯಲ್ಲಿ ಇರಬೇಕಾಗುತ್ತದೆ.
ನಾಯಕತ್ವದ ಗುಣಗಳು ಈ ಕೆಳಗಿನ ಕಾರಣಗಳಿಂದಾಗಿ ಮಹತ್ವವನ್ನು ಪಡೆದಿವೆ.
• ಶಾಲೆಯ ಮುಖ್ಯಶಿಕ್ಷಕರು ಶಾಲೆಯಲ್ಲಿ ನಡೆಯುವ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ನಾಯಕರಾಗಿರುತ್ತಾರೆ.
• ಪ್ರತಿಯೊಬ್ಬ ಶಿಕ್ಷಕರ ಭಾಗವಹಿಸುವಿಕೆಯು ಪರಿಣಾಮಕಾರಿ ನಾಯಕತ್ವದ ಮಹತ್ವವಾಗಿದೆ.
• ಶಾಲೆಯ ಶ್ರೇಯೋಭಿವೃದ್ಧಿಯು ಉತ್ತಮ ನಾಯಕತ್ವದ ಪರಿಣಾಮ ವಾಗಿರುತ್ತದೆ.
• ಶಾಲೆಯ ವಿವಿಧ ಜವಾಬ್ಧಾರಿಗಳನ್ನು ಹಂಚುವುದು ಸಹ ಉತ್ತಮ ನಾಯಕತ್ವದ ಲಕ್ಷಣಗಳಲ್ಲಿ ಮಹತ್ವದ್ದಾಗಿದೆ.
• ಸಮುದಾಯ ಹಾಗೂ ಭಾಗೀದಾರರು ಶಾಲೆಯ ಎಲ್ಲಾ ಕಾರ್ಯಚಟುವಟಿಕೆ ಗಳಲ್ಲಿ ಭಾಗವಹಿಸುವಂತೆ ಮಾಡುವುದು ಸಹ ಉತ್ತಮ ನಾಯಕತ್ವದ ಗುಣಗಳಲ್ಲಿ ಒಂದಾಗಿದೆ.
• ಶಿಕ್ಷಕರು, ಪಾಲಕರು, ಸಮುದಾಯ, ಇಲಾಖೆ, ಸ್ಥಳೀಯ ಸಂಸ್ಥೆಗಳು ಈ ಎಲ್ಲವುಗಳೊಂದಿಗೆ ಸೌಹಾರ್ದತೆಯಿಂದ ಇರುವುದು ಉತ್ತಮ ನಾಯಕತ್ವದ ಲಕ್ಷಣವಾಗಿದೆ. ಶಾಲೆಯ ಅಭಿವೃದ್ಧಿಯಲ್ಲಿ ನಾಯಕತ್ವಕ್ಕೆ ಮಹತ್ವ ಇರುವುದರಿಂದ 3 ನೇ ಕ್ಷೇತ್ರವಾಗಿ ಸಮಗ್ರ ಮೌಲ್ಯಾಂಕನದಲ್ಲಿ ಬಳಸಿಕೊಳ್ಳಲಾಗಿದ್ದು ಶೇಕಡ. 10 WAIGHTAGE ನೀಡಲಾಗಿದೆ.
4. ಸಮುದಾಯದ ಭಾಗವಹಿಸುವಿಕೆ- 5%
ಶಾಲೆಯು ಸಮುದಾಯದ ಆಸ್ತಿಯಾಗಿದೆ. ಸಮುದಾಯದ ಬೆಳವಣಿಗೆಗೆ ಶಾಲೆಯು ಮುಖ್ಯ ಹಾಗೂ ಮಹತ್ವದ ಘಟಕವಾಗಿದೆ. ಶಾಲೆಯ ಶ್ರೇಯೋಭಿವೃದ್ಧಿಯಲ್ಲಿ ಸಮುದಾಯದ ಭಾಗವಹಿಸುವಿಕೆ ಅತಿ ಅವಶ್ಯಕ ಹಾಗೂ ಮಹತ್ವವಾದದ್ದು.
ಸಮುದಾಯದ ಭಾಗವಹಿಸುವಿಕೆ ಈ ಕೆಳಗಿನ ಕಾರಣಗಳಿಂದ ಮಹತ್ವದ್ದೆಂದು ಊಹಿಸಲಾಗಿದೆ. ಶಾಲೆಯ ಬೆಳವಣಿಗೆಗೆ ಭಾಗೀದಾರರ ಸಹಾಯ ಅತ್ಯವಶ್ಯಕ.
• ಸ್ಥಳೀಯ ಸಂಸ್ಥೆಗಳ ಭಾಗವಹಿಸುವಿಕೆ ಯಿಂದ, ಶಾಲೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ.
• ಸಮುದಾಯದ ತೊಡಗಿಸಿಕೊಳ್ಳುವಿಕೆ ಯಿಂದ ಶಾಲೆಗೆ ಬೇಕಾದ ಸಂಪನ್ಮೂಲಗಳ ಸಂಗ್ರಹ ಹಾಗೂ ಸದ್ಭಳಕೆ ಸಾಧ್ಯ.
• ಶಾಲೆಯು ಸಮುದಾಯದ ಒಂದು ಭಾಗ ಹಾಗೂ ಶಾಲೆಯ ಅಭಿವೃದ್ಧಿ ಸಮುದಾಯ ಭಾಗವಹಿಸುವಿಕೆಯನ್ನು ಅವಲಂಬಿಸಿದೆ. ಈ ಎಲ್ಲಾ ಕಾರಣಗಳಿಂದ ಪರಿಷತ್ತು 4 ನೇ ಕ್ಷೇತ್ರವಾಗಿ ಸಮುದಾಯದ ಭಾಗವಹಿಸುವಿಕೆಯನ್ನು ಅಳವಡಿಸಿಕೊಂಡಿದೆ ಹಾಗೂ ಶೇ.5 WAIGHTAGE ನೀಡಿದೆ.
5. ನಾವಿನ್ಯಯುತ ಚಟುವಟಿಕೆ-5%
ಶಿಕ್ಷಣವು ನಿಂತ ನೀರಲ್ಲ. ಚಲನಾತ್ಮಕ ವಾದದ್ದು. ಇದು ಕಾಲದಿಂದ ಕಾಲಕ್ಕೆ, ವಿಜ್ಞಾನ ಹಾಗೂ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಬೆಳವಣಿಗೆ ಆದಂತೆ ಬದಲಾಗುತ್ತದೆ. ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಉಪಯೋಗವನ್ನು ಮಾಡಿಕೊಳ್ಳು ತ್ತಿದ್ದಂತೆ, ತರಗತಿ ಕೋಣೆಯ ಚಟುವಟಿಕೆಗಳಲ್ಲಿ ಉನ್ನತೀಕರಣ ವಾಯಿತು. ಇದು ವಿದ್ಯಾರ್ಥಿಗಳಿಗೆ ನೇರ ಮತ್ತು ಯೋಗ್ಯ, ಉಪಯುಕ್ತವಾದ ಅನುಭವಗಳನ್ನು ನೀಡಿತು.
ಶಾಲೆಗಳಲ್ಲಿ ನಾವಿನ್ಯಯುತ ಚಟುವಟಿಕೆ ಈ ಕೆಳಗಿನ ಕಾರಣಗಳಿಂದಾಗಿ ಮಹತ್ವದ್ದಾಗಿದೆ.
• ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಹೊಸ ಹೊಸ ತಂತ್ರಜ್ಞಾನ ಬಳಸುವ ಕೌಶಲ ಬೆಳೆಯುತ್ತದೆ.
• ತಂತ್ರಜ್ಞಾನದ ಬಳಕೆ ಕಲಿಕಾ ಪ್ರಕ್ರಿಯೆಯಲ್ಲಿ ನಿರ್ದಿಷ್ಟತೆಯನ್ನು ಒದಗಿಸುತ್ತದೆ.
• ತಂತ್ರಜ್ಞಾನದ ಬಳಕೆ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ.
ಈ ಎಲ್ಲಾ ಕಾರಣಗಳಿಂದ ಶಾಲೆಯ ಶ್ರೇಯೋಭಿವೃದ್ಧಿಯಲ್ಲಿ ನಾವಿನ್ಯಯುತ ಚಟುವಟಕೆಗಳ ಅವಶ್ಯಕತೆ ಇದೆ. ಪರಿಷತ್ತು ತನ್ನ ಮೌಲ್ಯಾಂಕನದಲ್ಲಿ ನಾವಿನ್ಯಯುತ ಚಟುವಟಿಕೆ ಕ್ಷೇತ್ರವನ್ನು ಅಳವಡಿಸಿಕೊಂಡಿದ್ದು ಶೇ. 5 WAIGHTAGE ನೀಡಿದೆ.
ಪರಿಷತ್ತು ಮೌಲ್ಯಾಂಕನಕ್ಕೆ ಒಳಪಟ್ಟ ಶಾಲೆಯಲ್ಲಿ ಪ್ರೌಢಶಾಲೆಯ ಮುಖ್ಯಶಿಕ್ಷಕರ ನೇತೃತ್ವದಲ್ಲಿ ಮೂರು ಬಾಹ್ಯ ಮೌಲ್ಯಾಂಕನಕಾರರು, ಮೂರು ದಿನ ಶಾಲೆಯ ಸಮಸ್ತ ಕಾರ್ಯಚಟುವಟಿಕೆಗಳನ್ನು ವೀಕ್ಷಿಸು ವುದರೊಂದಿಗೆ, ಶಿಕ್ಷಕರ ಪಾಠ ವೀಕ್ಷಣೆಯನ್ನು ಮಾಡಿ ಉಪಸೂಚಕ ಗಳಿಗೆ ಅಂಕಗಳನ್ನು ನೀಡುವಂತೆ ಕ್ರಮಕೈಗೊಂಡಿದೆ. ಅಲ್ಲದೆ ಆಯ್ದ ತರಗತಿಗಳ ವಿದ್ಯಾರ್ಥಿಗಳನ್ನು ಮೌಲ್ಯಾಂಕನಕ್ಕೆ ಒಳಪಡಿಸಲಾಗಿದೆ. ಶಿಕ್ಷಕರ, ವಿದ್ಯಾರ್ಥಿಗಳ, ಎಸ್.ಡಿ.ಎಂ.ಸಿ ಅಧ್ಯಕ್ಷರ ಹಾಗೂ ಸದಸ್ಯರ, ಪಾಲಕರ ಪ್ರಶ್ನಾವಳಿಗಳನ್ನು ಭರ್ತಿಮಾಡಿಸಿ ಕೊಳ್ಳವುದರ ಜೊತೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರ ಹಾಗೂ ಸದಸ್ಯರ, ಪಾಲಕರ ಸಭೆಯನ್ನು ಕರೆದು ಶಾಲೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವರು. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಿ ವಿವಿಧ ಕಲೆಗಳಲ್ಲಿ ವಿದ್ಯಾರ್ಥಿಗಳ ಗುಣಮಟ್ಟವನ್ನು ಅವಲೋಕಿಸುವರು. ಹೀಗೆ ಶಾಲೆಯ ಚಟುವಟಿಕೆಗಳನ್ನು ಸಮಗ್ರವಾಗಿ ವೀಕ್ಷಿಸಿ ಉಪಸೂಚಕಗಳಿಗೆ ಅಂಕಗಳನ್ನು ಹಾಕುವರು. ಆನಂತರ ವಿದ್ಯಾರ್ಥಿಗಳ ಕಲಿಕಾ ಸಾಧನೆಯ ಶೇಕಡಾ 60 ಹಾಗೂ 5 ಕ್ಷೇತ್ರಗಳಿಗೆ ಸಂಬಂಧಿಸಿದಂತೆ, ಶೇಕಡಾ 40 ತೆಗೆದುಕೊಂಡು ಶಾಲೆಗೆ ಗ್ರೇಡ್ ನೀಡಲಾಗಿದೆ. ಕ್ಷೇತ್ರವಾರು ಹಾಗೂ ಕಲಿಕಾ ಸಾಧನವಾರು ರಾಜ್ಯಮಟ್ಟದ ವಿಶ್ಲೇಷಣೆಯನ್ನು ಕೇಂದ್ರ ಕಛೇರಿಯಲ್ಲೂ, ಜಿಲ್ಲಾ ವಿಶ್ಲೇಷಣೆಯನ್ನು ಡಯಟ್‌ಗಳಲ್ಲೂ, ಶಾಲಾ ವಿಶ್ಲೇಷಣೆಯನ್ನು ಸಿ.ಆರ್.ಪಿ ಗಳಿಂದಲೂ ಮಾಡಿಸಲಾಗುತ್ತಿದೆ. 2014-15 ನೇ ಸಾಲಿನಲ್ಲಿ ಒಬ್ಬ ಸಿ.ಆರ್.ಪಿ ಯಿಂದ ಒಂದು ಶಾಲೆಯಂತೆ, 2161 ಸಿ.ಆರ್.ಪಿ ಗಳಿಂದ 2161 ಶಾಲೆಗಳ ವಿಶ್ಲೇಷಣೆಯನ್ನು ಮಾಡಿಸಲಾಗಿದ್ದು, ಜಿಲ್ಲಾ ಹಂತದಲ್ಲಿ ಕ್ರೋಢಿಕರಿಸಲಾಗಿದೆ.
ಉಪಸಂಹಾರ:-
ಆರ್.ಟಿ.ಇ ನಿಯಮದಂತೆ ಶಾಲೆಗಳಲ್ಲಿ ಕಟ್ಟಡ, ಮುಖ್ಯಶಿಕ್ಷಕರ ಕೋಣೆ, ಪ್ರತಿ ಶಿಕ್ಷಕರಿಗೆ ಒಂದು ತರಗತಿ ಕೋಣೆ, ರ‍್ಯಾಂಪ್ ವ್ಯವಸ್ಥೆ, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಪ್ರತ್ಯೇಕ ಅಡುಗೆ ಕೋಣೆ, ಕಾಂಪೌಂಡ್, ಆಟದ ಮೈದಾನ ಈ 9 ಅಂಶಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಒದಗಿಸುವುದು ಸರ್ಕಾರ ಇಲ್ಲವೇ ಆಡಳಿತ ಮಂಡಳಿಯ ಆದ್ಯ ಕರ್ತವ್ಯವಾಗಿದೆ. DISE ಪ್ರಕಾರ ಈ 9 ಅಂಶಗಳನ್ನು ಬಹುತೇಕ ಶಾಲೆಗಳು ಹೊಂದಿವೆ. ಆದರೆ ಕೆ.ಎಸ್.ಕ್ಯು.ಎ.ಎ.ಸಿ. ಸಂಸ್ಥೆಯು ತಾನು ಸಿದ್ಧಪಡಿಸಿ ಕೊಂಡಿರುವ ಸೂಚಕ ಹಾಗೂ ಉಪ ಸೂಚಕಗಳಲ್ಲಿ ಆರ್.ಟ.ಇ ಗುರುತಿಸಿದ ಅಂಶಗಳ ನಿರ್ವಹಣೆಯ ಬಗ್ಗೆ ಹೆಚ್ಚಿನ ಒತ್ತು ನೀಡಿದೆ.
ಎರಡನೆಯದಾಗಿ ಪರಿಷತ್ತು ಶಾಲೆಗೆ ಗ್ರೇಡನ್ನು ನೀಡುವಾಗ ವಿದ್ಯಾರ್ಥಿಗಳ ಕಲಿಕಾ ಸಾಧನೆ ಹಾಗೂ ಶಾಲೆಯಲ್ಲಿ ಕಲಿಕಾ ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಶೇಕಡಾ 60 ರಷ್ಟು ವಿದ್ಯಾರ್ಥಿಗಳ ಕಲಿಕಾ ಸಾಧನೆಗೆ ಹಾಗೂ ಶೇಕಡಾ 24ರಷ್ಟು ಕಲಿಕಾ ಪರಿಸರಕ್ಕೆ ಒಟ್ಟು ಶೇಕಡಾ 84ರಷ್ಟು ಕಲಿಕೆಗೆ ಪರಿಗಣಿಸಿದ್ದು, ಉತ್ತಮ ಗ್ರೇಡನ್ನು ಪಡೆಯಲು ಶಾಲೆಗಳು ಸಾಹಸ ಪಡಬೇಕಾಗುತ್ತದೆ.
ಕಾರಣ 2014-15 ನೇ ಸಾಲಿನಲ್ಲಿ ಶೇಕಡಾ 6.06 ರಷ್ಟು ಶಾಲೆಗಳು ಮಾತ್ರ ಶೇಕಡಾ 80ಕ್ಕಿಂತ ಹೆಚ್ಚಿನ ಸಾಧನೆ ಮಾಡಿದರೆ, 2015-16 ನೇ ಸಾಲಿನಲ್ಲಿ ಶೇಕಡಾ 5.95ರಷ್ಟು ಶಾಲೆಗಳು ಮಾತ್ರ ಶೇಕಡಾ 80ಕ್ಕಿಂತ ಹೆಚ್ಚಿನ ಸಾಧನೆ ಮಾಡಿವೆ.
................... END.........................