ಶಾಲಾ ಸ್ವಚ್ಛತೆ ಮತ್ತು ನೈರ್ಮಲ್ಯ




ಸ್ವಚ್ಛ ಭಾರತ ಸ್ವಚ್ಛ ವಿದ್ಯಾಲಯ:
ಸ್ವಚ್ಛ ಭಾರತ ಸ್ವಚ್ಛ ವಿದ್ಯಾಲಯ ಒಂದು ರಾಷ್ಟ್ರೀಯ ಆಂದೋಲನ.ಯೂನಿಸೆಫ್‌ನ ನೆರವಿನೊಂದಿಗೆ ಈ ಕಾರ್ಯಕ್ರಮವು 2014 ರಿಂದ ಪ್ರಾರಂಭವಾಯಿತು. ಭಾರತದಾದ್ಯAತ ಹೆಚ್ಚಿನ ಮಕ್ಕಳು ಈ ಸೌಲಭ್ಯವನ್ನು ಪಡೆದುಕೊಂಡು ಯಶಸ್ಸನ್ನು ಗಳಿಸಬೇಕೆಂಬುದು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಆಶಯವಾಗಿದೆ. 1.3 ಮಿಲಿಯನ್ ಶಾಲೆಗಳಲ್ಲಿ 110 ಮಿಲಿಯನ್ ಮಕ್ಕಳು ಊಟಕ್ಕೆ ಮೊದಲು ಹಾಗೂ ಶೌಚಾಲಯದ ಬಳಕೆಯ ನಂತರ ಸಾಬೂನನ್ನು ಉಪಯೋಗಿಸಿ ಕೈ ತೊಳೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಶಾಲೆಯು ಮಕ್ಕಳಿಗೆ ಜ್ಞಾನವನ್ನು ನೀಡುವುದಲ್ಲದೆ ಮಕ್ಕಳು, ಪೋಷಕರು, ಮತ್ತು ಸಮುದಾಯ ಒಂದು ಕಡೆ ಸೇರಲು ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಮಕ್ಕಳು ವಯಸ್ಕರಿಗಿಂತ ಬೇಗ ಕಲಿಯುತ್ತಾರೆ ಮತ್ತು ಸುಲಭವಾಗಿ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಾರೆ ಹಾಗೂ ಆದರ್ಶಪ್ರಾಯರಾಗುತ್ತಾರೆ. ಶಾಲೆಯಲ್ಲಿ ಕಲಿತ ನೈರ್ಮಲ್ಯದ ಅಭ್ಯಾಸಗಳನ್ನು ಸಮಾನ ವಯಸ್ಕರಿಗೆ, ಸಂಬಂಧಿಕರಿಗೆ ಮತ್ತು ಅವರು ಪೋಷಕರಾದ ಸಂದರ್ಭದಲ್ಲಿ ತಮ್ಮ ಮಕ್ಕಳಿಗೂ ವರ್ಗಾಯಿಸುತ್ತಾರೆ. ಸ್ವಚ್ಛ ವಿದ್ಯಾಲಯ ಕಾರ್ಯಕ್ರಮವು ಸರಳವಾದ ಮತ್ತು ಮಾಡಬಹುದಾದ ಪ್ರಕ್ರಿಯೆಯಾಗಿದ್ದು, ಶಾಲೆಯಲ್ಲಿ ಅನುಷ್ಠಾನ ಗೊಳ್ಳಲು ನೀತಿ ನಿರೂಪಕರು, ಜನಪ್ರತಿನಿಧಿಗಳು, ನಾಗರೀಕರು, ಪೋಷಕರು, ಸಮುದಾಯ, ಎಸ್.ಡಿ.ಎಮ್.ಸಿ, ಸ್ಥಳೀಯ ಸರ್ಕಾರ, ಶಿಕ್ಷಕರು ಮತ್ತು ಸರ್ಕಾರೇತರ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕಾದ ಅವಶ್ಯಕತೆಯಿದೆ.



ಉದ್ದೇಶಗಳು:

1) ಪ್ರತಿಯೊಂದು ಶಾಲೆಯಲ್ಲಿಯೂ ಮಧ್ಯಾಹ್ನದ ಊಟಕ್ಕಿಂತ ಮೊದಲು, ಶೌಚಾಲಯದ ಬಳಕೆಯ ನಂತರ ಹಾಗೂ ಇತರೆ ಸಂದಿಗ್ದ ಪರಿಸ್ಥಿತಿಗಳಲ್ಲಿ ಸಾಬೂನನ್ನು ಬಳಸಿ ಕೈ ತೊಳೆಯುವುದನ್ನು ಸಂಸ್ಥಾ ಕಲಿಕೆಯಾಗಿ ಮಾಡುವುದು.

2) ಮಕ್ಕಳು ಉತ್ತಮ ನೈರ್ಮಲ್ಯದ ಅಭ್ಯಾಸಗಳನ್ನು ಬೆಳೆಸಿಕೊಂಡು ಆರೋಗ್ಯವಂತರಾಗಲು ಶಾಲೆಗಳಲ್ಲಿ ಚಟುವಟಿಕೆಗಳನ್ನು ಉತ್ತಮ ಪಡಿಸುವುದು.

3) ಶಾಲೆಯಲ್ಲಿ ಸ್ವಚ್ಛತೆ ಮತ್ತು ಕೈ ತೊಳೆಯುವ ಸೌಲಭ್ಯಗಳ ನಿರ್ಮಾಣ, ದುರಸ್ಥಿ ಮತ್ತು ನಿರ್ವಹಣೆಯ ಸಾಮರ್ಥ್ಯವನ್ನು ಹೆಚ್ಚಿಸುವುದು. ಹಾಗೂ ಅಗತ್ಯ ಪರಿಕರಗಳನ್ನು ಒದಗಿಸುವುದು.

4) ಮಕ್ಕಳಲ್ಲಿ ನೈರ್ಮಲ್ಯಕ್ಕೆ ಸಂಬAಧಿಸಿದ ಜೀವನಶೈಲಿಯನ್ನು ಬದಲಾಯಿಸುವುದರ ಮೂಲಕ ಅವರ ಕುಟುಂಬ ಮತ್ತು ಸಮುದಾಯದ ಆರೋಗ್ಯವನ್ನು ಕಾಪಾಡುವುದು.





ಮಕ್ಕಳಿಗೆ ನೀರು, ಸ್ವಚ್ಛತೆ ಮತ್ತು ನೈರ್ಮಲ್ಯದಿಂದಾಗುವ ಅನುಕೂಲಗಳು

 ಸ್ವಚ್ಛ ಶಾಲೆಯು ಮಗು, ಶಾಲೆ ಮತ್ತು ಸಮುದಾಯದ ಘನತೆಯನ್ನು ಹೆಚ್ಚಿಸುತ್ತದೆ. ಹಾಗೂ ಆರೋಗ್ಯಕರವಾದ ವಾತಾವರಣವನ್ನು ಕಾಪಾಡುತ್ತದೆ.

 ಶಾಲೆಯಲ್ಲಿ ಹೆಣ್ಣುಮಕ್ಕಳು ಮತ್ತು ವಿಶೇಷ ಚೇತನವುಳ್ಳ ಮಕ್ಕಳು ಪ್ರತ್ಯೇಕ ಹಾಗೂ ಸುರಕ್ಷಿತ ಶೌಚಾಲಯಗಳನ್ನು ಹೊಂದಲು ಸಹಾಯಕವಾಗುತ್ತದೆ.

 ಶಾಲೆಯಲ್ಲಿ ಹೆಣ್ಣುಮಕ್ಕಳ ಗೌರವ ಮತ್ತು ಗೋಪ್ಯತೆ ಹೆಚ್ಚಾಗುತ್ತದೆ. ಹಾಗೂ ಋತುಚಕ್ರದ ಸಂದರ್ಭದಲ್ಲಿ ಬಳಸುವ ವಸ್ತುಗಳನ್ನು ಸರಿಯಾದ ಕ್ರಮದಲ್ಲಿ ವಿಲೇವಾರಿ ಮಾಡಲು
ಸಹಾಯಕವಾಗುತ್ತದೆ.

 ಮಧ್ಯಾಹ್ನದ ಉಪಾಹಾರ ಸೇವನೆಯ ಮುಂಚೆ ಸಾಬೂನನ್ನು ಬಳಸಿಕೊಂಡು ಸೂಕ್ತ ವಿಧಾನದಲ್ಲಿ ಕೈಗಳನ್ನು ತೊಳೆಯುವುದರಿಂದ ಮಕ್ಕಳಿಗೆ ರೋಗ ಹರಡುವುದನ್ನು ನಿಯಂತ್ರಿಸಬಹುದಾಗಿದೆ.

 ಮಕ್ಕಳನ್ನು ರೋಗಗಳಿಂದ ಸಂರಕ್ಷಿಸುತ್ತದೆ. ಹಾಗೂ ಸೂಕ್ಷ ರೋಗಾಣುಗಳಿಂದಾಗುವ ಪೌಷ್ಠಿಕಾಂಶಗಳ ನಷ್ಟವನ್ನು ತಪ್ಪಿಸಿ ಮಕ್ಕಳು ಉತ್ತಮ ಪೋಷಕಾಂಶಗಳನ್ನು ಪಡೆಯಲು ಸಹಾಯಕವಾಗುತ್ತದೆ.

 ಶಾಲೆಯಲ್ಲಿ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಉತ್ತಮಗೊಳ್ಳಲು ಸಹಾಯಕವಾಗುತ್ತದೆ ಮತ್ತು ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಠಿಯಾಗುತ್ತದೆ.

 ಶಾಲೆಯ ನೀರು ಮತ್ತು ನೈರ್ಮಲ್ಯದ ಕ್ಲಬ್‌ಗಳು, ಮಕ್ಕಳಲ್ಲಿ ಶೌಚಾಲಯ ಮತ್ತು ಕೈ ತೊಳೆಯುವ ಕೇಂದ್ರಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕರ್ತವ್ಯವನ್ನು ಬೆಳೆಸುತ್ತದೆ. ಹಾಗೂ ಲಿಂಗತಾರತಮ್ಯ ವನ್ನು ಹೋಗಲಾಡಿಸಲು ಸಹಾಯಕವಾಗುತ್ತದೆ.

 ನೀರು, ಶೌಚಾಲಯ ಮತ್ತು ನೈರ್ಮಲ್ಯದ ಸೌಲಭ್ಯಗಳನ್ನು ಬಳಸಲು ಸಹಾಯಕವಾದ ಶಿಶು ಸ್ನೇಹಿ ವ್ಯವಸ್ಥೆಯನ್ನು ಒದಗಿಸುತ್ತದೆ ಹಾಗೂ ಆರ್ಥಿಕ ಮಿತವ್ಯಯ ಸಾಧಿಸಲು ಸಹಾಯಕವಾಗುತ್ತದೆ.

 ಕುಟುಂಬ ಮತ್ತು ಸಮುದಾಯದಲ್ಲಿ ಸ್ವಚ್ಛತೆಯ ಬದಲಾವಣೆಗೆ ಸ್ವಚ್ಛ ಶಾಲೆಯ ಪ್ರತಿಯೊಂದು ಮಗುವೂ ಮಧ್ಯವರ್ತಿಯಾಗುತ್ತದೆ.





ಶಾಲಾ ಆಧಾರಿತ ಜೀವನಶೈಲಿಯ ಬದಲಾವಣೆ


 ಮಕ್ಕಳಿಗೆ ನೈರ್ಮಲ್ಯದ ನಿರ್ವಹಣೆಯ ಜ್ಞಾನವನ್ನು ನೀಡುವುದರಿಂದ ಜೀವನ ಶೈಲಿಯ ಬದಲಾವಣೆಗೆ ಸಹಾಯಕ ವಾಗುತ್ತದೆ. ನೈರ್ಮಲ್ಯದ ಜ್ಞಾನವು ನೈರ್ಮಲ್ಯದ ಕೌಶಲ್ಯವಾಗಿ ಮಾರ್ಪಾಡು ಆಗುವಂತೆ ಮಾಡುವ ಮೂಲಕ ಅವರ ಮನೋಧೋರಣೆಯನ್ನು ಬದಲಾಯಿಸಬಹುದು.

 ಶಾಲೆಯಲ್ಲಿ ಮಕ್ಕಳಿಂದ-ಮಕ್ಕಳಿಗೆ ನೈರ್ಮಲ್ಯ ಕುರಿತಾದ ತಿಳುವಳಿಕೆಯನ್ನು ನೀಡುವ ಕಾರ್ಯ ತಂತ್ರಗಳನ್ನು ರೂಪಿಸಬಹುದು. ಮಕ್ಕಳನ್ನು ಶಾಲೆ ಮತ್ತು ಮನೆಯಲ್ಲಿ ನೈರ್ಮಲ್ಯದ ವಾತಾವರಣವನ್ನು ಸುಧಾರಿಸುವ ಕೊಂಡಿಗಳಾಗಿ ಮಾರ್ಪಡಿಸಬಹುದು.

 ಶಾಲೆಯಲ್ಲಿ ಸಾಂಪ್ರದಾಯಿಕ ರೀತಿಯ ನೈರ್ಮಲ್ಯ ಶಿಕ್ಷಣ ನೀಡುವುದಕ್ಕೆ ಬದಲಾಗಿ, ಜೀವನ ಕೌಶಲ್ಯಕ್ಕೆ ಸಂಬಂಧಿಸಿದಂತೆ ನೈರ್ಮಲ್ಯ ಶಿಕ್ಷಣ ನೀಡಿದಾಗ ಮಕ್ಕಳು ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ.

 ಶಾಲೆಯಲ್ಲಿ ಮಕ್ಕಳಿಗೆ ಪರಸ್ಪರ ಪ್ರತಿಕ್ರಿಯಿಸುವ ಅವಧಿಗಳನ್ನು ಏರ್ಪಡಿಸಿದಾಗ, ಜೀವನ ಕೌಶಲ್ಯಗಳು ಮಕ್ಕಳ ಮೂಲಕ ಗುಂಪಿನಲ್ಲಿ ಹಂಚಿಕೆಯಾಗಲು ನೆರವಾಗುತ್ತದೆ.

 ಮಕ್ಕಳ ಒಂದು ಗುಂಪಿಗೆ ಕೈತೊಳೆಯಲು ಸೋಪನ್ನು ನೀಡಿ, ಕೈತೊಳೆಯುವ ಅಭ್ಯಾಸವನ್ನು ಮೂಡಿಸಬಹುದು. ಹಾಗೆಯೇ ಶೌಚಾಲಯದ ನಿರ್ವಹಣೆಯ ಅಭ್ಯಾಸವನ್ನು ಮಕ್ಕಳಿಂದಲೇ ಶಾಲೆಯಲ್ಲಿ ಮಾಡಿಸಬಹುದು.

 ನೀರು, ಶುಚಿತ್ವ ಮತ್ತು ನೈರ್ಮಲ್ಯದ ವಿಚಾರಗಳನ್ನು ಪಠ್ಯಕ್ರಮದಲ್ಲಿ ಸೇರಿಸಿ, ಶಾಲೆಯಲ್ಲಿ ಇದನ್ನು ಶಿಕ್ಷಣದ ಭಾಗವಾಗಿ ಬೋಧನೆ ಮಾಡಬಹುದು. ಶಾಲೆಯ ಬೆಳಗಿನ ಪ್ರಾರ್ಥನಾ ವೇಳೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ/ ಹಾಡು/ಕಿರುನಾಟಕಗಳ ಮೂಲಕ ಅರಿವು ಮೂಡಿಸಬಹುದು. ವಿದ್ಯಾರ್ಥಿಗಳ ಗುಂಪು ಮತ್ತು ಶಾಲಾ ಆರೋಗ್ಯ ಕ್ಲಬ್‌ಗಳು, ಸ್ವಚ್ಚತೆಯ ಸಂದೇಶಗಳನ್ನು ಬೇರೆ ವಿದ್ಯಾರ್ಥಿಗಳಿಗೆ ಮತ್ತು ಸಮುದಾಯಕ್ಕೆ ರವಾನೆ ಮಾಡುತ್ತವೆ. ಶಾಲೆಗಳಲ್ಲಿ ಶಾಲಾ ಸಂಸತ್ತು ಸ್ಥಾಪನೆಯಾಗಿದ್ದು ಅಲ್ಲಿಯ ಸದಸ್ಯರು, ನಾಯಕರುಗಳಾಗಿ ಸ್ವಚ್ಚತೆ ಮತ್ತು ನೈರ್ಮಲ್ಯದ ಬಗ್ಗೆ ಶಾಲೆಯಲ್ಲಿ ಇತರ ಮಕ್ಕಳಿಗೆ ಅರಿವನ್ನುಂಟು ಮಾಡುವ ಮೂಲಕ ಶಾಲೆಯ ಸ್ವಚ್ಛತೆ ಮತ್ತು ಪರಿಸರವನ್ನು ಕಾಪಾಡಿಕೊಳ್ಳಲು ಗಮನ ನೀಡುತ್ತದೆ.





ಶಾಲಾ ಹಂತದಲ್ಲಿ ಶಿಕ್ಷಕರ ಬೆಂಬಲ

1) ದಿನನಿತ್ಯ ತರಗತಿಯಲ್ಲಿ ಬೋಧಿಸುವ ಪಠ್ಯಕ್ರಮದ ಜೊತೆಗೆ ನೈರ್ಮಲ್ಯದ ಸಂದೇಶಗಳನ್ನು ಸಂಯೋಜಿಸುವುದು. ಬೆಳಗಿನ ಪ್ರಾರ್ಥನ ವೇಳೆಯಲ್ಲಿ ಮತ್ತು ತರಗತಿಯಲ್ಲಿ ವಿಷಯಗಳನ್ನು ಬೋಧಿಸುವಾಗ ನೈರ್ಮಲ್ಯದ ಮಾಹಿತಿಯನ್ನು ತಿಳಿಸುವುದು.

2) ಕ್ರಮಬದ್ದವಾಗಿ ಶೌಚಾಲಯ ಬಳಸುವ ಬಗ್ಗೆ, ಶುದ್ಧವಾದ ಕುಡಿಯುವ ನೀರಿನ ಬಗ್ಗೆ, ಮಧ್ಯಾಹ್ನದ ಊಟಕ್ಕೆ ಮುಂಚೆ ಮತ್ತು ಶೌಚಾಲಯದ ಬಳಕೆಯ ನಂತರ ಕೈ ತೊಳೆಯುವಂತೆ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವುದು.

3) ವಿದ್ಯಾರ್ಥಿಗಳಿಗೆ ಪ್ರೌಢಾವಸ್ಥೆಯ ಅವಧಿಯಲ್ಲಿ ಆಗುವ ಬದಲಾವಣೆಯ ಕುರಿತು ಮಾಹಿತಿಯನ್ನು ನೀಡುವುದು. ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ತಮ್ಮ ಋತುಚಕ್ರದ ಅವಧಿಯಲ್ಲಿ ಶುಚಿಯಾಗಿರುವ ಬಗ್ಗೆ ಮಾಹಿತಿ ನೀಡುವುದು.

4) ಶಾಲೆಯ ನೀರು, ಸ್ವಚ್ಛತೆ ಮತ್ತು ನೈರ್ಮಲ್ಯದ ಸೌಲಭ್ಯಗಳ ಕ್ರಮಬದ್ಧ ಬಳಕೆ ಹಾಗೂ ನಿರ್ವಹಣೆ ಮಾಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು. ಅಗತ್ಯ ನೈರ್ಮಲ್ಯದ ಪರಿಕರಗಳನ್ನು ಒದಗಿಸುವುದು. ಹಾಗೂ ಸೂಕ್ತ ಮೇಲ್ವಿಚಾರಣೆ ಮಾಡುವುದು.

5) ಮಕ್ಕಳು ನೈರ್ಮಲ್ಯಕ್ಕೆ ಸಂಬಂಧಪಟ್ಟ ಉತ್ತಮ ಅಭ್ಯಾಸಗಳನ್ನು ಶಾಲೆ ಹಾಗೂ ಮನೆಯಲ್ಲಿ ಅನುಸರಿಸುವುದನ್ನು ಬೆಂಬಲಿಸುವುದು. ಹಾಗೂ ಅವರನ್ನು ಗೌರವಿಸಿ ಆದರ್ಶಪ್ರಾಯ ಮಾದರಿಗಳಾಗಿ ಬಿಂಬಿಸುವುದು.

6) ಶಾಲೆಯಲ್ಲಿ ನೀರು, ಸ್ವಚ್ಛತೆ ಮತ್ತು ನೈರ್ಮಲ್ಯದ ಚಟುವಟಿಕೆಗಳ ನಿರ್ವಹಣೆಯ ಕುರಿತು ಶಿಕ್ಷಕರ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದು.

7) ನೀರು, ಸ್ವಚ್ಛತೆ ನೈರ್ಮಲ್ಯದ ಕಾರ್ಯಕ್ರಮಗಳನ್ನು ಕುರಿತು ಯೋಜನೆಗಳನ್ನು ರೂಪಿಸುವಾಗ, ದೈನಂದಿನ ನಿರ್ವಹಣೆ ಮಾಡುವಾಗ ವಿದ್ಯಾರ್ಥಿಗಳು ಹಾಗೂ ಪೋಷಕರೊಡನೆ ಸಮಾಲೋಚನೆ ಮಾಡುವುದು. ಹಾಗೂ ಅವರು ಮೇಲುಸ್ತುವಾರಿ ಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುವುದು.

8) ವಿದ್ಯಾರ್ಥಿಗಳಿಗೆ ಪ್ರತಿವರ್ಷ ಆರೋಗ್ಯ ತಪಾಸಣೆಯನ್ನು ಆಯೋಜಿಸುವುದು ಮತ್ತು ಜಂತುಹುಳು ನಿವಾರಣಾ ಔಷಧಿಗಳ ನಿರ್ವಹಣೆ ಮಾಡುವುದು. ಹಾಗೂ ಅಡುಗೆ ಕೋಣೆಯ ನೈರ್ಮಲ್ಯ ಉತ್ತಮ ಗುಣಮಟ್ಟದಲ್ಲಿರುವುದನ್ನು ಖಾತ್ರಿಪಡಿಸಿಕೊಳ್ಳುವುದು.





ಪೋಷಕರು, ಎಸ್.ಡಿ.ಎಂ.ಸಿ ಮತ್ತು ಸಮುದಾಯದ ಸದಸ್ಯರ ಬೆಂಬಲ

1)ಶಾಲೆಯ ಸ್ವಚ್ಛ ವಿದ್ಯಾಲಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ಕೊಡುಗೆ ನೀಡುವುದು. ಹಾಗೂ ಈ ಕುರಿತು ಯೋಜನೆ ತಯಾರಿಸುವಾಗ ಸಹಾಯ ಮಾಡುವುದು.

2) ನೀರು, ಸ್ವಚ್ಛತೆ ಮತ್ತು ನೈರ್ಮಲ್ಯದ ಸೌಲಭ್ಯಗಳನ್ನು ಶಾಲೆಗಳಿಗೆ ಒದಗಿಸಲು ಗ್ರಾಮ

ಪಂಚಾಯತ್/ಸಮುದಾಯ/ಸAಘ ಸಂಸ್ಥೆ/ಇತರರ ಸಹಾಯವನ್ನು ಪಡೆಯುವುದು. ಇವುಗಳ ಅಳವಡಿಕೆ, ಕಾರ್ಯನಿರ್ವಹಣೆ, ಮತ್ತು ಮೇಲುಸ್ತುವಾರಿ ಮಾಡುವುದು.

3) ಶಾಲೆಗಳಲ್ಲಿ ಮಕ್ಕಳ ನಿರಂತರ ಹಾಜರಾತಿ, ವಿಶೇಷವಾಗಿ ಹೆಣ್ಣುಮಕ್ಕಳು, ವಿಶೇಷ ಚೇತನ ಮಕ್ಕಳು ಹಾಗೂ ವಿವಿಧ ಸಮುದಾಯದ ಮಕ್ಕಳ ಹಾಜರಾತಿಯನ್ನು ಉತ್ತೇಜಿಸುವುದು.

4) ಶಾಲೆ, ಮನೆ ಮತ್ತು ಸಮುದಾಯದಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಅಭ್ಯಾಸಗಳು, ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು. ಹಾಗೂ ಜಾಗೃತಿ ಮೂಡಿಸುವುದು.

5) ಶಾಲೆಯಲ್ಲಿ ನೀರು, ಸ್ವಚ್ಛತೆ ಮತ್ತು ನೈರ್ಮಲ್ಯದ ಚಟುವಟಿಕೆಗಳ ಕಾರ್ಯನಿರ್ವಹಣೆ ಮತ್ತು ಇವುಗಳನ್ನು ಸದಾ ಸ್ವಚ್ಛವಾಗಿಡಲು ಪೋಷಕರು, sಸಮುದಾಯ ಮತ್ತು ಸರ್ಕಾರಿ ಅಧಿಕಾರಿಗಳು ಜೊತೆಗೂಡಿ ನಿಧಿಯನ್ನು ಸ್ಥಾಪಿಸುವುದು.
















................... END ..................