ಚಟುವಟಿಕಾಧಾರಿತ ಕಲಿಕಾ ವಿಧಾನ - ನಲಿಕಲಿ



ಪ್ರತಿಯೊಂದು ಮಗುವೂ ಅನನ್ಯ. ಪ್ರತಿ ಮಗುವಿನ ಕಲಿಕೆಯೂ ವ್ಯಕ್ತಿಗತ. ವ್ಯಕ್ತಿಗತ ಕಲಿಕೆಯಲ್ಲಿ ಕಲಿಕೆಯ ರೀತಿ, ಕಲಿಕೆಯ ಶೈಲಿ, ಕಲಿಕಾ ವೇಗ ಮಗುವಿನಿಂದ ಮಗುವಿಗೆ ಭಿನ್ನವಾಗಿರುತ್ತದೆ. ಈ ಅಂಶಗಳನ್ನು ಪರಿಗಣಿಸಿ ಕಲಿಕೆಯನ್ನು ವೈಯಕ್ತಿಕಗೊಳಿಸುವುದರ ಜೊತೆಗೆ ಕಲಿಕೆ ಆಪ್ತವಾಗಲು ಅದನ್ನು ಸಂತಸದಾಯಕ ಗೊಳಿಸುವ ನಿಮಿತ್ತ ಆಯ್ದುಕೊಂಡ ವಿಧಾನವೇ ನಲಿಕಲಿ.

ಬಹುವರ್ಗ ಹಾಗೂ ಬಹುಹಂತದ ಕಲಿಕೆ ಎಂಬ ಸಾರ್ವತ್ರಿಕ ಸಮಸ್ಯೆಗೆ ಪರಿಹಾರವಾಗಿ ಕಾರ್ಯಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರಿಂದಲೇ ಸಿದ್ಧಗೊಂಡ ವಿಧಾನ ನಲಿಕಲಿಯಾಗಿದ್ದು, ಇದು ಶಿಕ್ಷಕ ಹಾಗೂ ಶಿಶು ಸ್ನೇಹಿ ಚಟುವಟಿಕೆ ಆಧಾರಿತ ವಿಧಾನವಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಪ್ರಾಥಮಿಕ ಹಂತದಲ್ಲಿ ಮಕ್ಕಳ ಸ್ವ ವೇಗದ ಕಲಿಕೆಗೆ, ಸ್ವಕಲಿಕೆಗೆ ಮತ್ತು ಸಂತಸದ ಕಲಿಕೆಗೆ ಈ ಪದ್ಧತಿಯಲ್ಲಿ ಅವಕಾಶ ಮಾಡಿಕೊಟ್ಟಿರುವುದು ನಮ್ಮರಾಜ್ಯದ ಹೆಗ್ಗಳಿಕೆ. ಹೀಗಾಗಿ ಕರ್ನಾಟಕದಂತೆ ಭಾರತದ ಹಲವು ರಾಜ್ಯಗಳು ಈ ಪದ್ಧತಿಯನ್ನು ಅಳವಡಿಸಿಕೊಂಡಿವೆ. ಅವರದೆಯಾದ ಹೆಸರಿನಲ್ಲಿ ಕಲಿಕಾ ಪ್ರಕ್ರಿಯೆ ಸಾಗುತ್ತಿದೆ.

ಮೊದಲು ಈ ಪದ್ಧತಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿ ಜನ್ಮ ತಾಳಿ, ನಂತರ ಡಿಪಿ.ಇ.ಪಿ. ಜಿಲ್ಲೆಗಳ ಆಯ್ದ ಕೆಲವು ತಾಲ್ಲೂಕು, ಕ್ಲಸ್ಟರ್‌ಗಳಲ್ಲಿ ಅಳವಡಿಸಲ್ಪಟ್ಟಿತು. 1999-2000ನೇ ಸಾಲಿನಲ್ಲಿ ಜನಶಾಲಾ ಕಾರ್ಯಕ್ರಮದಡಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ 10 ತಾಲ್ಲೂಕುಗಳಿಗೆ ವಿಸ್ತರಿಸಲ್ಪಟ್ಟಿತು. 

2008-2009ನೇ ಸಾಲಿನಲ್ಲಿ ರಾಜ್ಯದ 30ಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆಯನ್ನು ಹೊಂದಿರುವ 13,691 ಪ್ರಾಥಮಿಕ ಶಾಲೆಗಳಲ್ಲಿ ಜಾರಿಗೆ ತರಲ್ಪಟ್ಟಿತು. 

2009-10 ನೇ ಸಾಲಿನಿಂದ ರಾಜ್ಯದ ಎಲ್ಲಾ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ 1 ಮತ್ತು 2ನೇ ತರಗತಿಗಳಿಗೆ ವಿಸ್ತರಿಸಲ್ಪಟ್ಟಿತು. 

2010—11ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ 1 ರಿಂದ 3ನೇ ತರಗತಿಯವರೆಗೆ ವಿಸ್ತರಿಸಲ್ಪಟ್ಟಿದೆ.

2012-13ನೇ ಸಾಲಿನಲ್ಲಿ ರಾಜ್ಯಾದ್ಯಂತ ಎಲ್ಲ ಸರಕಾರಿ ಉರ್ದು ಮಾಧ್ಯಮ ಶಾಲೆಗಳಲ್ಲಿ ಈ ಪದ್ಧತಿ ಜಾರಿ ಮಾಡಲಾಯಿತು.


• ಶಿಶು ಕೇಂದ್ರಿತ ಶಿಕ್ಷಣಕ್ಕೆ ಪ್ರಥಮಾದ್ಯತೆ ನೀಡಲಾಗಿದೆ.• ಬಹುವರ್ಗ ಮತ್ತು ಬಹುಹಂತದ ಕಲಿಕಾ ಪ್ರಕ್ರಿಯೆಗೆ ಮುಕ್ತ ಅವಕಾಶ.• ಅರ್ಥಪೂರ್ಣ ಹಾಗೂ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಕಲಿಕೆ.• ಚಟುವಟಿಕೆಯ ಕ್ರಮಬದ್ಧ ನಿರ್ವಹಣೆಯ (ಒಂದು ಮೆಟ್ಟಿಲಿನ ನಂತರ ಮತ್ತೊಂದು ಮೆಟ್ಟಿಲು) ಮೂಲಕ ಕಲಿಕೆಯನ್ನು ಸ್ಥಿರಗೊಳಿಸಲು ಅವಕಾಶ.• ಮಗು ತನ್ನದೇ ಆದ ವೇಗದಲ್ಲಿ ಕಲಿಯಲು ಮುಕ್ತ ಅವಕಾಶ.• ಗೊತ್ತುಪಡಿಸಿದ ಕಲಿಕಾಂಶದ ಕಲಿಕೆಯ ನಂತರವೇ ಮುಂದಿನ ಕಲಿಕಾಂಶದ ಕಲಿಕೆ.• ಒಂದು ಶೈಕ್ಷಣಿಕ ವರ್ಷಕ್ಕೆ ಗೊತ್ತುಪಡಿಸಿದ ಕಲಿಕೆಯನ್ನು ಪೂರ್ಣಗೊಳಿಸಿದ ನಂತರವೇ ಮುಂದಿನ ವರ್ಷದ ಕಲಿಕೆಗೆ ತೊಡಗಲು ಅವಕಾಶ.• ಕಲಿಕಾರ್ಥಿಯು ಸುಗಮಕಾರರ ಮಾರ್ಗದರ್ಶನದಲ್ಲಿ ಕಲಿಕೆಯನ್ನು ಆರಂಭಿಸಿದ ನಂತರ ಗೆಳೆಯರ ಸಹಾಯದಲ್ಲಿ ಪುನರ್ಬಲನಗೊಂಡು ಅಂತಿಮವಾಗಿ ಸ್ವತಂತ್ರ ಕಲಿಕಾರರಾಗಲು ಅವಕಾಶ.• ನಲಿಕಲಿ ಪದ್ಧತಿಯು ರಚನಾವಾದದ ತತ್ವವನ್ನಾಧರಿಸಿ, ಗೆಳೆಯರ ಸಹಾಯದಿಂದ ಕಲಿಯುವ ಮೂಲಕ ಸಹಭಾಗಿತ್ವದ ಕಲಿಕೆಗೆ ಅವಕಾಶ.• ಪ್ರಗತಿ ನೋಟದ ಮೂಲಕ ಕಲಿಕಾರ್ಥಿಯು ತನ್ನ ಕಲಿಕೆಯ ಗುರಿಯನ್ನು ತಿಳಿಯುವ ಜೊತೆಗೆ ಕಲಿಕೆಯಲ್ಲಿ ತನ್ನ ಸ್ಥಾನವನ್ನು ತಿಳಿಯಲು ಸ್ವಾವಲೋಕನ ವ್ಯವಸ್ಥೆ.• ಕಲಿಕಾ ಗುಂಪುಗಳು ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಆಧರಿಸಿ ರಚನೆಯಾಗುವ ಬದಲಿಗೆ ಅವರು• ಕಲಿಕಾರ್ಥಿಯು ಸ್ವವೇಗದಲ್ಲಿ ಕಲಿಯುತ್ತಾ ಹೋಗುವುದರಿಂದ ಇದು ಕಲಿಕೆಯ ಆಧಾರಿತವಾಗಿದೆಯೇ ಹೊರತು ಸುಗಮಕಾರರ ಬೋಧನೆ ಆಧಾರವಾಗಿರುವುದಿಲ್ಲ.• ಬಹುಪಾಲು ಕಲಿಕಾ ಸಾಮಗ್ರಿಗಳು ಬದಲಾಯಿಸಬಹುದಾದ ಕಾರ್ಡು/ವಸ್ತುಗಳ ರೂಪದಲ್ಲಿರುವುದರಿಂದ ಚಟುವಟಿಕೆಗಳಲ್ಲಿ ನಿರಂತರವಾಗಿ ಪರಿವರ್ತನೆ ತರಲು ಸಾಧ್ಯ.• ಮೌಲ್ಯಮಾಪನ ಚಟುವಟಿಕೆಗಳು ವಿದ್ಯಾರ್ಥಿಯ ಗಮನಕ್ಕೆ ಬಾರದೇ ನಿರಂತರವಾಗಿ ಆಟಗಳ ಮೂಲಕ ನಡೆಯುವುದರಿಂದ ಕಲಿಕಾರ್ಥಿಗೆ ಮೌಲ್ಯಮಾಪನ ಎಂಬುದು ಸಂತಸದ ಅನುಭವವಾಗಿರುತ್ತದೆ.• ಸ್ಥಳೀಯ ಸಂಪನ್ಮೂಲಗಳ ಬಳಕೆಗೆ ಅವಕಾಶ. ಭೌತಿಕ ಹಾಗೂ ಬೌದ್ಧಿಕ ಪೂರ್ವ ಸಿದ್ಧತೆಗಳನ್ನು ಒಳಗೊಂಡಿದೆ.• ಗೈರುಹಾಜರಿ ಮತ್ತು ದೀರ್ಘ ಗೈರುಹಾಜರಿ ಕಲಿಕಾರ್ಥಿಗಳ ತರಗತಿಗೆ ಪುನಃ ಶಾಲೆಗೆ ಹಾಜರಾದಾಗ ತಮ್ಮ ಕಲಿಕೆ ನಿಂತಲ್ಲಿಂದಲೇ ಪ್ರಾರಂಭಿಸಲು ಅವಕಾಶವಿದೆ.• ಪ್ರತಿ ಸಾಮರ್ಥ್ಯ/ ಪರಿಕಲ್ಪನೆಗಳ ಕಲಿಕೆಗೆ ಪ್ರತ್ಯೇಕ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಿ ನೀಡಿರುವುದರಿಂದ ಶಿಕ್ಷಕರ ಹೊರೆ ಕಡಿಮೆ ಆಗಿದೆ.• ಕಲಿಕೆಯ ಪುನರ್ಬಲನಕ್ಕಾಗಿ ಪ್ರತಿ ಕಲಿಕಾರ್ಥಿಗೆ ಪ್ರತಿ ವಿಷಯದ ಅಭ್ಯಾಸ ಪುಸ್ತಕವನ್ನು ನೀಡಲಾಗಿದೆ.• ಕಲಿಕಾ ಸಾಮಗ್ರಿಯನ್ನು ತಾನೇ ಬಳಸಲು, ನಿರ್ವಹಿಸಲು ಅವಕಾಶವಿದೆ.• ಕಲಿಕಾರ್ಥಿಗಳ ಸೃಜನಾತ್ಮಕ ಚಿಂತನೆ ಮತ್ತು ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲು ಕ್ರಾಫ್ಟ್, ಆಟಗಳು, ಹಾಡು, ಕಥೆ ಮುಂತಾದ ಚಟುವಟಿಕೆಗಳನ್ನು ಅಳವಡಿಸಲಾಗಿದೆ.• ಸಾಂಪ್ರದಾಯಿಕ ಪದ್ಧತಿಯಿಂದ ಹೊರತಾದ ತರಗತಿ ವಾತಾವರಣ ನಿರ್ಮಿಸಲಾಗಿದೆ.• ಕಲಿತ ಕಲಿಕಾಂಶವನ್ನು ಬರವಣಿಗೆಯ ಮೂಲಕ ವ್ಯಕ್ತಪಡಿಸಲು ವಾಲ್‌ಸ್ಲೇಟ್ ವ್ಯವಸ್ಥೆ ಮಾಡಲಾಗಿದೆ.








ನಲಿಕಲಿ ಕಲಿಕಾ ವಿಧಾನದ ಪ್ರಮುಖ ಅಂಶಗಳು:

ಭಾಗವಹಿಸುವ ಚಟುವಟಿಕೆಯನ್ನು ಆಧರಿಸಿ ರಚನೆಯಾಗುವುದರಿಂದ ಯಾವುದೇ ಅಸಮಾನತೆಗೆ ಅವಕಾಶವಿಲ್ಲ.

• ಸಾಂಪ್ರದಾಯಕ ಬೊಧನೆಯು ಶಿಕ್ಷಕ ಕೇಂದ್ರಿತವಾಗಿದ್ದರೆ ನಲಿ-ಕಲಿ ಪದ್ಧತಿಯು ಶಿಶು ಕೇಂದ್ರಿತ ಕಲಿಕೆಯಾಗಿದೆ. ಚಟುವಟಿಕೆ ಆಧಾರಿತ ಕಲಿಕೆಗೆ ಸಂಪೂರ್ಣ ಒತ್ತು ಕೊಡಲಾಗಿದೆ. ಮಗು ವಿಷಯವನ್ನು ಸ್ವತ: ಅನುಭವಿಸಿ ಅರ್ಥೈಸಿಕೊಂಡು ಅನ್ವಯಿಸಿಕೊಳ್ಳುತ್ತದೆ. ಈ ವಿಧಾನದಲ್ಲಿ ಚಿಕ್ಕ ಚಿಕ್ಕ ಘಟಕಗಳ ಮೂಲಕ ಕಲಿಕೆ ಸಾಗುತ್ತದೆ. 
ಉದಾಹರಣೆ: ಸಾಂಪ್ರದಾಯಕ ಬೋಧನೆಯಲ್ಲಿ ಭಾಷಾ ವಿಷಯವು ಎಲ್ಲ ಸ್ವರ ಮತ್ತು ವ್ಯಂಜನಗಳನ್ನು ಕಲಿತ ನಂತರವೇ ಪದಗಳನ್ನು ವಾಕ್ಯಗಳನ್ನು ರಚನೆ ಮಾಡುತ್ತಿದ್ದರು ಆದರೆ ನಲಿ-ಕಲಿಯಲ್ಲಿ ಐದು ಅಕ್ಷರಗಳನ್ನು ಕಲಿತ ನಂತರ ಪದಗಳನ್ನು ರಚಿಸಬಹುದು. 1ನೇ ತರಗತಿ ಮುಗಿಸುವಷ್ಟರಲ್ಲಿ ಸುಮಾರು 1500 ಪದಗಳನ್ನು ಮಗು ಗ್ರಹಿಸುವ ಸಾಮರ್ಥ್ಯ ಪಡೆದುಕೊಳ್ಳುವುದು. 2ನೇ ತರಗತಿ ಮುಗಿಸುವಷ್ಟರಲ್ಲಿ ಸುಮಾರು 2000 ಪದಗಳನ್ನು ಮಗು ಗ್ರಹಿಸುವ ಸಾಮರ್ಥ್ಯ ಪಡೆದುಕೊಳ್ಳುವುದು. 3ನೇ ತರಗತಿ ಮುಗಿಸುವಷ್ಟರಲ್ಲಿ ಸುಮಾರು 3000 ಪದಗಳನ್ನು ಮಗು ಗ್ರಹಿಸುವ ಸಾಮರ್ಥ್ಯ ಪಡೆದುಕೊಳ್ಳುವುದು.

• ಸಾಂಪ್ರದಾಯಕ ಬೋಧನೆಯ ಗಣಿತ ವಿಷಯದಲ್ಲಿ 1 ರಿಂದ 100 ಸಂಖ್ಯೆಗಳನ್ನು ಕಲಿತ ನಂತರವೇ ಮೂಲಕ್ರಿಯೆಗಳನ್ನು ಮಾಡಲು ಅವಕಾಶವಿತ್ತು ಆದರೆ ಇಲ್ಲಿ 1ರಿಂದ 5 ಅಂಕಿಗಳನ್ನು ಕಲಿತ ನಂತರವೇ ಕಲಿತ ಅಂಕಿಗಳ ಸಹಾಯದಿಂದ ಸರಳ ಮೂಲಕ್ರಿಯೆಗಳನ್ನು ಮಾಡಲು ಮಗು ಪ್ರಾರಂಭಿಸಿವುದು.

• ಹೀಗೆ ನಲಿ-ಕಲಿ ಪದ್ಧತಿಯಲ್ಲಿ ಮಗು ಚಿಕ್ಕ ಚಿಕ್ಕ ಘಟಕಗಳ ಮೂಲಕ ಮಗುವಿನ ಕಲಿಕೆ ಪ್ರಾರಂಭವಾಗಿ ಹಲವಾರು ಚಟುವಟಿಕೆಗಳ ಮೂಲಕ ಮಗುವಿನ ಮೌಲ್ಯಮಾಪನ ಮಗುವಿಗೆ ಗೊತ್ತಾಗದಂತೆ ಸಂತಸ ಕಲಿಕೆಯ ಮೂಲಕ ನಡೆದು ಕಲಿಕೆ ಗಟ್ಟಿಗೊಳ್ಳುತ್ತಾ ಸಾಗುತ್ತದೆ.











.................... END ......................