ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ಟ್ರಾಕಿಂಗ್ ವ್ಯವಸ್ಥೆ ( SATS ) :
ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆಯು (SATS) ಕರ್ನಾಟಕ ಸರ್ಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಮ್ಮೆ. ಇದನ್ನು 'ಶಿಕ್ಷಣ ಕಿರಣ’ ಎಂದೂ ಕರೆಯಲಾಗುತ್ತದೆ. ಕರ್ನಾಟಕದ 77905 ಶಾಲೆಗಳ, ಒಂದು ಕೋಟಿಗೂ ಹೆಚ್ಚು ಮಕ್ಕಳ ಸಮಗ್ರ ಮಾಹಿತಿಯನ್ನು ಈ ತಂತ್ರಾಂಶದಲ್ಲಿ ಇಂದೀಕರಿಸಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಶಾಲಾ ವ್ಯವಸ್ಥೆಯ ಮಾಹಿತಿಯನ್ನು ತಂತ್ರಾಂಶವೊಂದರಲ್ಲಿ ಇಂದೀಕರಿಸಿರುವುದು ಕರ್ನಾಟಕ ಸರ್ಕಾರದ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಮ್ಮೆ.
ಯೋಜನೆಯ ಮುಖ್ಯ ಉದ್ದೇಶಗಳು:
• ಶಾಲೆಗೆ ದಾಖಲಾಗಲು ಅರ್ಹರಿರುವ ಮಕ್ಕಳ ಶೇ. 100 ರಷ್ಟು ದಾಖಲಾತಿಯನ್ನು ಸಾಧಿಸುವಲ್ಲಿ ಮತ್ತು ದಾಖಲಾಗುವ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅಗತ್ಯವಾಗಿರುವ ಪೂರಕ
ಮಾಹಿತಿಯನ್ನು ಆನ್‌ಲೈನ್ ಮೂಲಕ ಸಂಗ್ರಹಿಸುವುದು.
• ದಾಖಲಾಗುವ ಎಲ್ಲಾ ಮಕ್ಕಳ ಹಾಜರಾತಿ ಮತ್ತು ಕಲಿಕೆಯನ್ನು ಟ್ರ್ಯಾಕಿಂಗ್ ಮಾಡುವ ಮೂಲಕ ಎಲ್ಲ ಮಕ್ಕಳೂ ಶಾಲೆಯಲ್ಲಿರುವುದನ್ನು ಮತ್ತು ಗುಣಮಟ್ಟದ ಶಿಕ್ಷಣ ಪಡೆಯುತ್ತಿರುವುದನ್ನು ಖಾತ್ರಿ
ಪಡಿಸಿಕೊಳ್ಳುವುದು.
• ಶಾಲೆಗಳ ಸಮಗ್ರ ಮಾಹಿತಿಯನ್ನು ಬಳಸಿಕೊಂಡು ವಿವಿಧ ಕಾರ್ಯಕ್ರಮಗಳು, ವಿವಿಧ ಇಲಾಖೆ ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಎಲ್ಲರನ್ನೂ ಒಳಗೊಳ್ಳುವ ಗುಣಮಟ್ಟದ ಶಿಕ್ಷಣವನ್ನು ನೀಡಲು ಬೆಂಬಲವನ್ನು ನೀಡುವುದು.
ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆಯ ಮುಖ್ಯಾಂಶಗಳು :
1. ಎಲ್ಲಾ ಶಾಲೆಗಳಿಗೂ ನೋಂದಣಿಗೆ ಅವಕಾಶ ನೀಡಲಾಗಿದೆ. ನೋಂದಣಿ ಮಾಡಿಕೊಂಡ ಎಲ್ಲಾ ಶಾಲೆಗಳೂ ತಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಮೂಲಕ ತಮ್ಮ ಶಾಲೆಯ ಪುಟವನ್ನು ತೆರೆದು ಮಾಹಿತಿಗಳನ್ನು ಇಂದೀಕರಿಸಲಾಗುತ್ತದೆ.
2. ಶಾಲೆಗೆ ಸಂಬಂಧಿಸಿದ ಮೂಲಭೂತ ಸೌಲಭ್ಯಗಳು, ಶಿಕ್ಷಕರ ವಿವರಗಳು, ವಿಳಾಸ ಇತ್ಯಾದಿ ವಿವರ ಗಳನ್ನು ಸಮಗ್ರವಾಗಿ ತಂತ್ರಾಂಶದಲ್ಲಿ ಕಾಲಕಾಲಕ್ಕೆ ಇಂದೀಕರಿಸಲು ಅವಕಾಶ ನೀಡಲಾಗಿದೆ.
3. ವಿದ್ಯಾರ್ಥಿಗಳಿಗೆ 9 ಅಂಕಿಗಳ ಗುರುತಿನ ಸಂಖ್ಯೆಯನ್ನು ನೀಡುವ ಮೂಲಕ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ವಿದ್ಯಾರ್ಥಿ ಮತ್ತು ಪೋಷಕರ ಸಮಗ್ರ ಮಾಹಿತಿಯನ್ನು ದಾಖಲಿಸಲು ಅವಕಾಶ ನೀಡಿದೆ. ಈ ಮಾಹಿತಿಯು ಮಗು ಮತ್ತು ಪೋಷಕರ ವಿಳಾಸ, ಜಾತಿ/ಧರ್ಮ, ಆಧಾರ್, ಬ್ಯಾಂಕ್ ಖಾತೆ ವಿವರಗಳು, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ವಿವರಗಳು, ಅಂಗವೈಕಲ್ಯದ ವಿವರಗಳು, ಇತ್ಯಾದಿ ವಿವರಗಳನ್ನು ಹೊಂದಿದೆ.
4. ವಿದ್ಯಾರ್ಥಿಯ ಕಲಿಕಾ ಸಾಧನೆ, ಹಾಜರಾತಿಯನ್ನು, ಉತ್ತೀರ್ಣತೆ ಇತ್ಯಾದಿಗಳನ್ನು ಕಾಲಕಾಲಕ್ಕೆ ಇಂದೀಕರಿಸಲು ಅವಕಾಶ ನೀಡಿದೆ.
5. ವಿದ್ಯಾರ್ಥಿಯ ಗುರುತಿನ ಸಂಖ್ಯೆಯನ್ನು ಬಳಸಿ ತಂತ್ರಾಂಶದ ಸಹಾಯದಿಂದ ವಿದ್ಯಾರ್ಥಿಯ ವಿವರಗಳನ್ನು ಹುಡುಕಲು ಅವಕಾಶವಿದೆ.
6. ಶಾಲೆ, ಕ್ಲಸ್ಟರ್, ತಾಲ್ಲೂಕು ಹಾಗೂ ಜಿಲ್ಲೆಗಳಿಗೆ ಪ್ರತ್ಯೇಕ್ ಲಾಗಿನ್ ನೀಡಲಾಗಿದ್ದು ಎಲ್ಲಾ ಹಂತ ಗಳಲ್ಲಿಯೂ ಅನೇಕ ರೀತಿಯ ವರದಿಗಳನ್ನು, ಅಂಕಿ ಅಂಶಗಳನ್ನು ಪಡೆಯಲು ಅವಕಾಶ ನೀಡಲಾಗಿದೆ.
7. ವಿದ್ಯಾರ್ಥಿಯ ವರ್ಗಾವಣೆ ಪತ್ರಗಳನ್ನು ಆನ್‌ಲೈನ್ ಮೂಲಕವೇ ನೀಡುವ ಮತ್ತು ದಾಖಲಾತಿ ಮಾಡಿಕೊಳ್ಳುವ ಅವಕಾಶ ನೀಡಿದೆ.
8. ಶಾಲೆ ಬಿಟ್ಟ ಮಕ್ಕಳ ವಿವರಗಳನ್ನು ದಾಖಲಿಸಲು ಮತ್ತು ಅವರನ್ನು ಗುರುತಿಸಿ ಪುನ: ಶಾಲೆಗೆ ಬರುವಂತೆ ಮಾಡಲು ತಂತ್ರಾAಶದ ನೆರವು ಪಡೆಯಬಹುದು.
9. ವಿಶೇಷ ಅಗತ್ಯವುಳ್ಳ ಮಕ್ಕಳ ಸಮಗ್ರ ವಿವರಗಳು ಇಲ್ಲಿ ಲಭ್ಯವಿದ್ದು ಅವರಿಗಾಗಿ ಕಾರ್ಯಕ್ರಮ ಗಳನ್ನು ರೂಪಿಸಲು ನೆರವಾಗುತ್ತದೆ.
10. ಶಾಲಾ ಮಕ್ಕಳಿಗೆ ಸರ್ಕಾರದಿಂದ ದೊರೆಯುವ ಪ್ರೋತ್ಸಾಹಕಗಳು ಮತ್ತು ಸೌಲಭ್ಯಗಳಾದ ಪಠ್ಯ ಪುಸ್ತಕ, ಸಮವಸ್ತ್ರ, ವಿದ್ಯಾರ್ಥಿ ವೇತನ, ಬೈಸಿಕಲ್ ಇತ್ಯಾದಿ ಮಾಹಿತಿಗಳನ್ನು ನಿರ್ವಹಣೆ ಮಾಡಲೂ ಕೂಡಾ ಅವಕಾಶ ನೀಡಿದೆ.
11. ಎಸ್ ಎಸ್ ಎಲ್ ಸಿ ಪರೀಕ್ಷಾ ಕಾರ್ಯವನ್ನು ಈ ತಂತ್ರಾಂಶದ ಮೂಲಕವೇ ನಿರ್ವಹಿಸಲಾಗುತ್ತಿದೆ.
12. ಶಾಲೆಗಳಿಗೆ ಅನುದಾನ ನೀಡಲು, ವಿವಿಧ ಸೌಲಭ್ಯಗಳನ್ನು ಒದಗಿಸಲು SATS ಅಂಕಿ ಅಂಶಗಳನ್ನೇ ಬಳಸಿಕೊಳ್ಳಲಾಗುತ್ತಿದೆ.
13. SATS ನಲ್ಲಿ ಲಭ್ಯವಿರುವ ಮಾಹಿತಿಗಳನ್ನಾಧರಿಸಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಅನುಕೂಲವಾಗುತ್ತಿದೆ.
14. SATS ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸುವುದು ಮತ್ತು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ದೈನಂದಿನ ಹಾಜರಾತಿಯನ್ನು ದಾಖಲಿಸುವ ಭವಿಷ್ಯದ ದೂರದೃಷ್ಠಿಯನ್ನೂ ಕೂಡಾ ಹೊಂದಿದೆ.
.................. END .....................