ಶಾಲಾ ಅಭಿವೃದ್ಧಿ ಯೋಜನೆ (SCHOOL DEVOLPMENT PLAN):


ಮಕ್ಕಳ ಕಲಿಕೆಯನ್ನು ನಿರ್ವಹಿಸುವಲ್ಲಿ ಶಾಲೆ ಅತ್ಯಂತ ಮಹತ್ವಪೂರ್ಣವಾದ ಸ್ಥಳ. ಈ ಕಲಿಕೆಯನ್ನು ಹಲವಾರು ಅಂಶಗಳು ಪ್ರಭಾವಿಸುತ್ತವೆ. ಅವೆಂದರೆ ಸ್ಥಳೀಯ ಸನ್ನಿವೇಶ, ಕಲಿಕೋಪಕರಣಗಳು, ಮಕ್ಕಳ ಮನೋಸಾಮಾಜಿಕ ಅಂಶಗಳು ಮತ್ತು ಪೋಷಕರ ಪ್ರಭಾವ. ಪ್ರಸ್ತಾಪಿತ ಅಂಶಗಳ ಬೆಂಬಲ ವಿಲ್ಲದಿದ್ದರೆ ಶಿಕ್ಷಕರು ಕಲಿಕಾ ಅನುಭವಗಳನ್ನು ಕಟ್ಟಿಕೊಡುವ ಸನ್ನಿವೇಶ ನಿರ್ಮಾಣ ಆಗದೇ ಇರಬಹುದು, ಆದುದರಿಂದ ಈ ಪ್ರಭಾವಿಸುವ ಅನುಭವಗಳನ್ನು ಒಳಗೊಂಡಂತೆ ಶಿಕ್ಷಕರ ಪ್ರಯತ್ನಗಳು ಹಾಗೂ ಪೋಷಕರ ನಿರೀಕ್ಷೆಗಳಿಗೂ ಪರಸ್ಪರ ಸಂಬAಧವಿರಬೇಕು. ತರಗತಿ ಅನುಭವಗಳನ್ನು ಸಂಯೋಜಿಸುವಲ್ಲಿ ಶಾಲೆಯ ಅಗತ್ಯಗಳೇನು? ಈ ಅಗತ್ಯಗಳನ್ನು ಹೇಗೆ ಪೂರ್ಣ ಗೊಳಿಸಿಕೊಳ್ಳಬೇಕು? ಇದನ್ನು ಸಾಧಿಸುವಲ್ಲಿ ಪೋಷಕರ ಪಾತ್ರವೇನು? ಎಂಬುವು ಬಹಳ ಮಹತ್ವದ ಪ್ರಶ್ನೆಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಮುದಾಯ ಮತ್ತು ಎಸ್.ಡಿ.ಎಂ.ಸಿ. ಕೇವಲ ಸರ್ಕಾರವನ್ನು ಮಾತ್ರ ಅವಲಂಬಿಸದೆ ತನ್ನದೇ ಸಂಪನ್ಮೂಲವನ್ನು ಒಟ್ಟು ಮಾಡಬೇಕಾದ ಅವಶ್ಯಕತೆಯಿದೆ. ಈ ಕಾರ್ಯದಲ್ಲಿ ಭಾಗೀದಾರರಾಗಿ, ಪೋಷಕರಾಗಿ, ಪೋಷಕರ ಪ್ರತಿನಿಧಿಯಾಗಿ ಈ ಕೆಲವು ಪ್ರಶ್ನೆಗಳಿಗೆ ಉತ್ತರಿಸಿಕೊಳ್ಳಿ.

1. ನೀವು ನಿಮ್ಮ ಮಗು ಕಲಿಯುತ್ತಿರುವ ಶಾಲೆಯಲ್ಲಿ ಬಯಸುವ ಸೌಲಭ್ಯಗಳಾವುವು?
 ಭೌತಿಕ ( ಶಾಲಾ ಕಟ್ಟಡ) ಇತ್ಯಾದಿ
 ಕಲಿಕೆ
 ಶಿಕ್ಷಕರು
 ಮೌಲ್ಯಮಾಪನ
 ಇತರೆವಿಷಯಗಳು.

2. ನೀವು ಶಾಲೆಯ ಬಗ್ಗೆ ಶಾಲೆಯಲ್ಲಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಹೇಗೆ ಪಡೆಯುವಿರಿ?

3. ನೀವು ನಿಮ್ಮ ಶಾಲೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ /ಪೂರೈಸಿದ ಸೌಲಭ್ಯಗಳಾವವು?

4. ನೀವು ನಿಮ್ಮ ಶಾಲೆಯಲ್ಲಿ ಅತೀ ಅಗತ್ಯವಾಗಿ ಇರಬೇಕೆಂದು ಬಯಸುವ ಮೊದಲ ಮೂರು ಆದ್ಯತೆಗಳಾವವು?

5. ಈ ಅಂಶಗಳನ್ನು ಹೊಂದಲು/ನಿರ್ವಹಿಸಲು ನೀವು ಈ ಹಿಂದೆ ಮಾಡಿದ ಪ್ರಯತ್ನಗಳೇನು?

6. ಇಂತಹ ಪ್ರಯತ್ನಗಳು ಯಶಸ್ವಿಯಾಗಲು/ಯಶಸ್ವಿಯಾಗದಿರಲು ಕಾರಣವಾದ ಅಂಶಗಳಾವವು?

7. ಶಾಲಾಭಿವೃದ್ಧಿ ಯೋಜನೆ ಎಂದರೇನು?

8. ಈಗ ಮತ್ತೊಮ್ಮೆ ನೀವು ಬಯಸಿರುವ ಸೌಲಭ್ಯಗಳನ್ನು ಹೊಂದಲು/ ನಿರ್ವಹಿಸಲು ಅಡ್ಡಿಯಾದ ಕಾರಣಗಳನ್ನು ನಿವಾರಿಸಿಕೊಳ್ಳುವುದು ಹೇಗೆ?

9. ನೀವು ಬಯಸಿದಂತೆ ಶಾಲೆಯನ್ನು ರೂಪಿಸುವಲ್ಲಿ ನೀವು ಹೇಗೆ ಸಹಕರಿಸುವಿರಿ?

10. ನಿಮ್ಮ ದೃಷ್ಟಿಯಲ್ಲಿ ಮಕ್ಕಳ ಕಲಿಕೆಯನ್ನು ಉಂಟುಮಾಡಲು ಶಾಲೆಯು ಕೈಗೊಳ್ಳಬೇಕಾದ ಕ್ರಮಗಳಾವವು? ನಿಮ್ಮ ಶಾಲೆಯಲ್ಲಿ ಇವುಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಯಿತೆ?

ಪ್ರಸ್ತುತ ತಾವು ನೀಡಿಕೊಂಡಿರುವ ಉತ್ತರಗಳನ್ನು ಗಮನಿಸಿ. ಅತ್ಯಂತ ಅಗತ್ಯವಾಗಿ ಇವುಗಳಿಗೆ ಸಂಬಂಧಿಸಿದಂತೆ ನೀವು ಹೇಗೆ ಸಹಕರಿಸಬಹುದು? ಆಲೋಚಿಸಿ ಮುನ್ನಡೆಯಿರಿ. ಮುಖ್ಯ ಶಿಕ್ಷಕರೊಂದಿಗೆ, ಇತರರೊಂದಿಗೆ ಕೈಜೋಡಿಸಿ. ಯಾವುದೇ ಶಾಲೆಯ ಅಭಿವೃದ್ಧಿ ಹಾಗೂ ಅಪೇಕ್ಷಿತ ಬದಲಾವಣೆಗಾಗಿ ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯವಾಗಿದೆ. ಆದುದರಿಂದ ನಿಮ್ಮ ಪಾಲ್ಗೊಳ್ಳುವಿಕೆ ಶಾಲಾದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ ಹಾಗೂ ನಿಯಮಗಳಲ್ಲಿ ಶಾಲಾಭಿವೃಧ್ಧಿ ಯೋಜನೆಯನ್ನು ಸಿದ್ಧ ಪಡಿಸುವುದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಜವಾಬ್ದಾರಿಯೆಂದು ಆದೇಶಿಸಿದೆ.

ಹೀಗೆ ಶಾಲಾ ಪರಿಸರದ ಪೋಷಕ ಸಮುದಾಯವನ್ನು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಪ್ರಮುಖ
ಭಾಗವಾಗಿಸಿದ ಹೆಗ್ಗಳಿಕೆ ಶಾಲಾಭಿವೃದ್ಧಿ ಯೋಜನೆಗೆ ಇದೆ. 2012-13 ನೇ ಸಾಲಿನಿಂದ ಇದು ಪ್ರತಿಯೊಂದು ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜಾರಿಗೆ ಬಂದಿದೆ. ಇಂತಹ ಯೋಜನೆ ಏಕೆ ಬೇಕು? ಹೇಗಿರಬೇಕು? ಮುಂತಾದ ಅಂಶಗಳನ್ನು ಕುರಿತು ಕಳೆದ ಸಾಲುಗಳಲ್ಲಿ ಅನುಭವ ಪಡೆದಿದ್ದೇವೆ. ಪ್ರತಿಯೊಂದು ಶಾಲೆಯು ತನ್ನದೇ ಆದ ಶಾಲಾಭಿವೃದ್ಧಿ ಯೋಜನೆ (SDP) ಯನ್ನು ಹೊಂದಿದೆ.

ಪ್ರತಿಯೊಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಮೂರು ವರ್ಷಗಳ ದೂರದೃಷ್ಠಿಯುಳ್ಳ ಶಾಲಾ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಬೇಕು.

ಈ ಶಾಲಾ ಅಭಿವೃದ್ಧಿ ಯೋಜನೆಯು, ಸಂದರ್ಭಾನುಸಾರ ಸಮುಚಿತ ಸರ್ಕಾರ ಅಥವಾ ಸ್ಥಳೀಯ
ಪ್ರಾಧಿಕಾರವು ರಚಿಸಿದ ಯೋಜನೆಗಳು ಮತ್ತು ನೀಡಿದ ಅನುದಾನಗಳಿಗೆ ಅನುಗುಣವಾಗಿರಬೇಕು.
ಶಾಲೆಯ ಅಗತ್ಯಕ್ಕನುಗುಣವಾಗಿ ಶಿಕ್ಷಣಹಕ್ಕು ಕಾಯಿದೆಯ ಅನುಸೂಚಿಯಲ್ಲಿ ನಮೂದಿಸಿರುವ ಮಾನಕಗಳು ಹಾಗೂ ‘ಸಂಗಮ’ ಪುಸ್ತಕದಲ್ಲಿ ಶಾಲಾ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ಸೂಚಕಗಳಿಗೆ ಅನುಗುಣವಾಗಿ ಎಸ್‌ಡಿಎಂಸಿ ಶಾಲಾ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವುದು.

(ಎ). ಕಾಯಿದೆಯ ಅನುಸೂಚಿಯಲ್ಲಿರುವಂತೆ ಗುಣಮಟ್ಟದ ವಿಧಿಗಳು ಹಾಗೂ ಮಾನಕಗಳ ಆಧಾರದ ಮೇಲೆ ಪ್ರತ್ಯೇಕವಾಗಿ 1 ರಿಂದ 5 ನೇ ಮತ್ತು 6ರಿಂದ 8ನೇ ತರಗತಿವರೆಗೆ 3 ವರ್ಷಕ್ಕಾಗಿ ಲೆಕ್ಕ ಮಾಡಿದ ಹೆಚ್ಚುವರಿ ಉಪಾಧ್ಯಾಯರ ಅಗತ್ಯತೆ, 2. 3 ವರ್ಷಕ್ಕಾಗಿ ಲೆಕ್ಕ ಮಾಡಿದ ಭೌತಿಕವಾಗಿ ಅಗತ್ಯ ಹೆಚ್ಚುವರಿ ಮೂಲಭೂತ ಸೌಕರ್ಯ 3. 3 ವರ್ಷಕ್ಕಾಗಿ ಈ ಮೇಲಿನ 1 ಮತ್ತು 2 ಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಹಣಕಾಸು ಅಗತ್ಯವನ್ನು ಒಳಗೊಂಡಿರಬೇಕು.

(ಬಿ) ಶಾಲಾಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಹಣಕಾಸು ವರ್ಷದ ಕೊನೆಯ 3 ತಿಂಗಳ
ಮೊದಲು ಶಾಲಾಅಭಿವೃದ್ಧಿ ಯೋಜನೆಯನ್ನು ರಚಿಸಬೇಕು. ಈ ಯೋಜನೆಯು ವಿಶೇಷ ಅಗತ್ಯವುಳ್ಳ
ಮಕ್ಕಳ ಅಗತ್ಯಗಳನ್ನೂಒಳಗೊಂಡಿರಬೇಕು.

(ಸಿ) ಶಾಲಾ ಅಭಿವೃದ್ಧಿ ಯೋಜನೆಯು ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಂಬAಧಿಸಿರಬೇಕು. ಪಠ್ಯಕ್ರಮ ಮತ್ತು ಸಹ-ಪಠ್ಯಕ್ರಮ ಎರಡನ್ನೂ ಒಳಗೊಂಡಂತೆ ಮಕ್ಕಳ ನಿಯತಕಾಲಿಕ ಮಕ್ಕಳ ಕಾರ್ಯಪರಿಮಿತಿ ಪುನರ್ ವಿಮರ್ಶೆಯನ್ನು ಒಳಗೊಂಡಂತೆ ಶಾಲೆಯ ಶೈಕ್ಷಣಿಕ ಬೆಳವಣಿಗೆ ಕಾರ್ಯ ಚಟುವಟಿಕೆಗಳನ್ನು ವಿವರಿಸಬೇಕು.

(ಡಿ) ಶಾಲಾ ಅಭಿವೃದ್ಧಿ ಯೋಜನೆಗೆ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಮುಖ್ಯಸ್ಥ ಮತ್ತು ಕಾರ್ಯದರ್ಶಿ ಸಹಿ ಮಾಡಿರಬೇಕು. ಅದನ್ನು ಸ್ಥಳೀಯ ಪ್ರಾಧಿಕಾರದ ಮೂಲಕ ಬಿ.ಇ.ಓ. ಗೆ ಆರ್ಥಿಕ ವರ್ಷದ ಮುಂಚೆ ಸಲ್ಲಿಸಬೇಕು. ಶಾಲಾ ಅಭಿವೃದ್ಧಿ ಯೋಜನೆಯು ಗ್ರಾಮ ಪಂಚಾಯಿತಿ, ಕ್ಲಸ್ಟರ್, ಬ್ಲಾಕ್ ಹಂತದಲ್ಲಿ ಕ್ರೂಢೀಕೃತವಾಗಿರಬೇಕು ಮತ್ತು ಶಾಲೆಗಳಿಗೆ ಪ್ರತೀ ಶೈಕ್ಷಣಿಕ ಕ್ಷೇತ್ರದಲ್ಲಿ ಯೋಜನಾ ಸಂಪನ್ಮೂಲ ಹಂಚಿಕೆಗೆ ಆಧಾರವನ್ನು ರಚನೆ ಮಾಡಬೇಕು.  ಮೂರು ವರ್ಷಕ್ಕೆ ತಯಾರಿಸಿದ ಶಾಲಾಭಿವೃದ್ಧಿ ಯೋಜನೆಯಲ್ಲಿ ವರ್ಷಕ್ಕೊಮ್ಮೆ ಪುನರಾವಲೋಕಿಸ ಬೇಕು.

ಹಣಕಾಸು ವರ್ಷದ ಕೊನೆಯ ಮೂರು ತಿಂಗಳ ಮೊದಲು ಅಚಿದರೆ ಡಿಸೆಂಬರ್ ಅಂತ್ಯದೊಳಗೆ ಪೋಷಕರ, ಮಕ್ಕಳ, ಎಸ್ ಡಿ ಎಂ ಸಿ ಸದಸ್ಯರ ಮತ್ತು ಎಲ್ಲಾ ಶಿP್ಪ್ಷಕರನ್ನು ಒಳಗೊಂಡ ಸಭೆಯನ್ನು ಆಯೋಜಿಸಿ ಶಾಲೆಗೆ ಮುಂದಿನ ವರ್ಷಕ್ಕೆ ಅಗತ್ಯವಾಗಿ ಬೇಕಾಗುವ ವಸ್ತು, ಸಲಕರಣೆ, ಸಂಪನ್ಮೂಲ ಇತ್ಯಾದಿ ಬೇಡಿಕೆಗಳನ್ನು ಪಟ್ಟಿ ಮಾಡುವುದು.


ಈ ಪಟ್ಟಿಯಲ್ಲಿರುವಂತಹವುಗಳನ್ನು ಆದ್ಯತೀಕರಣಗೊಳಿಸಿ ಅವುಗಳಿಗೆ ತಗಲುವ ವೆಚ್ಚ, ಇಲಾಖೆ ಲಭ್ಯವಾಗುವ ಸಂಪನ್ಮೂಲಗಳು, ಕೊರತೆ ಬೀಳುವ ಸಂಪನ್ಮೂಲಗಳನ್ನು ಲೆಕ್ಕಾಚಾರ ಮಾಡಿ ಕೊರತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅದನ್ನು ಸರಿದೂಗಿಸಿಕೊಳ್ಳುವುದು. ಈ ರೀತಿ ಅಂತಿಮ ಗೊಳಿಸುವಾಗ ಆಯಾ ಕಾರ್ಯಕ್ಕೆ ಅನುಗುಣವಾಗಿ ಜವಾಬ್ದಾರಿಗಳನ್ನು ನಿಗದಿ ಮಾಡುವುದು ಸೂಕ್ತ. ಇದು ಅಲ್ಪಾವಧಿ/ದೀರ್ಘಾವಧಿಯದ್ದಾಗಿರಬಹುದು.


ಶಾಲಾಭಿವೃದ್ಧಿ ಯೋಜನೆ ಎಂದರೇನು?
ಶಾಲಾ ಹಂತದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಯೋಜನೆಗಳನ್ನು ತಯಾರಿಸಲಾಗುತ್ತಿದ್ದು, ಈ ಯೋಜನೆಗಳು ನಾವು ಕೈಗೊಂಡಿರುವ ಕಾರ್ಯಕ್ರಮಗಳಿಗೆ ದಿಕ್ಸೂಚಿಯಂತೆ ಕಾರ್ಯ ನಿರ್ವಹಿಸುತ್ತವೆ. ಅಪೇಕ್ಷಿತ ಮಟ್ಟದಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಹೆಚ್ಚಿನ ಒತ್ತು ನೀಡಲು ಶಾಲಾಭಿವೃದ್ಧಿ ಯೋಜನೆಯನ್ನು ರೂಪಿಸುವುದು ಅಗತ್ಯವಾಗಿದೆ. ಇದು ಶಾಲಾ ಹಂತದಲ್ಲಿ ಮಕ್ಕಳ ಶೈಕ್ಷಣಿಕ ಮತ್ತು ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಸಿದ್ಧಪಡಿಸುವ ಯೋಜನೆಯಾಗಿರುತ್ತದೆ.




ಶಾಲಾಭಿವೃದ್ಧಿ ಯೋಜನೆ ತಯಾರಿ
ಯೋಜನೆಯ ತಯಾರಿ ಮತ್ತು ಅನುಷ್ಠಾನವು ತಂಡದಲ್ಲಿ ನಿರ್ವಹಿಸುವ ಕಾರ್ಯವಾಗಿದೆ. ಪ್ರಕ್ರಿಯೆಗಳನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನ ಮಾಡುವಲ್ಲಿ ತೊಡಗಿಸಿಕೊಳ್ಳುವುದು ಅತೀ ಮುಖ್ಯ ಅಂಶವಾಗಿದೆ. ಯೋಜನೆ ಮತ್ತು ಅನುಷ್ಠಾನದ ಪ್ರತಿಯೊಂದು ಹಂತದಲ್ಲಿ ಸಮುದಾಯದ ನಾಯಕತ್ವ ಗುಣವು ನಿರೀಕ್ಷಿತ ಫಲದ ಮೇಲೆ ತನ್ನ ಪ್ರಭಾವ ಬೀರುತ್ತದೆ.



ಶಾಲೆಯ ವಿವಿಧ ಅಭಿವೃದ್ಧಿ ಕ್ಷೇತ್ರಗಳು

• ಶಾಲಾ ಭೌತಿಕ ಪರಿಸರ
• ತರಗತಿಯ ಕಲಿಕಾ ವಾತಾವರಣ
• ಬೋಧನಾ-ಕಲಿಕೆಯ ಪ್ರಕ್ರಿಯೆಗಳು
• ಶಿಕ್ಷಕರಲ್ಲಿ ಪ್ರೇರಣೆ ಹಾಗೂ ಅವರ ವೃತ್ತಿಪರತೆ
• ಶಾಲಾ ಕಾರ್ಯಕ್ರಮಗಳಲ್ಲಿ ಸಮುದಾಯದ ಭಾಗವಹಿಸುವಿಕೆ
• ಶಾಲಾ ಮುಖ್ಯಶಿಕ್ಷಕರಲ್ಲಿ ನಾಯಕತ್ವ ಗುಣ.

ನಿಮ್ಮ ಶಾಲೆಯ ಸನ್ನಿವೇಶಕ್ಕೆ ಪ್ರಸ್ತುತವೆನ್ನಬಹುದಾದ ಸೂಚಕಗಳನ್ನು ಗುರುತಿಸಿಕೊಂಡು ಆದ್ಯತೀಕರಿಸಿಕೊಳ್ಳಬೇಕು. ಅಂತೆಯೇ ಇಲಾಖೆಯು ಇನ್ನಷ್ಟು ಸೂಚಕಗಳನ್ನೊಳಗೊಂಡ ಪಟ್ಟಿಯನ್ನು ನೀಡಬಹುದು. ಪ್ರಾಥಮಿಕ ಶಾಲೆಗೆ ಸಂಬಂಧಿಸಿದಂತೆ 158 ಸೂಚಕಗಳು ಹಾಗೂ  ಪ್ರೌಢಶಾಲೆಗೆ ಸಂಬಂಧಿಸಿದಂತೆ 141 ಸೂಚಕಗಳನ್ನು ಪಟ್ಟಿ ಮಾಡಿದೆ. (ಹೆಚ್ಚಿನ ಮಾಹಿತಿಗಾಗಿ ‚ಸಂಗಮ‛ ಹಾಗೂ ‚ಸಮ್ಮಿಲನ‛ ಸಾಹಿತ್ಯ ಗಮನಿಸಿ)  ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಶಾಲಾಭಿವೃದ್ಧಿಯ ವಿವಿಧ ಕ್ಷೇತ್ರಗಳಿಗೆ ಸೂಚಕಗಳನ್ನು ಗುರುತಿಸಿ, ಯಾವ ಸೂಚಕಗಳಿಗಾಗಿ ಮಧ್ಯವರ್ತನೆಗಳನ್ನು ಕೈಗೊಳ್ಳಬೇಕಾಗಿದೆ ಎಂದು ಗುರುತಿಸಿದರೆ ಯೋಜಿಸಲು ಒಂದು ಸ್ಪಷ್ಟ ಕಾರ್ಯಸೂಚಿ ದೊರಕಿದಂತಾಗುತ್ತದೆ.



ಶಾಲಾಭಿವೃದ್ಧಿ ಯೋಜನೆಯು ಹೊಂದಿರಬೇಕಾದ ಪ್ರಮುಖ ಅಂಶಗಳು.

2. ಕ್ಷೇತ್ರ
3. ಸೂಚಕ
4. ಪೂರೈಸುವ ಉದ್ದೇಶ
5. ಅವಶ್ಯವಿರುವ ಸಂಪನ್ಮೂಲ
• ಮಾನವ ಸಂಪನ್ಮೂಲ
• ಆರ್ಥಿಕ ಸಂಪನ್ಮೂಲ
• ಭೌತಿಕ ಸಾಮಗ್ರಿಗಳು.
6. ಕಾರ್ಯತಂತ್ರ
7. ಸಮಯ ನಿಗದಿ
8. ಜವಾಬ್ದಾರಿ ಹಂಚಿಕೆ
9. ಉಸ್ತುವಾರಿ
10. ಪುನರಾವಲೋಕನ/ಪೂರಕ ಕಾರ್ಯತಂತ್ರ
11. ಮೌಲ್ಯಮಾಪನ


ಯೋಜನೆಯ ತಯಾರಿ, ಅನುಷ್ಠಾನ, ಅನುಪಾಲನೆ, ಮೌಲ್ಯಮಾಪನ ಕುರಿತಂತೆ ಕೆಲವು ಸಲಹೆಗಳು

 ಯೋಜನೆಯ ಬೆಳವಣಿಗೆಯ ಸಮಯದಲ್ಲಿಯೇ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಯೋಜಿಸಬೇಕು.

 ಯೋಜನೆಯ ಗುರಿ ಮತ್ತು ಕಾರ್ಯತಂತ್ರಗಳಿಗೆ ಪೂರಕವಾಗಿ ದೈನಂದಿನ ಶಾಲಾ ದಿನಚರಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

 ಶಾಲಾ ಸಿಬ್ಬಂದಿ ಸಭೆ, ಎಸ್.ಡಿ.ಎಮ್.ಸಿ. ಸಭೆಗಳಲ್ಲಿ ಯೋಜನೆಯ ಅನುಷ್ಠಾನದ ಕುರಿತು ಚರ್ಚಿಸುವುದು.

 ಶಾಲಾ ಯೋಜನೆಯ ಬಗ್ಗೆ ಹೆಚ್ಚು ಪ್ರಚಾರ ಕಾರ್ಯವನ್ನು ಕೈಗೊಳ್ಳಬೇಕು.

 ಶಾಲಾ ಸುದ್ದಿಪತ್ರದಲ್ಲಿ, ಸ್ಥಳೀಯ ದಿನಪತ್ರಿಕೆಗಳಲ್ಲಿ ಶಾಲಾ ಯೋಜನೆಯ ಕುರಿತು ಪ್ರಕಟಿಸುವುದು.

 ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಪ್ರತಿಯೊಂದು ಸಣ್ಣ ಸಾಧನೆಯನ್ನು ಗುರುತಿಸಿ ಆಚರಿಸಬೇಕು ಮತ್ತು ಸಾಧನೆಯನ್ನು ಪ್ರೋತ್ಸಾಹಿಸಬೇಕು. ಹೀಗೆ ಮಾಡುವುದರಿಂದ ಗುರಿಯೆಡೆಗೆ ನಿರಂತರವಾಗಿ ಮುನ್ನಡೆಯಲು ಸಾಧ್ಯವಾಗುವುದು.

 ಯೋಜನೆಯನ್ನು ಅನುಷ್ಠಾನಗೊಳಿಸಿದ ನಂತರ ಯೋಜನೆಯಲ್ಲಿ ಗುರುತಿಸಿರುವಂತೆ ಮಧ್ಯಂತರ ಹಾಗೂ ಅಂತಿಮ ಮೌಲ್ಯಮಾಪನವನ್ನು ಕೈಗೆತ್ತಿಕೊಳ್ಳಬೇಕು. ವಿದ್ಯಾರ್ಥಿಗಳ ಸೆಮೆಸ್ಟರ್ ಪರೀಕ್ಷೆಯ ಫಲಿತಾಂಶ, ಪ್ರಗತಿ ಪತ್ರ,, ಪೋಷಕರ ವಿದ್ಯಾರ್ಥಿಗಳ ಸಮೀಕ್ಷೆ ಇತ್ಯಾದಿ ಸಾಧನಗಳನ್ನು ಮೌಲ್ಯಮಾಪನ ಮಾಹಿತಿಯ ಮೂಲವನ್ನಾಗಿ ಬಳಸಬಹುದು.

 ಒಮ್ಮೆಗೆ ಯೋಜನೆಯ ಉದ್ದೇಶಗಳ ಈಡೇರಿಕೆಯೇ ಅಂತ್ಯವಲ್ಲ. ಕ್ರಿಯೆಯು ಇಲ್ಲಿಗೆ ನಿಲ್ಲುವುದಿಲ್ಲ. ಮೌಲ್ಯಮಾಪನ ಹಾಗೂ ಪುನರಾವಲೋಕನವು ಮುಂದಿನ ಯೋಜನೆ ಮತ್ತು ಕಾರ್ಯತಂತ್ರಗಳಿಗೆ ಹೆಜ್ಜೆಯಾಗಿರುವುದು. 

ಈ ರೀತಿಯಾಗಿ ಶಾಲಾಭಿವೃದ್ಧಿ ಯೋಜನೆಯು ಆವರ್ತಗಳಲ್ಲಿ ಮುಂದುವರಿಯುತ್ತದೆ. ಕಾಣ್ಕೆಯನ್ನು ಸಾಕಾರಗೊಳಿಸುವವರೆಗೂ ಈ ಆವರ್ತಗಳು ಮುಂದುವರಿಯುತ್ತವೆ. ಮೊದಲ ಹಂತದಲ್ಲಿ ರಚಿಸಿಕೊಂಡ ಕಾಣ್ಕೆಯ ಸಾಧನೆಯಾದ ಬಳಿಕ ಇನ್ನೂ ಉಚ್ಚ ಮಟ್ಟದ ಕಾಣ್ಕೆಗಳಿಗಾಗಿ ಯೋಜನೆಗಳನ್ನು ರೂಪಿಸಿಕೊಳ್ಳಬಹುದು.

ನಮ್ಮ ಯೋಜನೆಗಳು ಉತ್ತಮವಾಗಿ ಅನುಷ್ಠಾನಗೊಳ್ಳಬೇಕಾದರೆ ಅದು ನಮ್ಮ ಶಾಲೆಯ ಸ್ವರೂಪ, ಸ್ಥಳೀಯತೆ, ಸವಾಲುಗಳು ಮುಂತಾದವುಗಳನ್ನು ಆದರಿಸಿದ ಯೋಜನೆಯನ್ನು ರೂಪಿಸಿಕೊಳ್ಳಬೇಕು. ನಮ್ಮ ಶಾಲಾ ವೈವಿಧ್ಯತೆಯನ್ನು ಗಮನದಲ್ಲಿರಿಸಿದ ಯೋಜನೆ ನಮ್ಮ ಶಾಲೆಗಳಿಗೆ ಸೂಕ್ತವಾದುದು. ಹೀಗೆ ಶಾಲೆಗಳು ಅಗತ್ಯ ಬದಲಾವಣೆಯೆಡೆಗೆ ತಮ್ಮ ಗಮನ ಹರಿಸಿದಾಗಲೇ ವಿಶೇಷ ಸಾಧನೆಯನ್ನು ಮಾಡಲು ಸಾಧ್ಯವಾಗುವುದು. ಶಾಲೆಯು ತನ್ನ ಬೆಳವಣಿಗೆ ಗುರಿಗಳನ್ನು ಗುರುತಿಸಿಕೊಂಡು, ಆ ಗುರಿಗಳನ್ನು ಯಾವಾಗ? ಮತ್ತು ಹೇಗೆ? ಸಾಧಿಸಬೇಕು ಎಂಬುದರ ಬಗ್ಗೆ ನಿರ್ಧಾರಕೈಗೊಳ್ಳುವುದು ಅತಿಮುಖ್ಯ ಎಲ್ಲಾ ಯೋಜನೆಗಳ ಅಂತಿಮ ಗುರಿ ಶಾಲೆಯು ಹಲವಾರು ಕ್ಷೇತ್ರಗಳಲ್ಲಿ ನಿರಂತರ ಅಭಿವೃದ್ಧಿಯಾಗುತ್ತಿರಬೇಕು.

ನಾವು ನಮ್ಮ ಶಾಲೆಯಲ್ಲಿ ಹಾಕಿಕೊಂಡ ಶಾಲಾಭಿವೃದ್ದಿ ಯೋಜನೆಗಳು ಹೇಗಿದ್ದವು.. ಒಂದು ಅವಲೋಕನ ಮಾಡಿಕೊಳ್ಳೋಣ.




ನಮ್ಮ ಯೋಜನೆಯು ಹೀಗಿತ್ತೆ?
 ಯೋಜನೆಯು ನಮ್ಮ ಪೂರ್ವಾನುಭವಗಳನ್ನು ಆಧರಿಸಿತ್ತೆ? ಹೌದು/ ಇಲ್ಲ.
 ಯೋಜನೆಯಲ್ಲಿ ಮಾನವ/ಆರ್ಥಿಕ ಸಂಪನ್ಮೂಲಗಳ ಬಳಕೆ ನಿಖರ ವಾಗಿತ್ತೆ? ಹೌದು/ ಇಲ್ಲ.
 ಗುರಿಗಳು ಕಾಲಬದ್ಧವಾಗಿತ್ತೆ? ಹೌದು / ಇಲ್ಲ.
 ಗುರಿಗಳು ಸಾಧಿಸುವಂತಹ ವಾಸ್ತವಿಕ ನೆಲೆಯಲ್ಲಿತ್ತೆ? ಹೌದು/ ಇಲ್ಲ.
 ಪುನರ್ ಪರಿಶೀಲನೆ ಹಾಗೂ ಮೌಲ್ಯಮಾಪನಕ್ಕೆ ಒಗ್ಗುವಂತಿತ್ತೆ? ಹೌದು/ ಇಲ್ಲ
 ವೈವಿಧ್ಯಮಯ ಕಾರ್ಯತಂತ್ರಗಳು ಹಾಗೂ ಚಟುವಟಿಕೆಗಳನ್ನು ಹೊಂದಿತ್ತೆ? ಹೌದು/ ಇಲ್ಲ.
 ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಿತ್ತೆ? ಹೌದು/ ಇಲ್ಲ.
 ಸರ್ಕಾರದ ಅನುದಾನಗಳ ಮೇಲೆ ಅತಿಯಾದ ಅವಲಂಬನೆ ಮಾಡದಂತಿತ್ತೆ? ಹೌದು/ ಇಲ್ಲ.
 ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಅಗತ್ಯ ಸಂದರ್ಭಗಳಲ್ಲಿ ಸಲಹೆ ಮಾರ್ಗದರ್ಶನಕ್ಕೆ ಅನುಗುಣವಾಗಿ ಕಾರ್ಯಪ್ರವೃತ್ತರಾಗುತ್ತಿದ್ದರೆ? ಹೌದು/ ಇಲ್ಲ.
 ಆರ್ಥಿಕ ಸಂಪನ್ಮೂಲ ಹಾಗೂ ಇತರ ಸಂಪನ್ಮೂಲಗಳ ಸಂಗ್ರಹ ವಾಸ್ತವವಾಗಿತ್ತೆ? ಹೌದು/ ಇಲ್ಲ.
 ಶಾಲೆಯ ಅಗತ್ಯಗಳ ವಿಶ್ಲೇಷಣೆ ಮತ್ತು ಶಾಲೆಯು ಹೊಂದಿರುವ ಬಲ ಹಾಗೂ ದೌರ್ಬಲ್ಯಗಳನ್ನು ಪರಿಗಣಿಸಿದ ಕಾರ್ಯತಂತ್ರಗಳು ಯೋಜನೆಯ ಭಾಗವಾಗಿತ್ತೆ? ಹೌದು/ ಇಲ್ಲ.





ಈ ಚರ್ಚೆಯಲ್ಲಿ ನೀವು ಗಮನಿಸಿದ ಅಂಶಗಳನ್ನು ನಿಮ್ಮ ಶಾಲೆಯ ಪೋಷಕರೊಂದಿಗೆ ಸ್ನೇಹಿತ ರೊಂದಿಗೆ ಸಹಭಾಗಿಗಳೊಂದಿಗೆ ಹಂಚಿಕೊಳ್ಳಿ. ಈಗ ಹೇಳಿ ನೀವು ನಿಮ್ಮ ಶಾಲಾಭಿವೃದ್ದಿ ಯೋಜನೆ ಯಲ್ಲಿ ಮುಂದಿನ ಅಂಶಗಳನ್ನು ಹೇಗೆ ಸಾಧಿಸುವಿರಿ ?

 ಯೋಜನೆ ಸಮಗ್ರವಾಗಿರುವಂತೆ ಶಾಲೆಯ ಎಲ್ಲಾ ಭಾಗೀದಾರರನ್ನು ತೊಡಗಿಸಿಕೊಳ್ಳುವುದು.
 ಯೋಜನೆಯ ಅನುಷ್ಠಾನವನ್ನು ವಿವಿಧ ಹಂತಗಳಲ್ಲಿ ಮೇಲ್ವಿಚಾರಿಸುವುದು.
 ಯೋಜನೆಯ ವಿವಿಧ ಹಂತಗಳಲ್ಲಿ ಎದುರಾಗುವ ಸವಾಲುಗಳನ್ನು ಚರ್ಚಿಸುತ್ತಾ ಅವುಗಳಿಗೆ
ಪರಿಹಾರೋಪಾಯ ಕಂಡುಕೊಳ್ಳುವುದು.
 ಕಾರ್ಯಯೋಜನೆಯ ಆರಂಭಿಕ ಆಸಕ್ತಿಯನ್ನು ಕೊನೆಯವರೆವಿಗೂ ಉಳಿಸಿಕೊಳ್ಳುವಂತೆ ಯೋಜನಾ ತಂಡವನ್ನು ಹುರಿದುಂಬಿಸುವುದು.
ನೀವು ಈವರೆಗೆ ಚರ್ಚಿಸಿದ ವಿಚಾರಗಳನ್ನು ಗಮನಿಸಿ. ಇನ್ನು ಮುಂದಿನ ಶಾಲಾಭಿವೃದ್ಧಿ ಯೋಜನೆ ಇನ್ನಷ್ಟು ಸಫಲವಾಗಲು ನಿಮ್ಮ ಶಾಲೆಯ ಎಲ್ಲರೊಂದಿಗೆ ಸಹಕರಿಸಿ.



ಹೀಗೆ ಯೋಜನೆಯ ವಿವಿಧ ಮಜಲುಗಳನ್ನು ಅನುಸರಿಸಿದರೆ ಯಶಸ್ಸನ್ನು ಹೊಂದಲುಸಾಧ್ಯ. ಈ ಪ್ರಕ್ರಿಯೆ ನಿರ್ಧಿಷ್ಟ ಕಾಲಕ್ಕೆ ಮುಗಿದುಹೋಗುವಂತಹದ್ದಲ್ಲ. ಈ ನಿಟ್ಟಿನಲ್ಲಿ ಯೋಜನೆಯ ಉದ್ದೇಶಗಳ ಈಡೇರಿಕೆಯೇ ಅಂತ್ಯವಲ್ಲ. ಕ್ರಿಯೆಯು ಇಲ್ಲಿಗೆ ನಿಲ್ಲುವುದಿಲ್ಲ. ಮೌಲ್ಯಮಾಪನ ಹಾಗೂ ಪುನರಾವಲೋಕನವು ಮುಂದಿನ ಯೋಜನೆ ಹಾಗೂ ಕಾರ್ಯತಂತ್ರಗಳಿಗೆ ಹೆಜ್ಜೆಯಾಗಿರುವುದು. ಈ ರೀತಿಯಾಗಿ ಶಾಲಾಭಿವೃದ್ಧಿಯು ಹಲವು ಸುತ್ತುಗಳಲ್ಲಿ ನಡೆಯುವ ಪ್ರಕ್ರಿಯೆಯಾಗಿದೆ. ನಮ್ಮ ಶಾಲೆಯು ಹೊಂದಿರಬಹುದಾದ ದೂರದೃಷ್ಟಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕೆ ನಾವೆಲ್ಲರೂ ಕಂಕಣಬದ್ಧರಾಗಬೇಕಿದೆ.




ಶಾಲಾಭಿವೃದ್ಧಿ ಯೋಜನೆಯಲ್ಲಿ ಶೂನ್ಯ ಬಜೆಟ್ ಚಟುವಟಿಕೆಗಳು.

ಪ್ರಸ್ತುತ ಶಾಲೆಗಳ ಶಾಲಾಭಿವೃದ್ಧಿ ಯೋಜನೆ (S ಆ P) ಯನ್ನು ಗಮನಿಸಿ. ಇವುಗಳಿಗೆ ಸಂಬAಧಿಸಿದAತೆ ನಾವು ಹೇಗೆ ನವ್ಮ್ಮ ಯೋಜನೆಗಳನ್ನು ಯಶಸ್ಸು ಹೊಂದುವAತೆ ಸಹಕರಿಸಬಹುದು? ಆಲೋಚಿಸಿ ಮುನ್ನಡೆಯಿರಿ. ಮುಖ್ಯ ಶಿಕ್ಷಕರೊಂದಿಗೆ, ಇತರರೊಂದಿಗೆ ಕೈಜೋಡಿಸಿ. ಯಾವುದೇ ಶಾಲೆಯ ಅಭಿವೃದ್ಧಿ ಹಾಗೂ ಅಪೇಕ್ಷಿತ ಬದಲಾವಣೆಗಾಗಿ ಸ್ಥಳೀಯ ಸಮುದಾಯದ ಬೆಂಬಲ ಹಾಗೂ ಶೂನ್ಯ ಬಜೆಟ್ ಚಟುವಟಿಕೆಗಳು ಅತ್ಯಂತ ಅಗತ್ಯವಾಗಿದೆ. ಆದುದರಿಂದ ನಮ್ಮ ಶಾಲಾದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿದೆ. ಶೈಕ್ಷಣಿಕ ಗುರಿ ಸಾಧಿಸಲು, ಶಾಲೆಯಲ್ಲಿ ಅಪೇಕ್ಷಿತ ಬದಲಾವಣೆಗಾಗಿ ಕೈಗೊಳ್ಳುವ ವಿವಿಧ ಕಾರ್ಯತಂತ್ರಗಳನ್ನು ಯಾವಾಗ? ಮತ್ತು ಹೇಗೆ ಕೈಗೊಳ್ಳಬೇಕೆಂಬ ವಿಚಾರದಲ್ಲಿ ಪ್ರತಿಯೊಂದು ಶಾಲೆಯು ತನ್ನದೇ ವಿಚಾರಗಳನ್ನು ಹೊಂದಿರುತ್ತದೆ. ಕೆಲವೊಮ್ಮೆ ಹಣಕಾಸನ್ನು ಹೊಂದುವಲ್ಲಿನ ವಿಫಲತೆ ಎಸ್ ಡಿ ಪಿಯ ಯಶಸ್ಸಿಗೆ ಅಡ್ಡಿಯಾಗುವುದನ್ನು ಗಮನಿಸಬಹುದು. ಇದನ್ನು ದೂರಮಾಡಲು ಶೂನ್ಯ ಬಜೆಟ್ ಚಟುವಟಿಕೆಗಳು ಮಹತ್ವದ ಪಾತ್ರವಹಿಸುತ್ತವೆ. ಇದನ್ನು ನಮ್ಮ ನಮ್ಮ ಶಾಲೆಗಳ ಯೋಜನೆಗಳಲ್ಲಿ ಅಳವಡಿಸಿಕೊಳ್ಳಲು ಅನುವಾಗುವ ಅಂಶಗಳನ್ನು ಗಮನಿಸಿ.


ಶಾಲಾ ಅಭಿವೃದ್ಧಿ ಕ್ರಿಯಾ ಯೋಜನಾ ನಕ್ಷೆ (ಶೂನ್ಯ ಬಜೆಟ್ ಆಧಾರಿತ)

ಸೂಚಕಗಳ ಪಟ್ಟಿಯನ್ನು ಗಮನಿಸಿದಾಗ ಹಣಕಾಸಿನ ಅಗತ್ಯವಿಲ್ಲದ ಸೂಚಕಗಳನ್ನು ಗುರುತಿಸಿ.
ಈ ಸೂಚಕಗಳ ಈಡೇರಿಕೆಗಾಗಿ ಶಾಲೆಯಲ್ಲಿಯೇ ಲಭ್ಯವಿರುವ ವಸ್ತು-ಸಾಮಗ್ರಿಗಳನ್ನು ಗುರುತಿಸಿ.
ಇವುಗಳನ್ನು ಬಳಸಿ ತರಬೇಕಾದ ಮಾರ್ಪಾಡು ಕ್ರಮಗಳನ್ನು ಪಟ್ಟಿಮಾಡಿ ಸಂಬಂದಿಸಿದ ವ್ಯಕ್ತಿ (ಶಿಕ್ಷಕರು/ಸದಸ್ಯರು/ಪೋಷಕರು/ಮಕ್ಕಳು) ಗಳನ್ನು ಗುರುತಿಸಿ.
ಅಗತ್ಯ ಸಮಯವನ್ನು ಗುರುತಿಸಿ ಎಸ್ ಡಿ ಪಿ ಯಲ್ಲಿ ಸ್ಪಷ್ಟವಾಗಿ ನಮೂದಿಸಿಕೊಳ್ಳಿ.
ಸೂಚಕದ ಈಡೇರಿಕೆಗಾಗಿ ವಿವಿಧ ಹಂತದ ಕಾರ್ಯತಂತ್ರಗಳನ್ನು ಗುರುತಿಸಿಕೊಳ್ಳಿ.
ಪ್ರತಿಯೊಂದು ಕಾರ್ಯತಂತ್ರಕ್ಕೂ ಅಗತ್ಯ ಸಮಯ ಹಾಗೂ ಜವಾಬ್ದಾರಿ ಹಂಚಿಕೆಮಾಡಿ.
ನಿಗದಿಯಾದ ಕಾಲಕ್ಕನುಗುಣವಾಗಿ ಇದನ್ನು ಉಸ್ತುವಾರಿ ಮಾಡುವವರನ್ನು ಸ್ಪಷ್ಟವಾಗಿ ಗುರುತಿಸಿ.
ಅಗತ್ಯಕ್ಕನುಗುಣವಾಗಿ ಪುನರಾವಲೋಕನ ಹಾಗೂ ಮೌಲ್ಯಮಾಪನ ಕೈಗೊಳ್ಳಿ.



ಶಾಲಾ ಶಿಕ್ಷಣದಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ :

ಭಾರತ ಸಂವಿಧಾನದ 73 ಮತ್ತು 74 ತಿದ್ದುಪಡಿಗಳ ಮೂಲಕ ಜಾರಿಯಾದ ಪಂಚಾಯತ್ ರಾಜ್ ಅಧಿನಿಯಮಗಳಲ್ಲಿ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಜನರ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಅವಕಾಶ ಮಾಡಿಕೊಡಲಾಗಿದೆ. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ - 2015 (2ನೇ ತಿದ್ದುಪಡಿ) ರ ಅನುಸೂಚಿ-1 ಪ್ರಕರಣ 58 ರಲ್ಲಿ ನಿರೂಪಿಸಿರುವ ವಿಷಯಗಳಲ್ಲಿ ಶಾಲಾ ಶಿಕ್ಷಣಕ್ಕೆ ಆದ್ಯತೆಯನ್ನು ನೀಡಲಾಗಿದೆ.


ಕಾಯ್ದೆಯಲ್ಲಿ ಶಿಕ್ಷಣಕ್ಕಿರುವ ಅವಕಾಶಗಳು :

1. ಪಂಚಾಯಿತಿ ಮಟ್ಟದಲ್ಲಿ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಶಿಕ್ಷಣ ನೀಡುವ ಕುರಿತು ಯೋಜನೆಗಳನ್ನು ರೂಪಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು.

2. ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಲು ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾನೆಯನ್ನು ಸಲ್ಲಿಸುವುದು ಮತ್ತು ಮಂಜೂರಾತಿ ಪಡೆಯುವುದು ಮತ್ತು ಮೇಲುಸ್ತುವಾರಿ ಮಾಡುವುದು.

3. ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಕಟ್ಟಡಗಳನ್ನು ನಿರ್ಮಿಸುವುದು ಮತ್ತು ನಿರ್ವಹಿಸುವುದು.

4. ಮಕ್ಕಳ ವಿವರಗಳನ್ನು ಸಂಗ್ರಹಿಸುವುದು ಮತ್ತು ಇಂದೀಕರಿಸುವುದು.

5. ಸಾಕ್ಷರತಾ ಕಾರ್ಯಕ್ರಮಗಳು, ಅನೌಪಚಾರಿಕ ಮತ್ತು ಔಪಚಾರಿಕ ಶಿಕ್ಷಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಹಾಗೂ ವಯಸ್ಕರ ಸಾಕ್ಷರತೆಗೆ ಉತ್ತೇಜನ ನೀಡುವುದು.

6. ಆಡಳಿತ ನಿರ್ವಹಣೆಯನ್ನು ಒಳಗೊಂಡಂತೆ ಶಾಲಾ ಶಿಕ್ಷಣದ ಗುಣಮಟ್ಟ ನಿಯಂತ್ರಣ, ಮೇಲ್ವಿಚಾರಣೆ ಮಾಡುವುದು.

7. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಸಮೀಕ್ಷೆ ಮತ್ತು ಮೌಲ್ಯಮಾಪನ ಮಾಡುವುದು.

8. ಹಿಂದುಳಿದ ವರ್ಗಗಳ, ಬಾಲಕಿಯರ, ವಿಶೇಷವಾಗಿ ವಿಕಲಚೇತನರ ಮತ್ತು ಅಲ್ಪಸಂಖ್ಯಾತರ ಉನ್ನತ ಪ್ರಾಥಮಿಕ ಹಂತದವರೆಗಿನ ಆಶ್ರಮ ಶಾಲೆಗಳನ್ನು/ವಿದ್ಯಾರ್ಥಿ ನಿಲಯಗಳನ್ನು ಮೇಲ್ವಿಚಾರಣೆ ಮಾಡುವುದು.

9. ಗ್ರಾಮೀಣ ಕುಶಲ ಕರ್ಮಿಗಳಿಗೆ ಉತ್ತೇಜನ ನೀಡುವುದು ಮತ್ತು ಅವರಿಗೆ ವೃತ್ತಿ ತರಬೇತಿ ನೀಡುವುದು.

10. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಸಂಪೂರ್ಣ ದಾಖಲಾತಿ ಮತ್ತು ಹಾಜರಾತಿಯನ್ನು ಖಚಿತಪಡಿಸಿಕೊಳ್ಳುವುದು.

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MNREG), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಪ್ಪತ್ತೊಂದು ಅಂಶಗಳ ಕಾರ್ಯಕ್ರಮಗಳ ಅಡಿಯಲ್ಲಿ ಶಾಲಾ ಶಿಕ್ಷಣಕ್ಕೆ ಸಂಬAಧಿಸಿದAತೆ ಗ್ರಾಮ ಪಂಚಾಯಿತಿಗಳು ನೀಡಬಹುದಾದ ಸೌಲಭ್ಯಗಳು ಮತ್ತು ಕೈಗೆತ್ತಿಕೊಳ್ಳಬಹುದಾದ ಕಾಮಗಾರಿಗಳು ಈ ಕೆಳಗಿನಂತಿವೆ.

1. ಗ್ರಾಮದ ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಮತ್ತು ಯುವತಿಯರಲ್ಲಿ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಆಟದ ಮೈದಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ನಿರ್ವಹಿಸುವುದು.

2. ನಮ್ಮ ಹಳ್ಳಿ, ನಮ್ಮ ನೀರು ಯೋಜನೆಯಡಿಯಲ್ಲಿ ಶಾಲೆಗಳ ಆವರಣದಲ್ಲಿ ಸಸಿಗಳನ್ನು ನೆಡುವುದು, ಉದ್ಯಾನಗಳನ್ನು ಸ್ಥಾಪಿಸುವುದು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು.

3. ಶಾಲೆ ಮತ್ತು ಅಂಗನವಾಡಿಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲು ಪ್ರೋತ್ಸಾಹ ಧನವನ್ನು ನೀಡುವುದು.

4. ಶಾಲೆ ಮತ್ತು ಅಂಗನವಾಡಿಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ನಿರ್ವಹಣಾ ಕಾಮಗಾರಿ ಗಳನ್ನು ಸಹ ಕೈಗೊಳ್ಳಬಹುದು.

5. ಹೆಣ್ಣು ಮಕ್ಕಳಿರುವ ಪ್ರೌಢಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಗಳನ್ನು ಸುಡುವ ಉಪಕರಣಗಳನ್ನು (Incinerator) ಅಳವಡಿಸುವುದು.

6. ಮಕ್ಕಳು ಶಾಲೆಗೆ ಹೋಗುವಲ್ಲಿ ನದಿ ತೊರೆಗಳು ಅಡಚಣೆಯಾಗುವಂತಿದ್ದಲ್ಲಿ ಕಾಲು ಸಂಕಗಳನ್ನು
ನಿರ್ಮಿಸುವುದು.

7. ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲದಿದ್ದ ಪಕ್ಷದಲ್ಲಿ ಕಟ್ಟಡ, ಕಾಂಪೌAಡ್, ಶೌಚಾಲಯ ನಿರ್ಮಾಣ ಮಾಡುವುದು.

8. ಸೈಬರ್ ಮತ್ತು ಕಂಪ್ಯೂಟರ್ ಕೇಂದ್ರಗಳನ್ನು ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಕಂಪ್ಯೂಟರ್ ಕಲಿಕೆ ಹಾಗೂ ಗ್ರಾಮೀಣ ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಕಲಿಕೆಗೆ ಅವಕಾಶ ಮಾಡಿಕೊಡುವುದು.

9. ಗ್ರಾಮೀಣ ಕಲೆ ಮತ್ತು ಸಂಸ್ಕೃತಿಗಳನ್ನು ಬೆಳೆಸಿ ಪ್ರೋತ್ಸಾಹಿಸಲು ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸುವುದು.

10. ವ್ಯಾಯಾಮ ಶಾಲೆಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು.





ಕೇಂದ್ರ ಸರ್ಕಾರದ ‘ಸಂಸದರ ಆದರ್ಶ ಗ್ರಾಮ’ ಯೋಜನೆಯಡಿಯಲ್ಲಿ ಶಾಲಾ ಶಿಕ್ಷಣಕ್ಕೆ ನೀಡಬಹುದಾದ ಸೌಲಭ್ಯಗಳು :

1. ಹತ್ತನೇ ತರಗತಿಯವರೆಗೆ ಎಲ್ಲರಿಗೂ ಶಿಕ್ಷಣವನ್ನು ನೀಡುವುದು.
2. ಗುಣಮಟ್ಟದ ಶಿಕ್ಷಣಕ್ಕಾಗಿ ಶಾಲೆಗಳನ್ನು ಸ್ಮಾರ್ಟ್ ಶಾಲೆಗಳನ್ನಾಗಿ ಪರಿವರ್ತಿಸುವುದು.
3. ಇ-ಶಿಕ್ಷಣವನ್ನು ಒದಗಿಸುವುದು.
4. ಇ-ಗ್ರಂಥಾಲಯವನ್ನು ಒದಗಿಸುವುದು.

ಶೂನ್ಯ ವೆಚ್ಚದಲ್ಲಿ ಗ್ರಾಮ ಪಂಚಾಯಿತಿಗಳು ಮಾಡಬೇಕಾದ ಇತರ ಕಾರ್ಯಕ್ರಮಗಳು :
1. 6 ರಿಂದ 14 ವಯಸ್ಸಿನ ಎಲ್ಲಾ ಮಕ್ಕಳು ಶಾಲೆಗೆ ಕಡ್ಡಾಯವಾಗಿ ದಾಖಲಾಗುವಂತೆ ಮತ್ತು ಹಾಜರಾಗುವಂತೆ ನೋಡಿಕೊಳ್ಳುವುದು.

2. ವ್ಯಾಪ್ತಿಯಲ್ಲಿರುವ ಬಾಲಕಾರ್ಮಿಕರನ್ನು, ಜೀತದಾಳುಗಳನ್ನು ಗುರುತಿಸಿ ಸಂಬAಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದು.

3. ಸಾಮಾನ್ಯ ಸಭೆಗಳಲ್ಲಿ ಆರೋಗ್ಯ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಚರ್ಚಿಸುವುದು ಮತ್ತು ಸಂಬAಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುವುದು.

4. ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ದೊರೆಯುವ ಸೌಲಭ್ಯಗಳು ಸರಿಯಾಗಿ ದೊರೆಯುವಂತೆ ನೋಡಿಕೊಳ್ಳುವುದು.

5. ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸುವುದು.

6. ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ನೀಡಲಾಗುವ ಮಧ್ಯಾಹ್ನದ ಬಿಸಿಯೂಟ ಮತ್ತು ಪೌಷ್ಠಿಕ ಆಹಾರದ ವಿತರಣೆಯನ್ನು ಮೇಲ್ವಿಚಾರಣೆ ಮಾಡುವುದು.

7. ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವುದು ಮತ್ತು ಇವುಗಳನ್ನು ಶಾಲೆಗಳಲ್ಲಿ ಆಯೋಜಿಸಿ ಬಹುಮಾನಗಳನ್ನು ನೀಡುವುದು.

8. ಮಕ್ಕಳ ಶಿಕ್ಷಣ, ಸುರಕ್ಷತೆ ಮತ್ತು ಪೌಷ್ಠಿಕಾಂಶಗಳ ಕುರಿತು ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸುವುದು.












..................  END ......................