1. ರೇಡಿಯೋ ಪಾಠ (ಬಾನುಲಿ ಪಾಠ)
2000-01ರಲ್ಲಿ ಆಕಾಶವಾಣಿಯ ಗುಲ್ಬರ್ಗಾ ಮತ್ತು ರಾಯಚೂರು  ಕೇಂದ್ರದ ವ್ಯಾಪ್ತಿಗೆ ಬರುವ ಮೂರನೇ ತರಗತಿ ಮಕ್ಕಳಿಗಾಗಿ ಪ್ರಸಾರ ಮಾಡಲಾಯಿತು 
2001-02ರಲ್ಲಿ ಉತ್ತರ ಕರ್ನಾಟಕದ 11 ಡಿಪಿಇಪಿ ಜಿಲ್ಲೆಯ ಮೂರು ಮತ್ತು ನಾಲ್ಕನೇ ತರಗತಿಯ ಮಕ್ಕಳಿಗಾಗಿ ಪಾಠವನ್ನು ಪ್ರಸಾರ ಮಾಡಲಾಯಿತು 
2002-03ರಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಮೂರು ನಾಲ್ಕು ಮತ್ತು ಐದನೇ ತರಗತಿಯ ಮಕ್ಕಳಿಗಾಗಿ ಪಾಠಗಳನ್ನು ಪ್ರಸಾರ ಮಾಡಲಾಯಿತು
2005-06ರಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ 3, 4, 5 ಮತ್ತು 6ನೇ ತರಗತಿಯ ಎಲ್ಲಾ ಮಕ್ಕಳಿಗೆ ಪಾಠಗಳನ್ನು ಆಕಾಶವಾಣಿಯ 13 ಕೇಂದ್ರದಿಂದ ಪ್ರಸಾರ ಮಾಡಲಾಗುತ್ತಿದೆ.

ಬಾನುಲಿ ಪಾಠಗಳ ಮಹತ್ವ :
1. ಎಲ್ಲಾ ಪ್ರದೇಶಗಳಿಗೆ ಎಲ್ಲಾ ಮಕ್ಕಳಿಗೆ ಸುಲಭ ಸಂಪರ್ಕ 
2. ಕಡಿಮೆ ಖರ್ಚು ಸುಲಭವಾಗಿ ನಿರ್ವಹಣೆ 
3. ಅನುಭವಿ ಶಿಕ್ಷಕರ, ತಜ್ಞರ ಸಹಾಯ ಮತ್ತು ಮಾರ್ಗದರ್ಶಕರಿಂದ ಸಿದ್ಧಪಡಿಸಿದ ಪಾಠಪ್ರವಚನಗಳನ್ನು ನೀಡಲಾಗುವುದು.
4. ಮಕ್ಕಳ ಹಾಜರಾತಿ ಹೆಚ್ಚಿದೆ 
5. ಕೇಳಿಕಲಿ  ಪ್ರಾರಂಭ ಗೀತೆಯ ಬಗ್ಗೆ ಎಲ್ಲಾ ಮಕ್ಕಳು  ಗುನುಗುನುಗಿಸು ತ್ತಿರುವುದು 
6. ಮಕ್ಕಳಲ್ಲಿ ಜಾನಪದ ನಾಟಕ ಭಾಷೆಯಲ್ಲಿ ಅಭಿವೃದ್ಧಿ ಹೆಚ್ಚಾಗಿರುವುದು






x
2. ಕೇಳಿ ಕಲಿ ಕಾರ್ಯಕ್ರಮ (2004)
1. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದಲ್ಲಿ ಮಹತ್ತರ ಬದಲಾವಣೆಗಾಗಿ ರೇಡಿಯೋ ಕಾರ್ಯಕ್ರಮ 
2. ಐದರಿಂದ ಹತ್ತನೇ ತರಗತಿಯವರಿಗಾಗಿ ಪಠ್ಯ ವಿಷಯಗಳ ಪ್ರಸಾರವಾಗುತ್ತಿದೆ.
3. ವಾರದಲ್ಲಿ ನಾಲ್ಕು ದಿನ ಕಡ್ಡಾಯವಾಗಿ ಕರ್ನಾಟಕದಲ್ಲಿ ಬಾನುಲಿ ಪ್ರಸಾರವಾಗುತ್ತಿದೆ
4. ಸೆಪ್ಟೆಂಬರ್ 10, 2004 ರಂದು ಸತೀಶ್ ಧವನ್ ಕೇಂದ್ರದಿಂದ ಅಂತರಿಕ್ಷಕ್ಕೆ ಹಾರಿಬಿಟ್ಟ ಉಪಗ್ರಹದ ಬಳಕೆಯಿಂದ ರೇಡಿಯೋ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತದೆ.
ಕೇಳಿ ಕಲಿ  ಮಹತ್ವ :
1.ಮಕ್ಕಳು ಆಸಕ್ತಿಯಿಂದ ಆಲಿಸುವರು 
2.ಮಕ್ಕಳ ಅವಧಾನ ಹೆಚ್ಚಾಗುವುದು 
3.ಮಕ್ಕಳ ಭಾಷಾಭಿಮಾನ ಶಬ್ದಭಂಡಾರ ಹೆಚ್ಚಾಗುವುದು 
4.ಮಕ್ಕಳ ಪ್ರಶ್ನಿನುವ ಕೌಶಲ್ಯ ಹೆಚ್ಚಾಗುವುದು 
5.ಮಕ್ಕಳ ಸೃಜನಾತ್ಮಕತೆ, ಸಂಶೋಧನಾ ಪ್ರವೃತ್ತಿ ಹೆಚ್ಚಾಗುವುದು



3. ಚುಕ್ಕಿ ಚಿನ್ನ / ಚಿನ್ನರ ಚುಕ್ಕಿ ಕಾರ್ಯಕ್ರಮ (2000)
1. ಎಜುಕೇಶನ್ ಡೆವಲಪ್ಮೆಂಟ್ ಸೆಂಟರ್ (ಎಡಿಸಿ) ಇವರ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಪ್ರಯತ್ನ 
2. ಶೇಕಡ 75 ಚಟುವಟಿಕೆಗಾಗಿ ಶೇಕಡ 25 ಬೋಧನೆಗಾಗಿ 
3. 2001ರಿಂದ ರೇಡಿಯೋ ಪಾಠ ಮೂರನೇ ವರ್ಗದ ವಿದ್ಯಾರ್ಥಿಗಳಿಗಾಗಿ ಪ್ರಸಾರ ಪ್ರಾರಂಭ 
4. 2004 - 05ನೇ ಸಾಲಿನಲ್ಲಿ ಕರ್ನಾಟಕದ ಚಾಮರಾಜನಗರ ಜಿಲ್ಲೆ, ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕು, ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕು ಹಾಗೂ ಬೆಂಗಳೂರಿನ ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಶಿಕ್ಷಣ ಇಲಾಖೆಯ ವತಿಯಿಂದ ಮತ್ತು ಅಜೀಮ್ ಪ್ರೇಮ್ ಜೀ ಫೌಂಡೇಶನ್ ರವರ ಸಹಯೋಗದೊಂದಿಗೆ ಚುಕ್ಕಿ ಚಿನ್ನ -1 ಸರಣಿಯನ್ನು 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪ್ರಸಾರ ಮಾಡಲಾಯಿತು 
5. 2005 - 06ನೇ ಸಾಲಿನಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಪ್ರಸಾರ ಮಾಡಲು ತೀರ್ಮಾನ ಮಾಡಲಾಯಿತು 
6. 2006-07ನೇ ಸಾಲಿನಲ್ಲಿ ಇಡಿಸಿ ವತಿಯಿಂದ 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ, ಪರಿಸರ ಅಧ್ಯಯನ ಮತ್ತು ಸಮಾಜ ವಿಜ್ಞಾನ ವಿಷಯದ 84 ಕಾರ್ಯಕ್ರಮ ಹಾಗೂ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ, 5ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ನ 40 ಕಾರ್ಯಕ್ರಮಗಳು ಪ್ರಸಾರವಾದವು.
7. ಚುಕ್ಕಿ ಚಿನ್ನ -2 ಸರಣಿಯಲ್ಲಿ ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳಿಗಾಗಿ 44 ಕಾರ್ಯಕ್ರಮ ಮತ್ತು ಮೂರನೇ ತರಗತಿಯ ವಿದ್ಯಾರ್ಥಿಗಳಿಗಾಗಿ 42 ಕಾರ್ಯಕ್ರಮ ಪ್ರಸಾರ ಮಾಡಲಾಯಿತು
ಚಿನ್ನರ ಚುಕ್ಕಿ / ಚುಕ್ಕಿ ಚಿನ್ನ ಮಹತ್ವ 
1. ಶೇಕಡ 75 ಚಟುವಟಿಕೆ ಹಾಗೂ ಶೇಕಡ 25 ಬೋಧನೆಗಾಗಿ
2. ವಿದ್ಯಾರ್ಥಿ ಕೇಂದ್ರಿತ ಕ್ರಿಯಾತ್ಮಕ ಕಲಿಕೆ.
3. ವಿದ್ಯಾರ್ಥಿ - ವಿದ್ಯಾರ್ಥಿಗಳ ನಡುವಿನ ಅಂತರ ಕಡಿಮೆ ಮಾಡುವುದು 
4. ಆಟ, ಹಾಡು, ನೃತ್ಯ, ಅಭಿನಯ  ಮೂಲಕ ಕಲಿಕೆ
5. ಎಲ್ಲರೂ ಸಮಾನವಾಗಿ ಭಾಗವಹಿಸುವುದು 
6. ಶಬ್ಧ ಭಂಡಾರವನ್ನು ಹೆಚ್ಚಿಸುವುದು.
7. ಶಾಲೆ ಹಾಗೂ ಸಮುದಾಯದಲ್ಲೂ ಈ ಕಾರ್ಯಕ್ರಮದ ಉಪಯೋಗ


 4 ಎಜುಸ್ಯಾಟ್ - ಶೈಕ್ಷಣಿಕ ಉಪಗ್ರಹ (2004).
1. ಪ್ರಾಥಮಿಕ ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ಪರಸ್ಪರ ಬೆಸೆಯುವುದು ಹಾಗೂ ಗುಣಾತ್ಮಕವಾದ ಸಮೂಹ ಶಿಕ್ಷಣವನ್ನು ನೀಡುವ ಉದ್ದೇಶಕ್ಕಾಗಿ ಮಾಧ್ಯಮ ದೃಕ್ ಶ್ರವಣ ಮಾಧ್ಯಮ 
2. ಸೆಪ್ಟೆಂಬರ್ 10, 2004ರಂದು ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಸಂಶೋಧನಾ ಕೇಂದ್ರದಿಂದ ಉಪಗ್ರಹ ಉಡಾವಣೆ 
3. ಎಜುಸ್ಯಾಟ್ ಉಪಗ್ರಹದ ಆಯಸ್ಸು 7 ವರ್ಷಗಳು 
4. ದೂರಶಿಕ್ಷಣ ಯೋಜನೆಗೆ ಮಹತ್ವದ ಕೊಡುಗೆ ನೀಡಿದೆ



5. ಶಿಕ್ಷಣದ ಸಾರ್ವತ್ರಿಕರಣ 
ವಿದ್ಯೆಯಿಂದ ವಿನಯ 
ವಿನಯದಿಂದ ಕಾರ್ಯಸಿದ್ದಿ 
ಕಾರ್ಯಸಿದ್ದಿ ಇಂದ ಕೀರ್ತಿ 
ಕೀರ್ತಿಯಿಂದ ಅರ್ಥ ಸಂಪಾದನೆ 
ಅರ್ಥದಿಂದ ಧರ್ಮಪಾಲನೆ 
ಧರ್ಮಪಾಲನೆಯಿಂದ ಮೋಕ್ಷ ಸಾಧನೆ 
........... ಉಪನಿಷತ್ತು 
ಅಂದರೆ, ಮಾನವ ಜೀವನ ಪಾವನವಾಗಲು ವಿದ್ಯೆ ಅಗತ್ಯ. ಉತ್ತಮ ಸ್ಥಾನಮಾನ ವೈಯಕ್ತಿಕ ವರ್ತನೆ ಹೊಂದುವುದು ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಶಿಕ್ಷಣದ ಸಾರ್ವತ್ರೀಕರಣವನ್ನು ಸರ್ಕಾರವು ಕಡ್ಡಾಯಗೊಳಿಸಿದೆ ಆದರೆ, ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಎಲ್ಲರನ್ನು ಸುಶಿಕ್ಷಿತರನ್ನಾಗಿ ಮಾಡಲು, 1986 ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಯಿತು. 
1. ಈ ನೀತಿಯ ಪ್ರಕಾರ ಸರ್ವರಿಗೂ ಶಿಕ್ಷಣ. 
2. 2000ರ ಒಳಗಾಗಿ ಗುರಿಯನ್ನು ಸಾಧಿಸುವುದು ಆಗಿತ್ತು.. 
3. ಡಿಪಿಇಪಿ ಜಾರಿಗೆ ತರಲಾಯಿತು. ಕಲಿ-ನಲಿ, ನಲಿ-ಕಲಿ, ಚಿನ್ನರ ಅಂಗಳ, ಚುಕ್ಕಿ ಚಿನ್ನ 1,2 ಜಾರಿಯಾಯಿತು 
4. ನಂತರ ಚೈತನ್ಯ-1.2 ತರಬೇತಿ ಬೋಧನಾ ವಿಧಾನಗಳ ಚಟುವಟಿಕೆ ಆಧಾರಿತ ಬೋಧನೆಯನ್ನು ಪ್ರಾರಂಭಿಸಲಾಯಿತು. 
5. 2003ರಲ್ಲಿ (SSA) ಸರ್ವಶಿಕ್ಷಣ ಅಭಿಯಾನ ಎಂಬ ಹೊಸ ಯೋಜನೆ ಜಾರಿಗೆ ಬಂತು. ಈ ಯೋಜನೆ ಅಡಿಯಲ್ಲಿ ಬಾ ಮರಳಿ ಶಾಲೆಗೆ, ಕೂಲಿಯಿಂದ ಶಾಲೆಗೆ, ಬಾ ಬಾಲೆ ಶಾಲೆಗೆ, ಬಿಸಿಯೂಟ ಯೋಜನೆ ಮುಂತಾದ ಯೋಜನೆಗಳು ಆರಂಭವಾಯಿತು. 
ಉದ್ದೇಶಗಳು :
1. ಎಲ್ಲ ಜಾತಿ ವರ್ಗ ಪಂಗಡ ಹಾಗೂ ಹೆಣ್ಣು ಮಕ್ಕಳನ್ನು ಒಳಗೊಂಡಂತೆ ಸಾರ್ವತ್ರಿಕ ದಾಖಲಾತಿ. 
2. ಒಂದು ಕಿಲೋಮೀಟರ್ ಅಂತರದಲ್ಲಿ ಪ್ರಾಥಮಿಕ ಶಾಲೆಗಳ ಸೌಲಭ್ಯ 
3. ಒಂದರಿಂದ ಎಂಟನೇ ತರಗತಿ ಯಲ್ಲಿರುವ ಶೇಕಡ 60 ಶಾಲೆ ಬಿಟ್ಟ ಮಕ್ಕಳ ಪ್ರಮಾಣವನ್ನು ಶೇಕಡಾ ನಲವತ್ತಕ್ಕೆ ಇಳಿಸುವುದು 
4. ಕೆಲಸಗಾರರ ಮತ್ತು ಅಲೆಮಾರಿ ಮಕ್ಕಳಿಗೆ ಔಷಧೋಪಚಾರ ಶಿಕ್ಷಣವನ್ನು ನೀಡುವುದು 
5. ಸಮುದಾಯದ ಸಹಭಾಗಿತ್ವವನ್ನು ಹೊಂದುವುದು 
6. ಮಗು ಕೇಂದ್ರಿತ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುವುದು 
7. ಮಧ್ಯಾಹ್ನದ ಉಪಹಾರ, ಓದುವ ಸಾಮಗ್ರಿಗಳು ಹಾಗೂ ಬಟ್ಟೆಗಳನ್ನು ಒದಗಿಸುವುದು 
8. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಶಾಲೆಗಳ ಸ್ಥಾಪಿಸುವುದು 


ಅಂತಿಮವಾಗಿ, ಶಿಕ್ಷಣದ ಸಾರ್ವತ್ರೀಕರಣವು ಕೇವಲ ಶಿಕ್ಷಕರಿಂದಲೇ ಸಾಧ್ಯವಿಲ್ಲ, ಸಮುದಾಯದವರು, ಎಲ್ಲಾ ಪಂಗಡದವರು, ಸಂಘ ಸಂಸ್ಥೆಯವರು, ಜನಪ್ರತಿನಿಧಿಗಳು ಮುಂತಾದವರೆಲ್ಲರೂ ಸಹಕಾರ ನೀಡಿದಾಗ ಮಾತ್ರ ಶಿಕ್ಷಣದ ಸಾರ್ವತ್ರೀಕರಣವು ಸಾಧ್ಯವಾಗುವುದು.





ನಲಿಕಲಿಯ ಉತ್ತಮ ಅಂಶಗಳು
ನಲಿಕಲಿಯ ದೌರ್ಬಲ್ಯಗಳು: 

ಈ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮೂರು ಹಂತದ ನೆರವನ್ನು ನೀ

 6. ಬಾ ಮರಳಿ ಶಾಲೆಗೆ (2002).
2002ರಿಂದ ರೂಪಿಸಿರುವ ಕಾರ್ಯಕ್ರಮ, ಪ್ರತಿ ಸೋಮವಾರ ಶಾಲೆಯ ಅವಧಿಗೂ ಮುಂಚೆ 9 ಗಂಟೆಯಿಂದ 10 ಗಂಟೆಯವರೆಗೆ ಶಿಕ್ಷಕರು, ಎಸ್.ಡಿಎಂಸಿ ಸದಸ್ಯರು ಮತ್ತು ಮಕ್ಕಳೊಂದಿಗೆ ಮನೆಗಳಿಗೆ ಭೇಟಿ ನೀಡಿ, ನಿರಂತರವಾಗಿ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕಾರ್ಯಕ್ರಮವು ಇದಾಗಿದೆ. ಪೋಷಕರಿಗೆ ಇದರಿಂದ ಪೋಷಕರಿಗೆ ಮತ್ತು ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡಿಸಿದೆ





7. ಬೀದಿಯಿಂದ ಶಾಲೆಗೆ 
1. ಭಾರತದಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿಗೆ ಎಲ್ಲರಿಗೂ ಶಿಕ್ಷಣ ನೀಡಬೇಕೆಂದು ನೀಡಬೇಕೆಂಬ ತತ್ವದ ಮೇಲೆ S.S.A. ಸರ್ವಶಿಕ್ಷಾ ಅಭಿಯಾನ ಯೋಜನೆಯ ಅಡಿಯಲ್ಲಿ ಕೈಗೊಂಡ ಕಾರ್ಯಕ್ರಮವು ಇದಾಗಿದೆ. 
2. ಶಾಲೆಗೆ ಸೇರಿ ಒಂದಷ್ಟು ದಿನ ಶಾಲೆಗೆ ಬಂದು ನಂತರ ಶಾಲೆಯಿಂದ ದೂರವಾಗಿ ಬೀದಿಗಳಲ್ಲಿ ಅಂಗಡಿಗಳಲ್ಲಿ ಕಾಲೇಜುಗಳಲ್ಲಿ ಸಣ್ಣಪುಟ್ಟ ವ್ಯಾಪಾರಗಳಲ್ಲಿ ತೊಡಗಿ ಕಾಲ ಕಳೆಯುತ್ತಿರುವ ಮಕ್ಕಳನ್ನು ಮತ್ತು ಶಾಲೆಗೆ ಸೇರಿಸಲು ಪಾಲಕರಿಗೆ ಮತ್ತು ಸಮಾಜದ ವ್ಯಕ್ತಿಗಳಿಗೆ ಅರಿವು ನೀಡಿ, ಇದರ ಮೂಲಕ ಮಕ್ಕಳು ಬೀದಿಯಿಂದ ಶಾಲೆಗೆ ಸೇರಲು ಕೈಗೊಂಡ ಆಂದೋಲನವೇ ಬೀದಿಯಿಂದ ಶಾಲೆಗೆ
ಮಹತ್ವ :
1. ಮಕ್ಕಳಿಗೆ ಬೇಕಾದ ಶಿಕ್ಷಣವನ್ನು ಒದಗಿಸುತ್ತದೆ 
2. ಪ್ರಾಥಮಿಕ ಶಿಕ್ಷಣ ಬಲಪಡಿಸಿ ದೇಶದ ಸಾಕ್ಷರತೆಯನ್ನು ಹೆಚ್ಚಿಸುತ್ತದೆ 
3. ಪಟ್ಟಣ, ನಗರ, ಮಹಾನಗರಗಳಲ್ಲಿ ವಾಸಿಸುವ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗದಂತೆ ತಡೆಗಟ್ಟುತ್ತದೆ 
4. ಭಾವಿ ಪ್ರಜೆಗಳ ಮಕ್ಕಳಿಗೆ ಉತ್ತಮ ಜೀವನ ದೊರಕುವಂತೆ ಮಾಡುತ್ತದೆ


 8. ಕಲಿ ನಲಿ (1995).
1. ಆಂಧ್ರಪ್ರದೇಶದ ಮದನಪಲ್ಲಿಯ ಋಷಿವಾಲಿ ಗ್ರಾಮದಲ್ಲಿ ಸ್ಕೂಲ್ ಇನ್ ಬ್ಯಾಗ್ ಕಾರ್ಯಕ್ರಮದ ಅಡಿಯಲ್ಲಿ ಈ ಕಲಿನಲಿ ಕಾರ್ಯಕ್ರಮವು ಪ್ರಾರಂಭವಾಯಿತು 
2. ಈ ಪುಸ್ತಕ ರಹಿತ ಬೋಧನೆಯು ಶಿಕ್ಷಣರಂಗದಲ್ಲಿ ವಿನೂತನ ಕಾರ್ಯಕ್ರಮ 
3. 1995 ರಲ್ಲಿ ಋಷಿವಾಲಿ ಗ್ರಾಮಕ್ಕೆ ಭೇಟಿ ನೀಡಿದ ಅನಂತರ ಮೈಸೂರು ಜಿಲ್ಲಾ ಡಯಟ್ ಉಪನ್ಯಾಸಕರು ಹಾಗೂ ಡಿ.ಪಿ.ಇ.ಪಿ.ಯ ಶಿಕ್ಷಣಾಧಿಕಾರಿಗಳು ಪುಸ್ತಕ ರಹಿತ ಬೋಧನೆ ಕುರಿತು ಅಧ್ಯಯನ ನಡೆಸಿ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆಯಲ್ಲಿ ಜಾರಿಗೆ ತಂದರು 
4. ರಾಯಚೂರು ಜಿಲ್ಲೆಯ ಲಿಂಗಸುಗೂರು, ಕೋಲಾರದ ಜಿಲ್ಲೆಯ ಚಿಕ್ಕಬಳ್ಳಾಪುರ, ಬೆಳಗಾವಿ ಜಿಲ್ಲೆಯ ಸವದತ್ತಿ, ಮತ್ತು ಮಂಡ್ಯಜಿಲ್ಲೆಯ ಮಳವಳ್ಳಿ ಯಲ್ಲಿ 1999 ಜೂನ್ ತಿಂಗಳಿಂದ ನಾಲ್ಕು ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲಿ ಕಾರ್ಯರೂಪಕ್ಕೆ ಬಂದಿದೆ
5. ಇದು ಕಲಿ-ನಲಿ ಹಾಗೂ ನಲಿ-ಕಲಿ ಒಂದೇ ಸಾಮ್ಯತೆಯನ್ನು ಹೊಂದಿದ್ದು, ಪುಸ್ತಕ ರಹಿತ ಬೋಧನೆ ಆಗಿದೆ 
6. ಶಿಶುಕೇಂದ್ರಿತ ಚಟುವಟಿಕೆಯಾಧಾರಿತ ಕಲಿಕೆ 
7. ಸ್ವ-ಕಲಿಕೆ, ಸಂತಸದ ಕಲಿಕೆ, ಸಂತಸದ ವಾತಾವರಣ 
8. ಹಾಜರಾತಿ ಪ್ರಮಾಣದಲ್ಲಿ ಹೆಚ್ಚಳ 
9. ಲಿಂಗತಾರತಮ್ಯ ಕಡಿಮೆ 
10. ಮುಂಜಾನೆಯಲ್ಲಿ ಭಾಷೆಯ ಮತ್ತು ಗಣಿತದ ಬೋಧನೆ 
11. ಮಧ್ಯಾಹ್ನದ ಅವಧಿಯಲ್ಲಿ ಪರಿಸರ ಅಧ್ಯಯನದ ಬೋಧನೆ 
12. ಸ್ವಯಂ ಬೋಧನೋಪಕರಣಗಳ ತಯಾರಿಕೆ ಮತ್ತು ಬಳಕೆ 
13. ಹಂತಹಂತವಾಗಿ ಸಾಮರ್ಥ್ಯಗಳನ್ನು ಮೆಟ್ಟಿಲು ಪ್ರಕಾರ ಗಳಿಸಿಕೊಳ್ಳುವುದು 
14. ಕನ್ನಡ ವರ್ಣಮಾಲೆಯು 10 ಹಂತಗಳಲ್ಲಿ ವಿಭಜನೆಯಾಗಿದೆ. ಉದಾಹರಣೆಗೆ, ರ ಗ ಸ ದ ಅ ಅಕ್ಷರಗಳು ಅತಿಹೆಚ್ಚು ಮೂವತ್ತರಿಂದ ಮೂವತ್ತೈದು ಪದಗಳು ರೂಪುಗೊಂಡಿವೆ


ಸಾಮರ್ಥ್ಯ ಗಳಿಸಲು ವಿವಿಧ ಚಟುವಟಿಕೆಗಳು: ಹಾಡುಗಳು, ಸಾಧನೆಗೆ ತಕ್ಕ ಹಾಡುಗಳು, ಕಥೆಗಳು, ಸನ್ನಿವೇಶ ರಚನೆ, ಚಿತ್ರಸಹಿತ ಪದ, ಸರಳ ಸಂಭಾಷಣೆ, ಸೀತಾಫಲ, ರಬ್ಬರ್ ಅಕ್ಷರ, ಕ್ರಾಫ್ಟ್, ಚಿತ್ರ ರೈಲು, ಆಕಾರ ಗುರುತಿಸುವ ಅಕ್ಷರ ಪಟ್ಟಿ, ಸಾಧನೆ, ಚಿತ್ರಸಹಿತ ವಾಕ್ಯ, ಚಿತ್ರ ನೋಡಿ ಪದ ಬರೆ, ಪದಬಂಧ, ಚಿತ್ರಗಳಿಗೆ ಪದವನ್ನು ಹೊಂದಿಸು, ಗೆಲುವಿನ ಆಟ, ನಮ್ಮ ಸಾಧನೆ, ಎಲ್ಲಾ ಸಾಧನಗಳ ಕಥೆ, ತಾರನಾಥ, ಅಕ್ಷರ ರೈಲುಗಳು ,ಚಿತ್ರಪಟ, ಅಕ್ಷರ ಬರವಣಿಗೆ, ಬಿಟ್ಟ ಅಕ್ಷರ ಬರೆ, ಅಕ್ಷರ ಬರೆ, ಆಶಾ ಆಟ, ಪದಗಳ ಆಟ, ನೆನಪಿನ ಆಟ, ವರ್ಣಮಾಲೆ, ಇತ್ಯಾದಿ ...
ಗಣಿತ ವಿಷಯದಲ್ಲಿ ಮಗು ಪಾಲ್ಗೊಳ್ಳುವ ಕಲಿಕಾ ಚಟುವಟಿಕೆಗಳು ಪೂರ್ವಭಾವಿ ಚಟುವಟಿಕೆ, ಹೊರಾಂಗಣ ಚಟುವಟಿಕೆ, ಒಳಾಂಗಣ ಚಟುವಟಿಕೆ, ಅಂಕಿಗಳ ಬರವಣಿಗೆ ಮತ್ತು ಸೂಚನೆಗಳು, ಅಭ್ಯಾಸದ ಹಾಳೆ, ಮೌಖಿಕ ಲೆಕ್ಕಗಳು, ಆಟಗಳು, ಆಮೆ, ಚುಕ್ಕಿ ಅಂಕಿ ರೈಲು, ಆಶಾ ಆಟ ,ಕ್ರಾಫ್ಟ್, ನನ್ನ ಸಾಧನೆ ಇತ್ಯಾದಿ ...
ಪರಿಸರ ಅಧ್ಯಯನ ವಿಷಯದಲ್ಲಿ ಮಗು ಪಾಲ್ಗೊಳ್ಳುವ ಚಟುವಟಿಕೆಗಳು: ಸಮೀಕ್ಷೆ, ಚರ್ಚೆಯ ಚಿತ್ರಗಳು, ಹಾಡುಗಳು, ಚರ್ಚೆಯ ಪ್ರಶ್ನೆಗಳು, ಕ್ರಾಪ್ಟ್ ಪ್ರದರ್ಶನ, ಸರಳ ಪ್ರಯೋಗ, ಚಟುವಟಿಕೆ ಆಟ, ಮೂಕಾಭಿನಯ, ಅಣಕು ನುಡಿ, ಪಪೆಟ್ ಷೋ, ಯೋಜನೆ, ನೆನಪಿನ ಆಟ, ಹವಾಮಾನ ನಕ್ಷೆ, ಇತ್ಯಾದಿ ...



1. ಚಟುವಟಿಕೆ ಆಧಾರಿತ ಮತ್ತು ಸಾಮರ್ಥ್ಯ ಆಧಾರಿತ, ಆಟಗಳ ಆಧಾರಿತ 
2. ಸರಳತೆಯಿಂದ ಸಂಕೀರ್ಣತೆ ಕಡೆಗೆ ಕಲಿಕೆ ಸಾಗುತ್ತದೆ 
3. ಸ್ವಯಂ ವೇಗದಲ್ಲಿ ಸ್ವಯಂ ಕಲಿಕೆಯಲ್ಲಿ ಮಗು ಸಾಗುತ್ತದೆ 
4. ಶಿಕ್ಷಕರಿಂದಲೇ ಕಲಿಕಾ ಸಾಮಗ್ರಿ ತಯಾರಿ
5. ಕಾರ್ಡು ಪದ್ಧತಿ ಇದ್ದು ವಸ್ತು ವಿಷಯದಲ್ಲಿ ಮಾತರ್ಪಾಡು ಸಾಧ್ಯ

1. ಈ ವಿಧಾನದಲ್ಲಿ ಬದ್ಧತೆಯ ಮೇಲೆ ಕಾರ್ಯನಿರ್ವಹಣೆ ಸಾಗುತ್ತದೆ 
2. ಪಠ್ಯಪುಸ್ತಕದ ಲಭ್ಯತೆ / ಬಳಕೆ ಕಡಿಮೆ 
3. ಬದ್ಧತೆಯುಳ್ಳ ಶಿಕ್ಷಕರ ಸಂಖ್ಯೆ ಸೀಮಿತವಾದಾಗ ವಿಫಲ 
4. ತರಬೇತಿ ತುಸು ಪರಿಶ್ರಮದಾಯಕ 
5. ಕಾರ್ಡುಗಳು ಇಲ್ಲದೇ ಇರುವುದರಿಂದ ಪಾಲಕರಿಗೆ ಮಾಹಿತಿ ಇಲ್ಲ 
6. ಹೆಚ್ಚು ಮಕ್ಕಳು ಇದ್ದಲ್ಲಿ ಕಡಿಮೆ ಸಾಧನೆ


9.ಚಿನ್ನರ ಅಂಗಳ (ವಸತಿರಹಿತ /ವಸತಿಸಹಿತ).
1. ಶಾಲೆಬಿಟ್ಟ ಮಕ್ಕಳನ್ನು ಶಾಲಾ ವ್ಯಾಪ್ತಿಗೆ ತರುವ ಕಾರ್ಯಕ್ರಮ ಇದಾಗಿದೆ 
2. ಶಾಲೆಯ ಹೊರಗಿನ ಚಟುವಟಿಕೆಗೆ ಹೊಂದಿಕೊಂಡಿರುವ, ಶಾಲೆ ಸೇರಿ ಬಿಟ್ಟವರನ್ನು ನೇರ ಔಪಚಾರಿಕವಾಗಿ ಶಾಲೆಗೆ ದಾಖಲಿಸುವುದರಿಂದ ಶಾಲೆಯ ಚಟುವಟಿಕೆ, ಕಲಿಕಾ ವಿಧಾನ, ಶಾಲಾ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟವಾಗುವುದು ಹಾಗೂ ಮರಳಿ ಶಾಲೆಯನ್ನು ಬಿಟ್ಟು ಬಿಡುವ ಸಾಧ್ಯತೆ ಹೆಚ್ಚಿರುವುದರಿಂದ, ಅಂತಹ ವಿದ್ಯಾರ್ಥಿಗಳಿಗೆ ಕನಿಷ್ಠ ಕಲಿಕಾ ಸಾಮರ್ಥ್ಯ, ಕಲಿಕೆಯಲ್ಲಿ ಆಸಕ್ತಿ ನಿರಂತರವಾಗಿ ಶಾಲೆಯಲ್ಲಿ ಉಳಿಯುವಂತೆ ಪ್ರೇರೇಪಿಸುವ ಕಾರ್ಯಕ್ರಮವೇ ಚಿನ್ನರ ಅಂಗಳ 
3. ಒಂದು ನಿರ್ದಿಷ್ಟ ಸಮಯ, ನಿರ್ದಿಷ್ಟ ಸ್ಥಳಗಳಲ್ಲಿ ಸೇರಿ ಶಿಕ್ಷಕರು 7 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳು ಹಾಡುತ್ತಾ ನಲಿಯುತ್ತಾ ಶಿಕ್ಷಣವನ್ನು ಪಡೆಯುತ್ತಾ, ಶಾಲೆಯ ಮುಖ್ಯ ವಾಹಿನಿಗೆ ತರುವ ಯಶಸ್ವಿ ಕಾರ್ಯಕ್ರಮವೇ ಚಿಣ್ಣರ ಅಂಗಳ 
4. ವಸತಿಯುತ ಕಾರ್ಯಕ್ರಮದಡಿ ದೂರದ ಪ್ರದೇಶದ ಮಕ್ಕಳನ್ನು ಕನಿಷ್ಠ ಹತ್ತು ಮಕ್ಕಳು ಇರುವಂತೆ ಅಳವಡಿಸಬಹುದಾಗಿದೆ 
5. ಶಾಲೆ ತೊರೆದ ಕನಿಷ್ಠ ಹತ್ತು ಮಕ್ಕಳು ಇರುವ ಪ್ರದೇಶದ ಶಾಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಹಾಗೂ ಎಸ್.ಡಿ.ಎಂ.ಸಿ ಸಮಿತಿಯವರಿಂದ, ನಿಯೋಜನೆಗೊಂಡ ಶಿಕ್ಷಕರು ನಡೆಸಬೇಕಾಗುತ್ತದೆ. ಜೊತೆಗೆ, ಸಂಘ ಸಂಸ್ಥೆಯವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಡೆಸಲು ಅವಕಾಶವಿರುತ್ತದೆ 
6. ಬೇಸಿಗೆಯಲ್ಲಿ, ಚಿಣ್ಣರ ಅಂಗಳ ಶಿಬಿರಗಳಲ್ಲಿ ಪ್ರತಿ ತಿಂಗಳಿಗೆ ಪ್ರತಿ ಮಗುವಿಗೆ ರೂ.250 ರಂತೆ ಖರ್ಚನ್ನು ಭರಿಸಬಹುದಾಗಿದ್ದು, ಉಪಹಾರ, ಲೇಖನ ಸಾಮಾಗ್ರಿ, ಬೋಧನೋಪಕರಣ, ಸ್ವಯಂಸೇವಕರಿಗೆ, ಅಡಿಗೆಯವರಿಗಾಗಿ ಖರ್ಚನ್ನು ಭರಿಸಬಹುದಾಗಿದೆ.
7. ಔಪಚಾರಿಕ ವೇಳಾಪಟ್ಟಿಯಂತೆ, ನಿಗದಿತ ಸಮಯ, ಪಠ್ಯಕ್ರಮ, ವಿಷಯ, ಬೋಧನಾ ತಂತ್ರ ಮತ್ತು ಬೋಧನಾ ವಿಧಾನಗಳನ್ನು ಬಳಸಿಕೊಂಡು ಸಾಮರ್ಥ್ಯಗಳನ್ನು ನಿರಂತರ ಹಾಜರಾತಿಯಲ್ಲಿ ಕಲಿಯುವಂತೆ ಮಾಡುವುದು 
8. ಚಿಣ್ಣರ ಅಂಗಳ ಕಾರ್ಯಕ್ರಮದ ಕೊನೆಯ ದಿನ ಸಮಾರಂಭವನ್ನು ಏರ್ಪಡಿಸಿ ಮಕ್ಕಳು ತಯಾರಿಸಿದ ವಸ್ತುಗಳು ಮತ್ತು ಚಿತ್ರ ಪ್ರದರ್ಶನವನ್ನು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವುದು 
9. ಈ ಮಕ್ಕಳು ಔಪಚಾರಿಕ ಶಾಲೆಯ ಸೂಕ್ತ ತರಗತಿಗಳಿಗೆ ದಾಖಲಾಗುವಂತೆ ಮುಖ್ಯ ಶಿಕ್ಷಕರು, ಎಸ್.ಡಿ.ಎಂ.ಸಿ.ಗಳು, ಸಿ.ಆರ್.ಪಿ ಗಳು ನೋಡಿಕೊಳ್ಳುವುದು 
10. ದಾಖಲಾತಿ ಪುಸ್ತಕದಲ್ಲಿ ದಾಖಲಿಸುವಾಗ "ಚಿಣ್ಣರ ಅಂಗಳದ ವಿಶೇಷ ದಾಖಲಾತಿ" ಎಂದು ನಮೂದಿಸುವುದು. ಈಗಾಗಲೇ ದಾಖಲೆ ಹೊಂದಿದ್ದಲ್ಲಿ ಮತ್ತೊಮ್ಮೆ ದಾಖಲಾತಿಯಲ್ಲಿ ಬರೆಯದಂತೆ ನಿಗಾವಹಿಸುವುದು.


10. ಕಪ್ಪು ಹಲಗೆ ಕಾರ್ಯಾಚರಣೆ. (OBB).
1986ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಸರಿಸಿ, ಪ್ರಾಥಮಿಕ ಶಿಕ್ಷಣ ವಲಯದಲ್ಲಿ ಶಿಕ್ಷಕರ ನೇಮಕಾತಿ, ಕೊಠಡಿಗಳ ನಿರ್ಮಾಣ, ಕಲಿಕೋಪಕರಣ ಗಳಿಗಾಗಿ ಕೈಗೊಂಡ ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಂಡ ಕಾರ್ಯಕ್ರಮ ಯೋಜನೆಯೇ ಕಪ್ಪು ಹಲಗೆ ಕಾರ್ಯಾಚರಣೆ .

ಪಡೆದಿದೆ. 
1.ಎಲ್ಲ ಏಕೋಪಾಧ್ಯಾಯ ಶಾಲೆಗಳಿಗೆ ಎರಡನೇ ಶಿಕ್ಷಕ, ಎರಡನೆಯ ಕೊಠಡಿ ಹಾಗೂ ಕಲಿಕೋಪಕರಣ ಗಳಿಗಾಗಿ ರೂ.7000 ಗಳ ಮಂಜೂರಾತಿ ಆಗಿದೆ 
2. ನೂರು ಮಕ್ಕಳಿಗಿಂತ ಹೆಚ್ಚು ಹಾಜರಾತಿ ಇರುವ ಎಲ್ಲಾ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೂರನೇ ಶಿಕ್ಷಕ ಹಾಗೂ ಮೂರನೇ ಕೊಠಡಿಯನ್ನು ಮಂಜೂರು ನೀಡಲಾಗಿದೆ 
3. ರಾಜ್ಯದ ಎಲ್ಲ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಒಂದು ಶಿಕ್ಷಕ ಹುದ್ದೆ ಮಂಜೂರಾತಿ, ಒಂದು ಕೊಠಡಿ ನಿರ್ಮಾಣ ಹಾಗೂ ಕಲಿಕಾ ಸಾಮಾಗ್ರಿಗಳಿಗೆ ರೂ.40000 ಗಳ ಮಂಜೂರು ನೀಡಿದೆ


11.  ಭಾಗ್ಯಲಕ್ಷ್ಮಿ ಯೋಜನೆ (2006).
2006 ನೇ ಸಾಲಿನಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ಬಡ ಗ್ರಾಮೀಣ ಹಾಗೂ ನಗರ ಪ್ರದೇಶದ ದಂಪತಿಗಳಿಗೆ ಜನಿಸಿದ ಪ್ರಥಮ ಹೆಣ್ಣುಮಗುವಿಗೆ ರೂ. 10,000 ಗಳ ಠೇವಣಿಯನ್ನು ಸರ್ಕಾರವು ಇಡುವುದರ ಜೊತೆಗೆ ಹೆಣ್ಣು ಮಗುವಿನ ಸ್ಥಾನಮಾನವನ್ನು ಹಾಗೂ ಹೆಣ್ಣು ಮಗುವಿನ ಕೀಳರಿಮೆ ಭಾವನೆಯನ್ನು ಹೋಗಲಾಡಿಸಲು ಹಾಗೂ ಭವಿಷ್ಯದಲ್ಲಿ ಶಿಕ್ಷಣವನ್ನು ನೀಡುವುದಕ್ಕಾಗಿ ಸರ್ಕಾರವು ಹೊರತಂದಿರುವ ಯೋಜನೆಯೇ "ಭಾಗ್ಯ ಲಕ್ಷ್ಮಿ ಯೋಜನೆ". 
1. ಆರಂಭಿಕ ಠೇವಣಿ ಮೊತ್ತ ರೂ..10000 
2. ಹೆಣ್ಣು ಮಗುವು 18 ವರ್ಷ ತುಂಬಿದ ನಂತರ ಪಡೆಯುವ ಮೊತ್ತ ರೂ. 1,01,303 ಗಳು.


12. ಪ್ರತಿಭಾ ಕಾರಂಜಿ.
ಉದ್ದೇಶ: 
1. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕುವ ಕಾರ್ಯಕ್ರಮ 
2. ಪ್ರತಿವರ್ಷವೂ ಕ್ಲಸ್ಟರ್, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಸಲಾಗುವುದು 
3. ಗೆದ್ದ ಮಕ್ಕಳಿಗೆ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಲಾಗುವುದು 
4. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಕ್ಕಳಲ್ಲಿ ಏಕರೂಪತೆಯನ್ನು ಬೆಳೆಸುವುದು 
5. ಮಕ್ಕಳಲ್ಲಿ ಮನೋಭಾವನೆಯನ್ನು ಬೆಳೆಸುವುದು
6. ಮಕ್ಕಳಲ್ಲಿ ಉತ್ತಮ ಮನಸ್ಸು ಮತ್ತು ಆರೋಗ್ಯ ಉಂಟು ಮಾಡುವುದು.



 13. ಕೂಲಿಯಿಂದ ಶಾಲೆಗೆ.
1. ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗಾಗಿ ರೂಪಿಸಿದ ಕಾರ್ಯಕ್ರಮವೇ "ಕೂಲಿಯಿಂದ ಶಾಲೆಗೆ" ಕಾರ್ಯಕ್ರಮ. 
2. ಭಾರತ ಸಂವಿಧಾನದ ಅನುಚ್ಛೇದ 24ರ ಅನ್ವಯ 14 ವರ್ಷದೊಳಗಿನ ಮಕ್ಕಳನ್ನು ಕೂಲಿ ಕೆಲಸಕ್ಕೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ.
3. ಕಾಯ್ದೆಯನ್ನು ಉಲ್ಲಂಘಿಸಿದರೆ ಶಿಕ್ಷೆ ದಂಡ /ಜೈಲು ಶಿಕ್ಷೆ / ಎರಡೂ ವಿಧಿಸಲಾಗುವುದು 
4. ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲ ಗೊಳಿಸಬಹುದು



 14. ಬಾ ಬಾಲೆ ಶಾಲೆಗೆ.
ಮಹಿಳೆಯರನ್ನು ಸಾಕ್ಷರರನ್ನಾಗಿಸಿ ಸಮರ್ಥರನ್ನಾಗಿ ಮಾಡಲು, ಶೇಕಡಾ 50 ಹೆಣ್ಣುಮಕ್ಕಳು ಶಾಲೆಯ ವ್ಯಾಪ್ತಿಯಿಂದ ಹೊರಗುಳಿದಿದ್ದು, ಅವರಿಗೆ ಕನಿಷ್ಠ ಎಂಟು ವರ್ಷದ ಶಿಕ್ಷಣವನ್ನು ನೀಡಲು, ಹೆಣ್ಣು ಮಕ್ಕಳನ್ನು ಶಾಲೆಯ ಕಡೆಗೆ ಆಕರ್ಷಿತರಾಗುವಂತೆ ಮಾಡಲು ರಾಜ್ಯ ಸರ್ಕಾರವು ಹಮ್ಮಿಕೊಂಡ ಕಾರ್ಯಕ್ರಮವೇ "ಬಾ ಬಾಲೆ ಶಾಲೆಗೆ". 
ಗುರಿ ಮತ್ತು ಉದ್ದೇಶಗಳು:
1. ಲಿಂಗ ತಾರತಮ್ಯ ನಿವಾರಣೆ ಮಾಡುವುದು 
2. ಶಾಲೆಗೆ ಬಾರದ 6ರಿಂದ 14ವರ್ಷದ ಬಾಲಕಿಯರನ್ನು ಶಾಲೆಗೆ ತರುವುದು 
3. ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು 
4. ಶಿಕ್ಷಣದ ಸಾರ್ವತ್ರಿಕರಣ 
5. ಎಂಟನೇ ತರಗತಿಯವರೆಗೆ ಶಾಲೆ ಬಿಡದಂತೆ ನೋಡಿಕೊಳ್ಳುವುದು 
6. ನಿಗದಿತ ಕಲಿಕಾ ಮಟ್ಟ ತಲುಪುವಂತೆ ನೋಡಿಕೊಳ್ಳುವುದು



 15. ಸಮುದಾಯದತ್ತ ಶಾಲೆ 
ಶಿಕ್ಷಣದ ಸಾರ್ವತ್ರೀಕರಣ, ಶಾಲೆಯ ಸರ್ವತೋಮುಖ ಬೆಳವಣಿಗೆಯಾಗಿಸಲು, ಶಿಕ್ಷಣದ ಪ್ರಕ್ರಿಯೆಯಲ್ಲಿ ಪೋಷಕರು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲು, ಶೈಕ್ಷಣಿಕ ಕಾರ್ಯಚಟುವಟಿಕೆ, ಮಕ್ಕಳ ಗುರಿ ಪ್ರಗತಿ ಸಾಧನೆಯನ್ನು ವಿಮರ್ಶಿಸಲು ಸರ್ಕಾರದಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮವೇ "ಸಮುದಾಯದತ್ತ ಶಾಲೆ ಕಾರ್ಯಕ್ರಮ". 
1. ನಿಗದಿತ ದಿನಾಂಕದಂದು ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಎಲ್ಲಾ ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು, ಮುಖ್ಯಶಿಕ್ಷಕರು ಹಾಗೂ ಎಲ್ಲಾ ಶಿಕ್ಷಕರು, ಮಾರ್ಗದರ್ಶಿ ಶಿಕ್ಷಕರು ಭಾಗವಹಿಸಿ, ವರದಿಯನ್ನು ತಲುಪಿಸುವರು. 
2. ಈ ಕಾರ್ಯಕ್ರಮದ ಉಸ್ತುವಾರಿಗಾಗಿ, ತಾಲೂಕು ಮಟ್ಟದಲ್ಲಿ ಶಿಕ್ಷಣ ಸಂಯೋಜಕರು, ಬಿ.ಆರ್.ಪಿ, ಸಿ.ಆರ್.ಪಿ ಗಳು ಶಾಲೆಗಳಿಗೆ ಭೇಟಿ ನೀಡಿ ಕಾರ್ಯಕ್ರಮ ಅನುಷ್ಟಾನ ಗೊಂಡಿರುವ ಬಗ್ಗೆ ಪರಿಶೀಲಿಸಿ ವರದಿ ಮಾಡುವರು.
3. ಈ ಕಾರ್ಯಕ್ರಮವು ಬೆಳಿಗ್ಗೆ ಪ್ರಾರ್ಥನಾ ಗೀತೆ, ಸ್ವಾಗತದೊಂದಿಗೆ ಪ್ರಾರಂಭಿಸಿ ಮಕ್ಕಳ  ಸರ್ವಾಂಗೀಣ ಅಭಿವೃದ್ಧಿ, ಪ್ರಗತಿ, ಶಾಲೆಯ ಸ್ಥಿತಿಗತಿ, ಮಕ್ಕಳ ದಾಖಲಾತಿ ಪತ್ರಗಳನ್ನು ಪಾಲಕರೊಂದಿಗೆ ಪರಿಶೀಲಿಸಿ ಚರ್ಚಿಸಿ ಹಾಗೂ ಸೂಕ್ತ ಸಲಹೆಯನ್ನು ಮಾರ್ಗದರ್ಶಕರು ನೀಡುವರು ಹಾಗೂ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವರು ಹಿಂದಿನ ಕಾರ್ಯಕ್ರಮದಲ್ಲಿ ಸೂಚಿಸಿದ ಕೈಗೊಳ್ಳಬೇಕಾದ ಕಾರ್ಯವನ್ನು ಕೈಗೊಂಡ ಬಗ್ಗೆ  ಚರ್ಚಿಸುವರು



16. ಸರ್ವ ಶಿಕ್ಷ ಅಭಿಯಾನ (2001).
ಉದ್ದೇಶ:
1. 2010 ರೊಳಗೆ 6 ರಿಂದ 14 ವರ್ಷದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಸಾರ್ವತ್ರಿಕರಣ, ಗುಣಾತ್ಮಕ ಶಿಕ್ಷಣ, ಲಿಂಗ ತಾರತಮ್ಯ ನಿವಾರಿಸುವಂತೆ ನೋಡಿಕೊಳ್ಳುವುದು 
2. 2003 ರ ಒಳಗೆ ಎಲ್ಲಾ ಮಕ್ಕಳ ದಾಖಲಾತಿ ಲಿಂಗತಾರತಮ್ಯ ನಿವಾರಣೆ 
3. 6ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ 
4. ಎಲ್ಲ ಮಕ್ಕಳಿಗೂ ಗುಣಾತ್ಮಕ ಶಿಕ್ಷಣ 
5. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಕಾಳಜಿ 
6. ಶಿಕ್ಷಕರ ನೇಮಕಾತಿ ಹಾಗೂ ತರಬೇತಿ 
7. ಬಿ.ಆರ್.ಸಿ ಮತ್ತು ಸಿ.ಆರ್. ಸಿ ಗಳ ಸ್ಥಾಪನೆ 
8. ವಾರ್ಷಿಕ ಕ್ರಿಯಾ ಯೋಜನೆ, ಪಾಠಯೋಜನೆ, ಸಾಮರ್ಥ್ಯ, ವಿಷಯ ಸಂಪದೀಕರಣ ಮುಂತಾದವುಗಳ ಬಗ್ಗೆ ತರಬೇತಿ ನೀಡುವುದು 
9. ಎರಡು ಕಿಲೋಮೀಟರ್ ಅಂತರದಲ್ಲಿ ಪ್ರಾಥಮಿಕ ಶಾಲೆ ಹಾಗೂ ಪ್ರತಿ ಐದು ಕಿಲೋಮೀಟರ್ ಅಂತರದಲ್ಲಿ ಪ್ರೌಢಶಾಲೆಗಳು ಇರುವಂತೆ ನೋಡಿಕೊಳ್ಳುವುದು 
10. ಮಕ್ಕಳ ಹಾಜರಾತಿಯನ್ನು ಹೆಚ್ಚಿಸಲು ಉಚಿತ ಪಠ್ಯಪುಸ್ತಕ, ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಗಳ ವಿತರಣೆ, ಅಕ್ಷರ ದಾಸೋಹ ಯೋಜನೆ, ಬೈಸಿಕಲ್ ವಿತರಣೆ ಮುಂತಾದ ಪ್ರೋತ್ಸಾಹದಾಯಕ  ಯೋಜನೆಗಳು ಈ ಕಾರ್ಯಕ್ರಮದ ಅಡಿಯಲ್ಲಿ ಸಮರ್ಪಕವಾಗಿ ನಡೆಸುವುದು.



 17. ಇ.ಜಿ.ಎಸ್ ಮತ್ತು ಎ.ಐ.ಇ (EGS and AIE)
ಉದ್ದೇಶ:
1. ಶಾಲಾ ರಹಿತ ಜನವಸತಿ ಸ್ಥಳಗಳಲ್ಲಿ ಶಾಲೆಯನ್ನು ಪ್ರಾರಂಭಿಸುವುದು 
2. ಸ್ಥಳಾಂತರ ಆಗುತ್ತಿರುವ ಮಕ್ಕಳಿಗಾಗಿ ಬೋಧನೆ ಮತ್ತು ಸಂಯೋಜನೆ ವರ್ಗದ ಶಾಲೆಯನ್ನು ಆರಂಭಿಸುವುದು 
3. ವಸತಿಯುತ  ಬೋಧನಾ ಶಿಬಿರ ಆರಂಭಿಸುವುದು 
4. ಬೇಸಿಗೆ ಶಿಬಿರ ಪರಿಹಾರ ಬೋಧನೆ ನಡೆಸುವುದು 
5. ಕೇಂದ್ರ ರಾಜ್ಯಗಳ ಅನುದಾನ ಅನುಪಾತ 75 : 25 
6. ಪ್ರತಿವರ್ಷಕ್ಕೆ ಪ್ರತಿ ಮಗುವಿಗೆ ಪ್ರಾಥಮಿಕ ಶಾಲೆಯವರೆಗೆ ರೂ.745, ಹಿರಿಯ ಪ್ರಾಥಮಿಕ ಶಾಲೆಯವರೆಗೆ ರೂ.1200 ರೂಪಾಯಿಗಳು ಧನಸಹಾಯ
7. ಈ.ಜಿ.ಎಸ್ ಮತ್ತು ಎ.ಇ.ಐ  ಕೇಂದ್ರಗಳು ಪ್ರತಿದಿನ ನಾಲ್ಕು ಗಂಟೆಯ ಕಾಲ ಜರುಗಬೇಕು




 18. ಶಿಕ್ಷಣ ಖಾತರಿ ಯೋಜನೆ:
1. ಸೇವಾವಧಿ / ಸೇವಾನಿರತ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ರಮ 
2. ಡಯಟ್  ಮುಖಾಂತರ ಸೇವಾ ಪೂರ್ವ ತರಬೇತಿ ಕಾರ್ಯಕ್ರಮ
3. "ಸ್ವತಹ ಜ್ವಾಲೆಯಿಂದ ಉರಿಯದ ದೀಪವು ಮತ್ತೊಂದು ದೀಪವನ್ನು ಹೇಗೆ ಬೆಳಗಿಸದೋ, ಆ ರೀತಿ  ಕಲಿಯದೇ ಇರುವ ಶಿಕ್ಷಕ  ಏನನ್ನೂ ಕಲಿಸಲಾರ" - ರವೀಂದ್ರನಾಥ ಟ್ಯಾಗೋರ್ 
4. ಶಿಕ್ಷಕ ಸಂಘ, ಎನ್.ಸಿ.ಇ.ಆರ್.ಟಿ,  ಸೇವಾ ವಿಸ್ತರಣಾ ಇಲಾಖೆ, ಡಯಟ್ ರ 

ವಿವಿಧ ಬಗೆಯ ತರಬೇತಿಗಳು:
ಬುನಾದಿ, ಚೈತನ್ಯ, ವಿಷಯ ಸಂಪದೀಕರಣ, ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್, ತ್ರೈಮಾಸಿಕ, ದ್ವೈಮಾಸಿಕ ಪರೀಕ್ಷಾ ಪದ್ಧತಿ, ಸಿಸಿಇ ಮೌಲ್ಯಮಾಪನ ತರಬೇತಿ, ಕ್ರಿಯಾ ಸಂಶೋಧನೆ ಬಗ್ಗೆ ತರಬೇತಿ, ಕಂಪ್ಯೂಟರ್ ಶಿಕ್ಷಣ ತರಬೇತಿ, ವಿಜ್ಞಾನ ಉಪಕರಣಗಳ ನಿರ್ವಹಣಾ ತರಬೇತಿ, ಕಲಿಕೋಪಕರಣಗಳ ತಯಾರಿಕಾ ತರಬೇತಿ, ಉಪಗ್ರಹ ಆಧಾರಿತ ಡಿಎಸ್ಇಆರ್ಟಿ ಎನ್ಸಿಇಆರ್ಟಿ ಸಹಭಾಗಿತ್ವದೊಂದಿಗೆ ಎಸ್.ಡಿ.ಎಂ.ಸಿ ರಚನೆಯ ಬಗ್ಗೆ ತರಬೇತಿ-ಸಮಗ್ರ, ಸೇತುಬಂದ ಕಾರ್ಯಕ್ರಮದ ಬಗ್ಗೆ ತರಬೇತಿ, ಶಾಲಾ ಸಂಕಿರಣ ನಿರ್ವಹಣೆಯ ಬಹುವರ್ಗ ಬೋಧನೆ ತರಬೇತಿ, ಎಸೆಸೆಲ್ಸಿ ಫಲಿತಾಂಶ ಸುಧಾರಣೆ ಬಗ್ಗೆ ಕಾರ್ಯಾಗಾರ, ಸೇವಾದಳ ತರಬೇತಿ, ಸ್ಕೌಟ್ ಸೇವಾದಳ ತರಬೇತಿ

ಸೇವಾವಧಿ ಪೂರ್ವದಲ್ಲಿ ತರಬೇತಿ (ಟಿ.ಸಿ.ಎಚ್, ಬಿ.ಎಡ್, ಬಿ.ಪಿ.ಎಡ್): 

ಮಗುವಿನ ಬೆಳವಣಿಗೆ ಪ್ರಕ್ರಿಯೆ ಮತ್ತು ಮನೋವಿಜ್ಞಾನದ ಜ್ಞಾನ ತಿಳಿಯಲು, ಶಿಕ್ಷಣದ ಗುರಿ ಮತ್ತು ಉದ್ದೇಶವನ್ನು ಪೂರ್ವಭಾವಿಯಾಗಿ ತಿಳಿಯಲು, ಇಲಾಖೆಯ ನಿಯಮ ತಿಳಿಯಲು ಮತ್ತು ಪಾಲಿಸಲು ಸೇವೆಗಾಗಿ, ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಸಂಘಟನೆಯ ಮೇಲ್ವಿಚಾರಣೆಯ ಮಾಹಿತಿಗಾಗಿ, ಪಾಠಯೋಜನೆ, ಕ್ರಿಯಾಯೋಜನೆ, ಬೋಧನೋಪಕರಣ ತಯಾರಿಸುವ ಬಳಸುವ ಬಗ್ಗೆ ಮಾಹಿತಿಗಾಗಿ, ಮೌಲ್ಯಮಾಪನ ಮತ್ತು ದಾಖಲೀಕರಣ ಗಳ ಬಗ್ಗೆ ಮಾಹಿತಿಗಾಗಿ ತರಬೇತಿಯ ಅವಶ್ಯಕತೆ ಇದೆ




19. ಎಸ್.ಟಿ.ಎಫ್ ಮತ್ತು ಟಿ.ಡಬ್ಲ್ಯೂ.ಎಫ್  (STF & TWF).
"ಭಾರತದ ಭವಿಷ್ಯವು ತರಗತಿಯಲ್ಲಿ ನಿರ್ಮಾಣವಾಗುತ್ತದೆ" - ಕೊಠಾರಿ 
1. ರಾಷ್ಟ್ರೀಯ ಚಿಕಿತ್ಸೆಗಾಗಿ ಧನಸಹಾಯ ರೂ.500 ರಿಂದ ರೂ.10000 ವರೆಗೆ. 
2. ಸೇವೆಯಲ್ಲಿರುವಾಗಲೇ ಮೃತಪಟ್ಟ ಶಿಕ್ಷಕರ ಕುಟುಂಬಗಳಿಗೆ ರೂ.5000 ಧನಸಹಾಯ 
3. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ರೂ.2000 ರಿಂದ ರೂ.1000 4.ಪ್ರತಿಭಾ ಪುರಸ್ಕಾರ, ಪ್ರತಿಭಾ ವಿದ್ಯಾರ್ಥಿ ವೇತನ, ಎಸ್ಎಸ್ಎಲ್ಸಿ, ಪಿಯುಸಿ, ಬಿಎಸ್ಸಿ ಸ್ನಾತಕೋತ್ತರ ಮತ್ತು ನಾಟಕ ಪದವಿಗಳಲ್ಲಿ 
5.ಪ್ರತಿಭಾನ್ವಿತ ಶಿಕ್ಷಕರಿಗೆ ಪ್ರಶಸ್ತಿಗಳು 
6. ಶಿಕ್ಷಕರಿಗಾಗಿ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳು


ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳು:
1. ರಾಜ್ಯಮಟ್ಟದಲ್ಲಿ ಉತ್ತೀರ್ಣರಾಗಿ ರಾಷ್ಟ್ರೀಯಮಟ್ಟದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವುದು ಒಂದು ವರ್ಷಕ್ಕೆ 1500 ಮತ್ತು 1500 3000 
2. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ ಚೈತ್ರದ ಚಿಗುರು 
3. ಶೌರ್ಯ ತೋರಿದ ಮಕ್ಕಳಿಗೆ ಪ್ರಶಸ್ತಿ 1000 ರೂ ನಗದು ಬಹುಮಾನ
4. ರಾಜ್ಯಮಟ್ಟದ ಕ್ರೀಡೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ನಗದು ಬಹುಮಾನ 
5. ದುರಂತ ಅಪಘಾತಗಳಲ್ಲಿ ಮರಣಿಸಿದ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ಧನ 
6. ವಿದ್ಯಾರ್ಥಿಗಳಿಗೆ ತೀವ್ರ ಕಾಯಿಲೆಗಳ ಚಿಕಿತ್ಸೆಗಾಗಿ ವೈದ್ಯಕೀಯ ಧನಸಹಾಯ 
7. ವೈದ್ಯಕೀಯ ತಪಾಸಣೆಗಾಗಿ ಹೆಲ್ತ್ ಕಾರ್ಡ್ ಮುದ್ರಿಸಿ ನೀಡುವುದು.