ಹೆಚ್ಚುವರಿ ಪೌಷ್ಟಿಕಾಂಶ ಮಾತ್ರೆಗಳು.
ಮಕ್ಕಳಿಗೆ ನೀಡುವ ಬಿಸಿಯೂಟದ ಜೊತೆಗೆ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಈ ಕೆಳಕಂಡ ಮಾತ್ರೆಗಳನ್ನು ನೀಡಲಾಗುತ್ತದೆ.
1) ಜಂತುಹುಳು ನಿವಾರಕ ಮಾತ್ರೆಗಳು: ಅಲ್ಬೆಂಡಜೋಲ್ 400 ಮಿಲಿಗ್ರಾಂ. ಒಂದು ಮಗುವಿಗೆ ಆರು ತಿಂಗಳಿಗೆ ಒಮ್ಮೆ ಒಂದು ಮಾತ್ರೆಯಂತೆ, ವರ್ಷದಲ್ಲಿ ಎರಡು ಮಾತ್ರೆಗಳು. ಇವು ಚೀಪುವ ಮಾತ್ರೆಗಳಾಗಿದ್ದು, ಊಟದ ನಂತರ ತೆಗೆದುಕೊಳ್ಳುವುದು.
2) ವಿಟಮಿನ್ ಎ ಅನ್ನಾಂಗದ ಮಾತ್ರೆಗಳು: ಒಂದು ಮಗುವಿಗೆ, ಆರು ತಿಂಗಳಿಗೆ ಎರಡು ಲಕ್ಷ ಐ.ಯು.ದಷ್ಟು ನೀಡಬೇಕು. ಆರು ತಿಂಗಳಿಗೆ ಒಂದರಂತೆ, ವರ್ಷಕ್ಕೆ 2 ಮಾತ್ರೆಗಳು, ಈ ಮೇಲಿನ ಮಾತ್ರೆಗಳನ್ನು ಆರೋಗ್ಯ ಕಾರ್ಯಕರ್ತೆಯರ ಮೂಲಕ ಊಟ ಮಾಡುವ ಸಮಯದಲ್ಲಿ, ಊಟದೊಂದಿಗೆ ಮಕ್ಕಳಿಗೆ ನೀಡುವುದು.
3) ಕಬ್ಬಿಣಾಂಶ ಹಾಗೂ ಫೋಲಿಕ್ ಆಸಿಡ್ ಮಾತ್ರೆ: (1-5 ತರಗತಿಗೆ ಪಿಂಕ್ ಬಣ್ಣದ) 45 ಗ್ರಾಂನ ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲದ ಮಾತ್ರೆಗಳು, (6-10ನೇ ತರಗತಿಗೆ ನೀಲಿ ಬಣ್ಣದ) 100 ಗ್ರಾಂನ ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲದ ಮಾತ್ರೆಗಳು, ಪ್ರತಿ ಸೋಮವಾರಕ್ಕೆ ಒಂದು ಮಾತ್ರೆಯಂತೆ ನೀಡಬೇಕು. ಇವುಗಳನ್ನು ಆರೋಗ್ಯ ಇಲಾಖೆಯಿಂದ ಪಡೆದುಕೊಂಡು ಆರೋಗ್ಯಾಧಿಕಾರಿಯವರ ಸೂಚನೆ ಪ್ರಕಾರ, ಶಾಲಾ ಶಿಕ್ಷಕರು ಮಕ್ಕಳ ಊಟದೊಂದಿಗೆ ಮಕ್ಕಳಿಗೆ ನೀಡುವುದು. ಪ್ರಾಥಮಿಕ ಹಂತದಲ್ಲಿ ಕಬ್ಬಿಣಾಂಶ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ಪಡೆದ ಕೆಲವು ಮಕ್ಕಳಲ್ಲಿ ವಾಂತಿ ಬೇಧಿ ಮತ್ತು ಹೊಟ್ಟೆನೋವು ಬರಬಹುದು, ಗಾಬರಿ ಪಡಬೇಕಾದ ಅವಶ್ಯಕತೆ ಇರುವುದಿಲ್ಲ. ಮಾತ್ರೆಗಳನ್ನು ಊಟದ ನಂತರ ತೆಗೆದುಕೊಂಡು ಹೆಚ್ಚು ನೀರು ಕುಡಿಯಲು ಸೂಚಿಸುವುದು. ಹೆಚ್ಚಿನ ಪ್ರಮಾಣದಲ್ಲಿ ತೊಂದರೆ ಕಾಣಿಸಿಕೊಂಡರೆ ಕೂಡಲೇ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ತಿಳಿಸಿ, ವೈದ್ಯರ ಮಾರ್ಗದರ್ಶನ ಪಡೆಯುವುದು.
.......... END .............