"ಶಿಕ್ಷಣದಲ್ಲಿ ಯಾವುದೇ ತತ್ ಕ್ಷಣದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶದಿಂದ ಕೈಗೊಳ್ಳುವ ತ್ವರಿತ ಸಂಶೋಧನೆಯೇ, ಕ್ರಿಯಾ ಸಂಶೋಧನೆ "...... ಮೌಲಿ.
ಅರ್ಥ: ಕ್ರಿಯಾಸಂಶೋಧನೆಯು ಶಾಲೆಯ ಶೈಕ್ಷಣಿಕ ಪಠ್ಯ, ಪಠ್ಯಪೂರಕ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗಾದರೂ ಪರಿಹಾರ ಪಡೆಯಲು ನಡೆಸ ತಕ್ಕ ಕಾರ್ಯ.
ಕ್ರಿಯಾಸಂಶೋಧನೆಯ 7 ಹಂತಗಳು:
1) ಸಮಸ್ಯೆಯನ್ನು ಗುರುತಿಸುವುದು: ಆಯ್ದುಕೊಳ್ಳುವ ಸಮಸ್ಯೆಯು, ಶಾಲೆಗೆ, ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಅತ್ಯವಶ್ಯಕವಾದ ಮಹತ್ವಪೂರ್ಣವಾದ ಕಲ್ಪಿತವಲ್ಲದ ಪರಿಹಾರವನ್ನು ಪಡೆಯುವಂತಹ ಸಮಸ್ಯೆಗಳನ್ನು ಆಯ್ದು ಕೊಳ್ಳುವುದು. ಉದಾಹರಣೆಗೆ, "ಎಂಟನೇ ತರಗತಿಯಲ್ಲಿ ಗಣಿತದಲ್ಲಿ ವಿದ್ಯಾರ್ಥಿಗಳ ಕಡಿಮೆ ಸಾಧನೆ".
2) ಸಮಸ್ಯೆಯನ್ನು ನಿರ್ದಿಷ್ಟ ಪಡಿಸುವುದು: ಯಾವ ತರಗತಿ ಯಲ್ಲಿ ಯಾವ ವಿಷಯದ ಘಟಕದಲ್ಲಿ ವಿದ್ಯಾರ್ಥಿಗಳಿಗೆ ಯಾವ ಸಾಮರ್ಥ್ಯವು ಕ್ಲಿಷ್ಟಕರವಾಗಿದೆ ಎಂಬುದನ್ನು ಸ್ಪಷ್ಟವಾಗಿ ವಿಶ್ಲೇಷಿಸುವುದು.
3) ಕ್ರಿಯಾ ಪ್ರಾಕಲ್ಪನೆಯನ್ನು ರೂಪಿಸುವುದು: ಸಮಸ್ಯೆಯನ್ನು ಪರಿಹರಿಸಲು ಊಹಿಸಿಕೊಳ್ಳುವ ಬುದ್ಧಿವಂತಿಕೆಯ, ತಾರ್ಕಿಕವಾದ, ತಾತ್ಕಾಲಿಕವಾದ, ಪ್ರಾಕಲ್ಪನೆಯನ್ನು ತಯಾರಿಸಿಕೊಳ್ಳುವುದು. ಉದಾಹರಣೆ- ಗಣಿತದ ಮೂಲ ಕ್ರಿಯೆಗಳ ತಿಳುವಳಿಕೆ ಇಲ್ಲದಿರುವುದು. ಭಾಗಕಾರದ ನಿಯಮಗಳನ್ನು ಮತ್ತೊಮ್ಮೆ ಪರಿಚಯಿಸುವುದು. ಸರಳ ಬಡ್ಡಿಯ ಸೂತ್ರದ ಚಿತ್ರಪಟ ಬಳಸುವುದು ಇತ್ಯಾದಿ.
4) ಕ್ರಿಯಾಯೋಜನೆ ತಯಾರಿಸುವುದು: ಚಟುವಟಿಕೆಗಳ ವೇಳಾಪಟ್ಟಿ, ಆಯ್ಕೆ, ಸಮಯಗಳನ್ನು ಯೋಜಿಸಿಕೊಳ್ಳುವುದು.
5) ಕ್ರಿಯಾ ಯೋಜನೆಯ ಅನುಷ್ಠಾನ: ನಿಗದಿತ ಸಮಯದಲ್ಲಿ ಯೋಜಿಸಿದಂತೆ, ತಾಳೆಪಟ್ಟಿ, ದರ್ಜಾಮಾಪನ, ಪ್ರಶ್ನಾವಳಿ ಗಳೊಂದಿಗೆ ಕಾರ್ಯರೂಪಕ್ಕೆ ತರುವುದು.
6) ದತ್ತಾಂಶಗಳ ಸಂಘಟನೆ ಮತ್ತು ವಿಶ್ಲೇಷಣೆ: ಸಾಧನ ಮತ್ತು ತಂತ್ರಗಳ ಮೂಲಕ ಪಡೆದ ದತ್ತಾಂಶಗಳನ್ನು ವಿಶ್ಲೇಷಿಸುವುದು. ನಕ್ಷೆ ನಿರೂಪಣೆ, ಸರಾಸರಿ, ರೂಢಿಬೆಲೆ, ಹರವುಗಳ ಬಳಕೆಯಿಂದ ದತ್ತಾಂಶಗಳನ್ನು ವಿಶ್ಲೇಷಿಸುವುದು.
7) ಕ್ರಿಯಾಯೋಜನೆಯ ಮೌಲ್ಯಮಾಪನ: ದತ್ತಾಂಶಗಳ ಸಂಖ್ಯಾ ವಿಶ್ಲೇಷಣೆಯ ಆಧಾರದ ಮೇಲೆ ಕ್ರಿಯಾ ಪ್ರಾಕಲ್ಪನೆಗಳು ಅಂಗೀಕಾರವಾಗಿದೆಯೇ, ಯಶಸ್ವಿಯಾಗಿದೆಯೇ ಎಂಬುದನ್ನು ಮೌಲ್ಯಮಾಪನ ಮಾಡುವುದು.
ಕೃಪೆ:
ಕ್ರಿಯಾ ಸಂಶೋಧನೆ ತರಬೇತಿ ಸಾಹಿತ್ಯದಿಂದ.
........ END .........