ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಪ್ರಕಾರ ಮದುವೆಯಾಗಲು ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ಆಗಿರಲೇಬೇಕು. ಇದಕ್ಕೂ ಮೊದಲು ಮದುವೆ ನಡೆದಲ್ಲಿ ಅಂತಹ ಮದುವೆಗೆ ಕಾನೂನಿನ ಮಾನ್ಯತೆ ದೊರೆಯುವುದಿಲ್ಲ ಅಲ್ಲದೆ ಬಾಲ್ಯ ವಿವಾಹದಲ್ಲಿ ಭಾಗಿಯಾದ ಎಲ್ಲರೂ ಶಿಕ್ಷಾರ್ಹ ಅಪರಾದಿಗಳೇ ಆಗಿರುತ್ತಾರೆ. ಬಡತನ ಅನಕ್ಷರತೆ, ಕಾನೂನು ಅರಿವು ಇಲ್ಲದಿರುವುದು, ರಕ್ತ ಸಂಬಂಧ ಉಳಿಸಿಕೊಳ್ಳಲು ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ, ಹೆಣ್ಣು ಮಕ್ಕಳು ಕುಟುಂಬಕ್ಕೆ ಹೊರೆ ಎಂಬ ಭಾವನೆ, ಮೂಢನಂಬಿಕೆ, ಸಾಮೂಹಿಕ ವಿವಾಹಗಳಲ್ಲಿ ಹೆಚ್ಚು ಸಂಖ್ಯೆ ವಿವಾಹಗಳನ್ನು ಮಾಡಿದೆ ಎಂಬ ಹೆಗ್ಗಳಿಕೆ ಇವೇ ಬಾಲ್ಯವಿವಾಹಕ್ಕೆ ಪ್ರಮುಖ ಕಾರಣಗಳಾಗಿವೆ . - ಬಾಲ್ಯ ವಿವಾಹದಿಂದ ವಿಕಲಾಂಗ ಮಕ್ಕಳು ಜನಿಸುವ ಸಂಭವ, ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾದರೆ ಗರ್ಭ ಚೀಲಕ್ಕೆ ಪೆಟ್ಟು ಬೀಳುವುದು. ರಕ್ತ ಹೀನತೆ, ಕಡಿಮೆ ತೂಕದ ಮಗುವಿನ ಜನನ , ಶಿಶು ಮರಣ ಮತ್ತು ಮಕ್ಕಳ ಮರಣ ಹೆಚ್ಚಾಗುತ್ತದೆ . ಅಪೌಷ್ಟಿಕತೆಗೆ ತುತ್ತಾಗುವ ಸಂಭವವಿರುತ್ತೆ , ಲೈಂಗಿಕ ಶೋಷಣೆಗೆ ಗುರಿಯಾಗುವುದು , ಲೈಂಗಿಕ ರೋಗಗಳಾದ ಎಚ್ ಐವಿ ಅಥವಾ ಏಡ್ ನಂತಹ ಸೋಂಕುಗಳಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ . ಬಾಲಕಿಯನ್ನು ಮದುವೆಯಾದ ವಯಸ್ಕ ಪುರುಷ , ಬಾಲ್ಯ ವಿವಾಹ ನೇರವೇರಿಸುವ , ಪ್ರೇರೆಪಿಸುವ ವ್ಯಕ್ತಿಗಳು , ತಂದೆ - ತಾಯಿ ಅಥವಾ ಪೋಷಕರು ಬಾಲ್ಯ ವಿವಾಹದಲ್ಲಿ ಹಾಜರಾಗುವವರೆಲ್ಲರೂ ಸೆಕ್ಷನ್ 10 ಮತ್ತು 11ರ ಪ್ರಕಾರ ತಪ್ಪಿತಸ್ತರು , ಕನಿಷ್ಠ 1 ವರ್ಷದಿಂದ ಗರಿಷ್ಟ 02 ವರ್ಷಗಳವರೆಗೆ ಕಾರಾಗೃಹವಾಸ ಮತ್ತು 01 ಲಕ್ಷ ರೂ . ವರೆಗೆ ದಂಡದ ಶಿಕ್ಷಗೆ ಗುರಿಯಾಗುವರು . ಸೆಕ್ಷನ್ 13ರ ಪ್ರಕಾರ ತಡೆಯಾಜ್ಞೆಯನ್ನು ಉಲ್ಲಂಘಿಸಿ ಮದುವೆ ಮಾಡಿದವರಿಗೆ ಹಾಗೂ ಸೆಕ್ಷನ್ 09 ರ ಪ್ರಕಾರ ಮದುವೆಯಾದ 18 ವರ್ಷ ಮೀರಿದ ವಯಸ್ಕ ಪುರುಷನಿಗೆ 2 ವರ್ಷದವರೆಗೆ ಕಾರಾಗೃಹವಾಸ ಅಥವಾ ಒಂದು ಲಕ್ಷ ರೂ . ದಂಡ ವಿಧಿ ಸಬಹುದು . ಸೆಕ್ಷನ್ 15 ( ಎ ) ಪ್ರಕಾರ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ನಡೆದ ಅಪರಾಧದ ಸಂಜ್ಞೆಯನ್ನು ಗಮನಿಸಿ , ತಾನಾಗಿಯೇ ಕ್ರಮ ಕೈಗೊಳ್ಳಬಹುದು . ಈ ಕಾಯ್ದೆಯಡಿ ಮಹಿಳೆಯರೂ ಕೂಡ ಕಾರಾಗೃಹವಾಸದ ಶಿಕ್ಷೆಗೆ ಅರ್ಹರಾಗಿರುತ್ತಾರೆ . ಹೀಗಾಗಿ ಕಾನೂನು ಗೌರವಿಸುವುದರ ಜೊತೆಗೆ ಮಕ್ಕಳ ಭವಿಷ್ಯ ಉಜ್ವಲಗೊಳಿಸುವುದಕ್ಕೆ ಬಾಲ್ಯ ವಿವಾಹಕ್ಕೆ ಎಂದೂ ಪ್ರೋತ್ಸಾಹಿಸಬಾರದು
- Home
- ಸಿಲಬಸ್ -2019
- ಕನ್ನಡ ವ್ಯಾಕರಣ
- __1. ಕನ್ನಡ ವರ್ಣಮಾಲೆ
- __2. ನಾಮಪದ
- __3. ಪದಗಳ ಅರ್ಥ
- __4. ತತ್ಸಮ-ತದ್ಭವ
- __5 ದೇಶಿ-ಅನ್ಯದೇಶೀಯ
- __6 ಲಿಂಗಗಳು
- __7. ವಚನಗಳು
- __8. ವಿರುದ್ಧಾರ್ಥಕ ಪದಗಳು
- __9. ಸಂಧಿಗಳು
- __10. ಸಮಾಸಗಳು
- __11. ದ್ವಿರುಕ್ತಿ, ಜೋಡುನುಡಿ
- __12. ಕನ್ನಡ ಗಾದೆಗಳು
- __13. ವ್ಯಾಕರಣ MCQs
- ಸಾಮಾನ್ಯ ಕನ್ನಡ
- __1. ಪ್ರಶ್ನೋತ್ತರಗಳು
- __2. ಲೇಖಕರು
- __3. ಕನ್ನಡ ಬಿರುದಾಂಕಿತರು
- __4. ಕವಿ ಕಾವ್ಯನಾಮಗಳು
- __5. ಕೇಂದ್ರ ಸಾಹಿತ್ಯ ಪ್ರಶಸ್ತಿ
- __6. ಭಾರತರತ್ನ ಫ್ರಶಸ್ತಿ
- __7. ಜ್ಞಾನಪೀಠ ಪ್ರಶಸ್ತಿ
- __8. ಕನ್ನಡ ಸಾಹಿತ್ಯ ಸಮ್ಮೇಳನ
- __9. ಪ್ರಶಸ್ತಿ ಪುರಸ್ಕಾರಗಳು
- __10. ಕನ್ನಡದ ಮೊದಲುಗಳು
- ಸಾಮಾನ್ಯ ಜ್ಞಾನ
- __1. ಸಾಮಾನ್ಯ ಜ್ಞಾನ 01
- __2. ಸಾಮಾನ್ಯ ಜ್ಞಾನ 02
- __3. ಸಾಮಾನ್ಯ ಜ್ಞಾನ 03
- __4. ಸಾಮಾನ್ಯ ಜ್ಞಾನ 04
- __5. ಸಾಮಾನ್ಯ ಜ್ಞಾನ 05
- __6. ಸಾಮಾನ್ಯ ಜ್ಞಾನ 06
- ಸಾಮಾನ್ಯ ಗಣಿತ
- ಸಾಮಾನ್ಯ ವಿಜ್ಞಾನ
- ಸಮಾಜ ವಿಜ್ಞಾನ
- ಕಂಪ್ಯೂಟರ ಜ್ಞಾನ
- ಶಿಕ್ಷಣ
- _1. ದಿನ ದಿನಾಚರಣೆಗಳು
- __1.ಸಾವಿತ್ರಿಬಾಯಿ ಪುಲೆ ಜನ್ಮ ದಿನ
- __2. ವಿಶ್ವ ಜಲ ದಿನ (ಮಾರ್ಚ್ 22)
- __3. ಕ್ಷಯ ದಿನ (ಮಾರ್ಚ್ 23)
- __4. ವಿಶ್ವ ಆರೋಗ್ಯ ದಿನ (ಏಪ್ರಿಲ್ 7)
- __5. ಜಂತುಹುಳು ನಿವಾರಣೆ ದಿನ
- __6. ಕನಕದಾಸರ ಜಯಂತಿ
- __7. ಅಂತಾರಾಷ್ಟ್ರೀಯ ಸಾಕ್ಷರತಾ ದಿನ
- __8. ಭಾರತದ ಸಂವಿಧಾನ ದಿನ (ಜನವರಿ 26)
- ಇಲಾಖೆಯ ಯೋಜನೆ ಮತ್ತು ಕಾರ್ಯಕ್ರಮಗಳು
- _1. ಯೋಜನೆಗಳು
- __1. ಉಚಿತ ಬೈಸಿಕಲ್ ವಿತರಣಾ ಯೋಜನೆ
- __2. ಅಕ್ಷರ ದಾಸೋಹ ಯೋಜನೆ
- __3. ಕ್ಷೀರ ಭಾಗ್ಯ ಯೋಜನೆ
- _2. ಕಾರ್ಯಕ್ರಮಗಳು
- __1
- __2
- __3
- __4
- __5
- __6
- ಕೆ.ಸಿ.ಎಸ್.ಆರ್.ನಿಯಮಗಳು